Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ನಕಲಿ ನೋಟಲ್ಲ ಇಡೀ ಬ್ಯಾಂಕ್ ನಕಲಿ..! ನಕಲಿ ಬ್ಯಾಂಕ್ ಕಟ್ಟಿ ಹಣ ಮಾಡಲು ಹೊರಟಿದ್ದಾತನ ಕಥೆ!
ನೀವು ನಕಲಿ ನೋಟುಗಳ ಬಗ್ಗೆ ಕೇಳಿರುತ್ತೀರ. ಅಸಲಿ ನೋಟಿನಂತೆ ನಕಲಿ ನೋಟುಗಳ ತಯಾರು ಮಾಡಿ ಮಾರುಕಟ್ಟೆಗೆ ಬಿಡುವ ದೊಡ್ಡ ದೊಡ್ಡ ಗ್ಯಾಂಗ್‌ಗಳ ಬಗ್ಗೆಯೂ ಕೇಳಿರುತ್ತೀರಿ. ನಕಲಿ ಎಂದರೆ ಯಾರಿಗೂ ತಿಳಿಯುವುದು ಇಲ್ಲ, ಅಸಲಿ ನೋಟು ಮತ್ತು ನಕಲಿಯನ್ನು ಒಟ್ಟಿಗೆ ಇಟ್ಟರೆ ಯಾವುದು ನಕಲಿ ಎಂಬುದೇ ತಿಳಿಯುವುದಿಲ್ಲ. ಅಷ್ಟೊಂದು ಯಥಾವತ್ತಾಗಿ ಕಳ್ಳರು ಈ ನಕಲು ಮಾಡುವಲ್ಲಿ ಪರಿಣಿತಿ ಪಡೆದಿರುತ್ತಾರೆ.
ಆದ್ರೆ ನೀವು ಎಂದಾದರು ನಕಲಿ ಬ್ಯಾಂಕ್ ಬಗ್ಗೆ ಕೇಳಿದ್ದೀರಾ..? ಹೌದು ಇಲ್ಲಿ ಬರಿ ನೋಟಲ್ಲ ಇಡೀ ಬ್ಯಾಂಕ್ ನಕಲಿ. ಈ ರೀತಿಯ ಅಚ್ಚರಿಯ ಘಟನೆಯೂ ನಡೆದಿತ್ತು. ಇಡೀ ಎಸ್‌ಬಿಐ ನಕಲಿ ಬ್ಯಾಂಕ್ ಅನ್ನೇ ಸೃಷ್ಟಿಸಿ ಹಣದ ವ್ಯವಹಾರಕ್ಕೂ ಸಿದ್ಧಗೊಂಡಿತ್ತು. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಯಾವ ರೀತಿ ಇದು ನಕಲಿ ಬ್ಯಾಂಕ್ ಎಂಬುದನ್ನು ಪತ್ತೆ ಮಾಡಿದ್ರು, ಏನಿದು ಕಥೆ ಎಂಬುದನ್ನು ನೋಡಿ.

ನೀವು ದಿನ ಹಣ ಕಟ್ಟಿ ಬರುತ್ತಿದ್ದ ಬ್ಯಾಂಕ್ ಒಂದು ಇದ್ದಕ್ಕಿದ್ದಂತೆ ನಕಲಿ ಎಂದು ತಿಳಿದರೆ ಹೇಗಾಗುತ್ತೆ ಹೇಳಿ. ಇಲ್ಲಿ ಆಗಿದ್ದು ಅದೇ. ತಮಿಳುನಾಡಿನ ಕಡಲೂರಿನ ಪಂರುತಿಯಲ್ಲಿ ಎರಡು ವರ್ಷದ ಹಿಂದೆ ನಡೆದ ಘಟನೆ ಇದು. ಎಸ್‌ಬಿಐ ಬ್ಯಾಂಕ್ ಅನ್ನೇ ಇಲ್ಲಿ ನಕಲು ಮಾಡಿ ಹಣ ಕಟ್ಟಿಸಿಕೊಳ್ಳಲಾಗಿತ್ತು.
ಮಾಜಿ ಬ್ಯಾಂಕ್ ಉದ್ಯೋಗಿ ಪುತ್ರನೇ ಮಾಸ್ಟರ್ ಮೈಂಡ್
ಇಲ್ಲಿನ ನಗರದಲ್ಲಿ ಹೊಸದಾಗಿ ಒಂದು ಎಸ್‌ಬಿಐ ಬ್ಯಾಂಕ್ ಶಾಖೆ ಆರಂಭಗೊಂಡಿತ್ತು. ಅಲ್ಲಿದ್ದವರು ಸದ್ಯ ಹತ್ತಿರದಲ್ಲೇ ಬ್ಯಾಂಕ್ ಶಾಲೆ ಓಪನ್ ಆಯಿತಲ್ಲ ಎಂದು ದೂರದ ಶಾಖೆ ಬಿಟ್ಟು ಇದೇ ಶಾಖೆಯಲ್ಲಿ ಖಾತೆ ತೆರೆಯಲು ಮುಂದಾಗಿದ್ರು, ಒಂದಿಷ್ಟು ಮಂದಿ ನಿತ್ಯ ತಮ್ಮ ಉಳಿತಾಯದ ಹಣ ಕಟ್ಟಲು ಹತ್ತಿರದ ಶಾಖೆ ಇದೆ ಎಂದು ಹಿರಿ ಹಿರಿ ಹಿಗ್ಗಿದ್ರು. ಇಷ್ಟೆಲ್ಲಾ ಮಾಡಿದ್ದು ಓರ್ವ ಬ್ಯಾಂಕ್ ಉದ್ಯೋಗಿಯ ಮಗನಾಗಿದ್ದ.
