ಮಾರ್ಚ್‌ 21ಕ್ಕೆ ಕೇರಳದ ಪದ್ಮನಾಭ ದೇವಾಲಯದಲ್ಲಿ ನಡೆಯಲಿದೆ ಈ ಅದ್ಭುತ , ವರ್ಷದಲ್ಲಿ 2 ಬಾರಿ ಮಾತ್ರ ಕಾಣುವ ಪವಾಡವಿದು

ಮಾರ್ಚ್ 21ಕ್ಕೆ ಕೇರಳದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪವಾಡ ನಡೆಯಲಿದೆ, ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಬಗೆಯ ಪವಾಡ ನಡೆಯುತ್ತದೆ. ಮಾರ್ಚ್ 21 ಹಾಗೂ ಸೆಪ್ಟೆಂಬರ್ 23ಕ್ಕೆ ಇಲ್ಲಿ ಪವಾಡ ನಡೆಯುವುದು.

ಕೇರಳದಲ್ಲಿರುವ ಶ್ರೀ ವಿಷ್ಣುವಿನ ದೇವಾಲಯ

ಈ ದೇವಾಲಯವು ಕೇರಳದ ತಿರುವನಂತಪುರದಲ್ಲಿದೆ. ಈ ದೇವಾಲಯ ದ್ರಾವಿಡ ವಾಸ್ತುಶಿಲ್ಪವನ್ನು ಹೊಂದದೆ, ಈ ದೇವಾಲಯದಲ್ಲಿ ನಿಧಿ ಪತ್ತೆಯಾಗಿತ್ತು, ಇದು ಪ್ರಪಂಚದ ಶ್ರೀಮಂತ ದೇವಾಲಯವಾಗಿದೆ.

Miracle In Padmanabha

ಈ ದೇವಾಲಯದಲ್ಲಿ ಪ್ರತಿವರ್ಷ ಕಂಡು ಬರಲಿದೆ ಪವಾಡ

ಈ ದೇವಾಲಯದಲ್ಲಿ ವರ್ಷದಲ್ಲಿ 2 ಪ್ರಮುಖ ದಿನಗಳಲ್ಲಿ ಇಲ್ಲಿ ಚಮತ್ಕಾರ ನಡೆಯುವುದು. ಮಾರ್ಚ್‌ 21 ಹಾಗೂ ಸೆಪ್ಟೆಂಬರ್‌ 23ರಂದು ಮಾತ್ರ ಈ ಚಮತ್ಕಾರ ಕಂಡು ಬರುವುದು. ಈ ದಿನ ಸೂರ್ಯನ ಕಿರಣಗಳು ದ್ವಜ ಸ್ತಂಬದ ಮೇಲೆ ಬಿದ್ದು ನಂತರ ಗರ್ಭ ಗುಡಿಯವರೆಗೆ ಈ ಕಿರಣಗಳ ಪ್ರಭೆ ಹರಡುವುದು, ಬೆಳಗ್ಗೆ 6:15ಕ್ಕೆ ಉದಯ ಸೂರ್ಯ ರಶ್ಮಿಗಳು ಪದ್ಮನಾಭ ಕ್ಷೇತ್ರದ ಸ್ವರ್ಣ ಧ್ವಜ ಸ್ತಂಭದಲ್ಲಿ ಬಿದ್ದು ದೇವಾಲಯದ ಗರ್ಭ ಗುಡಿಯ ಒಳಗಡೆ ಪ್ರವೇಶಿಸುತ್ತದೆ.

ಅದೇ ದಿನ ಸಂಜೆ ಸೂರ್ಯ ಕಿರಣಗಳು ಪಶ್ಚಿಮ ದಿಕ್ಕಿನಿಂದ ದೇವಾಲಯದ ಗೋಪುರದಲ್ಲಿರುವ ಕಿಂಡಿಯಿಂದ ಸೂರ್ಯ ಕಿರಣಗಳು ಗೋಚರಿಸುತ್ತದೆ. ಗೋಪುರದಲ್ಲಿ 5 ಕಿಂಡಿಗಳಿದ್ದು ಅಚ್ಚರಿಯೆಂದರೆ ಸೂರ್ಯನ ಕಿರಣಗಳು ಒಂದೊಂದು ಕಿಂಡಿಯಲ್ಲಿ ಪ್ರತ್ಯೇಕವಾಗಿ ಬೀಳುವುದು, ಮೊದಲು ಎತ್ತರದ ಕಿಂಡಿಯಲ್ಲಿ ಗೋಚರಿಸಿ ನಂತರ ಇಳಿಮುಖವಾಗಿ ಗೋಚರಿಸುವುದು, ಈ ಪವಾಡ ಈ ಎರಡು ದಿನಗಳಲ್ಲಿ ಮಾತ್ರ ಸಾಧ್ಯವಿದ್ದು ಉಳಿದ ಸಮಯದಲ್ಲಿ ಹಾಗೆ ಗೋಚರಿಸುವುದಿಲ್ಲ.

