For Quick Alerts
ALLOW NOTIFICATIONS  
For Daily Alerts

ನೀವು ಮರುಜನ್ಮ ಪಡೆದಿದ್ದೀರಿ ಎನ್ನುವುದಕ್ಕೆ ನಿಮ್ಮ ದೇಹದ ಮೇಲಿರುವ ಜನ್ಮಜಾತ ಗುರುತೇ ಸಾಕ್ಷಿ! ಹೇಗೆ ಇಲ್ಲಿದೆ ನೋಡಿ

|

ನಿಮ್ಮ ದೇಹದ ಮೇಲೆ ಕೆಲವು ಜನ್ಮಜಾತ ಗುರುತುಗಳಿರುವುದನ್ನು ಗಮನಿಸಿರಬಹುದು. ಅದು ಕೆಲವರಿಗೆ ಕಪ್ಪು ಮಚ್ಚೆಯ ರೂಪದಲ್ಲಿರಬಹುದು ಅಥವಾ ಯಾವುದೋ ಸುಟ್ಟಗಾಯದಂತೆ ಕಾಣಬಹುದು. ಆದರೆ ಹುಟ್ಟಿನಿಂದಲೇ ಇರುವ ಈ ಗುರುತುಗಳಿಗೂ ನಿಮ್ಮ ಹಿಂದಿನ ಜನ್ಮಕ್ಕೂ ಸಂಬಂಧಿವಿದೆ ಎಂದರೆ ಆಶ್ಚರ್ಯವಾಗುತ್ತಿದೆಯಾ?

ಹೌದು, ನಿಮ್ಮ ದೇಹದಲ್ಲಿ ಕಂಡುಬರುವ ವಿವಿಧ ಆಕಾರಗಳ ಗುರುತುಗಳು ನಿಮ್ಮ ಹಿಂದಿನ ಜನ್ಮದ ಕೊಡುಗೆ. ಪ್ರತಿಯೊಂದು ಗುರುತಿಗೂ ಅದರದ್ದೇ ಆದ ಅರ್ಥವಿದೆ. ದಂತಕಥೆಯ ಪ್ರಕಾರ, ನಿಮ್ಮ ದೇಹದ ಮೇಲಿರುವ ಜನ್ಮಜಾತ ಗುರುತುಗಳ ಹಿಂದಿನ ಕಥೆ ತಿಳಿಯುವ ಕುತೂಹಲ ನಿಮಗಿದ್ದರೆ ಈ ಕೆಳಗೆ ನೋಡಿ.

ದೇಹದಲ್ಲಿರುವ ಜನ್ಮಜಾತ ಗುರುತು ಹಾಗೂ ಹಿಂದಿನ ಜನ್ಮದ ನಡುವಿನ ಸಂಬಂಧವನ್ನು ಈ ಕೆಳಗೆ ನೀಡಲಾಗಿದೆ:

ಬುಲೆಟ್ ಗುರುತು:

ಬುಲೆಟ್ ಗುರುತು:

ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಗುಂಡೇಟಿನಿಂದ ಸಾವನ್ನಪ್ಪಿದ್ದೀರಿ ಎಂದು ಈ ಗುರುತು ಸೂಚಿಸುತ್ತದೆ. ಕಾಲಾನಂತರದಲ್ಲಿ ಈ ಗುರುತುಗಳು ಕಂದು ಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ. ಅನೇಕ ಸಂದರ್ಭಗಳಲ್ಲಿ ಇದು ಹುದುಗಿರುವ ಗುಂಡೇಟಿನ ಗಾಯದಂತೆ ಕಾಣುತ್ತದೆ, ಇದರರ್ಥ ನಿಮ್ಮ ಹಿಂದಿನ ಜನ್ಮದಲ್ಲಿ ಸಾಯುವ ಸಮಯದಲ್ಲಿ ನಿಮ್ಮ ದೇಹಕ್ಕೆ ಗುಂಡು ಹಾರಿಸಲಾಗಿದೆ ಎಂಬುದು. ಈ ಚಿಹ್ನೆಯು ಕಪ್ಪು ಬಣ್ಣದ್ದಾಗಿರುವುದು.

