Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಐಎಎಸ್ ಅಧಿಕಾರಿ ಪೋಸ್ಟ್‌ಗೆ ಕಮೆಂಟ್: ನಗುವ ಇಮೋಜಿ ಹಾಕಿದ್ದವನ ಮೇಲೆ ಕೇಸ್...!
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದು, ಚಾಟ್ ಮಾಡೋದು, ವಿವಾದಾತ್ಮಕ ಹೇಳಿ ನೀಡೋದು, ಇಲ್ಲವೆ ಲೈವ್ ವಿಡಿಯೋ ಮಾಡೋದು ಎಲ್ಲವೂ ನಿತ್ಯ ನಾವು ನೋಡುವ ವಿಚಾರ, ಆದ್ರೆ ಇದೇ ಸೋಶಿಯಲ್ ಮೀಡಿಯಾ ನಿಮ್ಮ ಜೀವನಕ್ಕೆ ಕುತ್ತು ತರುತ್ತೆ ಅನ್ನೋದು ಕೂಡ ಹಲವು ಬಾರಿ ಸಾಬೀತಾಗಿದೆ. ನೀವು ಮಾಡುವ ಒಂದೊಂದು ಕಮೆಂಟ್‌ಗಳು ಕೂಡ ನಿಮ್ಮನ್ನು ಕಾನೂನಿನ ಅಡಿ ಶಿಕ್ಷೆಗೆ ಗುರಿ ಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ?
ಇಲ್ಲೊಬ್ಬ ಫೇಸ್‌ಬುಕ್‌ನಲ್ಲಿ ಮಾಡಿದ್ದ ಒಂದೇ ಒಂದು ಕಮೆಂಟ್ ಈಗ ಜಾಮೀನು ಪಡೆಯಲು ಬರೋಬ್ಬರಿ 200ಕ್ಕೂ ಹೆಚ್ಚು ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆತ ಒಂದು ಇಮೋಜಿ ಜೊತೆಗೆ ಕಮೆಂಟ್ ಮಾಡಿದ್ದ. ಆತ ಈಗ ಜಾಮೀನು ಪಡೆದು ಹೊರಗೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ನಿಮಗೆ ಅಚ್ಚರಿ ತರಬಹುದು. ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಫೇಸ್‌ಬುಕ್ ಪೋಸ್ಟ್‌ಗೆ ಆತ ಕಮೆಂಟ್ ಮಾಡಿ ಈ ಅಚಾತುರ್ಯಕ್ಕೆ ಕಾರಣನಾಗಿದ್ದಾನೆ. ಆತನ ಇಮೋಜಿ ಹಾಗೂ ಕಮೆಂಟ್ ಸಂಬಂಧ ಅಧಿಕಾರಿ ದೂರು ನೀಡಿ ಈಗ ಜಾಮೀನು ಪಡೆಯಬೇಕಾದ ಸ್ಥಿತಿಗೆ ಆತ ಬಂದಿದ್ದಾನೆ.
ಏನಿದು ಘಟನೆ? ಅಸಲಿಗೆ ಆಗಿದ್ದೇನು?
ಈ ಘಟನೆ ನಡೆದಿದ್ದು 2023ರಲ್ಲಿ ನಲ್ಬರಿ ಪಟ್ಟಣದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಬಹಳ ಆಕ್ಕೀವ್ ಆಗಿದ್ದರು. ನಿತ್ಯ ಒಂದೊಂದು ಫೋಟೋವನ್ನು ಹಾಕುವುದು ಅವರ ಅಭ್ಯಾಸವಾಗಿತ್ತು. ಅದೇ ರೀತಿ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಅವರು ಹಾಕಿದ್ದ ಎಲ್ಲಾ ಪೋಸ್ಟ್‌ಗಳಿಗೂ ಇಬ್ಬರು ಯಾವಾಗಲು ಕೆಟ್ಟದಾಗಿ ಕೆಮೆಂಟ್ ಮಾಡುತ್ತಿದ್ದರು. ಹಾಗೂ ಜೋರಾಗಿ ನಗುವಂತಹ ಇಮೋಜಿ ಅದರ ಜೊತೆಗೆ ಹಾಕುತ್ತಿದ್ದರು.
ಒಂದು ದಿನ ದೇಕಾ ಹಾಕಿದ್ದ ಫೋಟೋಗೆ ನರೇಶ್ ಬರುವಾ ಮತ್ತು ಅಬ್ದುಲ್ ಸುಬರ್ ಚೌಧರಿ ಕಮೆಂಟ್ ಮಾಡಿದ್ದಾರೆ. ಇವನ್ನೇನು ಮೇಡಂ ಮೇಕಪ್ ಮಾಡಿಲ್ಲವೇ ಎಂದು ಆತ ಕಮೆಂಟ್ ಮಾಡಿ ನಗುವ ಇಮೋಜಿ ಹಾಕಿದ್ದ. ಅಮಿತ್ ಚಕ್ರವರ್ತಿ ಎಂಬಾತ ಈ ಕಾಮೆಂಟ್‌ಗೆ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದ.
ಇದಕ್ಕೆ ಪ್ರತಿಕ್ರಿಸಿದ್ದ ದೇಕಾ ನಿಮಗೆ ಅದರಿಂದ ಏನು ಸಮಸ್ಯೆ ಎಂದು ಕೇಳಿದ್ದರು ಹಾಗೆ ಇದು ಮಾತಿಗೆ ಮಾತು ಬೆಳೆದಿತ್ತು. ನಂತರ ಮಹಿಳಾ ಅಧಿಕಾರಿ ಕೊಕ್ರಜಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಮೂವರಿಗೂ ನೋಟಿಸ್ ಜಾರಿ ಮಾಡಿದ್ದರು.
ಈಗ ಅಮಿತ್ ಚಕ್ರವರ್ತಿ ನಗುವ ಇಮೋಜಿ ಹಾಕಿದ್ದ ಪರಿಣಾಮ ಜಾಮೀನು ಪಡೆಯಬೇಕಾಗಿದೆ. ಹಾಗೆ 200 ಕಿ.ಮೀ ಪ್ರಯಾಣಿಸಿ ಕೋರ್ಟ್‌ಗೆ ಹಾಜರಾಗಬೇಕಿದೆ. ಈ ಸಂಬಂಧ ಮಾತನಾಡಿದ್ದ ಆತ ವರ್ಣಾಲಿ ದೇಕಾ ಐಎಎಸ್ ಅಧಿಕಾರಿ ಅಥವಾ ಉಪ ಆಯುಕ್ತೆ ಎಂದು ನನಗೆ ತಿಳಿದಿರಲಿಲ್ಲ. ಅವರ ಯಾವುದೇ ಪೋಸ್ಟ್‌ಗೆ ನಾನು ಕಮೆಂಟ್ ಮಾಡಿಲ್ಲ. ಆದ್ರೆ ಒಂದೇ ಇಮೋಜಿ ಹಾಕಿದ್ದೆ. ಇದಕ್ಕೆ ಕೇಸ್ ಹಾಕಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
ಸದ್ಯ ಮೂವರು ಈ ಪೋಸ್ಟ್‌ಗಳಿಗೆ ಮಾಡಿರುವ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354D ಹಾಗೂ ಸೆಕ್ಷನ್ 354A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.



Click it and Unblock the Notifications
