Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
Sisters Day 2021: ನಿಮ್ಮ ಸೀಕ್ರೆಟ್ ಕೀಪರ್ ಸಹೋದರಿಗೆ ಉಡುಗೊರೆ ಕೊಡೋದು ಮಾತ್ರ ಮರೀಬೇಡಿ
ಪ್ರತಿಯೊಬ್ಬರ ಜೀವನದಲ್ಲಿ ಸಹೋದರಿಯರ ಪಾತ್ರ ಬಹಳ ದೊಡ್ಡದು. ಅದು ಗಂಡಿನ ಜೀವದಲ್ಲಾಗಲೀ ಅಥವಾ ಹೆಣ್ಣಿನ ಜೀವನದಲ್ಲಾಗಲೀ.. ಅಕ್ಕನಾಗಿ, ತಂಗಿಯಾಗಿ ಸದಾ ಬೆನ್ನು ತಟ್ಟುತ್ತಾ, ಪ್ರೋತ್ಸಾಹಿಸುವವಳೇ ಸಹೋದರಿ. ಅದು ಒಡಹುಟ್ಟಿದವರೇ ಆಗಬೇಕೇಂದೇನಿಲ್ಲ. ಇಂತಹ ಸಹೋದರಿಯರಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಅದೇ ನ್ಯಾಷನಲ್ ಸಿಸ್ಟರ್ಸ್ ಡೇ ಅಥವಾ ರಾಷ್ಟ್ರೀಯ ಸಹೋದರಿಯರ ದಿನ. ಕೇವಲ ಸಹೋದರಿಯರಿಗಾಗಿ ಮೀಸಲಾಗಿರುವ ಈ ದಿನ ಈ ವರ್ಷ ಯಾವಾಗ ಬಂದಿದೆ? ಈ ಆಚರಣೆಯ ಹಿಂದಿರುವ ಉದ್ದೇಶವೇನು? ಎಲ್ಲವನ್ನೂ ಇಲ್ಲಿ ನೋಡೋಣ.

2021ರ ಸಹೋದರಿಯರ ದಿನ ಯಾವಾಗ?:
ವಿವಿಧ ದೇಶಗಳಲ್ಲಿ ಈ ದಿನವನ್ನು ವಿಭಿನ್ನ ದಿನಾಂಕಗಳಂದು ಆಚರಣೆ ಮಾಡಲಾಗುತ್ತದೆ. ಆದರೆ ಭಾರತ ಮತ್ತು ಅಮೆರಿಕಾದಲ್ಲಿ ಸಿಸ್ಟರ್ಸ್ ಡೇ ಅಥವಾ ಸಹೋದರಿಯರ ದಿನವನ್ನು ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ಪ್ರಕಾರ, ಈ ವರ್ಷ, ಅದು ಆಗಸ್ಟ್ 1 ರಂದು ಬಂದಿದೆ. ಆದ್ದರಿಂದ ಭಾರತ ಹಾಗೂ ಅಮೆರಿಕಾದಲ್ಲಿ ಈ ವರ್ಷ ಸಹೋದರಿಯರ ದಿನ ಆಚರಣೆ ಮಾಡಲಾಗುವುದು. ತಮ್ಮ ಜೀವನದಲ್ಲಿ ಸಹೋದರಿಯ ಪಾತ್ರ ಎಂತದ್ದು ಎಂದು ಸಾರುವ ದಿನವೇ ಈ ರಾಷ್ಟ್ರೀಯ ಸಹೋದರಿಯರ ದಿನ.

