Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುಹೆಯಲ್ಲಿ ವಾಸವಿರುವ ಭೂಮಿ ಮೇಲಿನ ಕೊನೆಯ ವ್ಯಕ್ತಿ..! ಎಲ್ಲಿದ್ದಾನೆ ಈತ!
ಭೂಮಿ ಮೇಲೆ ಮಾನವ ಕಾಲಿಟ್ಟಾಗ ಆತ ಆರಂಭದಲ್ಲಿ ಎಲ್ಲೆಂದರಲ್ಲಿ ಇರುತ್ತಿದ್ದ ಆತನಿಗೆ ಆಶ್ರಯ ಪಡೆಯಬೇಕು ಎಂಬ ಆಲೋಚನೆ ಕೂಡ ಇರಲಿಲ್ಲ. ಹಾಗೆ ತದನಂತರ ಮರದ ಮೇಲೆ ಆಶ್ರಯ ಪಡೆದಾತ ಬರುಬರುತ್ತಾ ಗುಹೆಗಳಲ್ಲಿ ವಾಸ ಮಾಡಲು ಮುಂದಾದ. ಗುಹೆಗಳೇ ಶಿಲಾಯುಗದ ಜನರ ಆವಾಸ ಸ್ಥಾನ ಆಗಿತ್ತು. ಹಾಗೆ ಗುಹೆಗಳಲ್ಲೇ ಆದಿ ಮಾನವನ ಕುರುಹುಗಳು ಸಹ ಪತ್ತೆಯಾದವು. ಮಾನವನ ವಿಕಸನ ಸಿದ್ದಾಂತಗದಲ್ಲಿ ಬಹುತೇಕ ಆತನ ಇತಿಹಾಸ ಗುಹೆಗಳಲ್ಲಿ ನೋಡಬಹುದು.
ಇಂದಿಗೂ ಹಲವು ಬುಡಕಟ್ಟು ಜನರು ಆಧುನಿಕ ಜಗತ್ತಿನಿಂದ ದೂರವೇ ವಾಸವಿದ್ದರೂ ಅವರು ಗುಹೆಗಳಲ್ಲಿ ನೆಲೆಸಿಲ್ಲ. ಬದಲಿಗೆ ವಸತಿಯ ಆಲೋಚನೆಗಳು ಬಂದಿವೆ. ಹಾಗೆ ನಗರ ಜೀವನಕ್ಕೂ ಅವರು ತೆರೆದುಕೊಳ್ಳುತ್ತಿದ್ದಾರೆ. ಆದ್ರೆ ಗುಹೆಗಳಲ್ಲಿ ಬದುಕುವ ಯಾವೊಂದು ಜನಾಂಗ ಕೂಡ ಈಗ ನೋಡಲು ಸಿಗುವುದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಗುಹೆಯಲ್ಲೇ ನೆಲೆಸಿರುವುದು ಈಗ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಈತನನ್ನು ಕೊನೆಯ ಗುಹಾಂತರ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುಹೆಯಲ್ಲಿ ವಾಸವಿವರು ಭೂಮಿಯ ಕೊನೆಯ ವ್ಯಕ್ತಿ ಆತ ಆಗಿದ್ದಾನೆ. ನಾಗರಿಕತೆಗಳು ಬೆಳೆದರೂ ಆತ ಮಾತ್ರ ಗುಹೆಯಿಂದ ಹೊರಬಂದಿಲ್ಲ. ಹಾಗಾದ್ರೆ ಯಾರು ಆತ? ಎಲ್ಲಿದ್ಧಾನೆ? ಆತನ ಪತ್ತೆ ಮಾಡಿದ್ದು ಯಾರು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಫೇಮಸ್ ಟ್ರಾವೆಲಿಂಗ್ ವ್ಲಾಗರ್ ಒಬ್ಬರು ಹಲವು ವರ್ಷದಿಂದ ಗುಹೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬನನ್ನು ಪತ್ತೆ ಮಾಡಿದ್ದಾರೆ. ಯೆಮೆನ್‌ನ ಸೊಕೊಟ್ರಾ ಬಳಿಯ ಗುಹೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಅವರು ಪತ್ತೆ ಮಾಡಿದರು. ಅವರು ಭೂಮಿ ಮೇಲೆ ನೆಲೆಸಿರುವ ಹಾಗೆ ಗುಹೆಯಲ್ಲಿ ವಾಸವಿರುವ ಕೊನೆಯ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಲಿನ್ ಎಂಬ ಪ್ರವಾಸಿಗ ತಾನು