Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋ ಅಭ್ಯರ್ಥಿ ಕುರಿತು ಭವಿಷ್ಯ..! ಗಿಳಿ ಸಮೇತ ವ್ಯಕ್ತಿ ಅರೆಸ್ಟ್..!
ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗುತ್ತಿದೆ. ಎಲ್ಲ ಅಭ್ಯರ್ಥಿಗಳು ಗೆಲುವಿಗಾಗಿ ಕೊನೆಯ ಹಂತದ ಕಸರತ್ತಯ ನಡೆಸುತ್ತಿದ್ಧಾರೆ. ಎಲ್ಲರು ಗೆಲ್ಲಲೇಬೇಕೆಂದು ಉತ್ಸಾಹದಲ್ಲಿ ಮತದಾರರ ಮನ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ. ಯಾವ ಅಭ್ಯರ್ಥಿ ಗೆಲ್ಲಲ್ಲಿದ್ದಾರೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದೆಲ್ಲದರ ನಡುವೆ ಈ ಬಾರಿ ಯಾರು ಗೆಲವು ಪಡೆಯುತ್ತಾರೆ ಎಂಬುದನ್ನು ಊಹೆ ಮಾಡಲು ಈಗಿನಿಂದಲೇ ಬಾಜಿ ಕಟ್ಟುವುದು, ಬೆಟ್ಟಿಂಗ್ ಕಟ್ಟುವುದು ನಡೆಯುತ್ತಿದೆ. ಆದರೆ ಇಲ್ಲೊಂದು ಕಡೆ ಈ ಚುನಾವಣೆಯಲ್ಲಿ ಯಾರು ಗೆಲುವು ಪಡೆಯುತ್ತಾರೆ ಎದು ಭವಿಷ್ಯ ನುಡಿದವ ಈಗ ಕಂಬಿ ಎಣಿಸಬೇಕಾದ ಪ್ರಸಂಗ ನಡೆದಿದೆ.

ಹೌದು ಗಿಳಿಶಾಸ್ತ್ರ ಹೇಳುವಾತ ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುರಿತು ಭವಿಷ್ಯ ನುಡಿದು ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡಿನ ಕಡಲೂರು ಪ್ರದೇಶದಲ್ಲಿ ಸೆಲ್ವರಾಜ್ ಎಂಬಾತ ಗಿಳಿ ಶಾಸ್ತ್ರ ಹೇಳಿಕೊಂಡಿದ್ದ. ಆದರೆ ಕಳೆದ ಮಂಗಳವಾರ ಗಿಳಿಯ ಸಮೇತ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಡಲೂರು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಕುರಿತು ಭವಿಷ್ಯ ನುಡಿದ ಗಿಳಿ
81 ವರ್ಷದ ಸೆಲ್ವರಾಜ್ ಎಂಬಾತ ತಮಿಳುನಾಡಿನ ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಭವಿಷ್ಯ ನುಡಿದಿದ್ದ. ಆತನ ಗಿಳಿ ತೆಗೆದುಕೊಟ್ಟ ಕಾರ್ಡ್ ಪ್ರಕಾರವಾಗಿ ಕಡಲೂರು ಕ್ಷೇತ್ರದಲ್ಲಿ ಪಿಎಂಕೆ ಅಭ್ಯರ್ಥಿ ಥಂಕರ್ ಬಚನ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದ.
ಕಡಲೂರು ಸಮೀಪದ ತೆನ್ನಂಪಕ್ಕಂನಲ್ಲಿರುವ ಅಜಗು ಮುತ್ತು ಅಯ್ಯನಾರ್ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಭ್ಯರ್ಥಿ ಬಚನ್, ಗಿಳಿ ಶಾಸ್ತ್ರ ಹೇಳುವ ಸೆಲ್ವರಾಜ್ ಅವರನ್ನು ಭೇಟಿ ಮಾಡಿದ್ದರು.
ಪಿಎಂಕೆ ಅಭ್ಯರ್ಥಿ ಏಕೆ ಗೆಲ್ಲುತ್ತಾರೆ?
