Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಾಸನಾಂಬೆಯ ಪೂಜೆ: ಈ ದೇವಾಲಯದಲ್ಲಿ ಹಚ್ಚಿಟ್ಟ ದೀಪ, ಇಟ್ಟ ನೈವೇದ್ಯ, ಹೂ ಮುಂದಿನ ವರ್ಷದವರೆಗೂ ಹಾಗೆಯೇ ಇರುತ್ತೆ!
ಹಾಸನಾಂಬೆ ದೇವಿಯ ಬಾಗಿಲು ನವೆಂಬರ್ 3ಕ್ಕೆ ಓಪನ್ ಆಗಿದೆ. ಮೊದಲೆಲ್ಲಾ ಊರ ಜಾತ್ರೆಯಂತೆ ಸರಳವಾಗಿ ನಡೆಯುತ್ತಿದ್ದ ಉತ್ಸವ ಇದೀಗ ತುಂಬಾನೇ ಪ್ರಸಿದ್ದು ಪಡೆದಿದ್ದು ಹಾಸನಾಂಬೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿ ದೇವಿಯ ದರ್ಶನ ಕೆಲವು ದಿನಗಳಷ್ಟೇ ಇರುವುದಾದರೂ ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ತುಂಬಾನೇ ಅದ್ಧೂರಿಯಿಂದ ಆಚರಿಸಲಾಗುವುದು. ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಹಾಸನಾಂಬೆಯ ಪವಾಡವೇ ಕಾರಣ.

ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಭಾಗ್ ದೊರೆಯುವುದು
ಹಾಸನೆಂಬೆ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆಗೆಯಲಾಗುವುದು, ಉಳಿದ ಸಂದರ್ಭಗಳಲ್ಲಿ ಈ ದೇವಾಲಯದ ಬಾಗಿಲು ಮುಚ್ಚಿಯೇ ಇರುತ್ತದೆ. ಏಕೆ ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಸಿಗುವುದು ಎಂಬುವುದಕ್ಕೆ ಪೌರಾಣಿಕ ಕತೆಯಿದೆ. ಸಪ್ತ ಮಾತೃಕೆಯರ ಜೊತೆ ಅವರ ಸಹೋದರ ಸಿದ್ಧೇಶ್ವರ ಕೂಡ ದಕ್ಷಿಣದ ಕಡೆಗೆ ಬಂದಾಗ ಇಲ್ಲಿಯ ಪ್ರಕೃತಿ ಸೌಂದರ್ಯ ಇಷ್ಟಪಟ್ಟು ನೆಲೆಸಲು ಬಯಸುತ್ತಾರೆ, ಅವರ ಜೊತೆ ಸಹೋದರ ಸಿದ್ಧೇಶ್ವರ ಕೂಡ ಇರುತ್ತಾನೆ. ಸಿದ್ಧೇಶ್ವರ ಭಕ್ತರು ನೀಡಿದ ಪ್ರಸಾದವನ್ನು ಯಾವುದೇ ಮಡಿ ಮೈಲಿಗೆ ಎನ್ನದೆ ಸೇವಿಸುತ್ತಿದ್ದ, ಇದರಿಂದ ಬೇಸರಗೊಂಡ ಮತೃಕೆಯರು ವರ್ಷಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತೇವೆ, ಅದರಂತೆ ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲಾಗುವುದು. ಇಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪ್ರತಿದಿನವೂ ಪೂಜೆಯನ್ನು ಮಾಡಲಾಗುವುದು.
