Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಆಂಜನೇಯನಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸಿದರೆ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು!
ಪವನಪುತ್ರ ಹನುಮಂತನು ನಂಬಿ ಬಂದ ಭಕ್ತರ ಕಷ್ಟ- ಕಾರ್ಪಣ್ಯಗಳನ್ನು ದೂರ ಮಾಡುತ್ತಾ ಅವರಿಗೆ ಅಭಯ ನೀಡುತ್ತಿದ್ದಾನೆ. ಈ ಜಗತ್ತಿನಲ್ಲಿ ಮುಕ್ಕೋಟಿ ದೇವರಿದ್ದಾರೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಪ್ರತಿಯೊಂದು ದೇವರಿಗೂ ಅದರದ್ದೇ ಆದ ವಿಶೇಷ ದಿನಗಳಿದೆ. ಆ ದಿನದಂದು ದೇವರನ್ನು ಭಕ್ತಿಯಿಂದ ಸ್ಮರಣೆ ಮಾಡಿದ್ರೆ ಸಂಕಷ್ಟಗಳೆಲ್ಲಾ ಕಳೆಯುತ್ತಂತೆ.
ಅದೇ ರೀತಿ ಮಂಗಳವಾರ ಹಾಗೂ ಶನಿವಾರ ಆಂಜನೇಯನಿಗೆ ಪ್ರಿಯವಾದ ದಿನ. ಈ ದಿನ ಆಂಜನೇಯನಿಗೆ ನಿಮ್ಮ ಭಕ್ತಿಯನ್ನು ಸಮರ್ಪಣೆ ಮಾಡಿದ್ರೆ, ನಿಮ್ಮ ಎಲ್ಲಾ ರೀತಿಯ ದೋಷಗಳನ್ನು ಆತ ಪರಿಹರಿಸುತ್ತಾನೆ. ಇನ್ನೂ ಈ ದಿನ ಹನುಮಂತನಿಗೆ ಪ್ರಿಯಾವಾದ ನೈವೇದ್ಯಗಳನ್ನು ಸಮರ್ಪಣೆ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆಯಿದೆ. ಹಾಗಾದ್ರೆ ಹನುಮಂತನಿಗೆ ಪ್ರಿಯವಾದ ಖಾದ್ಯಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಪುಳಿಯೋಗರೆ
ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ ಒಂದು ತಿಂಡಿ ಎಂದರೆ ಅದು ಪುಳಿಯೋಗರೆ. ಅದ್ರಲ್ಲೂ ಹೆಚ್ಚಾಗಿ ಕರ್ನಾಟಕದಲ್ಲಿ ಜನ ಬೆಳಗ್ಗಿ ತಿಂಡಿ, ಮಧ್ಯಾಹ್ನದ ಊಟಕ್ಕೂ ಪುಳಿಯೋಗರೆಯನ್ನು ತಿನ್ನುತ್ತಾರೆ. ಅದ್ರಲ್ಲೂ ಅನೇಕ ಜನರಿಗೆ ಪುಳಿಯೋಗರೆ ಅಂದ್ರೆ ಪಂಚಪ್ರಾಣ. ಅದೇ ರೀತಿ ಆಂಜನೇಯನಿಗೆ ಪ್ರಿಯವಾದ ಆಹಾರಗಳಲ್ಲಿ ಪುಳಿಯೋಗರೆ ಕೂಡ ಒಂದು.
ಅನೇಕ ದೇವಸ್ಥಾನಗಳಲ್ಲಿ ಪುಳಿಯೋಗರೆಯನ್ನು ಪ್ರಸಾದದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪುಳಿಯೋಗರೆ ಮಾಡೋದಕ್ಕೂ ತುಂಬಾನೇ ಸುಲಭ. ಹಾಗೂ ತಿನ್ನೋದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಕೊಂಚ ಹುಳಿ ರುಚಿಯನ್ನು ಹೊಂದಿದ್ದು, ಅನ್ನದಿಂದ ಈ ಪುಳಿಯೋಗರೆಯನ್ನು ತಯಾರು ಮಾಡಲಾಗುತ್ತದೆ.
