Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದಾರಿ ಮಧ್ಯೆ ಈ ಇವುಗಳು ಕಾಣಸಿಕ್ಕರೆ ಶುಭ ಶಕುನವಂತೆ!
ಜೀವನದಲ್ಲಿ ಅನೇಕ ವಿಷಯಗಳನ್ನು ಅಶುಭ ಅಥವಾ ಅಪಶಕುನವೆಂದು ಪರಿಗಣಿಸಲಾಗುತ್ತದೆ. ಯಾವುದಾದರೂ ಕೆಲಸಕ್ಕೆ ತೆರಳುವಾಗ, ಈ ಅಪಶಕುನವೆನಿಸುವ ವಿಚಾರಗಳು ನಡೆದರೆ, ಆ ಕೆಲಸಕ್ಕೆ ಅಡ್ಡಿಯಾಗುವುದೆಂಬ ನಂಬಿಕೆ. ಅದೇ ರೀತಿ, ಮನೆಯಿಂದ ಹೊರಡುವಾಗ ಅಥವಾ ದಾರಿಯಲ್ಲಿ ಕೆಲ ವಿಷಯಗಳು ಕಣ್ಣಿಗೆ ಬೀಳುವುದು ಶುಭಕರ ಅಥವಾ ಶುಭಶಕುನ ಎಂಬ ನಂಬಿಕೆಯೂ ಇದೆ. ಈ ವಸ್ತುಗಳನ್ನು ನೋಡುವುದು ಕೆಲಸದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ, ಅವುಗಳು ಒಳಿತನ ಸಂಕೇತವೂ ಇದೆ. ಆದ್ದರಿಂದ ಯಾವ ವಿಷಯಗಳನ್ನು ನೋಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ.
ದಾರಿಯಲ್ಲಿ ಹೋಗುವಾಗ ಸಿಗುವ ಯಾವ ವಿಷಯಗಳು ಶುಭಶಕುನ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನಾಣ್ಯ ಸಿಗುವುದು:
ದಾರಿಯಲ್ಲಿ ಯಾರಿಗಾದರೂ ನಾಣ್ಯ ಸಿಕ್ಕರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಪೂರ್ವಜರ ಆಶೀರ್ವಾದ ಎಂದು ಹೇಳಲಾಗುತ್ತದೆ. ಹೀಗಾದರೆ ಪೂರ್ವಜರ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ ಎಂಬ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಠಿಣ ಪರಿಶ್ರಮದಿಂದ ಯಾವುದೇ ಕೆಲಸವನ್ನು ಮಾಡಿದರೂ, ಖಂಡಿತವಾಗಿಯೂ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತ್ತೀರಿ.

ಹಸು ಕಾಣಿಸುವುದು:
ಯಾವುದಾದರೂ ಶುಭ ಕಾರ್ಯಕ್ಕೆ ಹೋಗುವಾಗ ಯಾರಾದರೂ ಹಸುವನ್ನು ಕಂಡರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಹಸುವನ್ನು ಧರ್ಮಗ್ರಂಥಗಳಲ್ಲಿ ಪೂಜ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಯಾರಿಗಾದರೂ ಹಸುವನ್ನು ಕಂಡರೆ, ಅವರು ನಮಸ್ಕರಿಸಿ ಮಾತ್ರ ಮುಂದುವರಿಯಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಇದರಿಂದ ಅವರ ಕೆಲಸ ಸುಲಭವಾಗುತ್ತದೆ.

ಬಿಕ್ಷುಕ ಸಿಗುವುದು:
ಮತ್ತೊಂದೆಡೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರಹೋಗುವಾಗ ಭಿಕ್ಷುಕನು ಕಾಣಿಸಿಕೊಂಡರೆ, ಅವನಿಗೆ ಏನನ್ನಾದರೂ ನೀಡಿದ ನಂತರವೇ ಮುಂದುವರಿಯಬೇಕು. ಹೀಗೆ ಮಾಡುವುದರಿಂದ ಬಹುಬೇಗ ಋಣ ಮುಕ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇನೆಂದರೆ, ಮನೆಯಿಂದ ಹೊರಬಂದ ನಂತರ ಭಿಕ್ಷುಕನನ್ನು ನೋಡುವುದು ಸಾಲದ ವಿಮೋಚನೆಯ ಸಂಕೇತವಾಗಿದೆ. ಆದ್ದರಿಂದ ಮನೆಯಿಂದ ಹೊರಡುವಾಗ, ನಿಮ್ಮ ಕಣ್ಣುಗಳು ಇಂತಹವರ ಮೇಲೆ ಬಿದ್ದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ.

ಶವ ಸಿಗುವುದು:
ನಿಮ್ಮ ಕಣ್ಣೆದುರಿಗೆ ಶವ ಕಂಡ ನಂತರ ಕೈಮುಗಿದು ನಮಸ್ಕರಿಸಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಬೇಕು. ಇದರೊಂದಿಗೆ ಸ್ವಲ್ಪ ಕಾಲ ಅಲ್ಲಿಯೇ ಇದ್ದು ಮುಂದೆ ಸಾಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಒಬ್ಬರ ಮರಣದ ನಂತರ, ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸುವುದರಿಂದ, ಅವರ ಆತ್ಮವು ದುಃಖವನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ವೀಳ್ಯದೆಲೆ ಮತ್ತು ಮೀನಿನ ದರ್ಶನವೂ ಮಂಗಳಕರವೆಂದು ಪರಿಗಣಿಸಲಾಗಿದೆ.



Click it and Unblock the Notifications