261 ವರ್ಷಗಳ ಹಿಂದೆ ನಿರ್ಮಾಣವಾದ ದೇವಾಲಯದ ಗೋಪುರ

ಈ ದೇವಾಲಯದ ಗೋಪುರವನ್ನು 261 ವರ್ಷಗಳ ಹಿಂದೆ ನಿರ್ಮಿಸಲಾಯ್ತು, ಈಗೀನ ಯಾವುದೇ ತಂತ್ರಜ್ಞಾನ ಬಳಕೆ ಇಲ್ಲದಿದ್ದರೂ ಆ ಕಾಲದಲ್ಲಿ ಅಷ್ಟೊಂದು ಅದ್ಭುತ ವಾಗಿ ನಿರ್ಮಿಸಿರುವುದು ಅಚ್ಚರಿ ಮೂಡಿಸುತ್ತದೆ. ಇದನ್ನು 1750ರಲ್ಲಿ ಮಾರ್ತಾಂಡ ವರ್ಮನು ಸ್ಥಾಪಿಸಿದನು ಎಂದು ಹೇಳಲಾಗುವುದು.

12008 ಸಾಲಿಗ್ರಾಮವಿದೆ

ಈ ದೇವಾಲಯದಲ್ಲಿ 12008 ಸಾಲಗ್ರಾಮ ಕಲ್ಲುಗಳಿವೆ, ಈ ಕಲ್ಲುಗಳನ್ನು ಗಂಧಕಿ ನದಿಯ ದಡದಿಂದ ತೆಗೆದು ತರಲಾಗಿದೆ. ಇಲ್ಲಿ 18 ಅಡಿ ಎತ್ತರ ಪದ್ಮನಾಭನ ವಿಗ್ರಹವಿದೆ, ಈ ವಿಗ್ರಹವನ್ನು 3 ಬಾಗಿಲುಗಳ ಮೂಲಕ ನೋಡಬಹುದು, ಮೊದಲನೇ ಬಾಗಿನಲ್ಲಿ ತಲೆ, ಎದೆ ಭಾಗ, ಎರಡನೇಯ ಬಾಗಿಲಿನಲ್ಲಿ ಕೈಗಳು ಹಾಗೂ 3ನೇ ಬಾಗಿಲಿನಲ್ಲಿ ಕಾಲುಗಳು ಗೋಚರಿಸುವುದು. ಈ ದೇವಾಲಯದಲ್ಲಿ ನವಗ್ರಹ ಮಂಟಪ ಕೂಡ ಇದೆ. ಇಲ್ಲಿ ಮೀನ ಮಾಸದಲ್ಲಿ ವಿಶೇಷ ಆವರಣೆಗಳು ನಡೆಯುವುದು, ಇದೀಗ ಮೀನ ಮಾಸ, ಇನ್ನು ತುಲಾ ಮಾಸದಲ್ಲಿಯೂ ವಿಶೇಷ ಪೂಜೆಗಳು ನಡೆಯುವುದು.

ಈ ದೇವಾಲಯದಲ್ಲಿ ಪೂಜೆ ಸಮಯ

ಬೆಳಗ್ಗೆ 3:30ರಿಂದ 04:45ರವರೆಗೆ, ಅದಾದ ಬಳಿಕ ಬೆಳಗ್ಗೆ 6:30ರಿಂದ 7 ಗಂಟೆಯ ವರೆಗೆ, 8.30ರಿಂದ ಬೆಳಗ್ಗೆ 10 ಗಂಟೆಯವರೆಗೆ, 10:30ರಿಂದ 11:10ರವರೆಗೆ, 11:45ರಿಂದ 12 ಗಂಟೆಯವರೆಗೆ ನಂತರ ಸಂಜೆ 5 ಗಂಟೆ 6:15, 6:45ರಿಂದ 7:20ರವರಲ್ಲಿ ಪೂಜೆ ಸಲ್ಲಿಸಲಾಗುವುದು.
ಇಲ್ಲಿಗೆ ಹೋಗುವಾಗ ಡ್ರೆಸ್‌ಕೋಡ್‌ ಅನುಸರಿಸಬೇಕು
ಈ ದೇವಾಲಯಕ್ಕೆ ಹೋಗುವಾಗ ಪುರುಷರು ಧೋತಿ ಧರಿಸಬೇಕು, ಮಹಿಳೆಯರು ಸೀರೆ ಧರಿಸಬೇಕು, ಹೆಣ್ಮಕ್ಕಳು ಲಂಗ-ಬ್ಲೌಸ್‌ ಧರಿಸಿರಬೇಕು, ಇತ್ತೀಚೆಗೆ ಚೂಡಿದಾರ್‌ಗೆ ಅವಕಾಶ ಕಲ್ಪಿಸಲಾಗುವುದು, ಯಾವುದೇ ಮಾಡರ್ನ್ ಡ್ರೆಸ್‌ ಹಾಕಿ ಹೋಗುವಂತಿಲ್ಲ.

ಈ ದೇವಾಲಯದ ಸಂಪತ್ತಿನಿಂದಾಗಿ ಇದು ವಿಶ್ವದಲ್ಲಿ ಶ್ರೀಮಂತ ದೇವಾಲಯವೂ ಹೌದು.

English summary

Miracle Happen On March 21 In Padmanabha Swami Temple, Kerala

Miracle Happen On March 21 In Padmanabha Swami Temple, these thong happen only twice in a year,
Story first published: Saturday, March 16, 2024, 14:57 [IST]
X
Desktop Bottom Promotion