Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಜೀವನದಲ್ಲಿ ಸಂತೋಷವಾಗಿರಲು ಇಂತಹವರಿಂದ ದೂರವಿರುವುದೇ ಉತ್ತಮ
ಮಹಾನ್ ರಾಜತಾಂತ್ರಿಕ ಮತ್ತು ಬುದ್ಧಿವಂತ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ಬಹಳ ಆಳವಾಗಿ ವಿವರಿಸಿದ್ದಾರೆ. ಇದರೊಂದಿಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ಮಾರ್ಗವನ್ನೂ ಸೂಚಿಸಿದ್ದಾರೆ. ನೀವು ಸಂತೋಷವಾಗಿರಲು ಮತ್ತು ನಕಾರಾತ್ಮಕತೆಯಿಂದ ದೂರವಿರಲು ಬಯಸಿದರೆ, ಈ 3 ಜನರ ಸಹವಾಸವನ್ನು ಇಂದೇ ಬಿಟ್ಟುಬಿಡಿ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಸಂತೋಷವಾಗಿರಬೇಕಾದರೆ, ಎಂಹತವರಿಂದ ದೂರವಿರಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅದೃಷ್ಟದ ಬಗ್ಗೆ ಕೊರಗುವವರಿಂದ ದೂರವಿರಿ:
ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ತಮ್ಮ ಅದೃಷ್ಟವನ್ನು ಶಪಿಸುತ್ತಾ ಮತ್ತು ದೇವರನ್ನು ಖಂಡಿಸುವ ಜನರು ನಿಮ್ಮಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡಬಹುದು. ತಮ್ಮ ಪ್ರಯತ್ನವಿಲ್ಲದೇ ಕೇವಲ ದೇವರನ್ನೇ ದೂಷಿಸುತ್ತಾ, ಅದೃಷ್ಟವನ್ನೇ ನಂಬಿ ಕಾದು ಕುಳಿತಿರುವವರು ಎಂದಿಗೂ ಸಂತೋಷವಾಗಿರುವುದಿಲ್ಲ. ಇಂತಹವರು ಯಾವಾಗಲೂ ತನ್ನ ದುಃಖದಲ್ಲಿ ಮುಳುಗಿರುತ್ತಾರೆ, ಇವರಿಗೆ ಎಂದಿಗೂ ತೃಪ್ತಿ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಸ್ವಂತ ಸಂತೋಷಕ್ಕಾಗಿ ಈ ಜನರಿಂದ ದೂರವಿರುವುದು ಉತ್ತಮ. ಇಲ್ಲವಾದಲ್ಲಿ ಇವರ ಪ್ರಭಾವ ನಿಮ್ಮ ಮೇಲೆಯೂ ಬೀರಬಹುದು.

ಮೂರ್ಖರಿಂದ ದೂರವಿರಿ:
ಚಾಣಕ್ಯ ನೀತಿ ಪ್ರಕಾರ, ಮೂರ್ಖರ ಸಹವಾಸ ಎಂದಿಗೂ ಸರಿಯಲ್ಲ. ನೀವು ಮೂರ್ಖ ಜನರೊಂದಿಗೆ ಹೆಚ್ಚು ಮಾತನಾಡಬಾರದು ಅಥವಾ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಬಾರದು. ಏಕೆಂದರೆ ಇವರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅವರು ಯಾರ ಮಾತನ್ನೂ ಕೇಳುವುದಿಲ್ಲ. ಅವರು ಯಾವಾಗಲೈ ತಮ್ಮ ಮಾತುಗಳನ್ನು ಇಷ್ಟಪಡುತ್ತಾರೆ. ನೀವು ಅಂತಹ ಜನರ ಮೇಲೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿದರೆ ಅದು ನಿಮಗೆ ಮಾತ್ರ ಹಾನಿಕಾರಕವಾಗಿದೆ. ಏಕೆಂದರೆ ಇದು ನಿಮ್ಮ ಕೆಲಸ ಮಾಡುವ ಸಾಮರ್ಥ್ಯ ಮತ್ತು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಅಂತಹವರಿಂದ ದೂರವಿರುವುದು ಉತ್ತಮ.

ಇತರರಿಗೆ ಕೆಟ್ಟದ್ದು ಬಯಸುವವರಿಂದ ದೂರವಿರಿ:
ಅಸೂಯೆ, ದುರುದ್ದೇಶ ಮತ್ತು ಇತರರ ವಿರುದ್ಧ ದ್ವೇಷದ ಭಾವನೆ ಇರುವವ ಮಹಿಳೆಯರಿಂದ ದೂರವಿರಿ. ಅಂತಹ ಮಹಿಳೆ ನಿಮ್ಮ ಜೀವನದಲ್ಲಿ ಮಾತ್ರವಲ್ಲದೆ ಕುಟುಂಬದಲ್ಲಿಯೂ ತೊಂದರೆಗಳನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ದುಷ್ಟ ಮಹಿಳೆಗೆ ಸಹಾಯ ಮಾಡುವುದು ನಮ್ಮ ಅವನತಿಯನ್ನು ನಾವೇ ಸ್ವಾಗತಿಸಿದಂತೆ. ನಿಮ್ಮ ಸಹಾಯದ ತಪ್ಪು ಪ್ರಯೋಜನವನ್ನು ತೆಗೆದುಕೊಳ್ಳುವ ಮೂಲಕ ನಿಮಗೆ ಹಾನಿ ಮಾಡುತ್ತದೆ. ಆದ್ದರಿಂದ, ಚಾಣಕ್ಯ ನೀತಿಯಲ್ಲಿ, ನಕಾರಾತ್ಮಕ ಆಲೋಚನೆಗಳಿರುವ ಮಹಿಳೆಯರಿಂದ ದೂರವಿರುವುದು ಒಳ್ಳೆಯದು.



Click it and Unblock the Notifications