Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಿಥುನ ಸಂಕ್ರಾಂತಿ 2023 : ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವವೇನು?
ಸಂಕ್ರಾತಿಯು ಸೂರ್ಯ ದೇವನಿಗೆ ಸಂಬಂಧಿಸಿದ್ದಾಗಿದೆ. ವರ್ಷದಲ್ಲಿ ಒಟ್ಟು ಹನ್ನೆರಡು ಸಂಕ್ರಾಂತಿಗಳು ಸಂಭವಿಸುತ್ತದೆ. ಪ್ರತಿ ತಿಂಗಳ ಸಂಕ್ರಾತಿಗೂ ಅದರದ್ದೇ ಆದ ಮಹತ್ವವಿದೆ. ಈ ತಿಂಗಳಿನಲ್ಲಿ ಮಿಥುನ ಸಂಕ್ರಾತಿ ಸಂಭವಿಸುತ್ತಿದೆ. ಸೂರ್ಯದೇವನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಬರುವಾಗ ಈ ಮಿಥುನ ಸಂಕ್ರಾತಿ ಸಂಭವಿಸುತ್ತದೆ.
ಈ ಆಷಾಢ ತಿಂಗಳ ಜೂನ್ 15, 2023ರಂದು ಮಿಥುನ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಅಷ್ಟಕ್ಕು ಮಿಥುನ ಸಂಕ್ರಾಂತಿ ಯಾವಾಗ ಸಂಭವಿಸುತ್ತದೆ? ಅದರ ಮಹತ್ವ ಎಂಥಹದ್ದು ಅನ್ನೋದನ್ನು ತಿಳಿಯೋಣ.
ಮಿಥುನ ಸಂಕ್ರಾಂತಿ 2023 : ದಿನಾಂಕ ಮತ್ತು ಸಮಯ
ಪುಣ್ಯ ಕಾಲ - ಜೂನ್ 15, 2023, ಸಂಜೆ 6:29 ರಿಂದ ರಾತ್ರಿ 7:20 ವರೆಗೆ
ಮಹಾ ಪುಣ್ಯ ಕಾಲ - ಜೂನ್ 15, 2023, ಸಂಜೆ 6:29 ರಿಂದ ರಾತ್ರಿ 7:20 ವರೆಗೆ
ಮಿಥುನ ಸಂಕ್ರಾಂತಿ 2023 ರ ಮಹತ್ವ
ಜೂನ್ 15, 2023ರಂದು ಮಿಥುನ ಸಂಕ್ರಾತಿಯನ್ನು ಆಚರಣೆ ಮಾಡಲಾಗುತ್ತಿದೆ. ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡೋದನ್ನು ಮಿಥುನ ಸಂಕ್ರಾಂತಿಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ದಕ್ಷಿಣ ಭಾರತದಲ್ಲಿ ಮಿಥುನ ಸಂಕ್ರಮಣಂ ಎಂದೂ ಕರೆಯುತ್ತಾರೆ. ಮತ್ತು ಹಿಂದೂ ಸಂಪ್ರದಾಯಗಳು ಮತ್ತು ಪದ್ಧತಿಗಳ ಪ್ರಕಾರ ಇದು ಅತ್ಯಂತ ಮಂಗಳಕರ ದಿನವಾಗಿದೆ. ಈ ದಿನದಂದು ಒಡಿಶಾದಲ್ಲಿ ಕೃಷಿ ಹಬ್ಬ ಆಚರಿಸುತ್ತಾರೆ. ಈ ದಿನ ಜನ ಭೂಮಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಮಿಥುನ ಸಂಕ್ರಾತಿ ತುಂಬಾನೇ ವಿಶೇಷವಾದ ದಿನ. ಈ ದಿನ ದಾನ ಕಾರ್ಯಗಳಿಗೆ ತುಂಬಾನೇ ಪವಿತ್ರವಾದ ದಿನ. ಈ ದಿನ ಜನರು ಭಗವಾನ್ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮೊದಲು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ನಂತರ ಹರಿದ್ವಾರ, ಋಷಿಕೇಶ ಮತ್ತು ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದವರು ಹಿಂದಿನ ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಇದೆ.