ಚುಚ್ಚಿದ ಗಾಯ:

ಚುಚ್ಚಿದ ಗಾಯ:

ಹಿಂದಿನ ಜನ್ಮದಲ್ಲಿ ನೀವು ಮಲಗಿದ್ದಾಗ ಯಾರೋ ನಿಮ್ಮನ್ನ ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ ಎಂಬುದು ಇದರ ಅರ್ಥವಾಗಿರಬಹುದು. ಗುರುತು ಸ್ವಲ್ಪಮಟ್ಟಿಗೆ ಸುರುಳಿಯಾಗಿರುವಂತೆ ಕಾಣುತ್ತದೆ. ಈ ಗುರುತು ನಿಮ್ಮ ಕಣ್ಣಿನ ಬಳಿ ಇದ್ದರೆ, ಈ ಹಿಂದೆ ಕಣ್ಣಿಗೆ ಚುಚ್ಚಿರಬಹುದು ಎಂಬುದರ ಸಂಕೇತ. ಇರಿತವು ಇತಿಹಾಸದಲ್ಲಿ ಹತ್ಯೆಯ ಒಂದು ಅನುಕೂಲಕರ ವಿಧಾನವಾಗಿತ್ತು. ರೋಮ್ನ ಸರ್ವಾಧಿಕಾರಿ ಜೂಲಿಯಸ್ ಸೀಸರ್ ನನ್ನು ಅವರ ಒಳ್ಳೆಯ ಸ್ನೇಹಿತ ಬ್ರೂಟಸ್ ಚುಚ್ಚಿ ಕೊಂದ ಕಥೆಯನ್ನು ನೆನಪಿಸಿಕೊಳ್ಳಿ.

ಹಣೆಯಲ್ಲಿ ಚುಕ್ಕೆ:

ಹಣೆಯಲ್ಲಿ ಚುಕ್ಕೆ:

ಜನಪ್ರಿಯ ನಂಬಿಕೆಯ ಪ್ರಕಾರ, ನಿಮ್ಮ ಹಣೆಯ ಮೇಲೆ ಕೆಂಪು-ಕಂದು ಬಣ್ಣದ ಚುಕ್ಕೆ ಇದ್ದರೆ, ಹಿಂದಿನ ಜನ್ಮದಲ್ಲಿ ವಿಷದ ಬಾಣದಿಂದ ನೀವು ಕೊಲ್ಲಲ್ಪಟ್ಟಿದ್ದೀರಿ ಎಂದು ಅದು ಹೇಳುತ್ತದೆ.

ಸುಟ್ಟ ಗಾಯ:

ಸುಟ್ಟ ಗಾಯ:

ಈ ಸುಟ್ಟಗಾಯ ನೀವು ಹಿಂದಿನ ಜನ್ಮದಲ್ಲಿ ಬದುಕಿರುವುದನ್ನು ಸೂಚಿಸುವುದು. ಅದು ವಿಭಿನ್ನ ಶೇಡ್ ಗಳಲ್ಲಿ ಇರಬಹುದು. ಗಾಯ ಡಾರ್ಕ್ ಆಗಿದ್ದರೆ, ನೀವು ಪ್ರಾಚೀನಕಾಲದವರಲ್ಲ ಎಂಬದನ್ನು ಸೂಚಿಸಿದರೆ, ಲೈಡ್ ಬಣ್ಣ ನಿಮ್ಮನ್ನು ಹಿಂದಿನ ಜನ್ಮದಲ್ಲಿ ಸುಟ್ಟುಹಾಕಲಾಗಿದೆ ಎಂಬುದನ್ನು ಸೂಚಿಸುವುದು. ಜೊತೆಗೆ ಈ ಸುಟ್ಟಗಾಯದ ಗುರುತು ಕರ್ಮ ಫಲದ ಸಂಕೇತವೂ ಹೌದು. ಈ ಗಾಯದಿಂದ ನೀವು ಕಲಿಯುವ ಪಾಠಗಳು ಸಾಕಷ್ಟು ಇರುತ್ತವೆ ಎಂಬುದು ಇದರ ಅರ್ಥ.

