Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಅನ್ನಾ ಮಣಿಗೆ ಗೂಗಲ್ ಡೂಡೆಲ್ ಗೌರವ: ಭಾರತದ ಭೌತಶಾಸ್ತ್ರಜ್ಞೆ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು
ಇಂದು ಅಂದ್ರೆ ಆಗಸ್ಟ್ 23ರಂದು ಗೂಗಲ್ ಡೂಡೆಲ್‌ನಲ್ಲಿ ಅನ್ನಾ ಮಣಿಯವರ 104ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ಈ ಅನ್ನಾ ಮಣಿ ಯಾರು ಎಂದು ನೋಡುವುದಾದರೆ ಇವರು ಇಂದು ಅನೇಕ ಯುವ ಜನರಿಗೆ ಸ್ಪೂರ್ತಿಯಾಗಿದ್ದಾರೆ.

ಅನ್ನಾಮಣಿಯವರು ಭಾರತದ ಮಹಿಳಾ ಭೌತವಿಜ್ಞಾನಿ ಹಾಗೂ ಪವನಶಾಸ್ತ್ರ ವಿಜ್ಞಾನಿ, ಓಝೋನ್ ಹಾಗೂ ವಾಯು ಶಕ್ತಿಯ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ಡ್ಯಾನ್ಸ್ ಎಂದರೆ ತುಂಬಾನೇ ಪ್ರೀತಿ, ನಾನು ಡ್ಯಾನ್ಸರ್ ಆಗಬೇಕೆಂದು ಬಯಸಿದ್ದರು. ಆದರೆ ಅವರು ಓದುವಾಗ ಭೌತಶಾಸ್ತ್ರ ಆಯ್ಕೆ ಮಾಡಿಕೊಂಡರು, ಭೌತಶಾಸ್ತ್ರದ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಇತ್ತು, ಅವರು ತುಂಬಾ ಪುಸ್ತಕಗಳನ್ನು ಓದುತ್ತಿದ್ದರು, ತಮ್ಮ ಊರಿನಲ್ಲಿದ್ದ ಅಷ್ಟೂ ಬುಕ್‌ಗಳನ್ನು ಅವರು ಓದಿ ಮುಗಿಸಿದ್ದರಂತೆ, ಓದುವುದು ಅಂದ್ರೆ ಅಷ್ಟು ಪ್ರಿಯ ಅವರಿಗೆ.
1940ರಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರಿನಲ್ಲಿ ಅವರಿಗೆ ಸ್ಕಾಲರ್‌ಶಿಪ್ ಸಿಕ್ಕಿತ್ತು. ಇವರು ಪ್ರಸಿದ್ಧ ಭೌತಶಾಸ್ತ್ರಜ್ಞ ಪ್ರೊ. ಸೊಲೊಮೊನ್ ಪಪ್ಪಯ್ಯ ಅವರ ಅಡಿಯಲ್ಲಿ ಕೆಲಸ ಮಾಡಿದ್ದರು. ಇವರು ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್ ಗುಣ ಲಕ್ಷಣಗಳ ಬಗ್ಗೆ ಕೂಡ ಸಂಶೋಧನೆ ಮಾಡಿದ್ದಾರೆ.
ಭೌತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ಗೆ ಹೋಗಿ ಅಭ್ಯಾಸ ಮಾಡಿದರು. ನಂತರ ಭಾರತಕ್ಕೆ ಮರಳಿ ಬಂದ ಮೇಲೆ IMDಯಲ್ಲಿ ಕೆಲಸ ಮಾಡಿದರು. ಇವರು ಹವಾಮಾನ ಬಗ್ಗೆ ತಿಳಿಯುವ ವಿವಿಧ ಉಪಕರಣಗಳ ತಯಾರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 1953ರವರೆಗೆ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರ ಮಾರ್ಗದರ್ಶನದಲ್ಲಿ 100 ಹವಮಾನ ಮಾಪಕಗಳನ್ನು ತಯಾರಿಸಲಾಯಿತು.
ಇವರ ಕೊಡುಗೆಯನ್ನು ಮೆಚ್ಚಿ ಇವರಿಗೆ 1987ರಲ್ಲಿ ಕೆ. ಆರ್ ರಾಮನಾಥನ್ ಮೆಡಲ್ ನೀಡಿ ಗೌರವಿಸಲಾಯಿತು. ಇವರು 2001ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಕೊನೆಯುಸಿರೆಳೆದರು.



Click it and Unblock the Notifications

