Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Hanuman Jayanti puja vidhi :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
ಇದೇ ಬರುವ 27ರಂದು ಹನುಮಾನ್ ಜಯಂತಿ. ಅಂದರೆ ರಾಮಭಕ್ತ ಹನುಮ ಹುಟ್ಟಿದ ದಿನ. ಈ ದಿನ ಹನುಂತನನ್ನ ಪೂಜಿಸಿದರ ತಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ. ಹಾಗಾದರೆ ಈ ದಿನ ಭಗವಾನ್ ಹನುಮಂತನನ್ನು ಪೂಜಿಸುವುದು ಹೇಗೆ? ಪೂಜಾ ವಿಧಾನ ಯಾವದು? ಹನುಮನನ್ನು ಒಲಿಸಿಕೊಳ್ಳಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹನುಮಾನ್ ಜಯಂತಿಯ ಪೂಜಾ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಚೈತ್ರಮಾಸದಲ್ಲಿ ಹನುಮನನ್ನು ಪೂಜಿಸಲು ಹಲವಾರು ಮಾರ್ಗಗಳಿವೆ. ಈ ದಿನದಂದು ಜನರು ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಅರ್ಪಣೆಗಳೊಂದಿಗೆ ಪೂಜಿಸುತ್ತಾರೆ. ದೇವಾಲಯದ ಅರ್ಚಕರಿ ಭಕ್ತರಿಗೆ ಹೂವು, ತಿಂಡಿ, ತೆಂಗಿನಕಾಯಿ ಮೊದಲಾದವುಗಳಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.

ಹನುಮಾನ್ ಜಯಂತಿ ಪೂಜಾ ವಿಧಾನ:
- ಈ ದಿನದಂದು ಬೆಳಿಗ್ಗೆ ಬೇಗ ಏಳಬೇಕು.
- ಸ್ನಾನ ಮಾಡಿದ ನಂತರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಬಹುದು ಅಥವಾ ನೆಯಲ್ಲಿಯೂ ಪೂಜೆ ಮಾಡಬಹುದು.
- ಪೂಜೆಗೆ ನಿಂತಿರುವ ಹನುಮ ವಿಗ್ರಹ ಒಳಿತೆಂಬ ನಂಬಿಕೆಯಿದೆ.
- ಭಗವಂತನಿಗೆ ಕೆಂಪು ಸಿಂಧೂರವನ್ನು ಅರ್ಪಿಸಿ.
- ಈ ದಿನ ಹನುಮಾನ್ ಚಾಲಿಸಾ ಪಠಿಸಿ
- ಹನುಮನಿಗೆ ಹೂವುಗಳು, ಸಿಹಿತಿಂಡಿಗಳನ್ನು ಅರ್ಪಿಸಿ.
- ಹನುಮನನ್ನು ಸಂತೋಷಪಡಿಸಲು, ಮಲ್ಲಿಗೆ ಎಣ್ಣೆಯನ್ನು ಬಳಸಿ.
- ಪೂಜೆ ಮಾಡುವಾಗ ಹೆಚ್ಚು ಹೆಚ್ಚು ಕೆಂಪು ವಸ್ತುಗಳನ್ನು ಬಳಸಿ.
- ಹನುಮಾನ್ ಜಯಂತಿ ಉಪವಾಸ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ನಂತರ, ಭಗವಾನ್ ಶ್ರೀ ರಾಮ್, ತಾಯಿ ಸೀತಾ ಮತ್ತು ಶ್ರೀ ಹನುಮಾನ್ ಅವರನ್ನು ಸ್ಮರಿಸಿ, ಉಪವಾಸದ ನಿರ್ಣಯವನ್ನು ತೆಗೆದುಕೊಳ್ಳಿ.

ಹನುಮನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ:
- ಓಂ ಹನುಮಂತೆ ನಮಃ ಜಪಿಸುವುದರಿಂದ, ದೈವಿಕ ಮತ್ತು ದೈಹಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ.
-ಪೂಜೆಯಲ್ಲಿ ಪರಿಮಳಯುಕ್ತ ಎಣ್ಣೆ ಮತ್ತು ಸಿಂಧೂರ ಹನುಮನಿಗೆ ಪ್ರಿಯವಾದುದರಿಂದ ಅವುಗಳನ್ನು ಅರ್ಪಿಸುವುದರಿಂದ ಉತ್ತಮ ಲಾಭವಿದೆ.
- ರಾಮಚರಿತ ಮಾನಸ, ಹನುಮಾನ್ ಚಾಲೀಸಾ, ಹನುಮಾನ್ ಬಹುಕ್ ಇತ್ಯಾದಿಗಳನ್ನು ಓದಿ.
-ದೇವಾಲಯಕ್ಕೆ ಭೇಟಿ ನೀಡಿ, ತೆಂಗಿನಕಾಯಿ ಹಿಡಿದು ೭ ಪ್ರದಕ್ಷಿಣೆ ಹಾಕಿದ ಬಳಿಕ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿ.
-ಸೂರ್ಯಾಸ್ತದ ನಂತರ, ಹನುಮಾನ್ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ದೀಪವು ಜೇಡಿಮಣ್ಣಿನಿಂದ ಕೂಡಿದ್ದರೆ, ಅದು ಹೆಚ್ಚು ಶುಭವಾಗಿರುತ್ತದೆ. ದೀಪವನ್ನು ಬೆಳಗಿಸಿದ ನಂತರ, ಹನುಮಾನ್ ಚಾಲಿಸಾ ಪಠಿಸಿ.



Click it and Unblock the Notifications
