Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿದುರ ನೀತಿಯ ಪ್ರಕಾರ, ಜೀವನ ಹಾಳುಮಾಡುವ ಮನುಷ್ಯನ ಕೆಟ್ಟ ಗುಣಗಳು ಇವೇಯಂತೆ
ಚಾಣಕ್ಯರಂತೆ ವಿದುರನ ನೀತಿಗಳೂ ಬಹಳ ಜನಪ್ರಿಯವಾಗಿವೆ. ಮಹಾತ್ಮಾ ವಿದುರನನ್ನು ಮಹಾಭಾರತ ಕಾಲದ ಮಹಾನ್ ಬುದ್ಧಿಜೀವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಹಸ್ತಿನಾಪುರದ ರಾಜ ಧೃತರಾಷ್ಟ್ರನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ವಿದುರನ ನೀತಿಗಳಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ನೀಡಲಾಗಿದೆ. ಅವರ ನೀತಿಗಳು ಇಂದಿನ ಕಾಲಕ್ಕೂ ಪ್ರಸ್ತುತ. ವಿದುರ ನೀತಿಯಲ್ಲಿ, ಮನುಷ್ಯನ ಈ 5 ಕೆಟ್ಟ ಅಭ್ಯಾಸಗಳು ಅವರ ಜೀವನವನ್ನು ಹಾಳುಮಾಡುತ್ತವೆ ಎಂದು ಹೇಳಲಾಗಿದೆ. ಈ ಅಭ್ಯಾಸಗಳಿಂದಾಗಿ, ವ್ಯಕ್ತಿಯು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲವಂತೆ. ಹಾಗಾದರೆ, ಆ ಆಭ್ಯಾಸಗಳಾವುವು ನೋಡೋಣ.
ವಿದುರ ನೀತಿಯ ಪ್ರಕಾರ, ಮನುಷ್ಯನ ಜೀವನ ಹಾಳುಮಾಡುವ 5 ಅಭ್ಯಾಸಗಳನ್ನು ಈ ಕೆಳಗೆ ನೀಡಲಾಗಿದೆ:

ಕೀಳರಿಮೆ:
ವಿದುರ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸಂತೋಷವಾಗಿ ಕಳೆಯಲು ಬಯಸಿದರೆ, ಆತ ಮೊದಲು ತನ್ನನ್ನು ತಾನು ಪ್ರೀತಿಸುವ ಗುಣ ಹೊಂದಿರಬೇಕು. ತನ್ನ ಮೇಲೆ ಕೀಳರಿಮೆ ಅಥವಾ ತನ್ನ ಸಾಮಾರ್ಥ್ಯದ ಬಗ್ಗೆ ಅನುಮಾನವಿರುವ ವ್ಯಕ್ತಿ ಜೀವನದಲ್ಲಿ ಏನು ಮಾಡಲು ಸಾಧ್ಯವಿಲ್ಲ. ಸ್ವಯಂಪ್ರೀತಿ ಹಾಗೂ ಆತ್ಮವಿಶ್ವಾಸ ವ್ಯಕ್ತಿಯನ್ನು ಬಲಶಾಲಿಯಾಗಿಸುತ್ತದೆ. ಅಂತಹ ಜನರು ಸಂತೋಷದ ಜೀವನವನ್ನು ಹೊಂದಿರುತ್ತಾರೆ.

ದುರಾಸೆ:
ವಿದುರ ನೀತಿಯ ಪ್ರಕಾರ, ದುರಾಸೆ ಮತ್ತು ಸ್ವಾರ್ಥವು ವ್ಯಕ್ತಿಯ ದೊಡ್ಡ ಶತ್ರುಗಳು. ಈ ಅಭ್ಯಾಸವು ಯಾವುದೇ ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತದೆ. ಏಕೆಂದರೆ ದುರಾಸೆ ಇರುವ ವ್ಯಕ್ತಿ ಎಂದಿಗೂ ಶಾಂತವಾಗಿರಲು ಸಾಧ್ಯವಿಲ್ಲ. ಅವನು ತನ್ನ ಹೆಚ್ಚಿನ ಸಮಯವನ್ನು ಇತರರ ಬಗ್ಗೆ ಯೋಚಿಸುತ್ತಾನೆ. ಅಂಥವರ ಬದುಕು ಹಾಳಾಗುತ್ತದೆ. ಯಾವಾಗ ನಮ್ಮ ಬದುಕಿನ ಬಗ್ಗೆ ಯೋಚಿಸುವುದು ಬಿಟ್ಟು, ಬೇರೆಯವರ ಬಗ್ಗೆ ಚಿಂತಿಸುತ್ತೇವೋ, ಆಗ ನಾವು ಖುಷಿಯಾಗಿರಲು ಸಾಧ್ಯವಾಗುವುದಿಲ್ಲ.

