Latest Updates
-
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ!
Montha Cyclone: ಯಾವ ರಾಜ್ಯಗಳಿಗೆ ರೆಡ್ ಅಲರ್ಟ್: ಚಂಡಮಾರುತಕ್ಕೆ ಮೋಂಥಾ ಹೆಸರು ಬಂದಿದ್ಯಾಕೆ?
ಭಾರತದ ಕರಾವಳಿ ತೀರದಲ್ಲಿ ಈಗ ಮೋಂಥಾ ಚಂಡಮಾರುತದ ಭೀತಿ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆಯು ಈ ಚಂಡಮಾರುತ ಸಂಬಂಧ ರೆಡ್ ಅಲರ್ಡ್ ಘೋಷಿಸಿದೆ. ಇಂದು ಸಂಜೆ ಸುಮಾರು ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಲಿರುವ ಈ ಚಂಡಮಾರುತ ನೆರೆಯ ಒಡಿಶಾ, ತೆಲಂಗಾಣದಲ್ಲಿ ಅಬ್ಬರಿಸಲಿದ್ದು, ಕರ್ನಾಟಕ ಸೇರಿ ಹಲವು ಕಡೆ ಮಳೆಯಾಗುವ ನಿರೀಕ್ಷೆ ಇದೆ.
ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ಮೋಂಥಾ ಚಂಡಮಾರುತ ರೂಪುಗೊಂಡಿದೆ. ಇದು ಗರಿಷ್ಠ ಗಾಳಿಯ ವೇಗ ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಬೀಸಲಿದೆ. ಆಂಧ್ರ ಪ್ರದೇಶದ ಮಚಲಿಪಟ್ಟಣದಿಂದ 280 ಕಿ.ಮೀ ದಕ್ಷಿಣ ಆಗ್ನೇಯ, ಕಾಕಿನಾಡದಿಂದ 360 ಕಿ.ಮೀ ದೂರದಲ್ಲಿ ಬಿಂದು ಕಾಣಿಸಿಕೊಂಡಿದೆ.

ಮೋಂಥಾ ಚಂಡಮಾರುತ ಇಂದು ಸಂಜೆಯಿಂದ ಹಲವು ಕಡೆ ಅಬ್ಬರಿಸಲಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ, ಛತ್ತೀಸ್‌ಗಢ ಮತ್ತು ಕೇರಳದ ವಿವಿಧ ಜಿಲ್ಲೆಗಳಿಗೆ ಮಳೆಯಾಗಲಿದೆ. ಹಾಗೆ ಆಂಧ್ರ, ಒಡಿಶಾದಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ. ಹೀಗಾಗಿ ಆಂಧ್ರ ಪ್ರದೇಶ ಸರ್ಕಾರ ತೀವ್ರ ಮುನ್ನೆಚ್ಚರಿಕೆಗೆ ಮುಂದಾಗಿದ್ದು, ಎಲ್ಲಾ ಸರ್ಕಾರಿ ನೌಕರರ ರಜೆ ರದ್ದು ಮಾಡಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದೆ. ಈ ಚಂಡಮಾರುತದ ಪರಿಣಾಮ ಸಮುದ್ರದ ಅಲೆಗಳು ಸಾಮಾನ್ಯಕ್ಕಿಂತ 1 ಮೀಟರ್ ಎತ್ತರದಿಂದ ಕೂಡಿರಲಿವೆ.
