Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕುಟುಂಬಸ್ಥರ ಬಿಟ್ಟು ಹಣ್ಣು ವ್ಯಾಪಾರಿಗೆ ₹3.8 ಕೋಟಿ ಆಸ್ತಿ ಬರೆದ ಅಜ್ಜ..! ಯಾಕೆ ಗೊತ್ತಾ?
ಇತ್ತೀಚಿಗೆ ಮಕ್ಕಳಿಗೆ ಆಸ್ತಿ ಮಾಡೋದು, ಮರಿಮಕ್ಕಳಿಗೆ ಆಸ್ತಿ ಮಾಡೋದು ಸಾಮಾನ್ಯ ಅದು ಜೀವನದ ಉದ್ದೇಶವೂ ಆಗಿರುತ್ತೆ. ಇನ್ನೂ ಕೆಲವರು ಆಸ್ತಿ ಮಾಡಲು ಯಾವ ದಾರಿ ತುಳಿಯುತ್ತಾರೆ ಅಂದ್ರೆ ಅದು ಹೇಳಲು ಅಸಾಧ್ಯ, ಹಣ, ಆಸ್ತಿ ಮಾಡಬೇಕು ಅಂತಾನೆ ಎಲ್ಲರ ಹೆಬ್ಬಯಕೆ ಆಗಿರುತ್ತೆ. ಮನುಷ್ಯ ಬದುಕಿರೋದೆ ಆಸ್ತಿ ಮಾಡಲು ಅಂದ್ರೂ ತಪ್ಪಾಗಲ್ಲ.
ಹೀಗೆ ಆಸ್ತಿ ಮಾಡೋಕು ಒಂದು ಕಾರಣವಿರುತ್ತೆ. ಮುಂದೆ ಮಕ್ಕಳು, ಮರಿ ಮಕ್ಕಳು, ಕಷ್ಟ ಪಡೆದೆ ತಾನು ಮಾಡಿಟ್ಟ ಆಸ್ತಿಯನ್ನು ಅನುಭವಿಸಲಿ ಅನ್ನೋದು ಹಿರಿಯರ ಆಸೆಯಾಗಿರುತ್ತೆ. ಜೊತೆಗೆ ನಾನು ಮಾಡಿಟ್ಟ ಆಸ್ತಿಯಲ್ಲಿ ಆತ ಬದುಕು ಕಟ್ಟಿಕೊಳ್ಳಲಿ ಈ ಮೂಲಕ ತನ್ನ ಹೆಸರು ಇನ್ನೂ ಮುಂದುವರಿಯಲಿ ಎಂಬ ಬಯಕೆ ಇರುತ್ತದೆ.

ಇನ್ನು ಆಸ್ತಿ ಮಾಡಲು ಕೆಲವರು ಒಳ್ಳೆಯ ದಾರಿ ಹಿಡಿದರೆ ಇನ್ನೂ ಕೆಲವರು ಆಸ್ತಿ ಸಂಪಾದನೆಗೆ ಅನ್ಯದಾರಿ ಹಿಡಿಯುತ್ತಾರೆ. ಆದ್ರೆ ನಾವಿಲ್ಲಿ ಹೇಳ ಹೊರಟಿರೋದು ಒಬ್ಬ ತನ್ನೆಲ್ಲಾ ಆಸ್ತಿ ಮಕ್ಕಳಿಗೂ ಸಿಗದೆ ಅನಾಥಾಶ್ರಮಕ್ಕೂ ಬರೆಯದೆ ಆತ ಕೈಗೊಂಡ ನಿರ್ಧಾರವೀಗ ಭಾರೀ ಸುದ್ದಿಯಾಗುತ್ತಿದೆ. ಹಾಗಾದ್ರೆ ಆತ ತನ್ನ ಆಸ್ತಿಯನ್ನೆಲ್ಲಾ ಏನು ಮಾಡಿದ ಎಂಬುದನ್ನು ಓದಿ..
ಹಣ್ಣು ವ್ಯಾಪಾರಿಗೆ ಆಸ್ತಿ ಬರೆದ ವ್ಯಕ್ತಿ
ಮಕ್ಕಳು, ಮರಿಮಕ್ಕಳು ಕುಳಿತು ತಿನ್ನುವಷ್ಟು ಮಾಡಿದ್ದ ಆಸ್ತಿಯನ್ನೆಲ್ಲಾ ಸಾಯುವಾಗ ಅವರ ವಂಶಸ್ಥರ ಹೆಸರಲ್ಲೇ ಬರೆದಿಡುತ್ತಾರೆ. ಆದ್ರೆ ಇಲ್ಲೊಬ್ಬ ತನ್ನೆಲ್ಲಾ ಆಸ್ತಿಯನ್ನು ಮನೆ ಮುಂದೆ ಹಣ್ಣು ವ್ಯಪಾರ ಮಾಡಿಕೊಂಡಿದ್ದ ಬಡ ವ್ಯಾಪಾರಿ ಹೆಸರಿಗೆ ಬರೆದು ಹುಬ್ಬೇರುವಂತೆ ಮಾಡಿದ್ದಾನೆ. ಹೌದು ನೀವು ಓದಿದ್ದು ಸತ್ಯ ಆತ ತನ್ನ 3.8 ಕೋಟಿ ಆಸ್ತಿಯನ್ನು ಹಣ್ಣು ವ್ಯಾಪಾರಿಯೊಬ್ಬನ ಹೆಸರಿಗೆ ಬರೆದು ಪ್ರಾಣ ಬಿಟ್ಟಿದ್ದಾನೆ.