ಈ ಶುಭದಿನದಂದು ಆದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ. ಇದರಿಂದ ಪಾಪ ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಈ ದಿನ ಬಡ-ಬಗ್ಗರಿಗೆ ಬಟ್ಟೆ ಮತ್ತು ಆಹಾರಗಳನ್ನು ದಾನ ಮಾಡೋದ್ರಿಂದ ನಿಮ್ಮ ಬಾಳಲ್ಲಿ ಅದೃಷ್ಟ, ಸಮೃದ್ಧಿ ಮತ್ತು ಸಂತೋಷ ಹೆಚ್ಚಾಗುತ್ತಂತೆ. ಇನ್ನೂ ಈ ದಿನ ಧರ್ಮ ಕಾರ್ಯಗಳನ್ನು ಮಾಡೋದ್ರಿಂದ ನಿಮಗೆ ಒಳಿತಾಗಲಿದೆ.

ಮಿಥುನ ಸಂಕ್ರಾಂತಿಯಂದು ಪೂಜಾ ವಿಧಿ ಹೇಗಿರಬೇಕು?
- ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ. ನಂತರ ಧ್ಯಾನ ಮಾಡುತ್ತಾ ತಾಮ್ರದ ಪಾತ್ರೆಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
- ಕೆಂಪು ಹೂವುಗಳು, ಶ್ರೀಗಂಧ, ಧೂಪ, ದೀಪವನ್ನು ಬೆಳಗಿದ ನಂತರ ಸೂರ್ಯ ದೇವನನ್ನು ನೆನೆದು ನಿಂತಲ್ಲೇ 7 ಬಾರಿ ಪ್ರದಕ್ಷಿಣೆ ಹಾಕಿ.
- ಸೂರ್ಯದೇವನನ್ನು ಪೂಜಿಸಿದ ನಂತರ ಉಳಿದ ನೀರನ್ನು ನೆಲದ ಮೇಲೆ ಬೀಳಲು ಬಿಡಬೇಡಿ. ಆದರೆ ಅದನ್ನು ಸಸ್ಯಗಳಿಗೆ ಹಾಕಿ.
- ಈ ದಿನ ಸೂರ್ಯ ದೇವನಿಗೆ ಶ್ರೀಗಂಧ, ಸಿಂಧೂರ, ಹಣ್ಣುಗಳು ಮತ್ತು ಅರಿಶಿನವನ್ನು ಅರ್ಪಿಸಲಾಗುತ್ತದೆ.
ಮಿಥುನ್ ಸಂಕ್ರಾಂತಿಯ ಫಲ ಹೇಗಿರುತ್ತದೆ?
- ಮಿಥುನ ಸಂಕ್ರಾಂತಿಯು ಪ್ರಾಣಿಗಳಿಗೆ ಒಳ್ಳೆಯದು.
- ವಸ್ತುಗಳ ಬೆಲೆ ಸಾಮಾನ್ಯವಾಗಿರುತ್ತದೆ.
- ಸಂಪತ್ತು ಸಮೃದ್ಧಿಯನ್ನು ತರುತ್ತದೆ. ಮತ್ತು ಜನರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತಾರೆ.
- ಮಿಥುನ ಸಂಕ್ರಾಂತಿಯ ಪ್ರಭಾವದಿಂದ ಧಾನ್ಯ ಸಂಗ್ರಹಣೆ ಹೆಚ್ಚುತ್ತದೆ. ಮತ್ತು ರಾಷ್ಟ್ರಗಳ ನಡುವಿನ ಸಂಬಂಧಗಳು ಉತ್ತಮವಾಗುತ್ತದೆ.
ಮಿಥುನ ಸಂಕ್ರಾತಿಯನ್ನು ಭಕ್ತಿಯಿಂದ ಆಚರಣೆ ಮಾಡಿದರೆ ಎಲ್ಲಾ ರೀತಿ ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು.



Click it and Unblock the Notifications
