Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಈ ರಾಶಿಯವರು ಹೆಚ್ಚು ಡೇಂಜರಸ್, ಇವರೊಂದಿಗೆ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು!
ಪ್ರತಿಯೊಬ್ಬರಲ್ಲೂ ಒಳ್ಳೆತನ ಹಾಗೂ ಕೆಟ್ಟತನ ಎಂಬ ಎರಡು ಮುಖಗಳು ಇದ್ದೇ ಇರುತ್ತದೆ. ಅವುಗಳು ಸಂದರ್ಭಕ್ಕೆ ತಕ್ಕಂತೆ ಇತರರ ಮುಂದೆ ಪ್ರದರ್ಶನಗೊಳ್ಳುತ್ತವೆ. ಆ ನಿರ್ದಿಷ್ಟ ಸಮಯದಲ್ಲಿ ಕಾಣುವ ಕೋಪ, ಹತಾಶೆ, ಅಪರಾಧ, ಕುಶಲತೆ ಮತ್ತು ದುಃಖವು ನಮ್ಮನ್ನು ಅಪಾಯಕಾರಿ ಮತ್ತು ಕೆಟ್ಟವರೆಂದು ಪರಿಗಣಿಸುವಂತೆ ಮಾಡಿಬಿಡುತ್ತವೆ. ಆದರೆ ಕೆಲವರು ಮಾತ್ರ ಯಾವುದೇ ಸಂದರ್ಭದಲ್ಲಿ ಡೇಂಜರಸ್ ಆಗಿರುತ್ತಾರೆ. ಅಂತಹವರು ಯಾವ ರಾಶಿಗೆ ಸೇರಿರುತ್ತಾರೆ ಎಂಬುದನ್ನು ಇಲ್ಲಿ ಹೇಳಲಿದ್ದೇವೆ. ಈ ರಾಶಿಯವರ ಜೊತೆ ನೀವು ಸ್ವಲ್ಪ ಜಾಗರೂಕರಾಗಿ ಇರುವುದೇ ಉತ್ತಮ.

ಮಿಥುನ:
ಮಿಥುನ ರಾಶಿಯವರು ಇತರ ಎಲ್ಲಾ ರಾಶಿಗಳಿಗಿಂತ ಹೆಚ್ಚು ಸಾಮಾಜಿಕ ರಾಶಿಚಕ್ರ ಚಿಹ್ನೆಯಾಗಿರಬಹುದು, ಆದರೆ ಅವರು ಅಗಾಧ ಕೌಶಲ್ಯಗಳನ್ನು ಹೊಂದಿರುತ್ತಾರೆ. ಜನರೊಂದಿಗೆ ಹೇಗೆ ಸಂಪರ್ಕ ಸಾಧಿಸಬೇಕು ಎಂದು ಅವರಿಗೆ ತಿಳಿದಿರುವುದರಿಂದ, ಅವರ ವೀಕ್‌ನೆಸ್ ಏನು? ಜನ ಯಾವುದಕ್ಕೆ ಭಯಪಡುತ್ತಾರೆ ಎಲ್ಲವನ್ನು ಅರಿತಿರುತ್ತಾರೆ. ಈ ಕೌಶಲ್ಯವನ್ನು ಇತರರ ಮೇಲೆ ಆಕ್ರಮಣ ಮಾಡಲು, ಮೇಲೇಳೆದ ಪಟ್ಟನ್ನು ನೀಡಲು ಬಳಸಬಹುದು.

ವೃಶ್ಚಿಕ:
ಈ ರಾಶಿಯವರಿಗೆ ಯಾರಾದರೂ ನೋಯಿಸಿದರೆ ಅದನ್ನು ಎಂದಿಗೂ ಮರೆಯುವುದಿಲ್ಲ. ಇದರ ಪ್ರತಿಕಾರ ತೀರಿಸಿಕೊಳ್ಳಲು ಸಮಯಕ್ಕಾಗಿ ಯೋಜನೆಯನ್ನ ಹಾಕಿಕೊಂಡು ಕಾಯುತ್ತಿರುತ್ತಾರೆ. ಸಂದರ್ಭ ಬಂದಾಗ, ತಮಗಾದ ನೋವಿನ ಬಡ್ಡಿ ಸಮೇತ ವಾಪಸ್ಸು ನೀಡುತ್ತಾರೆ. ಇವರು ಅತ್ಯಂತ ಕುಶಲತೆಯಿಂದ ಕೂಡಿದ್ದು, ಯಾರಾದರೂ ಅವರಿಗೆ ದ್ರೋಹ ಮಾಡಿದ್ದರೆ, ಅದು ಅವರಿಗೆ ಅಪಾಯಕಾರಿಯಾಗಬಹುದು. ಅವರು ಎಂದಿಗೂ ಏನನ್ನೂ ಮರೆಯುವುದಿಲ್ಲ, ಉತ್ತರ ನೀಡಿಯೇ ನೀಡುತ್ತಾರೆ.

