Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಓಣಂ ಪ್ರಯುಕ್ತ ನಡೆಯುತ್ತಿದ್ದ ಇಡ್ಲಿ ಸ್ಪರ್ಧೆಯಲ್ಲಿ ಇಡ್ಲಿ ಗಂಟಲಿಗೆ ಸಿಕ್ಕಾಕಿಕೊಂಡು ಸಾವು
ಎಲ್ಲಾದರು ತಿನ್ನುವ ಸ್ಪರ್ಧೆ ಇದ್ದಾಗ ಗೆಲ್ಲುವ ಭರದಲ್ಲಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ. ಕೇರಳದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿ ತಿಂದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಂಥದ್ದೇ ಘಟನೆ ಈ ಹಿಂದೆ ಕರ್ನಾಟಕದಲ್ಲಿಯೂ ನಡೆದಿತ್ತು.

ಕೇರಳದ ಪ್ರಮುಖ ಓಣಂ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ
ಕೇರಳದ ಪ್ರಮುಖ ಹಬ್ಬ ಓಣಂ, ಈ ದಿನದಂದು ಹೂವಿನ ರಂಗೋಲಿ ಹಾಕಿ, ಓಣಂ ಸದ್ಯ ರೆಡಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ, ಮನರಂಜನೆಗಾಗಿ ಕೆಲ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ, ಅದರಂತೆ ಇಡ್ಲಿ ತಿನ್ನುವ ಸ್ಪರ್ಧೆ ಇತ್ತು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಒಂದೇ ಬಾರಿಗೆ ಮೂರು ಇಡ್ಲಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಇಡ್ಲಿ ಗಂಟಲಿನಲ್ಲಿ ಸಿಕ್ಕಾಕಿಕೊಂಡು ಸಾವು ಸಂಭವಿಸಿದೆ.
ಕೇರಳದ ವಲಯಾರ್ ಎಂಬ ಪ್ರದೇಶದಲ್ಲಿ ನಡೆದ ದುರಂತವಿದು
ವಲಯಾರ್ ಸ್ಥಳೀಯ ಕ್ಲಬ್ ಓಣಂ ಹಬ್ಬದ ಪ್ರಯುಕ್ತ ಹಲವು ಸಾಂಸ್ಕೃತಿ ಕಾರ್ಯಕ್ರಮ, ಕ್ರೀಡೆ, ಪೂಕಳಂ(ಹೂವಿನ ರಂಗೋಲಿ) ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಂತೋಷದಿಂದ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಇತ್ತು, ಅದರಲ್ಲಿ ಭಾಗವಹಿಸಿದವರು ಇಡ್ಲಿ ತಿನ್ನಲು ಪ್ರಾರಂಭಿಸಿದ್ದಾರೆ. ಸುತ್ತಲಿರುವವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಅತೀ ಹೆಚ್ಚು ಇಡ್ಲಿ ತಿಂದು ಬಹುಮಾನ ಗೆಲ್ಲುವ ಹುಮ್ಮಸ್ಸಿನಲ್ಲಿ ಮೂರು ಇಡ್ಲಿ ಜೊತೆಗೆ ತಿನ್ನಲಾರಂಭಿಸಿದ್ದಾರೆ, ಆವಾಗ ಇಡ್ಲಿ ಗಂಟಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಯಾವುದೇ ಚಟ್ನಿ, ಸಾಂಬಾರ್ ಇಲ್ಲದೆ ತಿನ್ನಬೇಕಿತ್ತು
ಇಡ್ಲಿಯನ್ನು ಹಾಗೇ ತಿನ್ನುವುದು ಕಷ್ಟ, ಈ ಸ್ಪರ್ಧೆ ನಿಯಮ ಪ್ರಕಾರ ಇಡ್ಲಿಯನ್ನು ಸಾಂಬಾರ್, ಚಟ್ನಿ ಏನೂ ಬಳಸದೆ ತಿನ್ನಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ಯಾರು ಹೆಚ್ಚು ಇಡ್ಲಿ ತಿನ್ನುತ್ತಾರೋ ಅವರಿಗೆ ಬಹುಮಾನ, ಸ್ಟಾರ್ಟ್ ಅಂತ ವಿಸಿಲ್ ಊದಿದ ತಕ್ಷಣ ಇವರು ನಾನು ಇಡ್ಲಿ ಬೇಗ ತಿಂದು ಮುಗಿಸಬೇಕೆಂದು 3 ಇಡ್ಲಿಯನ್ನು ಇಟ್ಟಿಗೆ ಬಾಯಿಗೆ ಹಾಕಿದ್ದಾರೆ. ಇದರಿಂದ ಇಡ್ಲಿ ಗಂಟಲಿನಲ್ಲಿ ಸಿಕ್ಕಾಕಿಕೊಂಡು ಸಾವು ಸಂಭವಿಸಿದೆ.
ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವು ಉಂಟಾಗಿತ್ತು
ಇಡ್ಲಿ ಗಂಡಲಿನಲ್ಲಿ ಸಿಕ್ಕಾಕಿಕೊಂಡು ಆ ವ್ಯಕ್ತಿ ಒದ್ದಾಡಲು ಪ್ರಾರಂಭಿಸಿದಾಗ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅದರೆ ವೈದ್ಯರು ಆತ ಮೃತ ಪಟ್ಟಿದ್ದಾನೆ ಎಂದು ತಿಳಿಸುತ್ತಾರೆ.
ಬರಿ ಇಡ್ಲಿ ತಿನ್ನುವುದು ಕಷ್ಟ
ನೀವು ಒಂದು ಇಡ್ಲಿ ಹಾಗೇ ತಿಂದು ನೋಡಿ ತಿನ್ನುವುದು ಕಷ್ಟವಾಗುವುದು ಇದಕ್ಕೆ ಚಟ್ನಿ ಅಥವಾ ಸಾಂಬಾರ್, ಕರಿ ಬೇಕೇಬೇಕು, ಇಡ್ಲಿ ವೇಗವಾಗಿ
ತಿನ್ನುವಾಗ ಗಂಟಲಿನಲ್ಲಿ ಸಿಕ್ಕಾಕಿಕೊಳ್ಳಬಹುದು, ಇಡ್ಲಿಯಂತೆ ಸಿಪ್ಪೆ ಸುಲಿದಇಡೀ ಮೊಟ್ಟೆ ಒಮ್ಮೆಲೇ ಬಾಯಿಗೆ ಹಾಕಿಕೊಳ್ಳುವುದು ಕೂಡ ಒಳ್ಳೆಯದಲ್ಲ, ಗಂಟಲಿನಲ್ಲಿ ಸಿಕ್ಕಾಕಿಕೊಳ್ಳಬಹುದು, ಇಂಥ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಬಹುಮಾನಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂಬುವುದು ನೆನಪಿರಲಿ.



Click it and Unblock the Notifications