ಹಾಸನಾಂಬೆಯ ಕುರಿತು ಇರುವ ಐತಿಹಾಸಿಕ ಕತೆ
12ನೇ ಶತಮಾನದಲ್ಲಿ ಹಾಸನವನ್ನು ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ ಆಳುತ್ತಿದ್ದ. ಒಮ್ಮೆ ಆತ ಪ್ರಯಾಣ ಮಾಡುವಾಗ ಮೊಲವೊಂದು ಅಡ್ಡ ಬರುತ್ತದೆ, ಇದನ್ನು ಅಪಶಕುನ ಎಂದು ಭಾವಿಸಿ ನೊಂದುಕೊಳ್ಳುತ್ತಾನೆ. ಆದ ದೇವಿ ಆತನಿಗೆ ಕನಸಿನಲ್ಲಿ ಬಂದು ಮಗು ಚಿಂತೆ ಬಿಡು ಇಲ್ಲಿ ಒಂದು ಕೋಟೆಯನ್ನು ಕಟ್ಟು ಎಂದು ಆದೇಶ ನೀಡುತ್ತಾಳೆ. ಕೃಷ್ಣಪ್ಪ ನಾಯಕ ಕೋಟೆಯನ್ನು ಕಟ್ಟಿ ಹಾಸನಾಂಬೆ ಎಂದು ಹೆಸರಿಟ್ಟ ಎಂದು ಐತಿಹಾಸಿಕ ಕತೆ ಹೇಳುತ್ತದೆ.
ಈ ಪವಾಡದ ಕಾರಣ ಹಾಸನಾಂಬೆ ದೇಗುಲ ಪ್ರಸಿದ್ಧಿಯನ್ನು ಪಡೆದಿದೆ
ವರ್ಷಕ್ಕೊಮ್ಮೆ ಈ ದೇವಾಲಯದ ಬಾಗಿಲು ತೆಗೆಯುವಾಗ ಅಲ್ಲಿ ತಳವಾರ ಮನೆತನದವರು ಇರಬೇಕು, ಅವರು ಪೂಜೆಯನ್ನು ಮಾಡಿ ಬಾಳೆ ಕಂದನ್ನು ಕತ್ತರಿಸಿ ನಂತರವಷ್ಟೇ ಬಾಗಿಲು ತೆರೆಯಲಾಗುವುದು. ಹಾಗೇ ತೆರೆದರೆ ದೇವಿಯ ಪ್ರಖರ ದೃಷ್ಟಿ ತಡೆಯುವ ಶಕ್ತಿ ಭಕ್ತರಿಗಿರಲ್ಲ ಎಂಬ ನಂಬಿಕೆಯಿದೆ. ಆದ್ದರಿಮದ ಬಾಳೆಗಿಡ ಕಡಿದು ದೃಷ್ಟಿ ನಿವಾರಿಸಿ ನಂತರವಷ್ಟೇ ಗರ್ಭಗುಡಿಗೆ ಪ್ರವೇಶ ಮಾಡಲಾಗುವುದು, ನಂತರ ಗರ್ಭಗುಡಿಗೆ ಪ್ರವೇಶ ಮಾಡಲಾಗುವುದು.
ಮೊದಲ ದಿನ ಹಾಸನಾಂಬೆಗೆ ಅಲಂಕಾರವಿರಲ್ಲ
ಮೊದಲ ದಿನ ಹಾಸನಾಂಬೆಗೆ ಅಲಂಕಾರವಿರಲ್ಲ, ಎರಡನೇ ದಿನ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ವಸ್ತ್ರ- ಆಭರಣಗಳನ್ನು ತಂದು ಅಲಂಕರಿಸಿ, ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು.
ಬಲಿಪಾಡ್ಯಮಿಯಂದು ದೇವಾಲಯದ ಬಾಗಿಲು ಮುಚ್ಚಲಾಗುವುದು
ಈ ದಿನ ತುಪ್ಪದ ದೀಪವನ್ನು ಹಚ್ಚಿ, ಹೂಗಳು, ನೈವೇದ್ಯ ಇಟ್ಟು ಬಾಗಿಲು ಮುಚ್ಚಲಾಗುವುದು. ಅಚ್ಚರಿಯೆಂದರೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಆ ದೀಪ ಉರಿಯುತ್ತಲೇ ಇರುತ್ತದೆ, ಹೂಗಳು ಬಾಡಿರುವುದಿಲ್ಲ, ಪ್ರಸಾದ ಕೂಡ ಹಾಳಾಗಿರುವುದಿಲ್ಲ.
ಈ ಪವಾಡದ ಕಾರಣ ಇಲ್ಲಿ ಭಕ್ತರ ಸಾಗರವೇ ಹರಿದು ಬರುವುದು.



Click it and Unblock the Notifications
