Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Mysore Pak Origin: ಮೈಸೂರ್ ಪಾಕ್ ಮೊದಲಿಗೆ ತಯಾರಾಗಿದ್ದೆಲ್ಲಿ? ಕರ್ನಾಟಕ vs ತಮಿಳುನಾಡು ಏನಿದು ಜಟಾಪಟಿ?
ಮೈಸೂರ್ ಪಾಕ್ ಇದು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿರುವ ವಿಶೇಷವಾದ ಸಿಹಿ ತಿಂಡಿ. ಭಾರತದಲ್ಲಿ ಮೈಸೂರು ನಗರ ಐತಿಹಾಸಿಕ ಹಿನ್ನೆಯನ್ನು ಹೊಂದಿರುವಂತಹ ನಗರ. ಇದನ್ನು ಸಂಸ್ಕೃತಿಕ ರಾಜಧಾನಿ ಅಂತ ಕರೆಯಲಾಗುತ್ತದೆ. ಅದೇ ರೀತಿ ಮೈಸೂರು ಪಾಕ್ ಕೂಡ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ.
ಕರ್ನಾಟಕದಲ್ಲೇ ತಯಾರಾದ ಈ ಸಿಹಿ ಮೈಸೂರ್ ಪಾಕ್ ಇಂದು ದೇಶ-ವಿದೇಶಗಳಲ್ಲೂ ಲಭ್ಯವಾಗುತ್ತದೆ. ಮೈಸೂರು ಪಾಕ್ ಮೈಸೂರಿನಲ್ಲೇ ತಯಾರಾದ್ರು ಕೂಡ ಇಂದಿಗೂ ಕೂಡ ತಮಿಳುನಾಡು ಹಾಗೂ ಕರ್ನಾಟದಲ್ಲಿ ಈ ಸಿಹಿ ತಿಂಡಿ ಎಲ್ಲಿ ತಯಾರಾಗಿರೋದು ಅನ್ನೋದ್ರ ಬಗ್ಗೆ ವಿವಾದ ಅಂತೂ ಇದ್ದೇ ಇದೆ. ಅಷ್ಟಕ್ಕು ಮೊದಲಿಗೆ ಮೈಸೂರು ಪಾಕ್ ತಯಾರಾಗಿದ್ದೆಲ್ಲಿ? ಈ ಸಿಹಿ ಖಾದ್ಯವನ್ನು ಮೊದಲಿಗೆ ತಯಾರು ಮಾಡಿದ್ಯಾರು ಅನ್ನೋದನ್ನು ತಿಳಿಯೋಣ.

ಕಕಾಸುರ ಮಾದಪ್ಪನಿಂದ ತಯಾರಾಯ್ತು ವಿಶೇಷ ಮೈಸೂರ್ ಪಾಕ್!
1935 ನೇ ಇಸವಿಯಲ್ಲಿ ಮೈಸೂರನ್ನು ಮಹಾರಾಜ ಕೃಷ್ಣರಾಜ ಒಡೆಯರು ಆಳ್ವಿಕೆ ಮಾಡ್ತಿದ್ರು. ಮಹಾರಾಜರು ಅಂಬಾ ವಿಲಾಸದಲ್ಲಿ ವಾಸ ಮಾಡ್ತಿದ್ರು. ನಿತ್ಯ ರಾಜರ ಆಸ್ಥಾನದಲ್ಲಿ ಭೂರಿ ಬೋಜನವನ್ನು ಸಿದ್ಧ ಮಾಡಲಾಗ್ತಿತ್ತು. ಆಗ ಆಸ್ಥಾನದ ಅಡುಗೆ ಭಟ್ಟರಾಗಿ ಕಕಾಸುರ ಮಾದಪ್ಪ ಕಾರ್ಯ ನಿರ್ವಹಿಸುತ್ತಿದ್ದರು.
