Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಸಾಮಾಜಿಕ ಜಾಲತಾಣ ನಿಷೇಧ ಹಿಂಪಡೆದ ನೇಪಾಳ: ಅಷ್ಟಕ್ಕೂ ಬ್ಯಾಕ್ ಮಾಡಿದ್ದೇಕೆ ಗೊತ್ತಾ?
ಯುವ ಜನತೆ ಸಾಮಾಜಿಕ ಜಾಲತಾಣ ಆ್ಯಪ್‌ಗಳಿಗೆ ಎಷ್ಟು ಒಗ್ಗಿಕೊಂಡಿದ್ದಾರೆ ಅನ್ನೋದಕ್ಕೆ ನೇಪಾಳವನ್ನು ಸಾಕ್ಷಿಯಾಗಿ ನೋಡಬಹುದು. ಅಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದನ್ನು ಖಂಡಿಸಿ ಇಡೀ ಯುವ ಸಮುದಾಯ ರಸ್ತೆಗಿಳಿದು ಪ್ರತಿಭಟನೆ ನಡೆಸಿತ್ತು. ಅಷ್ಟೇ ಅಲ್ಲ ಈ ಪ್ರತಿಭಟನೆ ಹಿಂಸಾರೂಪ ಪಡೆದಿರುವುದಲ್ಲದೆ. ಪೊಲೀಸರ ದಾಳಿಗೆ 19 ಮಂದಿ ಮತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನೇಪಾಳದಲ್ಲಿ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಸೈಟ್ ಹಾಗೂ ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿತ್ತು. ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ವಾಟ್ಸಾಪ್, ಎಕ್ಸ್, ಲಿಂಕ್ಡಿನ್, ವಿ ಚಾಟ್ ಸೇರಿದಂತೆ ಹಲವು ಆ್ಯಪ್‌ಗಳು ಬ್ಯಾನ್ ಆಗಿದ್ದವು. ಸರ್ಕಾರದ ಈ ನಿರ್ಧಾರದಿಂದ ಅಲ್ಲಿನ ಪೋಷಕರು ಸಂತಸ ಪಟ್ಟಿದ್ದರು, ಆದ್ರೆ ಯುವ ಸಮುದಾಯ ಟೀಕಿಸಿದ್ದಲ್ಲದೆ ದೊಡ್ಡ ಮಟ್ಟದ ಹೋರಾಟಕ್ಕಿಳಿದಿತ್ತು.

ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದವು, ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಾಗೆ ಪೊಲೀಸರು ಲಾಠಿ ಪ್ರಹಾರ ನಡೆದಿದ್ದರು. ಆದ್ರೆ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಹಾಗೆ ಈ ಸೋಶಿಯಲ್ ಮೀಡಿಯಾ ಮೇಲಿನ ನಿರ್ಬಂಧವನ್ನು ಈಗ ತೆರವುಗೊಳಿಸಲಾಗಿದೆ.
ಸೋಶಿಯಲ್ ಮೀಡಿಯಾಗಳ ಬ್ಯಾನ್ ಮಾಡಿದ್ದೇಕೆ?