ಯಾವೆಲ್ಲಾ ಭಾಗದಲ್ಲಿ ರೆಡ್ ಅಲರ್ಟ್
ಈ ಚಂಡಮಾರುತವು ಆಂಧ್ರ ಪ್ರದೇಶದ ಭಾಗಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ. ವಿಜಯನಗರಂ, ವಿಶಾಖಪಟ್ಟಣಂ, ಅನಕಪಲ್ಲಿ, ಕಾಕಿನಾಡ, ಯಾಣಂ, ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಮತ್ತು ಪಶ್ಚಿಮ ಗೋದಾವರಿ ಸೇರಿದಂತೆ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 30ರ ವರೆಗೂ ಈ ರೆಡ್ ಅಲರ್ಟ್ ಇರಲಿದೆ. ಹಾಗೆ ಒಡಿಶಾದ ಮಕಂಗಿರಿ, ಕೊರಾಪುಟ್, ರಾಯಗಡ, ಗಜಪತಿ ಮತ್ತು ಗಂಜಾಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಚೆನ್ನೈನ ಚೆಂಗಲ್ಪಟ್ಟು, ಚೆನ್ನೈ, ಕಾಂಚೀಪುರಂ, ರಾಣಿಪೇಟ್, ತಿರುವಳ್ಳೂರು, ತಿರುವಣ್ಣಾಮಲೈ ಮತ್ತು ವಿಲ್ಲುಪುರಂ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೋಂಥಾ ಚಂಡಮಾರುತದ ಅರ್ಥವೇನು?
ಈ ಚಂಡಮಾರುತಗಳಿಗೆ ಮೊದಲೇ ಹೆಸರನ್ನು ನಿಗದಿ ಮಾಡಲಾಗಿರುತ್ತದೆ. ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಚಂಡಮಾರುತಗಳಿಗೆ ಆ ಪ್ರದೇಶದ ದೇಶಗಳು ಸಲ್ಲಿಸಿದ ಪೂರ್ವನಿರ್ಧರಿತ ಪಟ್ಟಿಯಿಂದ ಹೆಸರುಗಳನ್ನು ಆಯ್ಕೆ ಮಾಡಿ ಸೂಚಿಸಲಾಗುತ್ತದೆ. ಈಗ ಉತ್ತರ ಹಿಂದೂ ಮಹಾಸಾಗರದ ದೇಶದಲ್ಲಿ ಒಂದಾಗಿರುವ ಥೈಲ್ಯಾಂಡ್ ಈ ಮೋಂತಾ ಎಂಬ ಹೆಸರನ್ನು ನೀಡಿದೆ. ಥಾಯ್ ಭಾಷೆಯಲ್ಲಿ ಮೋಂತಾ ಎಂದರೆ ಪರಿಮಳಯುಕ್ತ ಹೂವು ಅಥವಾ ಸುಂದರವಾದ ಹೂವು ಎಂಬರ್ಥ ನೀಡಲಿದೆ.
ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಚಂಡಮಾರುತಗಳಿಗೆ ನವದೆಹಲಿಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರ (RSMC) ಹೆಸರಿಸುತ್ತದೆ, ಇದನ್ನು ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಮೇಲ್ವಿಚಾರಣೆಯಲ್ಲಿ ಭಾರತ ಹವಾಮಾನ ಇಲಾಖೆ (IMD) ನಿರ್ವಹಿಸುತ್ತದೆ. ಈ ಪಟ್ಟಿಯಲ್ಲಿ ಒಟ್ಟು 13 ದೇಶಗಳಿವೆ. ಪ್ರತಿಯೊಂದು ದೇಶಗಳಲ್ಲು ತಮ್ಮ ಪ್ರಾದೇಶಿಕವಾರು ಪ್ರಾಮುಖ್ಯತೆ ಹಿನ್ನಲೆಯಲ್ಲಿ ಹೆಸರುಗಳನ್ನು ನೀಡಲಿವೆ. ಸದ್ಯ ಈ ಮೋಂತಾ ಎಂಬ ಹೆಸರನ್ನು ಥೈಲ್ಯಾಂಡ್ ದೇಶ ನೀಡಿದೆ. ಅದು ಸುಂದರವಾದ ಹೂವು ಎಂಬ ಅರ್ಥ ನೀಡುತ್ತದೆ. ಆದ್ರೆ ಮೋಂಥಾ ಅಬ್ಬರವು ಈ ಹೂವಿನ ಲಕ್ಷಣಕ್ಕೆ ತದ್ವಿರುದ್ಧವಾಗಿದೆ.



Click it and Unblock the Notifications