Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಭಾರತದಲ್ಲಿರುವ ತುಂಬಾನೇ ವಿಸ್ಮಯಕಾರಿ ಹಾಗೂ ರಹಸ್ಯ ಹೊಂದಿರುವ ಶಿವ ದೇವಾಲಯಗಳಿವೆ
ನಮ್ಮ ದೇಶದಲ್ಲಿ ಹಲವಾರು ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವೊಂದು ದೇವಾಲಯ ಅದರ ವಿನ್ಯಾಸ ಹಾಗೂ ಅಲ್ಲಿರುವ ರಹಸದ್ಯ ಇಂದಿಗೂ ಜನರ ಅಚ್ಚರಿಗೆ ಕಾರಣವಾಗಿದೆ. ಆ ದೇವಾಲಯವನ್ನು ಹೇಗೆ ಆ ರೀತಿ ನಿರ್ಮಿಸಲಾಗಿದೆ ಎಂಬುವುದನ್ನು ಬೇಧಿಸಲು ಯಾವ ಎಂಜಿನಿಯರ್‌ಗಳಿಗೂ ಸಾಧ್ಯವಾಗಿಲ್ಲ, ಅಂಥ ವಿಸ್ಮಯಕಾರಿ ಶಿವ ದೇವಾಲಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ತುಂಗನಾಥ ದೇವಾಲಯ:
ಇದು ವಿಶ್ವದ ಅತ್ಯಂತ ಎತ್ತರದ ಶಿವ ದೇವಾಲಯ, ಹಿಮಾಲಯದ 3, 680 ಮೀಟರ್ ಎತ್ತರದಲ್ಲಿದೆ. ಈ ದೇವಾಲಯ 1000 ವರ್ಷಕ್ಕಿಂತಲೂ ಹಳೆಯ ದೇವಾಲಯವಾಗಿದೆ. ಈ ದೇವಾಲಯ ವರ್ಷದಲ್ಲಿ ಅಲ್ಪ ಅವಧಿ ಮಾತ್ರ ತೆರೆದಿರುತ್ತದೆ. ಈ ದೇವಾಲಯ ಏಪ್ರಿಲ್‌ನಿಂದ ನವೆಂಬರ್‌ರವರೆಗೆ ಮಾತ್ರ ತೆರೆದಿರುತ್ತದೆ, ಉಳಿದ ಸಮಯ ಹಿಮದಿಂದ ಅವೃತವಾಗಿರುತ್ತದೆ.
ಬೃಹದೀಶ್ವರ ದೇವಾಲಯ
ಈ ದೇವಾಲಯ ತಮಿಳುನಾಡಿನಲ್ಲಿದೆ. ಇದು ಜೋಳವಂಶದ ಹತವೈಭವಕ್ಕೆ ಕೈನ್ನಡಿಯಾಗಿದೆ. ಈ ದೇವಾಲಯವನ್ನು ಜೋಳ ಸಾಮ್ರಾಜ್ಯದ ರಾಜರಾಜ ನಿರ್ಮಿಸಿರುವುದು. ಹೆಸರಿಗೆ ತಕ್ಕಂತೆ ಇದು ಬೃಹದಾಕಾರದ ದೇವಾಲಯವಾಗಿದೆ. ಈ ದೇವಾಲಯದ ವಿಶೇಷವೆಂದರೆ ವಿಷುವತ್ ಸಂಕ್ರಾಂತಿಯ ಮಧ್ಯಾಹ್ನ ಈ ದೇವಾಲಯದ ನೆರಳು ಬೀಳುವುದಿಲ್ಲ, ಇದು ಇಂದಿಗೂ ಎಂಜಿನಿಯರ್‌ಗಳಿಗೆ ಸೋಜಿಗ. ಅಲ್ಲದೆ ಇಲ್ಲಿ ಸಂಗೀತ ಸ್ತಂಭಗಳಿವೆ, ಕಂಬಗಳಿಗೆ ಹೊಡೆದಾಗ ಅದರಿಂದ ಸಂಗೀತ ಬರುತ್ತದೆ.
ಮುರುಡೇಶ್ವರ ದೇವಾಲಯ
ಅರಬಿ ಕಡಲ ತೀರದಲ್ಲಿರುವ ಈ ದೇವಾಲಯದಲ್ಲಿ ಬೃಹತ್ ರಾಜಗೋಪುರವಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಬಟ್ಕಳದಲ್ಲಿದೆ. ಇದು ಜಗತ್ತಿನ ಅತಿ ಎತ್ತರದ ರಾಜಗೋಪುರ ಹೊಂದಿರುವ ದೇವಾಲಯ, ಪ್ರಪಂಚದ 2ನೇ ಅತೀ ಎತ್ತರದ ಶಿವ ದೇವಾಲಯ ಇಲ್ಲಿದೆ. ಈ ದೇವಾಲಯದ ಮೂರು ಕಡೆ ನೀರಿನಿಂದ ಆವೃತವಾಗಿರುವ ದೇವಾಲಯ ಇದಾಗಿದೆ. ತುಂಬಾ ಪ್ರವಾಸಿಗರು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ.