ಅಲ್ಲಲ್ಲಿ ಕಲೆ:

ಅಲ್ಲಲ್ಲಿ ಕಲೆ:

ನಿಮ್ಮ ದೇಹದ ಮೇಲೆ ಅಲಲ್ಲಿ ಕಪ್ಪು ಮಚ್ಚೆ ರೀತಿ ಇದ್ದರೆ ನೀವು ಯಾವುದೋ ಗುಂಡೇಟು ಅಥವಾ ಫಿರಂಗಿಗಳಿಂದ ಉಂಟಾಗಿರಬಹುದು. ಫಿರಂಗಿ ಹೊಡೆತಗಳ ಸಂದರ್ಭದಲ್ಲಿ ಆ ಉಂಡೆಗಳಿಂದ ನೀವು ಎಷ್ಟು ಕೆಟ್ಟದಾಗಿ ಗಾಯಗೊಂಡಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಆ ಜನ್ಮದಲ್ಲಿ ನಿಮ್ಮನ್ನು ಫಿರಂಗಿ ಹೊಡೆತದಿಂದ ಸಂಪೂರ್ಣವಾಗಿ ಸುಡಲಾಯಿತು, ಆದ್ದರಿಂದ ಇದು ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಪ್ರತಿ ಜನ್ಮ ಅಥವಾ ಪುನರ್ಜನ್ಮದೊಂದಿಗೆ ಫಿರಂಗಿ ಗುರುತಿನ ಗಾತ್ರವು ಕಡಿಮೆಯಾಗುತ್ತದೆ.

ಬ್ರ್ಯಾಂಡಿಂಗ್ ಗುರುತು:

ಬ್ರ್ಯಾಂಡಿಂಗ್ ಗುರುತು:

ಹಿಂದೆ, ಅಪರಾಧಗಳನ್ನು ಮಾಡಿದ ವ್ಯಕ್ತಿಗಳ ಮೇಲೆ ಬಿಸಿ ಲೋಹದ ವಸ್ತುಗಳಿಂದ ಬ್ರಾಂಡ್ ಅಥವಾ ಅಚ್ಚು ಹಾಕಲಾಗುತ್ತಿತ್ತು. ಚೀನಾದಲ್ಲಿರುವಂತೆ, ಕಾರ್ಯಕರ್ತರು, ದೇಶದ್ರೋಹಿಗಳು ಅಥವಾ ಅಪರಾಧಿಗಳನ್ನು ಗುರುತಿಸುವ ಸಲುವಾಗಿ ಸಾಮಾನ್ಯವಾಗಿ ಡ್ರ್ಯಾಗನ್ ಬ್ರಾಂಡ್ ಬಿಡಿಸಲಾಗುವುದು. ಭಾರತದಲ್ಲಿ ಹಿಂದಿನ ಕಾಲದಲ್ಲಿ ವರ್ಣಮಾಲೆ ಅಥವಾ ಕಬ್ಬಿಣದ ರಾಡ್ ಆಕಾರವನ್ನು ಮುದ್ರಿಸಲಾಗುತ್ತಿತ್ತು. ನಿಮ್ಮ ಜನ್ಮ ಗುರುತು ಅಂತಹ ಬ್ರ್ಯಾಂಡಿಂಗ್ ಅನ್ನು ಹೋಲುತ್ತಿದ್ದರೆ ನೀವು ಬಹುಶಃ ಈ ಹಿಂದೆ ಕೆಲವು ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು. ಆದರೆ ನಿಮ್ಮ ದೇಹದ ಮೇಲೆ ಸರಪಳಿಯಂತಹ ಗುರುತುಗಳು ಇದ್ದರೆ, ಅದು ನಿಮ್ಮನ್ನು ಸರಪಳಿಗಳಿಂದ ಸುತ್ತಿರುವುದನ್ನು ಸೂಚಿಸುವುದು.

Read more about: insync ಜೀವನ
English summary

How your Past Life is Following you in the Form of Birthmarks in Kannada

Here we tallking about How your past life is following you in the form of birthmarks in Kannada, read on
Story first published: Saturday, July 10, 2021, 7:57 [IST]
X
Desktop Bottom Promotion