Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಚಾಣಕ್ಯನ ಪ್ರಕಾರ ಪುರುಷರಲ್ಲಿ ಈ ಗುಣಗಳು ನಿಮ್ಮಲ್ಲಿದ್ರೆ ಪತ್ನಿ ಖುಷಿಯಾಗಿರ್ತಾಳೆ
ಚಾಣಕ್ಯರು ಜೀವನಕ್ಕಾಗಿ ಅನೇಕ ನೀತಿಗಳನ್ನು ರೂಪಿಸಿದ ಮಹಾನ್ ಮೇಧಾವಿ. ಅದ್ರಲ್ಲೂ ಮುಖ್ಯವಾಗಿ ಪುರುಷರಿಗಾಗಿ ಕೂಡ ನೀತಿಗಳು ರೂಪಿಸಿದ ಇವರು ದಾಂಪತ್ಯ ಜೀವನದ ಕೆಲ ಗುಟ್ಟುಗಳ ಬಗ್ಗೆಯೂ ಕೂಡ ಮುಕ್ತವಾಗಿ ಹಂಚಿಕೊಂಡಿದ್ರು. ಅದ್ರಲ್ಲೂ ಮದುವೆಯಾದ ಮೇಲೆ ಪತ್ನಿಯನ್ನು ಯಾವ ರೀತಿ ನೋಡಿ ಕೊಳ್ಳಬೇಕು ಹಾಗೂ ನಿಮ್ಮ ಎಂಥಹ ನಡವಳಿಕೆಗಳು ಪತ್ನಿಗೆ ಇಷ್ಟವಾಗಲಿದೆ ಅನ್ನೋದನ್ನು ಕೂಡ ವಿವರಿಸಿದ್ದಾರೆ.

ಮದುವೆಗೆ ಮುಂಚೆ ಪೋಲಿಯಾಗಿ ಅಲೆದಾಡುತ್ತಿದ್ದ ಹುಡುಗರೆಲ್ಲಾ ಮದುವೆಯಾದ ಮೇಲೆ ಜವಾಬ್ದಾರಿಯಿಂದ ನಡೆದುಕೊಂಡಿರೋದನ್ನ ನಾವು ನೋಡಿರ್ತೀವಿ. ಇದಕ್ಕೆಲ್ಲಾ ಒಂದು ರೀತಿಯಲ್ಲಿ ಪತ್ನಿ ಕಾರಣ ಅಂದ್ರೆ ತಪ್ಪಾಗೋದಿಲ್ಲ. ದಾಂಪತ್ಯ ಜೀವನದಲ್ಲಿ ನಿಮ್ಮ ಪತ್ನಿಯನ್ನು ಖುಷಿಯಾಗಿಡೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಹಾಗಾದ್ರೆ ಉತ್ತಮ ಪತಿ ಎನಿಸಿಕೊಳ್ಳಲು ನಿಮ್ಮಲ್ಲಿ ಯಾವೆಲ್ಲಾ ಗುಣಗಳು ಇರಬೇಕು? ನೀವು ಯಾವ ರೀತಿ ಇದ್ದರೆ ಪತ್ನಿಗೆ ಇಷ್ಟವಾಗುತ್ತೆ ಅನ್ನೋದನ್ನ ಹೇಳ್ತೀವಿ.
1. ನಿಷ್ಠೆ
ಚಾಣಕ್ಯನ ಪ್ರಕಾರ ಮದುವೆಯಾದ ವ್ಯಕ್ತಿ ತನ್ನ ಪತ್ನಿಗೆ ಯಾವುದೇ ಕಾರಣಕ್ಕೂ ಮೋಸ ಮಾಡಬಾರದು. ಒಂದೇ ಸಂಬಂಧವನ್ನು ಕಡೆವರೆಗೂ ಉಳಿಸಿಕೊಂಡು ನಿಷ್ಠೆಯಿಂದ ಇರಬೇಕು. ಮನೆಯಿಂದ ಹೊರಗಡೆ ಪರ ಸ್ತ್ರೀಯರೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಪುರುಷನಾದವನಿಗೆ ಖಂಡಿತ ಶೋಭೆ ತರುವುದಿಲ್ಲ. ಹೀಗಾಗಿ ಪುರುಷನಾದವನು ಒಂದೇ ಸಂಬಂಧಕ್ಕೆ ಸೀಮಿತವಾಗಿರಬೇಕು.