ಮೀನ:
ಇವರು ತುಂಬಾ ಸೂಕ್ಷ್ಮ ಮತ್ತು ಅವರು ಪ್ರೀತಿಸುವ ವ್ಯಕ್ತಿಯ ಮೇಲೆ ಸ್ಥಿರವಾಗಿರುತ್ತಾರೆ. ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ನಂಬದಿದ್ದರೆ ಅದೇ ಅವರಿಗೆ ಸಮಸ್ಯೆಯಾಗುವುದು. ಅವರಿಗೆ ಕೋಪಬಂದಾಗ ಅವರಿಗೆ ಮನಸ್ಸಿಗೆ ತೋಚಿದ್ದನ್ನು ಹಿಂದೆ-ಮುಂದೆ ಯೋಚಿಸದೇ ಮಾಡಿಬಿಡುತ್ತಾರೆ. ಅದರಿಂದ ಏನಾದರೂ ಅಪಾಯ ಆಗಲಿದೆಯೇ ಅಥವಾ ಇಲ್ಲವೇ ಎಂಬುದನ್ನ ಸ್ವಲ್ಪವೂ ಯೋಚನೆ ಮಾಡುವುದಿಲ್ಲ. ಸೇಡು ತೀರಿಸಿಕೊಳ್ಳುವುದೊಂದೇ ಅವರ ಮನಸ್ಸಲ್ಲಿ ಇರುತ್ತದೆ.

ಮೇಷ:
ಮಹತ್ವಾಕಾಂಕ್ಷೆ ಮತ್ತು ಅಧಿಕಾರದ ದಾಹವು ಈ ರಾಶಿಯವರನ್ನು ಅಜೇಯರನ್ನಾಗಿಸುತ್ತದೆ. ಈ ವಿಚಾರದಲ್ಲಿ ಮೇಷ ರಾಶಿಯವರು ತುಂಬಾ ನಿರ್ದಯಿಗಳಾಗಬಹುದು ಏಕೆಂದರೆ ಇವರು ಇತರರು ಹಾಕಿದ ಗಡಿಗಳನ್ನು ಅನುಸರಿಸಲು ಸಾಧ್ಯವಿಲ್ಲ. ಅವರಿಗೆ ಏನು ಬೇಕೋ, ಏನು ಬಯಸುತ್ತಾರೋ ಅದನ್ನು ಪಡೆಯಲು ಅವರು ಯಾವ ಮಟ್ಟಕ್ಕೂ ಹೋಗುತ್ತಾರೆ ಏಕೆಂದರೆ ಅವರ ಪ್ರಕಾರ ಪ್ರಪಂಚದ ಪ್ರತಿಯೊಂದು ವಿಚಾರವೂ ಅವರ ಕೈಯಲ್ಲಿರಬೇಕು.

ಕುಂಭ:
ಕುಂಭ ರಾಶಿಯವರು ತಮ್ಮ ಕೋಪದ ಭಾವನೆಗಳನ್ನು ಮರೆಮಾಡಬಹುದು ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಮುಳುವಾಗಬಹುದು. ಅಂದರೆ ತಮ್ಮ ಮನಸ್ಸಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಸದೇ, ತಮ್ಮ ಮುಂದಿರುವ ಜನರಿಗೆ ಪೆಟ್ಟು ಕೊಡಲು ಪ್ಲಾನ್ ಮಾಡಿಕೊಳ್ಳುತ್ತಿರುತ್ತಾರೆ. ಇದರಿಂದ ಈ ರಾಶಿಯವರು ಅತ್ಯಂತ ನಿಗೂಢ ವ್ಯಕ್ತಿಗಳಾಗಿ ಕಾಣುತ್ತಾರೆ.



Click it and Unblock the Notifications











