Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಚಾಣಕ್ಯ ಪ್ರಕಾರ ಯುವಕರಲ್ಲಿ ಈ ಗುಣಗಳಿಲ್ಲದಿದ್ದರೆ ಅವರು ಉದ್ಧಾರವಾಗಲ್ಲ
ಯುವಕರು ನಮ್ಮ ದೇಶದ ಆಶಾಕಿರಣವಿದ್ದಂತೆ. ಸದೃಢ ಭಾರತದ ನಿರ್ಮಾತೃಗಳು ಇವರೇ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಹಾದಿ ತಪ್ಪುತ್ತಿದ್ದಾರೆ. ಕೆಟ್ಟ ಗೀಳಿಗೆ ಬಿದ್ದು ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಒಬ್ಬ ಯುವಕ ದಾರಿ ತಪ್ಪಿದರೆ ಅದು ಅವನಿಗೆ, ಅವನ ಮನೆಗೆ ಹಾಗೂ ದೇಶಕ್ಕೆ ಬಹುದೊಡ್ಡ ನಷ್ಟ. ಹಾಗಾದ್ರೆ ಚಾಣಕ್ಯನ ಪ್ರಕಾರ ಯುವಕರು ಹೇಗಿರಬೇಕು? ಒರ್ವ ಉತ್ತಮ ಯುವಕ ಅನ್ನಿಸಿಕೊಳ್ಳಬೇಕಾದರೆ ಯಾವೆಲ್ಲಾ ಲಕ್ಷಣಗಳು ಆತನಲ್ಲಿ ಇರಬೇಕು? ಚಾಣಕ್ಯನ ಪ್ರಕಾರ ಯುವಕರು ಮೈಗೂಡಿಸಿಕೊಳ್ಳಲೇಬೇಕಾದ ಗುಣಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಕೋಪ ನಿಯಂತ್ರಣದಲ್ಲಿರಲಿ
ಸಿಟ್ಟು ಮನುಷ್ಯನ ಅತಿದೊಡ್ಡ ಶತ್ರು. ಅದ್ರಲ್ಲೂ ಬಿಸಿ ರಕ್ತದ ಯುವಕರಿಗೆ ಸಿಟ್ಟನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟರೆ ನಿಮ್ಮ ಭವಿಷ್ಯವೇ ಹಾಳಾಗಿ ಹೋಗಲಿದೆ. ಚಾಣಕ್ಯನ ಪ್ರಕಾರ ಯುವಕರು ಯಾವಾಗ ಕೋಪವನ್ನು ನಿಂಯತ್ರಿಸಿಕೊಳ್ಳುವುದಿಲ್ಲವೋ ಆಗ ಅವರು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಸಿಟ್ಟು ಯಾವಾಗಲೂ ನಿಯಂತ್ರಣದಲ್ಲಿರಲಿ ಎಂದು ಚಾಣಕ್ಯ ಕಿವಿ ಮಾತು ಹೇಳಿದ್ದಾರೆ.

2. ಉದಾಸೀನ ಮಾಡಬೇಡಿ
ಚಾಣಕ್ಯನ ಪ್ರಕಾರ ಉದಾಸೀನತೆ ಯುವಕರ ಅಭಿವೃದ್ಧಿಯನ್ನೇ ಕುಂಠಿತಗೊಳಿಸುತ್ತಂತೆ. ಉದಾಸೀನತೆ ನಿಮ್ಮ ಸಮಯದ ಜೊತೆಗೆ ನಿಮ್ಮ ಭವಿಷ್ಯವನ್ನೂ ನಾಶ ಮಾಡಲಿದೆ. ಯಾವಾಗ ಯುವಕರು ಉದಾಸೀನತೆಯನ್ನು ಬಿಟ್ಟು ಕೆಲಸ ಮಾಡುತ್ತಾರೋ ಆವಾಗ ಮಾತ್ರ ಜೀವನದಲ್ಲಿ ಯಶಸ್ಸು ಒಲಿಯೋದಕ್ಕೆ ಸಾಧ್ಯ ಅಂತಾರೆ ಚಾಣಕ್ಯ.