2. ಸಬ್ಬಕ್ಕಿ ಪಾಯಸ
ಅನೇಕ ಜನರಿಗೆ ಸಿಹಿ ಪದಾರ್ಥಗಳು ಎಂದರೆ ತುಂಬಾನೇ ಇಷ್ಟ. ಅದ್ರಲ್ಲೂ ಪಾಯಸ ಅಂದ್ರೆ ಚಪ್ಪರಿಸಿ ತಿನ್ನುತ್ತಾರೆ. ನಿಮ್ಮಗೆಲ್ಲಾ ಸಬ್ಬಕ್ಕಿ ಅಥವಾ ಸಾಗು ಪಾಯಸದ ರುಚಿ ಗೊತ್ತಿರಬಹುದು. ಒಂದು ಸಲ ತಿಂದ್ರೆ ತಿನ್ನುತ್ತಾನೆ ಇರ್ಬೇಕು ಅನ್ನಿಸುತ್ತೆ. ಆಂಜನೇಯನಿಗೂ ಸಬ್ಬಕ್ಕಿ ಪಾಯಸ ಪ್ರಿಯವಾದ ಆಹಾರವಂತೆ. ವಿಶೇಷ ದಿನಗಳಲ್ಲಿ ಸಬ್ಬಕ್ಕಿ ಪಾಯಸವನ್ನು ಆಂಜನೇಯನಿಗೆ ಅರ್ಪಣೆ ಮಾಡಿದ್ರೆ ಆತ ಸಂತೃಪ್ತನಾಗುತ್ತಾನಂತೆ.
3. ಬೆಲ್ಲದಿಂದ ತಯಾರಿಸಿದ ಡ್ರೈ ಫ್ರೂಟ್ಸ್ ಲಡ್ಡು
ಆಂಜನೇಯನಿಗೆ ಪ್ರಿಯವಾದ ಮತ್ತೊಂದು ಆಹಾರವೆಂದರೆ ಬೆಲ್ಲದಿಂದ ತಯಾರಿಸಿದ ಡ್ರೈ ಫ್ರೂಟ್ಸ್ ಲಡ್ಡು. ಇದನ್ನು ಕೂಡ ಆಂಜನೇಯನಿಗೆ ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ. ಇದನ್ನು ತಯಾರು ಮಾಡೋದು ತುಂಬಾನೇ ಸುಲಭ. ಡ್ರೈ ಫ್ರೂಟ್ಸ್, ಬೆಲ್ಲ, ತೆಂಗಿನ ಕಾಯಿ, ಗೋಧಿಪುಡಿ ಹಾಗೂ ತುಪ್ಪ ಇದ್ದರೆ ಸಾಕು. ಕೆಲವೇ ಕೆಲವು ಸಾಮಾಗ್ರಿಗಳಿಂದ ರುಚಿಕರವಾದ ತಿಂಡಿಯನ್ನು ತಯಾರು ಮಾಡಬಹುದು.
4. ಮೋತಿಚೂರ್ ಲಡ್ಡು
ಬಾಯಲ್ಲಿಟ್ಟರೆ ಸುಲಭವಾಗಿ ಕರಗುವಂತಹ ಸಿಹಿಯಾದ ತಿಂಡಿ ಈ ಮೋತಿಚೂರ್ ಲಡ್ಡು. ಆಂಜನೇಯನಿಗೂ ಮೋತಿಚೂರ್ ಲಡ್ಡು ಎಂದರೆ ತುಂಬಾನೇ ಇಷ್ಟವಂತೆ. ಹೀಗಾಗಿ ವಿಶೇಷ ದಿನಗಳಲ್ಲಿ ಹನುಮಂತನಿಗೆ ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ. ಒಂದು ನಂಬಿಕೆಯ ಪ್ರಕಾರ ಆಂಜನೇಯನಿಗೆ ಕೇಸರಿ ಪ್ರಸಾದವನ್ನು ನೀಡುವುದರ ಮೂಲಕ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದಂತೆ.
