Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ನಿಮಗೆ ಬೀಳುವ ಕನಸುಗಳ ಹಿಂದಿರುವ ಅರ್ಥ, ಉದ್ದೇಶವೇನು ಗೊತ್ತಾ?
ಮನುಷ್ಯ ಎಂದ ಮೇಲೆ ಕನಸುಗಳು ಬೀಳುವುದು ಸಾಮಾನ್ಯ, ಮನುಷ್ಯ ಮಾತ್ರ ಕನಸು ಕಾಣುವುದಿಲ್ಲ, ಪ್ರಾಣಿಗಳು ಸಹ ಕನಸು ಕಾಣುತ್ತವೆ. ಈ ಕನಸುಗಳ ಬೀಳದೆ ಇದ್ದರೆ ಅತ್ಯಂತ ಘೋರ ದಿನಗಳ ನಾವು ಕಾಣಬೇಕಿತ್ತು. ಮನಃಶಾಸ್ತ್ರದ ಪ್ರಕಾರ ಕನಸುಗಳು ಬೀಳದಿದ್ದರೆ ಆ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನಂತೆ, ಕನಸುಗಳು ಒಂದು ರೀತಿ ಆರೋಗ್ಯಕರ ಜೀವನಕ್ಕೆ ಔಷಧ ಇದ್ದಂತೆ.
ಆದರೆ ನಾವು ದಿನಾಲು ಒಂದೇ ರೀತಿಯ ಕನಸುಗಳ ಕಾಣುವುದಿಲ್ಲ, ಒಂದೊಂದು ದಿನ ಚಿತ್ರ ವಿಚಿತ್ರ ರೀತಿಯ ಕನಸುಗಳು ನಮಗೆ ಬೀಳುತ್ತವೆ. ಅದರಲ್ಲು ನಾವು ಕಾಣುವ ಕನಸುಗಳ ಹಿಂದೆ ಒಂದೊಂದು ಅರ್ಥವಿರಲಿದೆ. ಅದಕ್ಕೆ ವಿಶೇಷ, ವಿಭಿನ್ನವಾದ ಕಥೆಗಳೂ ಇವೆ. ಕಸನು ಬೀಳುವ ಹಿಂದೆ ವೈಜ್ಞಾನಿಕ ಕಾರಣಗಳೂ ಸಹ ಇವೆ.

ಹಾಗಾದರೆ ಯಾವ ಕನಸಿನ ಹಿಂದೆ ಯಾವ ಅರ್ಥವಿದೆ? ಯಾವ ರೀತಿ ಕನಸು ಬಿದ್ದರೆ ವಿಜ್ಞಾನ ಏನು ಹೇಳಿದೆ ಎಂಬುದನ್ನು ನಾವಿಂದು ನೋಡೋಣ.
ಎತ್ತರದಿಂದ ಬೀಳುವುದು: ನೀವು ಎತ್ತರದಿಂದ ಬೀಳುವಂತೆ ಕನಸು ಕಂಡರೆ ನಿಮ್ಮಲ್ಲಿ ಅಭದ್ರತೆ ಕಾಡುತ್ತಿದೆ ಎಂದರ್ಥವಂತೆ. ಇದರ ಜೊತೆಗೆ ನಿಮ್ಮಲ್ಲಿ ಹಣಕಾಸಿಗೆ ಸಂಬಂಧಿಸಿದ ಆತಂಕ ಮತ್ತು ಭಯ ಕಾಡುತ್ತಿದೆ ಎಂಬ ಅರ್ಥ ನೀಡುತ್ತದೆ. ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಅವರು ಕೆಳಗಿಳಿಯುತ್ತಿದ್ದಾರೆ ಎಂಬ ಸೂಕವಾಗಿದೆ ಎನ್ನಲಾಗಿದೆ.
ಬೆನ್ನಟ್ಟುವುದು: ಕನಸಿನಲ್ಲಿ ಯಾರಾದರು ನಿಮ್ಮನ್ನು ಬೆನ್ನಟ್ಟುವುದು ಸಾಮಾನ್ಯವಾಗಿ ಜೀವನದಲ್ಲಿ ಸಮಸ್ಯೆಗೆ ಮುಖಾಮುಖಿಯಾಗುವುದನ್ನು ತಪ್ಪಿಸುವುದಕ್ಕೆ ಸಂಬಂಧಿಸಿದೆ. ಇದು ಪರಿಹರಿಸಲಾಗದ ಸಮಸ್ಯೆಗಳು, ಭಯಗಳು ಅಥವಾ ಗಮನಹರಿಸಬೇಕಾದ ಒತ್ತಡಗಳನ್ನು ಸೂಚಿಸುತ್ತದೆ. ಪರ್ಯಾಯವಾಗಿ, ಇದು ಜವಾಬ್ದಾರಿಗಳು ಅಥವಾ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳುವ ಬಯಕೆಯನ್ನು ಪ್ರತಿನಿಧಿಸುತ್ತದೆ.
ಹಾರಾಡುವುದು: ಕನಸಿನಲ್ಲಿ ನೀವು ಆಕಾಶದಲ್ಲಿ ತೇಲಾಡಿದಂತೆ. ಇಲ್ಲವೆ ನಡೆದಾಡುವುದನ್ನು ಬಿಟ್ಟು ಗಾಳಿಯಲ್ಲಿ ಹಾರಾಡುತ್ತಿರುವಂತೆ ಕನಸು ಕಂಡರೆ ಅದು ಸ್ವಾತಂತ್ರ್ಯ, ಸಬಲೀಕರಣವನ್ನು ಬಸುತ್ತಿದ್ದೀರ ಎಂಬ ಅರ್ಥವಂತೆ. ನಿಮ್ಮ ಸುತ್ತಲಿನ ನಿಯಮ, ನಿರ್ಬಂಧಗಳ ಮುರಿದು ಅದರಿಂದ ವಿಮೋಚನೆ ಪಡೆಯಲು ನೀವು ಹಾತೊರೆಯುತ್ತಿದ್ದೀರಿ ಎಂಬ ಅರ್ಥ ಸೂಚಿಸುತ್ತದೆ.
