Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಾಣಕ್ಯ ನೀತಿ : ಈ ರಹಸ್ಯಗಳು ಯಾವುದೇ ಕಾರಣಕ್ಕೂ ಗಂಡನ ಬಳಿ ಹೇಳಲೇಬೇಡಿ !
ಗಂಡ-ಹೆಂಡತಿ ಸಂಬಂಧದಲ್ಲಿ ಯಾವುದೇ ರೀತಿಯ ಮುಚ್ಚುಮರೆ ಇರೋದಿಲ್ಲ. ಇವರಿಬ್ಬರ ಸಂಬಂಧ ತೆರೆದ ಪುಸ್ತಕದಂತಿರುತ್ತದೆ. ಹಾಗಂತ ನೀವು ಎಲ್ಲಾ ಸಂದರ್ಬದಲ್ಲಿ ಎಲ್ಲಾ ವಿಚಾರಗಳು ಪತಿಯ ಬಳಿ ಶೇರ್ ಮಾಡೋದಕ್ಕೆ ಹೋಗಬಾರದು. ಕೆಲವೊಂದು ರಹಸ್ಯಗಳನ್ನು ನಿಮ್ಮೊಳಗೆ ಬಚ್ಚಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅದು ನಿಮ್ಮ ಸಂಸಾರಕ್ಕೆ ಆಪತ್ತು ತಂದೊಡ್ಡಬಹುದು.

ಆದ್ರೆ ಚಾಣಕ್ಯನ ಪ್ರಕಾರ ನೀವು ನಿಮ್ಮ ಪತಿಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲೇ ಬಾರದು ಅಂತಾರೆ. ಒಂದು ವೇಳೆ ಆ ವಿಚಾರಗಳನ್ನು ನಿಮ್ಮ ಗಂಡನ ಬಳಿ ಹೇಳಿದರೆ ದಾಂಪತ್ಯ ಮುರಿದು ಬೀಳುವ ಸಾಧ್ಯತೆ ಇದ್ಯಂತೆ. ಅಷ್ಟಕ್ಕು ಚಾಣಕ್ಯನ ಮಾತಿನಂತೆ ಗಂಡನ ಬಳಿ ಪತ್ನಿ ಮುಚ್ಚಿಡಲೇಬೇಕಾದ ಆ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಗಂಡನಿಗೆ ತಿಳಿಯಾದ ಹಾಗೆ ಉಳಿತಾಯ ಮಾಡಿ
ಮಡದಿಯನ್ನು ಮನೆಯ ಲಕ್ಷ್ಮೀ ಅಂತ ಕರೆಯಲಾಗುತ್ತದೆ. ಆಕೆ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಹೋಮ್ ಮಿನಿಸ್ಟರ್. ಪತ್ನಿ ಕೆಲವೊಂದು ಬಾರಿ ಪತಿಗೆ ತಿಳಿಯದ ಹಾಗೇ ಜೇಬಿನಿಂದ ಹಣ ತೆಗೆಯುತ್ತಾಳೆ. ಇನ್ನೂ ಕೆಲವೊಮ್ಮೆ ಮನೆಯ ಖರ್ಚು-ವೆಚ್ಚಕ್ಕೆ ಕೊಟ್ಟ ದುಡ್ಡಿನಲ್ಲಿ ಉಳಿಕೆ ಮಾಡಿ ಸೀಕ್ರೇಟ್ ಸೇವಿಂಗ್ ಮಾಡ್ತಾಳೆ. ಚಾಣಕ್ಯನ ಪ್ರಕಾರ ಇಂತಹ ಉಳಿತಾಯ ಒಳ್ಳೆಯದು. ಯಾಕಂದ್ರೆ ಅದು ನಮ್ಮ ಆಪತ್ಕಾಲದಲ್ಲಿ ಖಂಡಿತ ಉಪಯೋಗಕ್ಕೆ ಬರುತ್ತದೆ. ಆದರೆ ಈ ವಿಚಾರವನ್ನು ನಿಮ್ಮ ಗಂಡನಿಗೆ ತಿಳಿಯದ ಹಾಗೇ ಮುಚ್ಚಿಡಿ ಅಂತಾರೆ ಚಾಣಕ್ಯ.

2. ಕೆಲವೊಂದು ಭಾವನೆಗಳನ್ನು ಮುಚ್ಚಿಡಿ
ಗಂಡ-ಹೆಂಡತಿ ಎಂದರೆ ಅಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಅನ್ನೋದು ಇರೋದಿಲ್ಲ. ಹೆಂಡತಿ ಎಲ್ಲಾ ವಿಷಯಗಳನ್ನು ಗಂಡನ ಬಳಿ, ಗಂಡ ಎಲ್ಲಾ ವಿಷಯಗಳನ್ನು ಹೆಂಡತಿಯ ಬಳಿ ಹಂಚಿಕೊಳ್ಳುತ್ತಾರೆ. ಆದರೆ ಹೆಂಡತಿಯಾದವಳು ನಿಮ್ಮ ಕೆಲ ಭಾವನೆಗಳನ್ನು ಗಂಡನ ಬಳಿ ಹಂಚಿಕೊಳ್ಳಬೇಡಿ ಅಂತಾರೆ ಚಾಣಕ್ಯ. ಇದರಿಂದ ನಿಮ್ಮ ಸಂಸಾರಕ್ಕೆ ಸಮಸ್ಯೆ ಎದುರಾಗಬಹುದು. ಕೆಲವೊಂದು ಬಾರಿ ನೀವು ಅನ್ಯ ಪುರುಷನ ವಿಚಾರಕ್ಕೆ ನೊಂದುಕೊಂಡಿರುತ್ತೀರಾ ಅಂದುಕೊಳ್ಳಿ ಈ ವೇಳೆ ಅಂತಹ ವಿಚಾರಗಳನ್ನು ಪತಿ ಬಳಿ ಹಂಚಿಕೊಳ್ಳುವುದು ಒಳ್ಳೆಯದಲ್ಲ.

