Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
ನಮ್ಮ ದೇಶದಲ್ಲಿ ಎಷ್ಟೋ ಪವಾಡಗಳು ನಡೆಯುತ್ತಿವೆ, ಅದರೆ ಅದರ ಹಿಂದಿನ ವೈಜ್ಞಾನಿಕ ಕಾರಣ ಹುಡುಕಲು ಸಾಧ್ಯವಿಲ್ಲ, ಅದೆಲ್ಲಾ ದೇವರ ಶಕ್ತಿ ಎಂದು ನಂಬಲೇಬೇಕು, ಅಂಥ ಪವಾಡಗಳಲ್ಲೊಂದು ಛತ್ತೀಸ್‌ಗಢದ ಲಾಮ್‌ಗಾಂವ್‌ನಲ್ಲಿರುವ ಹನುಮಂತನ ದೇವಾಲಯ. ಈ ದೇವಾಲಯದ ಪವಾಡವೆಂದರೆ ಇಲ್ಲಿರುವ ಹನುಮಂತನ ವಿಗ್ರಹ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ!

ಪವಾಡದಿಂದ ಗಮನ ಸೆಳೆದಿರುವ ದೇವಾಲಯ
ಇಲ್ಲಿ ಮೊದಲಿಗೆ ಹನುಮಂತನ ತುಂಬಾನೇ ಚಿಕ್ಕ ಮೂರ್ತಿ ಇತ್ತು, ಅಲ್ಲಿ ಮೂರ್ತಿ ಸ್ಥಾಪಿಸಿದಾಗ ಆ ಮೂರ್ತಿ ಒಂದೂವರೆ ಇಂಚಿನಷ್ಟು ದೊಡ್ಡದಿತ್ತು ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ, ಆದರೆ ವರ್ಷಗಳು ಹೋಗುತ್ತಿದ್ದಂತೆ ಹನುಮಂತನ ಮೂರ್ತಿ ಬೆಳೆಯುತ್ತಲೇ ಇದೆ. ಈಗ ಆ ಹನುಮಂತನ ಮೂರ್ತಿ 12 ಅಡಿ ಬೆಳೆದಿದೆ ಎಂದು ಹೇಳಲಾಗುತ್ತಿದೆ.
ಮೂರ್ತಿ ಬೆಳೆಯುತ್ತಿರುವುದು ವಿಜ್ಞಾನ ಲೋಕಕ್ಕೆ ಸವಾಲು
ಅಲ್ಲಿರುವ ಮೂರ್ತಿ ವರ್ಷಗಳು ಕಳೆಯುತ್ತಿದ್ದಂತೆ ಬೆಳೆಯುತ್ತಿದೆ, ಕಲ್ಲಿನ ಮೂರ್ತಿ ಏಕೆ ಈ ರೀತಿ ಬೆಳೆಯುತ್ತಿದೆ ಎಂದು ಹೇಳಲು ವಿಜ್ಞಾನಕ್ಕೂ ಸಾಧ್ಯವಾಗಿಲ್ಲ. ಇದೆಲ್ಲವೂ ಹನುಮಂತನ ಶಕ್ತಿ ಹಾಗೂ ಪವಾಡವಷ್ಟೇ ಎಂದು ಗ್ರಾಮಸ್ಥರು ನಂಬುತ್ತಾರೆ.
ಪ್ರತಿನಿತ್ಯ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ
ಈ ದೇವಾಲಯವನ್ನು ಶಕ್ತಿ ಶಾಲಿ ದೇವಾಲಯ ಎಂದು ನಂಬಲಾಗಿದೆ. ಯಾರು ಶನಿದೋಷದಿಂದ ಕಷ್ಟಪಡುತ್ತಿದ್ದಾರೋ ಅವರು ಈ ದೇವಾಲಯಕ್ಕೆ ಬಂದರೆ ಶನಿ ನೀಡುವ ಕಷ್ಟ ಕಡಿಮೆಯಾಗುವುದು ಎಂದು ಹೇಳಲಾಗುವುದು. ಬದುಕಿನ ಕಷ್ಟಗಳು ದೂರಾಗಲು, ಕಾಯಿಲೆಯಿಂದ ಗುಣಮುಖರಾಗಲಿ ಎಂದು ಬೇಡಿಕೊಳ್ಳಲು ಈ ದೇವಾಲಯಕ್ಕೆ ಭಕ್ತರು ಬಂದು ಬೇಡಿಕೊಳ್ಳುತ್ತಾರೆ, ಈ ದೇವಾಲಯಕ್ಕೆ ಬಂದು ನಮ್ಮ ಕಷ್ಟಗಳನ್ನು ಹೇಳಿದರೆ ಆ ಕಷ್ಟ ದೂರಗಲಿದೆ ಎಂಬುವುದು ಅಲ್ಲಿಗೆ ಬರುವ ಭಕ್ತರ ನಂಬಿಕೆ.