ಗುರುತಿಸಿದ ಗುಹೆಯಲ್ಲಿ ವಾಸವಿರುವ ವ್ಯಕ್ತಿಯನ್ನು ಪರಿಚಯಿಸಿದ್ದಾರೆ. ಆ ವ್ಯಕ್ತಿಯ ಪ್ರಕಾರ ಆತನಿಗೆ ಹಲವರು ಮಕ್ಕಳಿದ್ದರಂತೆ ಆದ್ರೆ ಅನಾರೋಗ್ಯದ ಕಾರಣದಿಂದ ಅವರು ಮೃತಪಟ್ಟರು ಎಂದು ಹೇಳಿಕೊಂಡಿದ್ದಾನೆ. ಆದರೆ ಆತ ಗುಹೆಯಲ್ಲಿ ಶಾಂತಿಯುತ ಜೀವನ ನಡೆಸುವುದನ್ನು ಮುಂದುವರೆಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಆತನನ್ನು ಹಲವರು ವರ್ಷಗಳಿಂದಲೂ ಮಾತನಾಡಿಸಿದ್ದಾರೆ. ಹಾಗೆ ಅಲ್ಪ ಸ್ವಲ್ಪ ಇಂಗ್ಲೀಷ್ ಕೂಡ ಕಲಿತ್ತಿದ್ದಾನೆ. ಸುಮಾರು 62 ವರ್ಷದ ಆತ ತಾನು ಪರಿಸರ, ಸಮುದ್ರ ಬಿಟ್ಟು ಬೇರೆ ಏನೂ ನೋಡಿಲ್ಲ ಎಂದು ಹೇಳುತ್ತಾನೆ. ಸಮುದ್ರದಲ್ಲಿನ ಮೀನುಗಳೇ ಆತನ ಆಹಾರವಂತೆ. ಬೆಳಗ್ಗೆ ಎದ್ದು ಗುಹೆಯಿಂದ ಹೊರಟು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಾಡುಗಳಲ್ಲಿ ಅಲೆದಾಡುತ್ತಾನೆ. ಸಂಜೆ ಆಗುತ್ತಿದ್ದಂತೆ ಗುಹೆಗೆ ಮರಳುತ್ತಾನೆ. ಹಾಗೆ ಬೆಂಕಿ ಮಾಡುವುದು ಕಲಿತಿರುವ ಆತ ಆಹಾರಗಳ ಬೇಯಿಸಿ ಕೂಡ ಸವಿಯುತ್ತಾನೆ.
ಆತನ ಬಳಿ ಮೊಬೈಲ್ ಇಲ್ಲ, ಬಟ್ಟೆಗಳೂ ಇಲ್ಲ, ಯಾವುದೇ ಆಯುಧವಿಲ್ಲ, ಗಾಳಿ ನೀರು ಮಾತ್ರವೇ ಆತನ ಆಸ್ತಿಯಾಗಿವೆ. ಸದ್ಯ ಆತ ಈ ಗುಹೆಯನ್ನು ಬಿಟ್ಟು ಬೇರೆ ಕಡೆ ತೆರಳುವುದನ್ನು ಬಯಸಿಲ್ಲವಂತೆ. ಹಾಗೆ ಆತನಿಗೆ ಗುಹೆಯಿಂದ ಹೊರಗೆ ಬದುಕುವುದು ಕೂಡ ತಿಳಿದಿಲ್ಲವಂತೆ. ಹೀಗಾಗಿ ಆತನನ್ನು ನೂರಾರು ಮಂದಿ ಈವರೆಗೆ ಮಾತನಾಡಿಸಿದ್ದಾರೆ. ಆದ್ರೆ ಯಾರು ಕೂಡ ಆತನನ್ನು ಅಲ್ಲಿಂದ ಹೊರತರುವ ಸಾಹಸಕ್ಕೆ ಮುಂದಾಗಿಲ್ಲ. ಹಾಗೆ ಆತ ಇತರರಿಂದ ಯಾವುದೇ ವಸ್ತುಗಳನ್ನು ಪಡೆಯುವುದಿಲ್ಲ. ತನ್ನ ಸಂತೋಷದ ಜೀವನಕ್ಕೆ ಇವು ಅಡ್ಡಿ ಪಡಿಸುವ ವಸ್ತುಗಳು ಎಂದು ಆತ ನಂಬಿಕೊಂಡಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗುಹೆಯಲ್ಲಿ ವಾಸವಿರುವ ಕೊನೆಯ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ಆತನ ಜೀವನವೇ ಬೆಸ್ಟ್ ಎನ್ನುತ್ತಿದ್ದಾರೆ. ಯಾವುದೇ ಜಂಜಾಟವಿಲ್ಲ, ಹೋರಾಟವೂ ಇಲ್ಲ, ಆತನಿಗೆ ಪ್ರಕೃತಿಯೇ ಎಲ್ಲ. ಇದು ಎಲ್ಲರೂ ಪಡೆಯಬೇಕಾದ ಆಸ್ತಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.



Click it and Unblock the Notifications