Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆ ಮಹತ್ವ ಸಾರುವ ನುಡಿಮುತ್ತುಗಳು ಇಲ್ಲಿವೆ
ಜೂನ್ 5 ವಿಶ್ವ ಪರಿಸರ ದಿನಾಚರಣೆ. ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನ ಗಮನದಲ್ಲಿಟ್ಟುಕೊಳ್ಳಬೇಕು.ಈ ಕಾಡು, ಸ್ವಚ್ಛ ಪರಿಸರ ಎಷ್ಟು ಮುಖ್ಯ ಎಂಬುದನ್ನು ಸದ್ಯ ಇರುವ ಕೊರೊನಾವೇ ತೋರಿಸಿಕೊಟ್ಟಿದೆ. ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು. ಇಲ್ಲಿ ಪರಿಸರ ಸಂರಕ್ಷಣೆಯ ಕುರಿತ ಅರಿವುಮೂಡಿಸುವ ನುಡಿಮುತ್ತುಗಳನ್ನು ನೀಡಲಾಗಿದೆ.
ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆಯ ಉತ್ತಮ ಹಾಗೂ ಅರಿವು ಮೂಡಿಸುವ ಸಾಲುಗಳನ್ನು ಈ ಕೆಳಗೆ ನೀಡಲಾಗಿದೆ:

1. ''ಈಗ ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ" -ಪೂರ್ಣಚಂದ್ರ ತೇಜಸ್ವಿ
2. "ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು, ಆತನ ದುರಾಸೆಯನ್ನಲ್ಲ" - ಮಹಾತ್ಮ ಗಾಂಧಿ
3. "ಭೂಮಿಯು ಸುಂದರವಾದ ವಧುವಿನಂತೆ, ಅವಳ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ" - ಖಲೀಲ್ ಗಿಬ್ರಾನ್
4. ವನಸುಮದೊಲೆನ್ನ ಜೀ.. ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ- ಹೇ ದೇವ
ಜನಕೆ ಸಂತಸವೀವ.. ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ
ಕಾನನದಿ ಮಲ್ಲಿಗೆಯು.. ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ.. ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ
ಉಪಕಾರಿ ನಾನು ಎ.. ನನ್ನು ಪ್ರಕೃತಿಯ ಜಗಕೆಂಬ
ವಿಪರೀತ ಮತಿಯನುಳಿದು.. ವಿಪುಲಾಶ್ರಯವನೀವ
ಸುಫಲಸುಮಭರಿತ ಪಾ
ದಪದಂತೆ ನೈಜಮಾದೊಳ್ಪಿಂ ಬಾಳ್ವವೊಲು
- ಡಿ.ವಿ.ಜಿ
5. ಓ-ಪೂಜಾರಿ
ಕೋಮಲ ಸುಮಗಳ ಕತ್ತನು ಕೊಯ್ದು
ಕಗ್ಗಲ್ಲಿನ ಕಗ್ಗತ್ತಲೆಗೊಯ್ದು
ಗುಡಿಯೊ ಕಲ್ಲಿಗೆ ಬಲಿಕೊಡದಿದ್ದರೆ
ಪರಮಾತ್ಮಗೆ ತೃಪ್ತಿಯೇ ಇಲ್ಲೇನು?
ಈ ಗಿಡದೊಳ ರಾರಾಜಿಸುತ್ತಿದ್ದರೆ
ಶಿವ ಪೂಜೆಯು ಸಲ್ಲುವುದಿಲ್ಲೇನು?
ಸೌಂದರ್ಯ ಸುಮ ನಯನವಕಿತ್ತರೆ
ಶಿವ ಮುಖ ಚಂದ್ರಿಕೆ ಚೆಲುವದು ಸತ್ತರೆ
ಭುವನಕೆ ಮಂಗಳವಾದೀತೆ?
ಬಿಡೋ ಅಲ್ಲರಲಿ ಆ ಹೂವು
ನೀ ಸೃಷ್ಟಿಸಲಿರದ ಚೆಲುವಿಗೆ
ನಿನ್ನಿಂದೇತಕೆ ಸಾವು
-ಕುವೆಂಪು



Click it and Unblock the Notifications