3. ಕೆಟ್ಟ ಚಟಗಳಿಂದ ದೂರ ಇರಿ
ಚಾಣಕ್ಯನ ಪ್ರಕಾರ ಯುವಕರು ಯಾವುದೇ ರೀತಿಯ ಚಟಕ್ಕೊಳಗಾಗಬಾರದು. ಇದು ನಿಮ್ಮ ದೈಹಿಕ ಹಾಗೂ ಮಾಸಿಕ ಸಾಮರ್ಥ್ಯವನ್ನು ಕುಗ್ಗಿಸಿ ಬಿಡುತ್ತದೆ. ಡ್ರಗ್ಸ್‌ನಂತಹ ಮಾದಕ ವಸ್ತುಗಳ ದಾಸರಾದರೆ ಅದು ನಿಮ್ಮನ್ನು ಕೆಟ್ಟ ಕೆಲಸಗಳಿಗೆ ಪ್ರೇರೇಪಿಸುತ್ತದೆ. ನಿಮ್ಮ ಭವಿಷ್ಯವನ್ನು ನೀವೆ ಕೈಯಾರೆ ಹಾಳು ಮಾಡಿಕೊಂಡಂತೆ. ಚಟಗಳ ಗೀಳು ಹತ್ತಿಸಿಕೊಂಡವರನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ತುಂಬಾನೇ ಕಷ್ಟ.

4. ದುಷ್ಟರ ಸಂಘದಿಂದ ದೂರವಿರಿ
ನಮ್ಮ ಸ್ನೇಹಿತರ ಸಂಘ ಯಾವಾಗಲೂ ಉತ್ತಮವಾಗಿರಬೇಕು. ನಿಮ್ಮ ಮುಂದೆ ಚೆನ್ನಾಗಿ ಮಾತನಾಡಿ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವವರ ಸಾಹವಾಸ ಖಂಡಿತ ಬೇಡವೇ ಬೇಡ. ಚಾಣಕ್ಯನ ಪ್ರಕಾರ ನಾವು ಜೀವನದಲ್ಲಿ ಒಬ್ಬಂಟಿಯಾಗಿರೋದಕ್ಕೆ ಸಾಧ್ಯವೇ ಇಲ್ಲ. ನಮ್ಮ ಜೊತೆಗೆ ಸ್ನೇಹಿತರು ಇದ್ದಾಗ ಮಾತ್ರ ಜೀವನ ಚಂದ ಅನಿಸೋದಕ್ಕೆ ಶುರುವಾಗುತ್ತದೆ. ಒಳ್ಳೆಯವರ ಸಹವಾಸ ಮಾಡಿದರೆ ನಿಮ್ಮ ಯಶಸ್ಸಿಗೆ ಅವರು ಕೂಡ ಸಹಕರಿಸುತ್ತಾರೆ. ಆದರೆ ಕೆಟ್ಟವರ ಸಹವಾಸ ಮಾಡಿದರೆ ನಿಮ್ಮ ಉಜ್ವಲ ಭವಿಷ್ಯಕ್ಕೆ ಉಳ್ಳು ನೀರು ಬಿಟ್ಟಂತೆ. ಕೆಟ್ಟ ಸ್ನೇಹಿತ ಯಾವತ್ತಿಗೂ ನಿಮ್ಮ ಏಳಿಗೆಯನ್ನು ಬಯಸೋದಿಲ್ಲ.

5. ಜಾಗರೂಕತೆಯಿಂದ ಹೆಜ್ಜೆಯಿಡಿ
ಚಾಣಕ್ಯನ ಪ್ರಕಾರ ಅಜಾಗರೂಕತೆಗೆ ಮುಂದೊಂದು ದಿನ ನೀವು ಬಹು ದೊಡ್ಡ ಬೆಲೆಯನ್ನೇ ಕಟ್ಟಬೇಕಾಗುತ್ತದೆ. ಯುವಕರು ಯಾವುದೇ ಕೆಲಸವನ್ನು ಮಾಡಬೇಕಾದರೂ ಜಾಗರೂಕತೆಯಿಂದಲೇ ಇರಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅಜಾಗರೂಕತೆಯಿಂದ ನಡೆದುಕೊಂಡು ಪ್ರಮಾದಗಳು ನಡೆದು ಹೋದರೆ ಮುಂದೆ ಬಹುದೊಡ್ಡ ಅಪಾಯವೇ ಎದುರಾಗಲಿದೆ.

6. ದುರಾಸೆ ಒಳ್ಳೆಯದಲ್ಲ
ಚಾಣಕ್ಯನ ಪ್ರಕಾರ ಯುವಕರಿಗೆ ಆಸೆ ಇರಬೇಕು ಆದರೆ ದುರಾಸೆ ಒಳ್ಳೆಯದಲ್ಲ. ದುರಾಸೆಯು ನಿಮ್ಮನ್ನು ನಿಮ್ಮ ಗುರಿಯಿಂದ ಹಿಮ್ಮೆಟ್ಟಿಸಿ ಬಿಡಬಹುದು. ದುರಾಸೆಗೆ ದಾಸನಾದ ವ್ಯಕ್ತಿ ಉದ್ಧಾರವಾದ ಉದಾಹರಣೆಗಳೇ ಇಲ್ಲ. ದುರಾಸೆಯನ್ನು ತ್ಯಜಿಸಿ ಎಲ್ಲರೊಂದಿಗೆ ಉತ್ತಮ ಬಾಳ್ವೆ ನಡೆಸಿ.

