Latest Updates
-
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್
ಕೂ ಆ್ಯಪ್ : ಟ್ವಿಟರ್‌ಗೆ ಸಡ್ಡು ಹೊಡೆದಿರುವ ಇದರ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು
ಹೊಸತನ ಅದರಲ್ಲೂ ಒಳ್ಳೆಯ ಉದ್ದೇಶ ಇದ್ದರೆ ಯಾರು ತಾನೆ ಸ್ವಾಗತಿಸಲ್ಲ ಹೇಳಿ? ಅದರಲ್ಲೂ ಇತ್ತೀಚೆಗೆ ಮೇಡ್ ಇನ್ ಇಂಡಿಯನ್ ಕ್ರಾಂತಿಯೇ ಹುಟ್ಟಿಕೊಂಡಿದೆ. ಈ ಸಮಯದಲ್ಲಿ ಭಾರತೀಯರು ಮಾಡುವ ನೂತನ ಕಾರ್ಯಕ್ಕೆ ತುಂಬಾ ಬೆಂಬಲ ಸಿಗುತ್ತಿದೆ. ಈ ಟ್ರೆಂಡ್‌ನಲ್ಲಿ ಒಳ್ಳೆಯ ವಿಷಯಕ್ಕೆ ಸ್ವಲ್ಪ ತಲೆ ಉಪಯೋಗಿಸಿದರೆ ಕ್ಲಿಕ್ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಅದಕ್ಕೆ ಉದಾಹರಣೆ Koo App... ಇದು ಟ್ವಿಟರ್‌ಗೆ ಪರ್ಯಾಯವಾದ ಮಾಧ್ಯಮ ಎಂದರೆ ಇದು ಬೆಳೆದ ಪರಿ ಎಂಥದ್ದು ಎಂದು ನೀವೇ ಊಹಿಸಿ.
ಈ ಕೂ ಆ್ಯಪ್ ಈಗಾಲೇ ಮುಂಚೂಣಿಯಲ್ಲಿರುವ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಇವುಗಳಿಗೆ ಸವಾಲಾಗಿ ಪರಿಣಮಿಸಿರುವ ಸ್ವದೇಶಿ ಆ್ಯಪ್ ಆಗಿದೆ. ಇನ್ನು ಕನ್ನಡಿಗರಂತೂ ಇದು ತುಂಬಾನೇ ಇಷ್ಟವಾಗುವುದು, ಏಕೆಂದರೆ ಇಲ್ಲಿ ಕನ್ನಡದಲ್ಲಿ ವ್ಯವಹರಿಸಬಹುದಾಗಿದೆ. ಇದೇಗ ಕೇಂದ್ರದಲ್ಲಿರುವ ಮಂತ್ರಿಗಳು, ದೊಡ್ಡ ಉದ್ಯಮಿಗಳು ಎಲ್ಲರೂ ಈ ಮಾಧ್ಯಮ ಬಳಸುತ್ತಿದ್ದುಇದೀಗ ಕೂ ಆ್ಯಪ್ ತುಂಬಾನೇ ಸದ್ದು ಮಾಡ್ತಾ ಇದೆ.

ಕನ್ನಡಿಗರೇ ನಿರ್ಮಿಸಿದ ಆ್ಯಪ್
ಇದೊಂದು ಪಕ್ಕಾ ಸ್ವದೇಶಿ ಆ್ಯಪ್ ಮಾತ್ರವಲ್ಲ, ಇದನ್ನು ನಿರ್ಮಿಸಿದವರು ನಮ್ಮ ಕನ್ನಡದವರೇ ಎಂಬ ಹೆಮ್ಮೆ ಕೂಡ ಇದೆ. ಇದರ ಕೋ ಪೌಂಡರ್ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ.

ಟ್ವಿಟರ್‌ಗಿಂತ ತುಂಬಾನೇ ಭಿನ್ನ ಹಾಗೂ ಹೆಚ್ಚು ಆಕರ್ಷಕ
ಟ್ವಿಟರ್‌ನಲ್ಲಿ 2 ನಿಮಿಷಗಳ ವೀಡಿಯೋ ಮಾತ್ರ ಅಪ್‌ಲೋಡ್ ಮಾಡಬಹುದು, ಆದರೆ ಕೂ ಆ್ಯಪ್‌ನಲ್ಲಿ 10 ನಿಮಿಷದವರೆಗಿನ ವೀಡಿಯೋ ಅಪ್‌ಲೋಡ್ ಮಾಡಬಹುದು. ಅಲ್ಲದೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಇಂಗ್ಲಿಷ್ ಪ್ರಾಬಲ್ಯ ಅಧಿಕವಿದ್ದರೆ ಇಲ್ಲಿ ಕನ್ನಡವನ್ನು ಬಳಸುವಂತೆ ಅನುಕೂಲಕರವಾಗಿದೆ.
ಮೋದಿ ಸರ್ಕಾರ ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಸಂದರ್ಭದಲ್ಲಿ ಈ ಸ್ವದೇಶಿ ಆ್ಯಪ್ ತುಂಬಾನೇ ಸದ್ದು ಮಾಡಿದ್ದು ಬಿಡುಗಡೆಯಾದ ಮೂರು ತಿಂಗಳ ಒಳಗೆ ಮೂರು ಲಕ್ಷಕ್ಕೂ ಅಧಿಕ ಕನ್ನಡಿಗರು ಬಳಸಲಾರಂಭಿಸಿದರು. ಇದೀಗ ಇದರ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತದೆ.

ಇತರ ಭಾಷೆಯವರು ಬಳಸುತ್ತಿದ್ದಾರೆ
ಇನ್ನು ಈ ಆ್ಯಪ್ ಅನ್ನು ಇತರ ಭಾಷೆಯವರು ಕೂಡ ಬಳಸಲಾರಂಭಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ನಾನು ಕೂಡ ಕೂ ಆ್ಯಪ್ ಬಳಸುತ್ತಿರುವುದಾಗಿ ಹೇಳಿದ್ದಾರೆ.

ಮಂತ್ರಿಗಳು-ದೊಡ್ಡ ಸೆಲೆಬ್ರಿಟಿಗಳು ಈ ಆ್ಯಪ್ ಬಳಸುತ್ತಿದ್ದಾರೆ
ಐಟಿ ಮಿನಿಸ್ಟರ್ ರವಿ ಶಂಕರ್ ಪ್ರಸಾದ್,ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಇಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಹೀಗೆ ಅನೇಕ ಈ ಆ್ಯಪ್ ಬಳಸಲಾರಂಭಿಸಿದ್ದಾರೆ. ಇದೀಗ ವಿದೇಶಿಯರು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಆತ್ಮ ನಿರ್ಭರ್ ಎಂದರೆ ಇದೇ ಅಲ್ಲವೇ.. ಇಲ್ಲಿ ಯಾವುದೇ ಪಕ್ಷದ ಪರ ಹೇಳುತ್ತಿಲ್ಲ... ನಮ್ಮ ಭಾರತೀಯ ವಸ್ತುಗಳು ವಿಶ್ವ ಮಟ್ಟದಲ್ಲಿ ಗುರುತಿಸಬೇಕು, ಯುವ ಜನಾಂಗ ಈ ನಿಟ್ಟಿನಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ.



Click it and Unblock the Notifications
