Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
Main Door House Entrance Vastu Tips: ಬೆಳಗ್ಗೆ ಮನೆ ಬಾಗಿಲಿನಲ್ಲಿ ಈ 3 ವಸ್ತುಗಳನ್ನು ಚುಮುಕಿಸಿದರೆ ಅದೃಷ್ಟವೇ ಬದಲಾಗಲಿದೆ!
ಮನೆಯ ಮುಖ್ಯ ಬಾಗಿಲಿಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮತ್ತು ಮನೆಯ ಮುಖ್ಯ ಬಾಗಿಲಲ್ಲಿ ಧನಾತ್ಮಕ ಶಕ್ತಿಯು ಸಂಗ್ರಹವಾಗಿರುತ್ತೆ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಮನೆಯ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಬೆಳಿಗ್ಗೆ ಎದ್ದ ತಕ್ಷಣ ತೆರೆಯಬೇಕಂತೆ. ಈ ರೀತಿ ಮಾಡುವುದರಿಂದ ಲಕ್ಷ್ಮಿಯು ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.

ವಾಸ್ತು ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುತ್ತದೆ. ಮತ್ತು ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಇನ್ನೂ ಮುಖ್ಯವಾದ ವಿಚಾರ ಅಂದ್ರೆ ನಿಮ್ಮ ಮನೆ ಬಾಗಿಲಿನ ಮುಂಭಾಗ ಈ ಮೂರು ವಸ್ತುಗಳನ್ನು ಬೆಳಗ್ಗೆ ಎದ್ದ ತಕ್ಷಣ ಚುಮುಕಿಸೋದ್ರಿಂದ ಲಕ್ಷ್ಮೀಯೂ ನೇರವಾಗಿ ಮನೆಗೆ ಆಗಮಿಸುತ್ತಾಳಂತೆ. ಇದರಿಂದಾಗಿ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಸದಾ ತುಂಬಿರುತ್ತಂತೆ. ಅಷ್ಟಕ್ಕೂ ಯಾವ ಮೂರು ವಸ್ತುಗಳನ್ನು ಮನೆ ಬಾಗಿಲಿನಲ್ಲಿ ಚುಮುಕಿಸಬೇಕು ಅನ್ನೋದನ್ನು ತಿಳಿಯೋಣ.
ಅರಿಶಿನ ನೀರನ್ನು ಚಿಮುಕಿಸಬೇಕು!
ಧಾರ್ಮಿಕ ನಂಬಿಕೆಗಳ ಪ್ರಕಾರ ಅರಿಶಿನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದನ್ನು ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಮುಖ್ಯ ಬಾಗಿಲಿನ ಮೇಲೆ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚುತ್ತದೆ. ಮತ್ತು ಲಕ್ಷ್ಮಿ ದೇವಿಯೂ ನಿಮ್ಮ ಮನೆಯತ್ತ ಆಕರ್ಷಿತಳಾಗುತ್ತಾಳೆ. ಬೆಳಗಿನ ಪೂಜೆಯ ಸಮಯದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ.
ಪೂಜೆ ಮುಗಿದ ನಂತರ ಈ ನೀರನ್ನು ತಂದು ಮುಖ್ಯ ಬಾಗಿಲಿಗೆ ಚಿಮುಕಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸುತ್ತ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮತ್ತು ನಿಮ್ಮ ಮನೆಯಲ್ಲಿ ಯಾವತ್ತೂ ಯಾವುದೇ ಕೊರತೆ ಉಂಟಾಗುವುದಿಲ್ಲ.
ಗಂಗಾಜಲ ಚಿಮುಕಿಸಬೇಕು!
ಧಾರ್ಮಿಕ ನಂಬಿಕೆಗಳಲ್ಲಿ ಗಂಗಾಜಲವನ್ನು ಪವಿತ್ರ ಜಲವೆಂದು ಪರಿಗಣಿಸಲಾಗಿದೆ. ಗಂಗಾಜಲಕ್ಕೆ ಎಲ್ಲಾ ರೀತಿಯ ಋಣಾತ್ಮಕತೆಯನ್ನು ಹೋಗಲಾಡಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಮನೆಯ ಮುಖ್ಯ ಬಾಗಿಲಿಗೆ ಗಂಗಾಜಲದ ಕೆಲವು ಹನಿಗಳನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮತ್ತು ನಿಮ್ಮ ಒತ್ತಡ ದೂರವಾಗುತ್ತದೆ. ಅಲ್ಲದೆ ಎಲ್ಲಾ ರೀತಿಯ ನಕಾರಾತ್ಮಕತೆಯು ನಿಮ್ಮ ಮನೆಯಿಂದ ಹೊರಹೋಗುತ್ತದೆ.
ಉಪ್ಪು ನೀರು ಚುಮುಕಿಸಿ!
ವಾಸ್ತವವಾಗಿ ಉಪ್ಪನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಅನೇಕ ಜನರು ತಮ್ಮ ಮನೆಯನ್ನು ಪ್ರತಿದಿನ ಉಪ್ಪು ನೀರಿನಿಂದ ಒರೆಸುತ್ತಾರೆ. ಇದಲ್ಲದೇ ಪ್ರತಿನಿತ್ಯ ನೀರಿನೊಂದಿಗೆ ಉಪ್ಪನ್ನು ಮುಖ್ಯ ಬಾಗಿಲಿಗೆ ಚಿಮುಕಿಸಿದರೆ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಅಷ್ಟೇ ಅಲ್ಲದೇ, ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸಲು ಬಿಡುವುದಿಲ್ಲ. ಉಪ್ಪು ನೀರನ್ನು ಸಿಂಪಡಿಸುವುದರಿಂದ ಎಲ್ಲಾ ರೀತಿಯ ರೋಗಗಳು ಮತ್ತು ದೋಷಗಳು ನಿಮ್ಮ ಮನೆಯಿಂದ ದೂವಾಗುತ್ತೆ ಎನ್ನುವ ನಂಬಿಕೆಯಿದೆ.



Click it and Unblock the Notifications
