Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಬ್ಯೂಲೆನ್ಸ್‌ಗೆ ದಾರಿ ಬಿಡದ ವ್ಯಕ್ತಿಯ ವೀಡಿಯೋ ವೈರಲ್: ಇನ್ಮುಂದೆ ಆ ವ್ಯಕ್ತಿಗೆ ಗಾಡಿ ಓಡಿಸಲು ಸಾಧ್ಯವೇ ಇಲ್ಲ ನೋಡಿ
ಕೆಲ ಮನುಷ್ಯರು ಇರ್ತಾರೆ, ಆದರೆ ಅವರು ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸುತ್ತಾರೆ, ಮನುಷ್ಯತ್ವವನ್ನೇ ಮರೆತು ನಡೆದುಕೊಳ್ಳುತ್ತಾರೆ, ಅಂಥವರಿಗೆ ನನ್ನನ್ನು ಯಾರೂ ಏನೂ ಮಾಡಲ್ಲ ಎಂಬ ದುರಹಂಕಾರ, ಅಂಥವರಿಗೆ ಖಂಡಿತ ತಕ್ಕ ಪಾಠ ಕಲಿಸಲೇಬೇಕು, ಇಂಥ ಪೀಠಿಕೆಗೆ ಕಾರಣ ಕೇರಳದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ.

ಆಂಬ್ಯೂಲೆನ್ಸ್‌ಗೆ ಸೈಡ್ ನೀಡದ ವ್ಯಕ್ತಿ
ಆಂಬ್ಯೂಲೆನ್ಸ್ ಸೈರನ್ ಕೇಳಿದಾಗ ಎಂಥವರಿಗೂ ಒಂಥರಾ ಆಗುತ್ತೆ, ಯಾವ ಜೀವ ಆಪತ್ತಿನಲ್ಲಿದೆಯೋ ಎಂದು ಯೋಚಿಸುತ್ತೇವೆ, ಎಂಥದ್ದೇ ಟ್ರಾಫಿಕ್ ಜಾಮ್ ಇರಲಿ ಆಂಬ್ಯೂಲೆನ್ಸ್ ಸೈರನ್ ಕೇಳಿದ ತಕ್ಷಣ ಆ ಗಾಡಿ ಹೋಗಲು ಟ್ರಾಫಿಕ್ ಕ್ಲಿಯರ್ ಮಾಡಲಾಗುವುದು, ಗಾಡಿಯಲ್ಲಿರುವ ವ್ಯಕ್ತಿಗೆ ಒಂದೊಂದು ನಿಮಿಷವೂ ಮುಖ್ಯ ಆಗಿರುತ್ತದೆ. ಗೋಲ್ಡನ್ ಅವರ್‌ನಲ್ಲಿ ತಲುಪಿಸಬೇಕು,ಹಾಗೆ ತಲುಪಿಸಿದರೆ ಆ ವ್ಯಕ್ತಿ ಬದುಕಿಳಿಯುವ ಸಾಧ್ಯತೆ ಹೆಚ್ಚು. ಅದು ಅಪಘಾತದಿಂದ ಗಾಯವಾಗಿರುವ ವ್ಯಕ್ತಿಯಾಗಿರಲಿ ಅಥವಾ ಹೃದಯಾಘಾತವಾಗಿರುವ ವ್ಯಕ್ತಿಯಾಗಿರಲಿ, ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಗರ್ಭಿಣಿಯಾಗಿರಲಿ ಹೀಗೆ ಆಂಬ್ಯೂಲೆನ್ಸ್‌ನಲ್ಲಿ ಸೈರನ್ ಹಾಕಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದರೆ ಆ ವ್ಯಕ್ತಿ ಸಾವು ಬದುಕಿನ ನಡುವೆ ಇದ್ದಾರೆ ಎಂದರ್ಥ, ಹೀಗಾಗಿಯೇ ಆಂಬ್ಯೂಲೆನ್ಸ್ ಶಬ್ದ ಕೇಳಿಸಿದ ತಕ್ಷಣ ಸೈಡ್ ಕೊಡಬೇಕು.
ಆಂಬ್ಯೂಲೆನ್ಸ್‌ಗೆ ಸೈಡ್ ಕೊಡದೆ ಕಾರು ಚಲಾಯಿಸಿದ ವ್ಯಕ್ತಿ
ಆದರೆ ಕೇರಳದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ, ಆಂಬ್ಯೂಲೆನ್ಸ್ ಅಷ್ಟೊಂದು ಸೈರನ್ ಹಾಕಿದರೂ ಆತ ಮಾತ್ರ ಆಂಬ್ಯೂಲೆನ್ಸ್‌ಗೆ ಸೈಡ್ ನೀಡಲೇ ಇಲ್ಲ, ಆಂಬ್ಯೂಲೆನ್ಸ್‌ಗೆ ಸೈಡ್ ನೀಡದಿರುವುದು ಅಪರಾಧ ಎಂಬ ಕಾನೂನು ಕೂಡ ಇದೆ ಆದರೂ ಆತ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಆ ಆಂಬ್ಯೂಲೆನ್ಸ್ ಸೈರನ್ ಮೂಲ ಸೈಡ್ ಕೊಡು ಎಂದು ಕೇಳುತ್ತಿದ್ದರೂ ಆತ ಮಾತ್ರ ಸ್ವಲ್ಪವೂ ವಿವೇಚನೆಯಿಲ್ಲದಂತೆ ವರ್ತಿಸಿದ್ದಾನೆ.