ಚೀನಾದ ಶಾಂಘೈ ನಗರದಲ್ಲಿ ವಾಸವಿದ್ದ 88 ವರ್ಷದ ವ್ಯಕ್ತಿ ತನ್ನ 3.8 ಕೋಟಿ ಆಸ್ತಿಯನ್ನು ಕುಟುಂಬಸ್ಥರ ಹೆಸರಿಗೆ ಬರೆಯದೆ ಮನೆ ಮುಂದೆ ಹಣ್ಣು ವ್ಯಾಪಾರ ಮಾಡುತ್ತಿದ್ದವನ ಹೆಸರಿಗೆ ಬರೆದಿದ್ದಾನೆ. ವಿಚಿತ್ರ ಎಂದರೆ ಮನೆಯವರಿಗಿಂತ ಆ ಹಣ್ಣು ವ್ಯಾಪಾರಿಯೇ ಇಳಿ ವಯಸ್ಸಿನ ವ್ಯಕ್ತಿಯನ್ನು ಚೆನ್ನಾಗಿ ವಿಚಾರಿಸಿಕೊಳ್ಳುತ್ತಿದ್ದನಂತೆ ಇದಕ್ಕೆ ಪ್ರತಿಯಾಗಿ ಮನೆ ಯಜಮಾನ ಅವನ ಆಸ್ತಿಯನ್ನೇ ಬರೆದಿಟ್ಟಿದ್ದಾನೆ.
ಮನೆ ಎದುರು ಹಣ್ಣು ಮಾರುತ್ತಿದ್ದ ಆತನ ಬಳಿ ಮಾ ಎಂದು ಕರೆಯುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿ ಯಾವಾಗಲೂ ಹೋಗುತ್ತಿದ್ದ, ಗಂಟೆಗೂ ಹೆಚ್ಚು ಕಾಲ ಲಿಯು ಎಂಬ ಹಣ್ಣು ವ್ಯಾಪಾರಿ ಬಳಿ ಆತ ಮಾತನಾಡುತ್ತಿದ್ದಂತೆ. ಆತ ಕೊನೆಯ ದಿನದಲ್ಲಿ ಸಂತಸ ಹಂಚಿಕೊಳ್ಳಲು ಲಿಯು ಬಳಿ ಬರುತ್ತಿದ್ದ, ವ್ಯಾಪಾರಿ ಲಿಯು ಸಹ ಮಾಗೆ ಹಣ್ಣುಗಳ ನೀಡಿ ಆತನೊಂದಿಗೆ ಮಾತನಾಡಲು ಕುಳಿತುಬಿಡುತ್ತಿದ್ದ.
ಆದರೆ ಒಂದು ದಿನ ಮಾ ನೋಟರಿ ಅಧಿಕಾರಿಗಳ ಮುಂದೆ ಹಣ್ಣು ವ್ಯಾಪಾರಿಯ ಕರೆದೊಯ್ದು ಆಸ್ತಿ ಹಸ್ತಾಂತರ ಮಾಡಿಸಿದ್ದಾರೆ. ಸುಮಾರು 6 ವರ್ಷದಿಂದ ಹಣ್ಣು ವ್ಯಾಪಾರಿಯೊಂದಿಗೆ ಮಾ ನ ಇತ್ಯ ಮಾತನಾಡುತ್ತಿದ್ದ, ವ್ಯಾಪಾರಿ ಲಿಯು ವಾಸಿಸಲು ಸರಿಯಾದ ಮನೆಯೂ ಸಹ ಇರಲಿಲ್ಲ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಾ ಒಂದು ದಿನ ಆತನ ಹೆಸರಿಗೆ ತನ್ನ ಅಪಾರ್ಟ್‌ಮೆಂಟ್ ಸೇರಿ ಎಲ್ಲಾ ಆಸ್ತಿ ಬರೆದಿದ್ದ.
ಕುಟುಂಬಸ್ಥರಿಂದಲೂ ಬೆಂಬಲ
ಇಳಿ ವಯಸ್ಸಿನ ವ್ಯಕ್ತಿ ತನ್ನೆಲ್ಲಾ ಆಸ್ತಿಯನ್ನು ಲಿಯು ಹೆಸರಿಗೆ ಬರೆದಿರುವುದಕ್ಕೆ ಕುಟುಂಬಸ್ಥರಲ್ಲಿ ವಿರೋಧವಿರಲಿಲ್ಲ. ಅವರೇ ನೋಟರಿ ಅಧಿಕಾರಿಗಳ ಜೊತೆ ಈ ಸಂಬಂಧ ಮಾತನಾಡಿದ್ದರಂತೆ. ಈ ರೀತಿ ಆಸ್ತಿ ಹಸ್ತಾಂತರ ಮಾಡಲು ಹಲವು ರೀತಿಯ ನಿಯಮಗಳಿದ್ದು, ಮನೆಯವರ ಒಪ್ಪಿಗೆ ಪಡೆಯುವುದು ಸಹ ಈ ನಿಯಮಗಳಲ್ಲಿ ಒಂದಾಗಿದೆ. ಹೀಗಾಗಿ ಮಾ ಕುಟುಂಬಸ್ಥರು ಇದಕ್ಕೆ ಒಪ್ಪಿದ್ದರು.



Click it and Unblock the Notifications
