Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಮಹಾ ಕುಂಭಮೇಳ 2025: ಸಿಲಿಂಡರ್ ಸ್ಫೋಟದಿಂದ ಭಾರಿ ಅಗ್ನಿ ಅವಘಡ..!
ಪ್ರಯಾಗ್‌ರಾಜ್‌ನಲ್ಲಿ ವಿಶ್ವವಿಖ್ಯಾತ ಮಹಾಕುಂಭಮೇಳ ಆರಂಭಗೊಂಡಿದೆ. ಒಂದು ತಿಂಗಳ ಕಾಲ ನಡೆಯುವ ಕುಂಭಮೇಳದಲ್ಲಿ ಇಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಕಾಣಿಸಿಕೊಂಡಿದ್ದರು. ಹಾಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದ್ರೆ ಈ ನಡುವೆ ಸಾಧುಗಳಿದ್ದ ಶಿಬಿರದಲ್ಲಿ ಭಾರೀ ಅಗ್ನಿ ಅವಘಡ ನಡೆದಿರುವುದು ವರದಿಯಾಗಿದೆ.
ಕುಂಭಮೇಳದಲ್ಲಿ ಸೆಕ್ಟರ್ 19 ಕ್ಯಾಂಪ್‌ಸೈಟ್ ಪ್ರದೇಶದಲ್ಲಿ ಎರಡರಿಂದ ಮೂರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿರ್ಣಯಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಅಗ್ನಿ ನಂದಿಸಿದ್ದಾರೆ. ಹಾಗೆ ಸಿಎಂ ಯೋಗಿ ಆದಿತ್ಯಾನಾಥ್ ಸ್ಥಳಕ್ಕೆ ತಲುಪಿದ್ದರು.

ಈ ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ, ಹತ್ತಾರು ಶಿಬಿರಗಳು ಬೆಂಕಿಗಾಹುತಿಯಾಗಿದೆ. ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸುತ್ತಲಿನ ಶಿಬಿರಗಳಿಗೆ ಬೆಂಕಿ ಹರಡಿದೆ. ಈ ಮೂಲಕ ಸುಮಾರು 20ಕ್ಕೂ ಹೆಚ್ಚು ಟೆಂಟ್‌ಗಳು ಬೆಂಕಿಗೆ ಆಹುತಿಗಾಗಿದೆ. ಘಟನೆ ನಡೆದ ತಕ್ಷಣವೇ ಎನ್‌ಡಿಆರ್‌ಎಫ್ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ. ಹಾಗೆ ಸುತ್ತಲಿದ್ದ ಇತರೆ ಶಿಬಿರಗಳನ್ನು ಖಾಲಿ ಮಾಡಲಾಗಿದ್ದ ಅಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ.
ಮಹಾ ಕುಂಭದಲ್ಲಿ ಸಂತರು ಮತ್ತು ಭಕ್ತರಿಗೆ ಸಹಕರಿಸಲೆಂದು ಸರ್ಕಾರದ ಪರವಾದ ಸಿಬ್ಬಂದಿ ಹಾಗೂ ಆರೋಗ್ಯಾಧಿಕಾರಿಗಳು ತಂಡದಲ್ಲಿದ್ದಾರೆ. ಹಾಗೆ ಈ ತಂಡ ಇಡೀ ದಿನ ಅಲ್ಲಿಯೇ ಇರಲಿದೆ ಎಂದು ತಿಳಿದುಬಂದಿದೆ. ಹಾಗೆ ಸುರಕ್ಷತೆಯ ದೃಷ್ಟಿಯಿಂದ ಸ್ಥಳದಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ನಿಯೋಜನೆಗೊಂಡಿದ್ದ ಕಾರಣ ಹೆಚ್ಚು ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
2025 ರ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಯಿತು. ಇಲ್ಲಿಯವರೆಗೆ, 7.72 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಧಾರ್ಮಿಕ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಹಾಗೆ ಕೋಟಿಗೂ ಅಧಿಕ ಮಂದಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಭಾನುವಾರ ಒಂದೇ ದಿನ ಬರೋಬ್ಬರಿ 47 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
#WATCH | Prayagraj, Uttar Pradesh | A fire breaks out at the #MahaKumbhMela2025. More details awaited. pic.twitter.com/FCQrrQKSAX
— ANI (@ANI) January 19, 2025
ಪ್ರಯಾಗ್‌ರಾಜ್‌ನಲ್ಲಿದ್ದವು ಲಕ್ಷ ಲಕ್ಷ ಟೆಂಟ್
ಮಹಾ ಕುಂಭಮೇಳದ ಕಾರಣದಿಂದಾಗಿ ಸ್ಥಳದಲ್ಲಿ ಲಕ್ಷಾಂತರ ಟೆಂಟ್ ಹಾಕಲಾಗಿತ್ತು. ಅಂದಾಜಿನ ಪ್ರಕಾರ 1.6 ಲಕ್ಷ ಟೆಂಟ್‌ಗಳನ್ನು ಈ ಜಾಗದಲ್ಲಿ ಹಾಕಲಾಗಿತ್ತು. 1.5 ಲಕ್ಷ ಶೌಚಾಲಯಗಳು ಮತ್ತು 15,000 ನೈರ್ಮಲ್ಯ ಕಾರ್ಯಕರ್ತರು, 1,250 ಕಿಮೀ ಉದ್ದದ ಪೈಪ್‌ಲೈನ್, 1,186 ಸಿಸಿಟಿವಿ ಸೇರಿ ಹಲವು ಸೌಲಭ್ಯಗಳ ನೀಡಲಾಗಿದೆ. ಈ ನಡುವೆ ಶಿಬಿರಗಳ ಹಾಕಿರುವ ಜಾಗಗಳನ್ನು ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಆಧುನಿಕ ಶೌಚ, ಸ್ನಾನ ಸೌಲಭ್ಯಗಳು ಇಲ್ಲಿವೆ. ಅತಿಥಿಗಳಿಗೆ ಅನುಕೂಲವಾಗುವಂತೆ ಟೆಂಟ್ ಸಿಟಿಯನ್ನು ತ್ರಿವೇಣಿ ಘಾಟ್‌ಗೆ ಸಮೀಪದಲ್ಲಿ ನಿರ್ಮಿಸಲಾಗಿದೆ. ಈಗ ಸೆಕ್ಟರ್ 19ರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.



Click it and Unblock the Notifications