ಸೆಲ್ವರಾಜ್ ಅವರ ಗಿಳಿಯು ತನ್ನ ಪಂಜರದಿಂದ ಹೊರಬಂದು ಅಳಗು ಮುತ್ತು ಅಯ್ಯನಾರ್ ಅವರ ಚಿತ್ರವಿರುವ ಕಾರ್ಡ್ ಅನ್ನು ಕೈಗೆತ್ತಿಕೊಂಡಿತು, ಇದನ್ನು ಸೆಲ್ವರಾಜ್ ಒಳ್ಳೆಯ ಶಕುನ ಎಂದು ಹೇಳಿದರು. ಸೆಲ್ವರಾಜ್ ಪ್ರಕಾರ, ಇದು ಚುನಾವಣೆಯಲ್ಲಿ ಬಚ್ಚನ್ ಅವರ ಗೆಲುವಿನ ಖಚಿತ ಸಂಕೇತವಾಗಿದೆ. ನಿಮಗೆ ಒಳ್ಳೆಯದಾಗಲಿದೆ, ಗೆಲುವು ನಿಮ್ಮದಾಗಲಿದೆ ಎಂದು ಅವರ ಎದುರು ಹೇಳಿದ್ದ.
ಗಿಳಿಯ ಭವಿಷ್ಯ ಅಭ್ಯರ್ಥಿ ಬಚನ್‌ಗೆ ದೊಡ್ಡ ಬೂಸ್ಟರ್ ಆಗಿತ್ತು. ಇದನ್ನು ಕೇಳಿ ಅಭ್ಯರ್ಥಿ ಸಹ ಖುಷಿಯಿಂದ ಆತನಿಗೆ ಕಾಣಿಕೆ ಕೊಟ್ಟು ಅಲ್ಲಿಂದ ತೆರಳಿದ್ದ, ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡತೊಡಗಿತು. ಅಲ್ಲದೆ ಸೆಲ್ವರಾಜ್ ಊಹಿಸದಷ್ಟು ಸಮಸ್ಯೆ ತಂದಿಟ್ಟಿತು.
ಈ ವಿಡಿಯೋ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳಿಗೂ ತಲುಪಿದ್ದು, ಅವರು ಆತನನ್ನು ಹುಡುಕಿಕೊಂಡು ಬಂದಿದ್ದಾರೆ. ಪಕ್ಷಿಯನ್ನು ಸೆರೆಯಲ್ಲಿಟ್ಟಿದ್ದಕ್ಕಾಗಿ ಸೆಲ್ವರಾಜ್ ಅವರನ್ನು ಬಂಧಿಸಲಾಯಿತು. ಇದು WPA 1972ರ ಅಡಿಯಲ್ಲಿ ಗಿಳಿಗಳನ್ನು ರಕ್ಷಿತ ಪಕ್ಷಿಯಾಗಿದ್ದು, ಯಾರು ಸಹ ಹಿಡಿದಿಟ್ಟುಕೊಳ್ಳುವಂತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಸೆಕ್ಷನ್ IV ರ ಅಡಿಯಲ್ಲಿ ಗಿಳಿಗಳನ್ನು ರಕ್ಷಿಸಲಾಗಿದೆ ಮತ್ತು ಅವುಗಳನ್ನು ಸೆರೆಹಿಡಿಯುವುದು, ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಆದರೆ ಸೆಲ್ವರಾಜ್‌ನನ್ನು ಬಂಧಿಸಿ ಆತನ ವಯಸ್ಸು ಹಾಗೂ ವೃತ್ತಿ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ಆತನ ಗಿಳಿ ಅರಣ್ಯ ಇಲಾಖೆ ಬಳಿ ಉಳಿದಿದೆ. ಈ ಘಟನೆ ಬಳಿಕ ಪಿಎಂಕೆ, ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಿಎಂಕೆ ಅಭ್ಯರ್ಥಿ ಗೆಲ್ಲುತ್ತಾನೆ ಎಂಬ ಸತ್ಯವನ್ನು ಡಿಎಂಕೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಟೀಕಿಸಿದೆ.



Click it and Unblock the Notifications