ಮಹಾರಾಜರಿಗೆ ಊಟ ತಯಾರು ಮಾಡ್ತಿದ್ದ ಸಂದರ್ಭದಲ್ಲಿ ವಿಶೇಷ ಸಿಹಿ ತಿಂಡಿಯೊಂದನ್ನು ತಯಾರು ಮಾಡ್ಬೇಕಿತಂತೆ. ಆದರೆ ಯಾವ ವಿಶೇಷ ಸಿಹಿ ತಿಂಡಿಯನ್ನು ಮಾಡ್ಬೇಕು ಅಂತ ಮಾದಪ್ಪರಿಗೆ ತಿಳಿಯಲೇ ಇಲ್ಲ. ಆಗ ಅವರು ರಾಜನಿಗೆ ಇಷ್ಟ ಆಗುವ ಸ್ಪೆಷಲ್ ಸಿಹಿ ತಿಂಡಿಯನ್ನು ತಯಾರು ಮಾಡ್ಬೇಕು ಅಂತ ಯೋಚಿಸಿದವರೇ ಅವರ ಕೈ ಚಳದಿಂದ ಒಂದು ಪಾಕವನ್ನು ಸಿದ್ಧಪಡಿಸುತ್ತಾರೆ.
ಮೊದಲಿಗೆ ತುಪ್ಪ, ಕಡ್ಲೆ ಹಿಟ್ಟು, ಸಕ್ಕರೆಯನ್ನು ಹಾಕಿ ಒಂದು ಪಾಕವನ್ನು ತಯಾರು ಮಾಡ್ತಾರೆ. ನಂತರ ಆ ಪಾಕವನ್ನು ತಣಿಯೋದಕ್ಕೆ ಬಿಟ್ಟು ನಂತರ ಅದನ್ನು ತುಂಡು ತುಂಡುಗಳಾಗಿ ಕತ್ತರಿಸಿಕೊಳ್ಳುತ್ತಾರೆ. ಆ ನಂತರ ರಾಜರಿಗೆ ಸರ್ವ್ ಮಾಡಲಾಗುತ್ತೆ. ಈ ಸಿಹಿ ತಿಂಡಿಯನ್ನು ತಿನ್ನುತ್ತಿದ್ದಂತೆ ಕೃಷ್ಣರಾಜ ಒಡೆಯರಿಗೆ ತುಂಬಾನೇ ಖುಷಿಯಾಗುತ್ತೆ. ಬಾಯಲ್ಲಿಟ್ಟ ತಕ್ಷಣ ಕರಗುವ ಈ ಈ ಸಿಹಿ ತಿಂಡಿಯನ್ನು ತಿಂದ ತಕ್ಷಣ ಮಹಾರಾಜರು ಸಂತೃಪ್ತರಾಗ್ತಾರೆ.
ಮಾದಪ್ಪನನ್ನ ತನ್ನ ಹತ್ತಿರ ಕರೆದ ಮಹಾರಾಜರು ಈ ಸಿಹಿ ತಿಂಡಿಯ ಹೆಸರೇನು ಎಂದು ಕೇಳುತ್ತಾರೆ. ಆಗ ಮಾಪ್ಪನಿಗೆ ಏನು ಹೇಳೋದು ಅಂತ ತೋಚದೇ 'ಮೈಸೂರು ಪಾಕ' ಎಂದು ಹೇಳುತ್ತಾರೆ. ಇದಾದ ಬಳಿಕ ರಾಜರ ಆಸ್ಥಾನದ ಎಲ್ಲರ ಅಚ್ಚುಮೆಚ್ಚಿನ ಪ್ರಸಿದ್ಧ ತಿಂಡಿಯಾಗಿ ಮೈಸೂರ್ ಪಾಕ್ ಬದಲಾಗುತ್ತೆ. ಈಗಂತೂ ಕರ್ನಾಟದಲ್ಲಿ ಮೈಸೂರ್ ಪಾಕ್ ಇಲ್ಲದೇ ಯಾವುದೇ ಶುಭ-ಸಮಾರಂಭಗಳು ನಡೆಯೋದೇ ಇಲ್ಲ. ಮದುವೆ, ಸೀಮಂತ ಪ್ರತಿಯೊಂದು ಶುಭ ಕಾರ್ಯಕ್ರಮದಲ್ಲೂ ಮೈಸೂರ್ ಪಾಕ್ ಇರಲೇಬೇಕು.
ಮೈಸೂರ್ ಪಾಕ್ ಮಾರ್ಟ್ ಆರಂಭಿಸಿದ ಮಾದಪ್ಪ!