ಚಿದಂಬರ ದೇವಾಲಯ, ತಮಿಳುನಾಡು
ಈ ದೇವಾಲಯಕ್ಕೆ ತಮಿಳುನಾಡಿನ ಎಲ್ಲಾ ಭಾಗಗಳಿಂದಲೂ ಬರಬಹುದು, ಇಲ್ಲಿರುವ ನಟರಾಜನ ಕಾಲಿನ ಹೆಬ್ಬರಳು ಭೂಮಿಯ ಅಯಸ್ಕಾಂತೀಯ ಕೇಂದ್ರ ಸೂಚಿಸುವುದಂತೆ. ಈ ದೇವಾಲಯದ ಮೇಲ್ಛಾವಣೆ 21600 ಚಿನ್ನದ ಲೇಪನ ಹೊದಿಕೆ ಹೊಂದಿದ್ದು, ಮನುಷ್ಯ ಒಂದು ದಿನಕ್ಕೆ ಇಷ್ಟು ಬಾರಿ ಉಸಿರಾಡುತ್ತಾನೆ. ಈ ದೇವಾಲಯದ ರಂಗಮಂಟಪ ತಲುಪಲು 5 ಮೆಟ್ಟಿಲುಗಳಿವೆ, ಅವು ಶಿವ ಪಂಚಾಕ್ಷರಿ ಮಂತ್ರ ನಮಃಶಿವಾಯ ಸೂಚಿಸುತ್ತದೆ.
ನಟರಾಜನ ಬಳಿ ರಿಉವ ನಾಲ್ಕು ಕಂಬಗಳು ನಾಲ್ಕು ವೇದಗಳನ್ನು ಸೂಚಿಸುತ್ತದೆ.
ಉತ್ತರಾಖಂಡದಲ್ಲಿರುವ ಕೇದರನಾಥ ದೇವಾಲಯ
2013ರಲ್ಲಿ ಕೇದರನಾಥದಲ್ಲಿ ದೊಡ್ಡ ಪ್ರವಾಹ ಬಂತು, 5000ಕ್ಕೂ ಅಧೀಕ ಜನ ಕಾಣೆಯಾದರು, ಅಲ್ಲಿಯ ಪರಿಸರ ಕೊಚ್ಚಿಕೊಂಡು ಹೋಯ್ತು, ಆದರೆ ಈ ದೇವಾಲಯಕ್ಕೆ ಏನೂ ಆಗಿರಲಿಲ್ಲ. ಇದು ವರ್ಷದಲ್ಲಿ 6 ತಿಂಗಳು ಮುಚ್ಚಿರುತ್ತದೆ, ಈ ದೇವಾಲಯ ಅಕ್ಷಯ ತೃತೀಯದಂದು ಮರು ಓಪನ್ ಆಗುತ್ತೆ. ಈ ಅವಧಿಯಲ್ಲಿ ಭಕ್ತರು ಇಲ್ಲಿಗೆ ಬಂದು ಶಿವ ದೇವಾಲಯದ ದರ್ಶನ ಒಡೆಯುತ್ತಾರೆ, ಇಲ್ಲಿಗೆ ಬರಲು ಟ್ರಕ್ಕಿಂಗ್ ರಿತಿಯಲ್ಲಿ ಬರಬೇಕು.
ಅಮರನಾಥ ದೇವಾಲಯ
ಅಮರನಾಥ ದೇವಾಲಯ ಹಿಂದೂಗಳ ಪವಿತ್ರ ದೇವಾಲಯದಲ್ಲಿ ಒಂದಾಗಿದೆ. ಅಮರನಾಥ ಗುಹೆಯು ಶ್ರೀನಗರದ ಈಶಾನ್ಯದ ಸುಮಾರು 145 ಕಿ.ಮೀ ದೂರದಲ್ಲಿದೆ. ಇಲ್ಲಿ ಜುಲೈ ತಿಂಗಳಿನಲ್ಲಿ ಮಂಜುಗೆಡ್ಡೆಯಿಂದ ಶಿವಲಿಂಗ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಲಕ್ಷಾಂತ ಭಕ್ತರು ಇಲ್ಲಿಗೆ ಬಂದು ಶಿವಲಿಂಗದ ದರ್ಶನ ಪಡೆದು ಬರುತ್ತಾರೆ, ಏಕೆ ಇಲ್ಲಿ ಮಂಜುಗೆಡ್ಡೆಯ ಶಿವಲಿಂಗ ರೂಪುಗೊಳ್ಳುತ್ತದೆ ಎಂಬುವುದು ಇನ್ನೂ ಗೊತ್ತಿಲ್ಲ, ಹೀಗೆ ಈ ದೇವಾಲಯ ಅಚ್ಚರಿಯನ್ನು ಒಳಗೊಂಡಿರುವ ದೇವಾಲಯವಾಗಿದೆ.



Click it and Unblock the Notifications