Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಭಾರತದ ತ್ರಿವರ್ಣ ಧ್ವಜವನ್ನು ಹೇಗೆ ಮಡಚಿ ಇಡಬೇಕು?
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. 'ಸ್ವಾತಂತ್ರ್ಯದ ಅಮೃತ ಮಹೋತ್ಸವ' ಒಂದು ಸಾಮೂಹಿಕ ಜನಾಂದೋಲನ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕೀ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೇಳಿದ್ದರು. ಜನರು ಆಗಸ್ಟ್ 2-15ರ ಅವಧಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಪ್ರೊಫೈಲ್ ಚಿತ್ರವಾಗಿ ರಾಷ್ಟ್ರಧ್ವಜ ಬಳಸಬೇಕು ಎಂದು ಕರೆ ನೀಡಿದ್ದರು.
ಅಲ್ಲದೇ ಆಗಸ್ಟ್ 13 ರಿಂದ 15ರ ವರೆಗೆ ಹರ್ ಘರ್ ತಿರಂಗಾದಡಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಮೋದಿ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರಿ ಕಾರ್ಯಾಲಯಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಉತ್ಸುಕತೆಯಿಂದ ತ್ರಿವರ್ಣ ಧ್ವಜವನ್ನು ಖರೀದಿಸುತ್ತಿದ್ದಾರೆ.

ಹರ್ ಘರ್ ತಿರಂಗಾ
ತ್ರಿವರ್ಣ ಧ್ವಜವನ್ನು ಸ್ವಾತಂತ್ರ್ಯ ದಿನಾಚರಣೆ ಅಂದರೆ ಆಗಸ್ಟ್ 15ರ ಬಳಿಕ ಸರಿಯಾಗಿ ಮಡಚಿ ಇಡಬೇಕು, ಮನೆಯಲ್ಲಿ ಬಳಸಿರುವ ತ್ರಿವರ್ಣ ಧ್ವಜವನ್ನು ಸರಿಯಾಗಿ ಮಡಚಿ ಇಡದಿದ್ದರೆ ಅದು ರಾಷ್ಟ್ರಕ್ಕೆ ಮಾಡುವ ಅಗೌರವ. ಆದ್ದರಿಂದ ಅಮೃತ್ ಮಹೋತ್ಸದ ಅಧಿಕೃತ ಟ್ವಿಟರ್ ಖಾತೆ ಯಾವ ರೀತಿ ಮಡಚ ಬೇಕು ಯಾವ ರೀತಿ ಸಂಗ್ರಹಿಸಿ ಇಡಬೇಕು ಎನ್ನುವುದನ್ನು ಚಿತ್ರದ ಮೂಲಕ ವಿವರಿಸಿ ಹೇಳಿದೆ. ಹಾಗಾದ್ರೆ ಹೇಗೆ ತ್ರಿವರ್ಣ ಧ್ವಜವನ್ನು ಮಡಚಬೇಕು ಮತ್ತು ಸಂಗ್ರಹಿಸಿ ಇಡಬೇಕು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ತ್ರಿವರ್ಣ ಧ್ವಜಕ್ಕೆ ಈ ರೀತಿ ಗೌರವ ಕೊಡಿ
1. ಮೊದಲು ತ್ರಿವರ್ಣ ಧ್ವಜವನ್ನು ಅಡ್ಡಲಾಗಿ ಇರಿಸಿ
2. ಕೇಸರಿ ಮತ್ತು ಹಸಿರು ಭಾಗವನ್ನು ಮಾತ್ರ ಮಡಚಿ ಈ ವೇಳೆ ಮಧ್ಯದ ಭಾಗವನ್ನು ಹಾಗೇ ಇರಿಸಿ. ಹೀಗೆ ಮಡಿಚುವಾಗ ಕೇಸರಿ ಹಾಗೂ ಹಸಿರು ಬಣ್ಣ ಕೊಂಚ ಕಾಣಿಸುತ್ತಿರಬೇಕು.
3. ಇನ್ನು ಕೇಸರಿ, ಬಿಳಿ, ಹಸಿರು ಬಣ್ಣದ ಎರಡು ಭಾಗವನ್ನು ಒಳಗೆ ಮಡಚಿಕೊಳ್ಳಿ. ಈ ವೇಳೆ ಕೊಂಚ ಬಿಳಿ, ಕೇಸರಿ, ಹಸಿರು ಬಣ್ಣ ಕಾಣಿಸುವಂತೆ ಇರಬೇಕು. ಅಲ್ಲದೇ ಅಶೋಕ ಚಕ್ರವೂ ಕಾಣಿಸಬೇಕು.
4.ಬಳಿಕ ಎರಡು ಕೈಗಳಿಂದ ಕೆಳಗಿನ ಭಾಗದಿಂದ ತ್ರಿವರ್ಣ ಧ್ವಜವನ್ನು ಹಿಡಿಕೊಂಡು ಹೋಗಿ ಕಪಾಟು ಅಥವಾ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತಹ ಜಾಗದಲ್ಲಿ ಇರಿಸಬೇಕು.
ಇದು ಸರಿಯಾದ ರೀತಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮಡಿಸಿ ಸಂಗ್ರಹಿಸಿಡುವ ರೀತಿ. ಈ ರೀತಿ ಮಾಡುವ ಮೂಲಕ ದೇಶದ ಧ್ವಜಕ್ಕೆ ಗೌರವ ಕೊಡಬಹುದಾಗಿದೆ. ಇನ್ನು ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ಜೋರಾಗಿ ನಡೆಯುತ್ತಿದೆ.

ತ್ರಿವರ್ಣ ಧ್ವಜ ರಚಿಸಿದ್ದು ಯಾರು?
ಸ್ವಾತಂತ್ರ್ಯ ದಿನದಂದು ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಹಾರಾಡುತ್ತಾ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಸಣ್ಣ ಸಣ್ಣ ಭಾವುಟ ಹಾರಾಡುತ್ತಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ದೊಡ್ಡ ದೊಡ್ಡ ಭಾವುಟ ರಾರಾಜಿಸುತ್ತಿರುತ್ತದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ತ್ರಿವರ್ಣ ಧ್ವಜದ ಹಾರಾಟ ನಮಗೆ ರೋಮಾಂಚನ ಉಂಟು ಮಾಡುತ್ತದೆ. ಇಂತಹ ಹೆಮ್ಮೆಯ ಧ್ವಜವನ್ನು ಕೊಟ್ಟಿರುವ ವ್ಯಕ್ತಿ ಯಾರು ಎಂಬುವುದು ನಮ್ಮಲ್ಲಿ ಅನೇಕರಿಗೆ ತಿಳಿದಿರಲು ಸಾಧ್ಯವಿಲ್ಲ. ಭಾರತದ ತ್ರಿವರ್ಣ ಧ್ವಜದ ಶಿಲ್ಪಿ ದಿ. ಪಿಂಗಳಿ ವೆಂಕಯ್ಯ ಅವರು. ಇವರನ್ನು ಪತ್ತಿ ವೆಂಕಯ್ಯ ಎಂದೂ ಕರೆಯುತ್ತಿದ್ದರು. ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು ಈ ವೆಂಕಯ್ಯ ಅವರು. ಅಪ್ಪಟ ಗಾಂಧಿವಾದಿಯಾಗಿದ್ದ ವೆಂಕಯ್ಯನವರು ಆಗಸ್ಟ್ 2, 1876 ನೇ ಇಸವಿಯಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.



Click it and Unblock the Notifications