ವೀಡಿಯೋ ವೈರಲ್, ಆತನನ್ನು ಅರೆಸ್ಟ್ ಮಾಡಿದ ಪೊಲೀಸರು
ಆತನ ಪುಂಡಾಟಿಕೆಯ ವೀಡಿಯೋ ವೈರಲ್ ಆಗುತ್ತಿದೆ. ಈ ರೀತಿ ಕೆಟ್ಟ ವರ್ತನೆ ತೋರಿದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತನಿಗೆ 2 ಲಕ್ಷದ 50 ಸಾವಿರ ದಂಡ ಹಾಕಿ ಆತನ ಲೈಸೆನ್ಸ್ ಕೂಡ ಕ್ಯಾನ್ಸಲ್ ಮಾಡಲಾಗಿದೆ.
ಆಂಬ್ಯೂಲೆನ್ಸ್‌ಗೆ ಟ್ರಾಫಿಕ್ ರೂಲ್ಸ್ ಏನಿದೆ?
ಆಂಬ್ಯೂಲೆನ್ಸ್ ಕೂಡ ಟ್ರಾಫಿಕ್ ರೂಲ್ಸ್ ಪಾಲಿಸಬೇಕು, ಸಿಗ್ನಲ್‌ನಲ್ಲಿ ರೆಡ್‌ಲೈಟ್ ಬಂದಾಗ ನಿಲ್ಲಿಸಬೇಕು ಆದರೆ ರೋಗಿ ತುಂಬಾನೇ ಸೀರಿಯಸ್ ಇದ್ದಾಗ ಪೊಲೀಸರೇ ಟ್ರಾಫಿಕ್ ಕ್ಲಿಯರ್ ಮಾಡಿ ಕೊಡುತ್ತಾರೆ. ಕೆಲವೊಂದು ಕೇಸ್‌ಗಳಲ್ಲಿ ಜೀರೋ ಟ್ರಾಫಿಕ್‌ನಲ್ಲಿ ಆಂಬ್ಯೂಲೆನ್ಸ್ ಬಂದಿರುವ ಉದಾಹರಣೆಗಳಿವೆ, ಅಂಗಾಂಗ ತಂದಾಗ, ಮಗುವಿನ ಪ್ರಾಣವುಳಿಸಲು ಬಂದ ಆಂಬ್ಯೂಲೆನ್ಸ್ ಜೀರೋ ಟ್ರಾಫಿಕ್‌ನಲ್ಲಿ ಬಂದಂಥ ಉದಾಹರಣೆಗಳಿವೆ.
ಆಂಬ್ಯೂಲೆನ್ಸ್ ಸೈರನ್ ಹಾಕಿದಾಗ, ಅದರ ಮೇಲೆ ಇರುವ ವಿವಿಧ ಬಣ್ಣದ ಲೈಟ್ಸ್ ಆನ್ ಆದಾಗ ಅದರೊಳಗಡೆ ಇರುವ ವ್ಯಕ್ತಿಗೆ ತುಂಬಾನೇ ತುರ್ತು ವೈದಕೀಯ ಸೌಲಭ್ಯ ಸಿಗಬೇಕಾಗಿದೆ ಎಂಬುವುದನ್ನು ಸೂಚಿಸುತ್ತದೆ. ಸೈರನ್ ಹಾಕಿದಾಗ ಆ ಆಂಬ್ಯೂಲೆನ್ಸ್ ವೇಗವಾಗಿ ಹೋಗಬಹುದು, ಇತರ ಗಾಡಿಗಳನ್ನು ಹಿಂದಿಕ್ಕಿ ಹೋಗಬಹುದು.
ಆಂಬ್ಯೂಲೆನ್ಸ್‌ಗೆ ರಸ್ತೆ ಕ್ಲಿಯರ್ ಮಾಡಿಕೊಡಬೇಕು, ಇತರ ಗಾಡಿಗಳು ಆಂಬ್ಯೂಲೆನ್ಸ್‌ಗೆ ಸೈಡ್ ಕೊಡಬೇಕು, ಯಾವುದೇ ಅಡೆತಡೆ ಮಾಡಬಾರದು. ಆ ರೀತಿ ಯಾರಾದರೂ ಆಂಬ್ಯೂಲೆನ್ಸ್‌ಗೆ ಬ್ಲಾಕ್ ಮಾಡಿದರೆ ಅವರಿಗೆ ದಂಡ ವಿಧಿಸಲಾಗುವುದು ಅಲ್ಲದೆ 6 ತಿಂಗಳು ಜೈಲುಶಿಕ್ಷೆ ಕೂಡ ನೀಡಲಾಗುವುದು.
ಕೇರಳದಲ್ಲಿ ಆ ವ್ಯಕ್ತಿಯ ವರ್ತನೆಗೆ ಸರಿಯಾಗಿಯೇ ಶಿಕ್ಷೆ ನೀಡಲಾಗಿದೆ, ಇನ್ಮುಂದೆ ಆತನಿಗೆ ಗಾಡಿ ಚಲಾಯಿಸಲು ಲೈಸೆನ್ಸ್ ಕೂಡ ಇಲ್ಲ.



Click it and Unblock the Notifications