2. ಗೌರವ
ಚಾಣಕ್ಯನ ಪ್ರಕಾರ ಪತಿಯಾದವನು ತನ್ನ ಪತ್ನಿಯನ್ನು ಗೌರವದಿದ ಕಾಣಬೇಕು. ಆಕೆಯನ್ನು ಎಂದಿಗೂ ಕೀಳಾಗಿ ಕಾಣಬೇಡಿ ಹಾಗೂ ಪರರ ಮುಂದೆ ಆಕೆಗೆ ಅವಮಾನ ಮಾಡಲೇಬೇಡಿ. ಯಾವ ಸಂಸಾರದಲ್ಲಿ ಪತಿ-ಪತ್ನಿ ಒಬ್ಬರಿಗೊಬ್ಬರು ಗೌರವ ನೀಡುತ್ತಾರೋ ಅಂತಹ ಸಂಸಾರ ನಿಜವಾಗಿಯೂ ಸಂತೋಷವಾಗಿರುತ್ತದೆ.
3. ಇದ್ದದರಲ್ಲೇ ಖುಷಿಪಡಿ
ಚಾಣಕ್ಯನ ಪ್ರಕಾರ ಪುರುಷರು ಕಷ್ಟಪಟ್ಟು ದುಡಿಯುತ್ತಾರೆ. ಆ ದುಡಿಮೆಯಿಂದ ನೀವು ಎಷ್ಟು ಗಳಿಸುತ್ತಿರೋ ಅಷ್ಟರಲ್ಲೇ ಖುಷಿಪಡಿ. ಮತ್ತಷ್ಟು ಗಳಿಸುವ ಆಸೆ ಬೇಡ. ಹೀಗೆ ಬರುವ ಸಂಭಳ ಸಾಲುತ್ತಿಲ್ಲವೆಂದು ನೀವು ನಿಮ್ಮ ಉಳಿದ ಸಮಯದಲ್ಲಿ ಬೇರೆ ಕಡೆ ಸಂಪಾದನೆ ಮಾಡೋದಕ್ಕೆ ಹೋದರೆ ನಿಮ್ಮ ಕುಟುಂಬಕ್ಕೆ ಸಮಯ ಕೊಡೋದಕ್ಕೆ ಆಗುವುದಿಲ್ಲ ಹಾಗೂ ನೀವು ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯೋದು ಕೂಡ ಸಾಧ್ಯವಾಗೋದಿಲ್ಲ.
4. ಜವಾಬ್ದಾರಿ
ಚಾಣಕ್ಯನ ಪ್ರಕಾರ ಗೃಹಸ್ಥನಾದವನಿಗೆ ಜವಾಬ್ದಾರಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕುಂಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ ದುಡಿಯಲೇಬೇಕು. ಕೇವಲ ದುಡಿದರಷ್ಟೇ ಸಾಲೋದಿಲ್ಲ ದುಡಿದ ಹಣವನ್ನು ಹೇಗೆ ವಿನಿಯೋಗಿಸಬೇಕು ಎಂಬುವುದನ್ನು ತಿಳಿದುಕೊಂಡಿರಬೇಕು. ಸುಖಾಸುಮ್ಮನೆ ದುಂದು ವೆಚ್ಚ ಮಾಡೋದಿಕ್ಕೆ ಹೋಗಬಾರದು. ಕುಟುಂಬ ನಿಭಾಯಿಸಿ ಉಳಿದ ಹಣವನ್ನು ಭವಿಷ್ಯ ದೃಷ್ಟಿಯಿಂದ ಕೂಡಿಡಬೇಕು.
ಪುರುಷರೇ ನಿಮ್ಮಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರಷ್ಟೇ ನಿಮ್ಮ ಪತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂಬ ನಿಮ್ಮ ಕಲ್ಪನೆ ತಪ್ಪು. ಚಾಣಕ್ಯ ಹೇಳಿರೋ ಈ ಗುಣಗಳು ಇದ್ದರಷ್ಟೇ ಸಾಕು. ನಿಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬಹುದು ಹಾಗೂ ಸಂಸಾರವು ಸುಖವಾಗಿರುತ್ತದೆ.



Click it and Unblock the Notifications