3. ಕೆಲವೊಂದು ರೋಗಗಳ ಬಗ್ಗೆ ಮುಚ್ಚಿಡಿ
ನಿಮಗೆ ಮೊದಲೇ ನಿಮಗೆ ಆರೋಗ್ಯ ಸಮಸ್ಯೆಗಳಿದ್ದರೆ ಗಂಡ ಅದರಿಂದ ನೊಂದು ಕೊಂಡಿರುತ್ತಾರೆ ಹಾಗೂ ಇದರಿಂದಾಗಿ ಗಂಭೀರ ಆರ್ಥಿಕ ಸಮಸ್ಯೆಗಳನ್ನು ನಿಮ್ಮ ಪತಿ ಎದುರಿಸಿರುತ್ತಾರೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಆತನ ಬಳಿ ಪದೇ ಪದೇ ಹೇಳುವುದರಿಂದ ಆತನಿಗೆ ಕಿರಿ ಕಿರಿ ಉಂಟಾಗಬಹುದು. ಆದ್ದರಿಂದ ಸಣ್ಣ-ಪುಟ್ಟ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಿ.

4. ನಿಮ್ಮ ಸೀಕ್ರೇಟ್ ಕ್ರಷ್ ಬಗ್ಗೆ ಹೇಳಲೇಬೇಡಿ
ಮಹಿಳೆಯರಿಗೆ ಯಾರಾದರೂ ಒಬ್ಬ ವ್ಯಕ್ತಿಯ ಮೇಲೆ ಕ್ರಷ್ ಇದ್ದೇ ಇರುತ್ತದೆ. ಮದುವೆಯಾದ ಮೇಲೂ ನಿಮಗೆ ಯಾರ ಮೇಲಾದರೂ ಕ್ರಷ್ ಆದರೆ ಖಂಡಿತ ನಿಮ್ಮ ಪತಿಯ ಬಳಿ ಹೇಳಲೇಬೇಡಿ. ಯಾಕಂದ್ರೆ ಇದರಿಂದ ಪತಿ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಮುಂದುವರೆದು ನಿಮ್ಮ ಕುಟುಂಬಕ್ಕೂ ಸಮಸ್ಯೆ ಎದುರಾಗಬಹುದು. ಹೀಗಾಗಿ ಇಂತಹ ವಿಚಾರಗಳನ್ನು ಮುಚ್ಚಿಡಿ ಅಂತಾರೆ ಚಾಣಕ್ಯ.

5. ಕೆಲವೊಂದು ಬಾರಿ ಗಂಡನ ಮಾತುಗಳಿಗೆ ಸಮ್ಮತಿ ಸೂಚಿಸಿ
ಯಾವುದೇ ಒಂದು ವಿಚಾರದ ಬಗ್ಗೆ ನಿರ್ಧರಿಸಬೇಕಾದರೆ ಅಲ್ಲಿ ಗಂಡ ಹಾಗೂ ಹೆಂಡತಿಯ ಸಮ್ಮತಿ ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಗಂಡನ ನಿರ್ಧಾರಗಳು ಹೆಂಡತಿಗೆ ಹಾಗೂ ಹೆಂಡತಿಯ ನಿರ್ಧಾರಗಳು ಗಂಡನಿಗೆ ಇಷ್ಟವಾಗುವುದಿಲ್ಲ. ಹಾಗಂತ ಎಲ್ಲಾ ಬಾರಿಯು ಪತಿಯೊಂದಿಗೆ ವಾದಿಸೋದು ಒಳ್ಖೆಯದಲ್ಲ ಅಂತಾರೆ ಚಾಣಕ್ಯ. ಕೆಲವೊಂದು ಬಾರಿ ಆತನ ಮಾತುಗಳಿಗೂ ಸಮ್ಮತಿ ಸೂಚಿಸಿ. ನಮಗೆ ಆ ವಿಚಾರದ ಬಗ್ಗೆ ಅಸಮಾಧಾನ ಇದ್ದರೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಹೊಂದಿಕೊಳ್ಳುವ ಗುಣವಿದ್ದಾಗ ಮಾತ್ರ ಸಂಸಾರದ ಬಂಡಿ ಮುಂದೆ ಸಾಗೋದಕ್ಕೆ ಸಾಧ್ಯ.
ಕಷ್ಟ-ಸುಖವನ್ನು ಸರಿಯಾಗಿ ತೂಗಿಸಿಕೊಂಡು ಹೋಗುವುದೇ ಸಂಸಾರ. ಪತ್ನಿಯಾದವಳಿಗೆ ಮಾತ್ರ ಈ ಶಕ್ತಿ ಇರುವುದು. ಎಲ್ಲಿ, ಹೇಗೆ, ಏನು ಮಾತನಾಡಬೇಕು ಅನ್ನೋದು ಪತ್ನಿಗೆ ಗೊತ್ತಿದ್ದರಷ್ಟೇ ಬದುಕು ಚೆನ್ನಾಗಿ ನಡೆಯೋದಕ್ಕೆ ಸಾಧ್ಯ.



Click it and Unblock the Notifications