5. ಬೇಸನ್ ಲಡ್ಡು
ಬೇಸನ್ ಲಡ್ಡು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಾಗೂ ಹನುಮಂತನಿಗೆ ಪ್ರಿಯವಾದ ಆಹಾರಗಳಲ್ಲಿ ಒಂದು. ಒಂದು ನಂಬಿಕೆಯ ಪ್ರಕಾರ ಬೇಸನ್ ಲಡ್ಡುವನ್ನು ಪವನ ಪುತ್ರನಿಗೆ ನೈವೇದ್ಯವಾಗಿ ಅರ್ಪಣೆ ಮಾಡೋದ್ರಿಂದ ನಮ್ಮ ಜೀವನದಲ್ಲಿ ಎದುರಾಗೋ ಅಡೆ-ತಡೆಗಳನ್ನು ಆಂಜನೇಯ ದೂರ ಮಾಡಿ. ಜೀವನದಲ್ಲಿ ಖುಷಿಯೇ ತುಂಬಿಕೊಂಡಿರುವಂತೆ ಆಶೀರ್ವದಿಸುತ್ತಾನಂತೆ.
6. ವೀಳ್ಯದೆಳೆ
ವೀಳ್ಯದೆಲೆ ಕೂಡ ಆಂಜನೇಯನಿಗೆ ಅತ್ಯಂತ ಪ್ರಿಯವಾದ ಒಂದು ವಸ್ತು. ನಿಮ್ಮ ಜೀವನದಲ್ಲಿ ನೀವು ಬಗೆ ಹರಿಸಲಾಗದ ಸಮಸ್ಯೆಗಳಿಂದ ಬಳಲುತ್ತಿದ್ದರೆ ವಿಶೇಷ ದಿನಗಳಲ್ಲಿ ಹನಮಂತನಿಗೆ ವೀಳ್ಯದೆಲೆಯನ್ನು ಸಮರ್ಪಣೆ ಮಾಡಬೇಕು. ಇದರಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳೆಲ್ಲಾ ಸಂಪೂರ್ಣವಾಗಿ ನಿವಾರಣೆಯಾಗುತ್ತಂತೆ.
7. ಬೂಂದಿ ಕಾಳು
ಆಂಜನೇಯನ ದೇವಸ್ಥಾನಗಳಲ್ಲಿ ಹೆಚ್ಚಾಗಿ ಕೇಸರಿ ಬಣ್ಣದ ಪ್ರಸಾದವನ್ನೇ ನೀಡಲಾಗುತ್ತದೆ. ಇದಕ್ಕೆ ಕಾರಣ ಹನುಮಂತನಿಗೆ ಕೇಸರಿ ಬಣ್ಣವೆಂದರೆ ತುಂಬಾನೇ ಇಷ್ಟವಂತೆ. ಅದೇ ರೀತಿ ನೀವು ಪವನಪುತ್ರನಿಗಾಗಿ ಕೇಸರಿ ಬಣ್ಣದ ಬೂಂದಿಯನ್ನು ಸಮರ್ಪಣೆ ಮಾಡಿದರೆ ಆಂಜನೇಯನಿಗೆ ತುಂಬಾನೇ ಇಷ್ಟವಾಗುತ್ತಂತೆ. ಹಾಗೂ ನಿಮ್ಮ ಮೇಲೆ ಆತನ ಆಶೀರ್ವಾದ ಸದಾ ಇದ್ದೇ ಇರುತ್ತಂತೆ.
ಇದೆಲ್ಲಾ ಆಂಜನೇಯನಿಗೆ ಅತ್ಯಂತ ಪ್ರಿಯವಾದ ಆಹಾರ ಪದಾರ್ಥಗಳು. ಹೀಗಾಗಿ ಇದನ್ನು ಆಂಜನೇಯನಿಗೆ ಭಕ್ತಿಯಿಂದ ನೈವೇದ್ಯವಾಗಿ ಅರ್ಪಣೆ ಮಾಡಿದರೆ ನಿಮ್ಮ ಕಷ್ಟ-ಕಾರ್ಪಣ್ಯಗಳು ದೂರ ಆಗಲಿದೆ.



Click it and Unblock the Notifications