ನೇಪಾಳ ಸರ್ಕಾರ ಹಾಗೂ ಸೋಶಿಯಲ್ ಮೀಡಿಯಾ ಸಂಸ್ಥೆಗಳ ನಡುವೆ ಹಲವು ವರ್ಷದಿಂದಲೂ ಇಂತಹದೊಂದು ಕಂದಕ ಉಂಟಾಗಿದೆ. ಅಲ್ಲಿನ ಸುಪ್ರೀಂಕೋರ್ಟ್ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ನಿಯಮಗಳು ಹಾಗೆ ಕಾನೂನಿನ ಅಡಿ ನಿಯಂತ್ರಣ ತರಲು ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ನೇಪಾಳದಲ್ಲಿ ಕಾರ್ಯ ನಿರ್ವಹಿಸುವ ಈ ಎಲ್ಲಾ ಆ್ಯಪ್‌ಗಳು ಆಯಾ ಕಾನೂನುಗಳಿಗೆ ಒಳಪಡಬೇಕು ಎಂದು ಸರ್ಕಾರ ತಿಳಿಸಿದೆ. ಎಲ್ಲಾ ಆ್ಯಪ್‌ಗಳು ಕೂಡ ಸರ್ಕಾರದ ಮಾಹಿತಿ ಪ್ರಸಾರ ಇಲಾಖೆಯಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಹಲವು ಬಾರಿ ನೋಟಿಸ್ ಕೂಡ ಜಾರಿ ಮಾಡಿದೆ. ಆದ್ರೆ ಸಾಮಾಜಿಕ ಜಾಲತಾಣದ ಸಂಸ್ಥೆಗಳಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಹಾಗೆ ನಿಯಂತ್ರಣ ಅಧಿಕಾರಿ, ದೂರು ಪರಿಶೀಲಿಸಲು ಸ್ಥಳೀಯ ಅಧಿಕಾರಿಗಳ ನೇಮಕ ಮಾಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈ ಯಾವುದೇ ವಿಚಾರ ಕುರಿತು ಗಮನ ನೀಡದ ಕಾರಣ 26ಕ್ಕೂ ಹೆಚ್ಚು ಆ್ಯಪ್‌ಗಳ ಬ್ಯಾನ್ ಮಾಡಲಾಗಿತ್ತು.
ಇದರಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್, ಡಿಸ್ಕೊರ್ಡ್, ಪಿನ್ಟ್ರೆಸ್ಟ್, ಸಿಗ್ನಲ್, ಥ್ರೇಡ್, ವಿಚಾಟ್, ಕ್ವಾರ, ಟಂಬ್ಲರ್, ಕ್ಲಬ್‌ಹೌಸ್, ರಂಬಲ್, ಲೈನ್, ಇಮೋ, ಜಲೋ, ಹಮ್ರೋ ಪ್ಯಾಟ್ರೋ, ಮಿ ವಿಡಿಯೋ, ಮಿ ವೈಕ್3 ಮತ್ತು ಸೋಲ್, ಟಿಕ್‌ಟಾಕ್, ವೈಬರ್, ವೀಟಾಕ್, ನಿಂಬಜ್, ಟೆಲಿಗ್ರಾಮ್ ಮತ್ತು ಗ್ಲೋಬಲ್ ಡೈರಿ ಸೇರಿದ್ದವು. ಹಾಗೆ ಕೆಲವೊಂದು ಆ್ಯಪ್‌ಗಳು ನೋಂದಣಿ ಮಾಡಿಕೊಳ್ಳುವ ಹಂತದಲ್ಲಿದ್ದವು. ಹೀಗಾಗಿ ಅವುಗಳನ್ನು ಬ್ಯಾನ್ ಮಾಡಿರಲಿಲ್ಲ.
ಹಾಗೆ ಈ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಖಾತೆ ಸೃಷ್ಟಿಸಿ ದ್ವೇಷ ಭಾಷಣ, ಸುಳ್ಳು ಸುದ್ದಿಯನ್ನು ಹಬ್ಬಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಹಾಗೆ ಕಾನೂನಿನ ಎಲ್ಲಾ ನಿಯಮಗಳನ್ನು ಒಪ್ಪಿಕೊಂಡರೆ ಮಾತ್ರವೇ ನೇಪಾಳದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗುವುದು ಎಂದಿತ್ತು.
ಆದ್ರೆ ಸರ್ಕಾರದ ಈ ನಿರ್ಧಾರವನ್ನು ಯುವ ಜನತೆ ವಿರೋಧಿಸಿತ್ತು. ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರ್ಕಾರ ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಹಾಗೆ ನೇಪಾಳದಲ್ಲೂ ಕೂಡ ಸಾಮಾಜಿಕ ಜಾಲತಾಣಗಳ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಸಾವಿರಾರು ಮಂದಿ ಇದ್ದಾರೆ. ಇನ್ನು ಕೆಲವೇ ಕೆಲವು ದೇಶೀಯ ಆಪ್‌ಗಳಿದ್ದರೂ ಕೂಡ ಅವುಗಳ ಬಳಕೆ ಬೆರಳೆಣಿಯಷ್ಟು ಮಂದಿ ಮಾತ್ರವೇ ಮಾಡುತ್ತಿದ್ದಾರೆ.



Click it and Unblock the Notifications