ರಾಜ ಮನೆತನದ ಪ್ರತಿಯೊಬ್ಬರೂ ಈ ಮೈಸೂರ್ ಪಾಕ್ ಅನ್ನು ತುಂಬಾನೇ ಇಷ್ಟ ಪಟ್ಟಿದ್ದರಂತೆ. ಹೀಗಾಗಿ ಒಡೆಯರು ಒಂದು ದಿನ ಮಾದಪ್ಪರ ಬಳಿ ಸಾರ್ವಜನಿಕರೂ ಈ ಮೈಸೂರ್ ಪಾಕ್ ನ ರುಚಿಯನ್ನು ನೋಡಲಿ ಅಂತ ಹೇಳುತ್ತಾರಂತೆ. ಹೀಗಾಗಿ ಅರಮನೆ ಹೊರಗಡೆ ಮೈಸೂರ್ ಪಾಕ್ ನ ಅಂಗಡಿಯನ್ನು ತೆರೆಯುವಂತೆ ಮಾದಪ್ಪರ ಬಳಿ ಹೇಳುತ್ತಾರೆ. ಹೀಗಾಗಿ ಮಾದಪ್ಪ ಮೈಸೂರ್ ಪಾಕ್ ನ ಅಂಗಡಿಯನ್ನು ತೆರೆಯುತ್ತಾರಂತೆ.
ಕೆಲವು ಮೂಲಗಳ ಪ್ರಕಾರ ಮಾದಪ್ಪ ಖುದ್ದಾಗಿ ಸಿಹಿ ತಿಂಡಿಯ ಅಂಗಡಿಯನ್ನು ತೆರೆದಿದ್ದರೂ ಅಂತ ಹೇಳಲಾಗುತ್ತದೆ. ಸದ್ಯ ಇದೇ ಕಾಕಸುರ ಮಾದಪ್ಪ ವಂಶಕ್ಕೆ ಸೇರಿದ್ದ ಮೈಸೂರ್ ಪಾಕ್ ನ ಅಂಗಡಿ ಗುರು ಸ್ವೀಟ್ ಮಾರ್ಟ್ ಎಂಬ ಹೆಸರಿನಲ್ಲಿ ತನ್ನ ವ್ಯಾಪಾರವನ್ನು ಮಾಡ್ತಿದೆ.
ಕರ್ನಾಟಕ vs ತಮಿಳುನಾಡು ಏನಿದು ಜಟಾಪಟಿ?
ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ವಿವಾದ ಇದ್ದೇ ಇರುತ್ತದೆ. ಅದೇ ರೀತಿ ಈ ವಿಶ್ವ ವಿಖ್ಯಾತಿ ಪಡೆದಿರುವ ಮೈಸೂರ್ ಪಾಕ್ ವಿಚಾರದಲ್ಲೂ ಬಹಳ ವರ್ಷಗಳಿಂದ ವಿವಾದ ಇದ್ದೇ ಇದೆ. ತಮಿಳುನಾಡಿನಲ್ಲಿ ಮೊದಲು ಮೈಸೂರ್ ಪಾಕ್ ತಯಾರಾಗಿದ್ದು, ಇದರ ರೆಸಿಪಿಯನ್ನು ಕದ್ದು ತಂದು ಮೈಸೂರಿನಲ್ಲಿ ಈ ಸಿಹಿಯನ್ನು ತಯಾರಿಸಲಾಗಿತ್ತು ಅನ್ನೋ ವಾದವೂ ಕೂಡ ಇದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಅನ್ನೋದು ಕನ್ನಡಿಗರ ವಾದ.
ರುಚಿಯ ವಿಚಾರಕ್ಕೆ ಬಂದರೆ ಮೈಸೂರ್ ಪಾಕ್ ಗೆ ಕಾಂಪಿಟೀಷನ್ ಕೊಡೋ ಸ್ವೀಟ್ ಖಂಡಿತ ಇಲ್ಲ ಅನ್ಸುತ್ತೆ. ಮೈಸೂರ್ ಪಾಕ್ ಇಂದಿಗೂ ಕೂಡ ಅದೇ ರುಚಿ ಹಾಗೂ ಸ್ವಾದವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ.



Click it and Unblock the Notifications