ಕೋಪ:
ಕೋಪವು ವ್ಯಕ್ತಿಯ ದೊಡ್ಡ ಶತ್ರುವಾಗಿದೆ. ತುಂಬಾ ಕೋಪಗೊಳ್ಳುವ ವ್ಯಕ್ತಿಯು ಯಾವಾಗಲೂ ಅಸಮಾಧಾನಗೊಳ್ಳುತ್ತಾನೆ. ಕೋಪವಿರುವ ವ್ಯಕ್ತಿಗೆ ಸರಿ ಮತ್ತು ತಪ್ಪುಗಳ ಪ್ರಜ್ಞೆ ಇರುವುದಿಲ್ಲ. ಸಾಮಾನ್ಯವಾಗಿ ಅಂತಹ ವ್ಯಕ್ತಿಯು ಕೋಪದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ ಅಂತಹವರು ತಮ್ಮ ಕೋಪವನ್ನು ನಿಯಂತ್ರಿಸಬೇಕು.

ಸ್ವಾರ್ಥ:
ಯಾರ ಮನಸ್ಸಿನಲ್ಲಿ ತ್ಯಾಗದ ಭಾವನೆ ಇದೆಯೋ ಅವರ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ತ್ಯಾಗದ ಗುಣವನ್ನು ಹೊಂದುವುದು ಬಹಳ ಅವಶ್ಯಕ. ಇತರರ ಸಂತೋಷ ಲೆಕ್ಕಿಸದೇ, ತನ್ನ ಸ್ವಾರ್ಥಕ್ಕಾಗಿಯೇ ಬದುಕುವ ವ್ಯಕ್ತಿ ಒಂದಲ್ಲ ಒಂದು ದಿನ ಕಷ್ಟ ಎದುರಿಸುತ್ತಾನೆ. ಆದ್ದರಿಂದ ಇತರಿಗಾಗಿ ತ್ಯಾಗ ಮಾಡುವ ಮನೋಭಾವವನ್ನು ಹೊಂದಿರದ ವ್ಯಕ್ತಿಯು ತೊಂದರೆಗೊಳಗಾಗುತ್ತಾನೆ.

ಅಹಂಕಾರ:
ಅಹಂಕಾರವು ಯಾವುದೇ ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ, ಈ ಅಭ್ಯಾಸವನ್ನು ಸಹ ಬಿಡಬೇಕು. ಏಕೆಂದರೆ ಅಹಂಕಾರವು ಬುದ್ಧಿಯನ್ನು ಕೆಡಿಸುತ್ತದೆ. ಆ ವ್ಯಕ್ತಿಗೆ ಸರಿ ತಪ್ಪುಗಳ ತಿಳುವಳಿಕೆಯೇ ಇರುವುದಿಲ್ಲ. ಮನುಷ್ಯನ ಈ ಅಭ್ಯಾಸವು ವಿನಾಶವನ್ನು ಉಂಟುಮಾಡುತ್ತದೆ. ಅಹಂಕಾರದ ಮದ ತಲೆಗೆ ಏರಿತೆಂದರೆ, ಆತನ ಅವನತಿ ಶುರುವಾಯಿತೆಂಬ ಮಾತನ್ನು ಸಹಜವಾಗಿ ಕೇಳಿರಬಹುದು. ಆದ್ದರಿಂದ ಅಹಂಕಾರ ಬಿಟ್ಟು, ಕೆಲಸ ಮಾಡಿದರೆ, ತನ್ನಿಂದ ತಾನಾಗಿಯೇ ಎಲ್ಲವೂ ನಮ್ಮ ಪಾಲಾಗುವುದು.



Click it and Unblock the Notifications