ಕಮಲ್ ಬಾಬು ಎಂಬಾತನ ತಂದೆ 10 ವರ್ಷಗಳ ಹಿಂದೆ ನಿಧನರಾದರು ಮತ್ತು ಅವರ ತಾಯಿ ಲಕ್ಷ್ಮಿ ಎರಡು ವರ್ಷಗಳ ಹಿಂದೆ ಬ್ಯಾಂಕ್‌ನಿಂದ ನಿವೃತ್ತರಾಗಿದ್ದರು. ನಿರುದ್ಯೋಗಿಯಾಗಿದ್ದ ಕಮಲ್ ಅವರು ಎಸ್‌ಬಿಐ ನಕಲಿ ಶಾಖೆ ತೆರೆಯುವ ಆಲೋಚನೆ ಮಾಡಿದ್ದ.
ಸಹಾಯಕ್ಕೆ ಬಂದ ಸ್ನೇಹಿತ
ಆತ ನಕಲಿ ಬ್ಯಾಂಕ್ ತೆರೆಯುವ ಪ್ಲಾನ್‌ಗೆ ಆತನ ಸ್ನೇಹಿತ ಸಹಾಯಕ್ಕೆ ಬಂದಿದ್ದ, ಶಾಖೆಗೆ ಒಳ್ಳೆಯ ಜಾಗ ಹುಡುಕಿದರು, ಅದೊಂದು ಬಾಡಿಗೆ ಕಟ್ಟಡವಾಗಿತ್ತು, ಒಂದಿಷ್ಟು ಲೋನ್ ಮಾಡಿ ತಾವೇ ಮೇಲ್ವಿಚಾರಣೆ ನಡೆಸಿ ಶಾಖೆ ನಿರ್ಮಿಸಿದರು. ಅಷ್ಟೆ ಅಲ್ಲ ಶಾಖೆಗೆ ಬೇಕಾದ ಬೋರ್ಡ್, ಪಾಸ್‌ಬುಕ್, ಚೆಕ್ ಬುಕ್, ಚಲನ್ ಸೇರಿ ಎಲ್ಲವೂ ಯಥಾ ವತ್ತಾಗಿ ನಕಲು ಮಾಡಿದ್ದರು. ಯಾರೊಬ್ಬರಿಗೂ ಇದು ನಕಲಿ ಬ್ಯಾಂಕ್ ಎಂಬುದೇ ತಿಳಿಯದಂತೆ ಮಾಡಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಒಂದಿಷ್ಟು ದಿನ ಈ ಬ್ಯಾಂಕ್ ನಿರ್ಮಾಣದ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಒಮ್ಮೆ ಶಾಖಾ ವ್ಯವಸ್ಥಾಪಕರು ಅದೇ ಮಾರ್ಗದಲ್ಲಿ ತೆರಳುವಾಗ ಹೊಸ ಬ್ಯಾಂಕ್ ಕಟ್ಟುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಎಲ್ಲವೂ ಗೊಂದಲವಾಗಿ ಕಂಡಿತ್ತು. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಇದೊಂದು ನಕಲಿ ಬ್ಯಾಂಕ್ ಎಂದು ತಿಳಿದುಬಂದಿತ್ತು.
ಸ್ಥಳಕ್ಕೆ ಬಂದ ಶಾಖಾ ವ್ಯವಸ್ಥಾಪಕ ದಂಗು
ಇನ್ನು ನಕಲಿ ಶಾಖೆಯನ್ನು ಪರಿಶೀಲನೆ ನಡೆಸಲು ಬಂದ ಶಾಖಾ ವ್ಯವಸ್ಥಾಪಕರು ಅಕ್ಷರಶಃ ದಂಗಾಗಿದ್ದರು, ಅಸಲಿ ಶಾಖೆಯಂತೆ ಎಲ್ಲ ವ್ಯವಸ್ಥೆಯೂ ಅಲ್ಲಿತ್ತು. ಇದನ್ನು ಕಂಡ ಅವರು ಬೆಚ್ಚಿಬಿದ್ದಿದ್ದರು. ಕೂಡಲೇ ದೂರು ದಾಖಲಿಸಿದರು. ಸ್ಥಳಕ್ಕೆ ಬಂದ ಪೊಲೀಸರು
ಮಾಸ್ಟರ್ ಮೈಂಡ್ ಕಮಲ್ ಬಾಬು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಬ್ಬರ್ ಸ್ಟಾಂಪ್ ತಯಾರಿ ಮಾಡಿದ್ದ ಮಾಲೀಕ ಮಾಣಿಕ್ಕಂ (52), ಪ್ರಿಂಟಿಂಗ್ ಪ್ರೆಸ್ ಮಾಲೀಕ ಕುಮಾರ್ (42) ಬಂಧಿಸಿದರು. ಆದರೆ ಬ್ಯಾಂಕ್ ಹೊಸದಾಗಿ ಇನ್ನೇನು ಕಾರ್ಯಾಚರಣೆ ನಡೆಸಲು ಮುಂದಾಗಿತ್ತು, ಯಾರ ಹಣವನ್ನು ಇವರು ಪಡೆದಿರಲಿಲ್ಲ ಎಂದು ತಿಳಿದುಬಂದಿತು.



Click it and Unblock the Notifications