ಈ ದಿನದ ಮಹತ್ವ:
ಪ್ರತಿಯೊಬ್ಬರ ಜೀವನದಲ್ಲಿ ಸಹೋದರಿಯರು ಅಥವಾ ಆ ಸ್ಥಾನ ತುಂಬಿರುವ ವ್ಯಕ್ತಿಗಳಿಗೆ ರಾಷ್ಟ್ರೀಯ ಸಿಸ್ಟರ್ಸ್ ದಿನವನ್ನು ಸಮರ್ಪಿಸಲಾಗಿದೆ. ಸಹೋದರಿಯರು ಎಂದರೆ ಒಂದು ಬೆಸ್ಟ್ ಫ್ರೆಂಡ್, ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು, ಸೀಕ್ರೆಟ್ ಕೀಪರ್ ಎಂದೇ ಫೇಮಸ್. ನಿಮ್ಮ ಜೀವನದಲ್ಲಿ ನಿಮ್ಮ ಹಿತವನ್ನು ಬಯಸುವ ಅಕ್ಕ ಅಥವಾ ತಂಗಿಗಾಗಿ ಈ ದಿನ. ರಕ್ತ ಸಂಬಂಧವಿಲ್ಲದಿದ್ದರೂ, ಸಹೋದರಿಯಾಗಿರುವ ಆ ಹೆಣ್ಣಿಗೆ ಈ ದಿನ. ಒಟ್ಟಾರೆಯಾಗಿ ನಿಮ್ಮ ಬದುಕಲ್ಲಿ ಇರುವ ಬೆಸ್ಟ್ ಹಾಗೂ ಸ್ವೀಟೆಸ್ಟ್ ಸಹೋದರಿಗೆ ಈ ದಿನವನ್ನು ಅರ್ಪಿಸಲಾಗಿದೆ. ಅವರ ಪ್ರೋತ್ಸಾಹಕ್ಕೆ ಧನ್ಯವಾದ ಸಮರ್ಪಿಸಲು ಇದೊಂದು ಸದಾವಕಾಶವಾಗಿದೆ.

ಈ ಆಚರಣೆಯ ಇತಿಹಾಸ:
ಈ ವಿಶೇಷ ಆಚರಣೆಯ ಮೂಲ ಕಥೆ ಯಾರಿಗೂ ತಿಳಿದಿಲ್ಲ. ಮೊದಲು ಸಹೋದರಿಯರ ದಿನ ಯಾವಾಗ ಆರಂಭವಾಯಿತು, ಅದರ ಇತಿಹಾಸನವನ್ನು ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳು ಈ ದಿನವನ್ನು ಮತ್ತಷ್ಟು ಪ್ರಸಿದ್ಧಿಗೊಳಿಸಿವೆ.

ಈ ದಿನದಂದು ನಿಮ್ಮ ಸಹೋದರಿಗೆ ಉಡುಗೊರೆ ನೀಡಲು ಸಲಹೆಗಳು:
ರಾಷ್ಟ್ರೀಯ ಸಹೋದರಿಯರ ದಿನಕ್ಕೆ ನಿಮ್ಮ ನೆಚ್ಚಿನ ಸಹೋದರಿಗೆ ಉಡುಗೊರೆ ನೀಡಲು ಹಲವಾರು ಆಯ್ಕೆಗಳಿವೆ. ನೀವು ಚಾಕೊಲೇಟ್, ಕೇಕ್ ಮತ್ತು ಹೂಗುಚ್ಛಗಳನ್ನು ನೀಡಬಹುದು. ಹ್ಯಾಂಡ್ ಬ್ಯಾಗ್, ಪರ್ಫ್ಯೂಮ್, ಆಭರಣಗಳು, ವಾಚ್ ಮತ್ತು ಮೇಕಪ್ ವಸ್ತುಗಳನ್ನೂ ನೀಡಬಹುದು. ಅವಳಿಗೆ ಏನು ಇಷ್ಟ ಎಂದು ತಿಳಿದಿದ್ದರೆ, ಅದನ್ನೇ ನೀಡಿ, ಇಲ್ಲವಾದರೆ, ಗ್ರೀಟಿಂಗ್ ಕಾರ್ಟ್ ಮತ್ತು ಚಾಕೋಲೇಟ್ ನೀಡಿ, ಆಕೆಯನ್ನು ಸಂತಸಗೊಳಿಸಿ.



Click it and Unblock the Notifications