ಹಲ್ಲುಗಳು ಉದುರುವುದು: ಹಲ್ಲುಗಳು ಉದುರುವ ಬಗ್ಗೆ ಕನಸುಗಳು ಬಿದ್ದರೆ ಅದು ನಿಮ್ಮ ಆರೋಗ್ಯ, ಸ್ವಯಂ ಜೀವನ, ಮುಜುಗರದ ಕುರಿತ ಚಿತ್ರಣಕ್ಕೆ ಸಂಬಂಧಿಸಿದೆ. ಇದು ನಿಮ್ಮ ಮುಖದ ಸೌಂದರ್ಯದ ಕುರಿತು ನಿಮಗಿರುವ ಕೀಳು ಭಾವನೆಯನ್ನೂ ತೋರಿಸುತ್ತದೆ.
ಸಾರ್ವಜನಿಕವಾಗಿ ಬೆತ್ತಲೆಯಾಗಿರುವುದು: ಸಾರ್ವಜನಿಕವಾಗಿ ಬೆತ್ತಲೆಯಾಗಿರುವಂತೆ ನೀವು ಕನಸು ಕಂಡರೆ ಸಾಮಾನ್ಯವಾಗಿ ದುರ್ಬಲತೆ, ಆತ್ಮವಿಶ್ವಾಸದ ಕೊರತೆ, ತಪ್ಪುಗಳ ಒಪ್ಪಿಕೊಳ್ಳಲು ಭಯ ಪಡುವ ಸನ್ನಿವೇಶವನ್ನು ತೋರಿಸುತ್ತದೆ. ಇದಲ್ಲದೆ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವುದು ಇಲ್ಲವೆ ಗಮನ ಸೆಳೆಯಲು ವಿಫಲರಾಗುತ್ತಿದ್ದೀರಿ, ಹೇಗಾದರು ನಾವು ಸಮಾಜದ ಎದುರು ಗುರುತಿಸಿಕೊಳ್ಳಬೇಲು ಹಂಬಲದ ಮನೋಭಾವವನ್ನು ಇದು ತೋರಿಸುತ್ತದೆ.
ಯಾವುದೂ ಅರ್ಥವಾಗದ ಕನಸು: ನೀವು ಎಂದಾದರು ಅಸ್ಪಷ್ಟವಾದ ಕನಸು ಕಂಡಿದ್ದರೆ ನಿಮ್ಮಲ್ಲಿ ಹಲವು ಬೇಡಿಕೆಗಳೂ ಅಪೂರ್ಣವಾಗಿವೆ ಎಂದರ್ಥ. ಅಂದರೆ ನೀವು ಹಲವು ವರ್ಷಗಳಿಂದ ಮನದಲ್ಲಿ ಇಟ್ಟುಕೊಂಡಿರುವ ಆಸೆ ಈಡೇರದೆ ಉಳಿದುಬಿಟ್ಟಿದೆ. ಹೀಗಾಗಿ ನಿಮಗೆ ಬೀಳುತ್ತಿರುವ ಕನಸು ಏನೆಂಬುದೇ ನಿಮಗೆ ಅರ್ಥವಾಗುವುದಿಲ್ಲ. ಕನಸಿನಲ್ಲಿ ಎಲ್ಲವು ಗೊಂದಲವಾಗುತ್ತದೆ. ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ ಜೊತೆಗೆ ಎಚ್ಚರವಾದಾಗ ಆ ಕನಸು ಏನು ಎಂಬುದೇ ನೆನಪಾಗುವುದಿಲ್ಲ.
ಇನ್ನು ಮಾರ್ಚ್ 20ರಂದು ರಾಷ್ಟ್ರೀಯ ಕನಸಿನ ದಿನವನ್ನಾಗಿ ಆಚರಿಸಲಾಗುತ್ತದೆ. ಕನಸುಗಳು ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯ, ಜೀವನ, ಆಕಾಂಕ್ಷೆಗಳಿಗೆ ಹಿಡಿದ ಕೈಗನ್ನಡಿಯಾಗಿರುತ್ತದೆ. ನಿತ್ಯ ನಿಮಗೆ ಶ್ರೀಮಂತನಾಗುವಂತೆ ಕನಸು ಬೀಳುತ್ತಿದ್ದರೆ ನೀವು ಅದರತ್ತ ಹೆಚ್ಚು ಗಮನ ಹೊಂದಿದ್ದೀರಿ ಎಂದರ್ಥ. ಜೊತೆಗೆ ಅದನ್ನು ಸಾಧಿಸುವ ಕಡೆಗೆ ನೀವು ಹೆಚ್ಚು ಗಮನ ಇಟ್ಟಿದ್ದೀರಿ ಎಂದಾಗುತ್ತದೆ. ಹೀಗಾಗಿ ಕನಸುಗಳು ಬೀಳುವುದು ನಮ್ಮ ಬೆಳವಣಿಗೆಯ ದೃಷ್ಟಿಯಿಂದಲೂ ಒಳ್ಳೆಯದಾಗಿದೆ.



Click it and Unblock the Notifications