ಈ ದೇವಾಲಯದ ಇತಿಹಾಸ
400 ವರ್ಷಗಳ ಹಿಂದೆ ಇಲ್ಲಿ ಹನುಮಂತನ ಮೂರ್ತಿಯನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಅಲ್ಲಿ ತುಂಬಾನೇ ಬರಗಾಲವಿತ್ತು, ಇದರಿಂದ ಜನರು ತುಂಬಾನೇ ಕಷ್ಟಪಡುತ್ತಿದ್ದರು, ಆವಾಗ ಎಲ್ಲರೂ ಕೃಷಿ ನಂಬಿ ಬದುಕುತ್ತಿರುವುದರಿಂದ ಮಳೆ ಬೀಳದೇ ಇದ್ದಾಗ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಒಬ್ಬ ರೈತನಿಗೆ ಹನುಮಂತನ ಕನಸ್ಸಿನಲ್ಲಿ ಕಾಣಿಸಿಕೊಂಡ ಎಂದು ಹೇಳಲಾಗುವುದು.
ಆ ರೈತನಿಗೆ ಉಳುಮೆ ಮಾಡುವಾಗ ಕನಸಿನಲ್ಲಿ ಕಂಡಂತೆಯೇ ಹನುಮಂತನ ವಿಗ್ರಹ ಸಿಗುತ್ತದೆ. ಆ ವಿಗ್ರಹ ತುಂಬಾ ಚಿಕ್ಕ ಗಾತ್ರದಲ್ಲಿ ಇರುತ್ತದೆ. ಮರದ ಕೆಳಗಡೆ ಆ ಮೂರ್ತಿಯನ್ನ ಇಟ್ಟು ಪೂಜಿಸಿದಾಗ ಊರಿಗೆ ಮಳೆ ಬರುತ್ತದೆ, ಬೆಳೆ ಸೊಂಪಾಗಿ ಬೆಳೆಯುತ್ತದೆ, ಅಲ್ಲಿಂದ ಆ ಹಳ್ಳಿಯ ಜನರು ಹನುಮಂತನನ್ನು ಪೂಜಿಸಲಾರಂಭಿಸುತ್ತಾರೆ.
ಹನುಮಂತನ ಮೂರ್ತಿಯಲ್ಲಾದ ಬದಲಾವಣೆ
ಹೀಗೆ ಮರದ ಕೆಳಗಡೆ ಮೂರ್ತಿಯನ್ನು ಇಟ್ಟು ಚಿಕ್ಕ ಗುಡಿಕಟ್ಟುತ್ತಾರೆ, ಆದರೆ ವರ್ಷಗಳು ಕಳೆಯುತ್ತಿದ್ದಂತೆ ಆ ಮೂರ್ತಿ ಎತ್ತರವಾಗುವುದು, ಇದನ್ನು ನೋಡಿ ಅಲ್ಲಿದ್ದವರಿಗೆ ಅಚ್ಚರಿಯಾಗುತ್ತೆ, ಈಗ 12 ಅಡಿಗಳಷ್ಟು ಬೆಳೆದಿದೆ. ಮೊದಲಿದ್ದ ಗುಡಿ ಚಿಕ್ಕದಾಗಿ ಮೂರ್ತಿ ದೊಡ್ಡದಾಗುವುದರಿಂದ ಆ ಗುಡಿಯನ್ನು ತೆಗಿದಿದ್ದಾರೆ.
ಈಗ ಅಲ್ಲಿ ಭವ್ಯವಾದ ದೊಡ್ಡ ದೇವಾಲಯವಿದೆ, ಹನುಮಂತನ ಮೂರ್ತಿ ಬೆಳೆಯುತ್ತಲೇ ಇದೆ. ಇಲ್ಲಿಯ ಪವಾಡ ಕೇಳಿ ಅಕ್ಕ-ಪಕ್ಕದ ಊರಿನಿಂದ ಜನ ಬಂದು ಕಷ್ಟಗಳನ್ನು ಹನುಮಂತನ ಬಳಿ ಹೇಳಿ ಕಷ್ಟ ನೀಗಿಸು ಎಂದು ಭಜರಂಗಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಈ ದೇವಾಲಯಕ್ಕೆ ತಲುಪುವುದು ಹೇಗೆ?
ಛತ್ತೀಸ್‌ಗಢದ ಅಂಬಿಕಾಪುರದಿಂದ 17 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಾಲಯದಲ್ಲಿ ದ್ವಾರ ಕಂಡು ಬರುತ್ತದೆ, ನಂತರ ಅಲ್ಲಿ 2 ಕಿ.ಮೀ ಸಾಗಿದರೆ ಈ ಪವಾಡ ಹನುಮಂತನ ಮೂರ್ತಿಯನ್ನು ನೋಡಿ ಪ್ರಾರ್ಥಿಸಿ ಬರಬಹುದು. ಇಲ್ಲಿ ಪ್ರಾರ್ಥಿಸಿದರೆ ಎಲ್ಲಾ ಇಷ್ಟಾರ್ಥಗಳು ನೆರವೇರುವುದು. ಜೈ ಹನುಮಾನ್...



Click it and Unblock the Notifications