7. ಮನೋರಂಜನೆ
ಚಾಣಕ್ಯನ ಪ್ರಕಾರ ಮನೋರಂಜನೆ ಕೂಡ ನಮ್ಮ ಜೀವನದ ಒಂದು ಭಾಗ. ಆದರೆ ಮನೋರಂಜನೆಯನ್ನೇ ಜೀವನ ಮಾಡಿಕೊಳ್ಳಬಾರದು. ಯುವಕರು ತಮ್ಮ ಗುರಿಯ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು ಅದನ್ನು ಬಿಟ್ಟು ಮೂರುಹೊತ್ತು ಮನೋರಂಜನೆಯೊಂದಿಗೆ ಕಾಲ ಕಳೆಯಬಾರದು. ಅತಿಯಾದ ಮನೋರಂಜನೆ ಭವಿಷ್ಯದ ಬದುಕಿಗೆ ಕಂಠಕವಾಗಬಹುದು. ಆದ್ದರಿಂದ ಮನೋರಂಜನೆ ಮಿತವಾಗಿರಲಿ.

8. ಸಮಯ ಹಾಳು ಮಾಡಬೇಡಿ
ಕಳೆದ ಹೋದ ಸಮಯ ಮತ್ತೆ ಮರಳಿಬಾರದು. ಚಾಣಕ್ಯ ಪ್ರಕಾರ ಯುವಕರು ಸಮಯದ ಮಹತ್ವವನ್ನು ಅರಿತು ಆ ಪ್ರಕಾರ ಕೆಲಸವನ್ನು ಮಾಡಬೇಕು. ಸಮಯದ ಮಹತ್ವ ಅರಿತವನು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯಾರು ಸಮಯವನ್ನು ಸರಿಯಾಗಿ ನಿಭಾಯಿಸುತ್ತಾನೋ ಆತ ಯಶಸ್ಸಿನೆಡೆಗೆ ಸಾಗುತ್ತಾನೆ. ಹಾಗಾಗಿ ಏನೆ ಕೆಲಸವಿದ್ದರೂ ಸರಿಯಾದ ಸಮಯಕ್ಕೆ ಮಾಡಿ ಮುಗಿಸಿ ಅದರಲ್ಲಿ ಯಾವುದೇ ರಾಜಿ ಬೇಡ.

9. ಶಿಸ್ತಿನ ಜೀವನ ಮೈಗೂಡಿಸಿಕೊಳ್ಳಿ
ಶಿಸ್ತು ಎಂಬುವುದು ಜೀವನದಲ್ಲಿ ತುಂಬಾನೇ ಮುಖ್ಯ. ಶಿಸ್ತನ್ನು ಮೈಗೂಡಿಸಿಕೊಂಡರೆ ನಮ್ಮ ಘನತೆಯೂ ಹೆಚ್ಚಾಗುತ್ತದೆ. ಯುವಕರಲ್ಲಿ ಅನೇಕ ಜನರನ್ನು ನಾವು ಗಮನಿಸಿರುತ್ತೇವೆ ಅವರಿಗೆ ಎಲ್ಲಿ ಯಾವ ರೀತಿ ಮಾತನಾಡಬೇಕು ಯಾವ ರೀತಿ ನಡೆದುಕೊಳ್ಳಬೇಕು ಅನ್ನೋ ಪರಿಜ್ಞಾನವು ಇರುವುದಿಲ್ಲ. ಇದು ಖಂಡಿತ ಒಳ್ಳೆಯದಲ್ಲ. ಯುವಕರು ಶಿಸ್ತಿನ ಜೀವನಕ್ಕೆ ಪ್ರಾಶಸ್ತ್ಯ ನೀಡಬೇಕು ಅಂತಾರೆ ಚಾಣಕ್ಯ.
ಮಕ್ಕಳನ್ನು ಕಷ್ಟಪಟ್ಟು ಸಾಕುವ ತಂದೆ-ತಾಯಿ ಆತ ಬೆಳೆದು ದೊಡ್ಡವನಾದ ಮೇಲೆ ಮಹಾನ್ ವ್ಯಕ್ತಿಯಾಗುತ್ತಾನೆ ಅಂತೆಲ್ಲಾ ಕನಸು ಕಟ್ಟಿಕೊಂಡಿರುತ್ತಾರೆ. ತಂದೆ-ತಾಯಿ ಕನಸನ್ನು ಯಾವತ್ತಿಗೂ ಸುಳ್ಳು ಮಾಡಬೇಡಿ. ಚಾಣಕ್ಯನ ಮಾತಿನಂತೆ ಈ ಎಲ್ಲಾಗುಣಗಳನ್ನು ಮೈಗೂಡಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ.



Click it and Unblock the Notifications











