Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಾಣಕ್ಯ ಪ್ರಕಾರ ಈ ಮೂರು ವಿಷಯಗಳನ್ನು ಪರೀಕ್ಷಿಸಿದೆ ಯಾರನ್ನೂ ಸ್ನೇಹಿತರನ್ನಾಗಿ ಒಪ್ಪಿಕೊಳ್ಳಲೇಬಾರದು
ನಂಬಿಕೆ ಅನ್ನೋದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯ. ನಾವು ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು ತುಂಬಾನೇ ಜಾಗರೂಕರಾಗಿರಬೇಕು. ಏಕೆಂದರೆ ಇತ್ತೀಚಿನ ಕಾಲದಲ್ಲಿ ನಂಬಿಸಿ ಕುತ್ತಿಗೆ ಕುಯ್ಯುವವರೇ ಹೆಚ್ಚು.

ನಮ್ಮವರೇ ಅಂದುಕೊಂಡವರು ನಮಗೆ ಮೋಸ ಮಾಡಿ ಬಿಡುತ್ತಾರೆ. ಹೀಗಾಗಿ ಯಾರನ್ನು ನಂಬೋದು ಯಾರನ್ನು ಬಿಡೋದು ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ. ಕೆಲವೊಂದು ಸಲ ನಮ್ಮ ಸಂಬಂಧಿಕರು, ಸ್ನೇಹಿತರು ಅಷ್ಟೇ ಯಾಕೆ ನಮ್ಮ ಆಪ್ತರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಹೀಗಾಗಿ ಚಾಣಕ್ಯನ ಪ್ರಕಾರ ವ್ಯಕ್ತಿಗಳಲ್ಲಿ ಈ ಗುಣಗಳು ಇದ್ದರೆ ಮಾತ್ರ ಅಂತಹ ವ್ಯಕ್ತಿಗಳಲ್ಲಿ ನೀವು ನಿಮ್ಮ ಸಂಬಂಧವನ್ನು ಮುಂದುವರಿಸಿ, ಅಂತಹ ವ್ಯಕ್ತಿಗಳು ಮಾತ್ರ ನಂಬಿಕೆಗೆ ಅರ್ಹರು ಅಂತ ಹೇಳಿದ್ದಾರೆ.
1. ತ್ಯಾಗ
ಚಾಣಕ್ಯನ ಪ್ರಕಾರ ನಾವು ಒಬ್ಬರನ್ನು ನಂಬುವಾಗ ನಮ್ಮಲ್ಲಿ ಅಂದಕಾರ ಆವರಿಸಿರಬಾರದು. ಅವರು ನಮ್ಮ ಸ್ನೇಹಿತರು ಅಥವಾ ಸಂಬಂಧಿಕರೇ ಆಗಿರಬಹುದು ಆದ್ರೆ ಅವರನ್ನು ನಂಬುವ ಮೊದಲು ಅವರಲ್ಲಿ ತ್ಯಾಗ ಮನೋಭಾವಿದೆಯಾ ಎಂಬುದ್ನು ಮೊದಲು ಅರಿತುಕೊಳ್ಳಿ. ಯಾವ ವ್ಯಕ್ತಿ ಬೇರೆಯವರ ಖುಷಿಗೋಸ್ಕರ ಅವನ ಖಷಿಯನ್ನು ತ್ಯಾಗ ಮಾಡಲು ಸಿದ್ಧನಿದ್ದಾನೋ ಅಂತವರನ್ನು ಸುಲಭವಾಗಿ ನಂಬಬಹುದು. ಯಾಕಂದ್ರೆ ಆ ವ್ಯಕ್ತಿ ನಿಮಗೆ ಮೋಸ ಮಾಡುವವನಲ್ಲ.
ಎರಡನೇಯದಾಗಿ ನಿಮ್ಮ ದುಃಖದ ಸಮಯದಲ್ಲಿ ಯಾವ ವ್ಯಕ್ತಿ ನಿಮ್ಮಿಂದ ದೂರವಿರುತ್ತಾನೋ ಅಂತವರ ಸಂಘ ಖಂಡಿತ ಬೇಡ ಅಂತಾರೆ ಚಾಣಕ್ಯ. ಮೂರನೇಯದ್ದು, ನೀವೇನಾದರೂ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರೆ ಅಂತ ಸಮಯದಲ್ಲಿ ನಿಮ್ಮವರು ನಿಮ್ಮ ಜೊತೆ ನಿಲ್ಲದೇ ಸ್ವಾರ್ಥಿಯಾಗಿ ವರ್ತಿಸಿದ್ದರೆ ಅವರು ಖಂಡಿತ ನಿಮ್ಮವರು ಅಲ್ಲವೇ ಅಲ್ಲ. ಯಾವಾಗ ಸಂಕಷ್ಟದಲ್ಲೂ ನಿಮಗೆ ಹೆಗಲಾಗಿ ನಿಲ್ಲುತ್ತಾರೋ ಅವರೂ ಮಾತ್ರ ನಂಬಿಕೆಗೆ ಅರ್ಹ ವ್ಯಕ್ತಿಗಳು.
2. ನೇರ ವ್ಯಕ್ತಿತ್ವ
ಚಾಣಕ್ಯನ ಪ್ರಕಾರ ಒರ್ವ ವ್ಯಕ್ತಿಯಲ್ಲಿರುವ ಗುಣಗಳಿಂದ ಆತನ ವ್ಯಕ್ತಿತ್ವ ಎಂತಹದ್ದು ಎಂಬುದು ನಮಗೆ ಗೊತ್ತಾಗುತ್ತದೆ. ತನ್ನ ಬಗ್ಗೆ ತಾನು ಹೆಮ್ಮ ಪಟ್ಟುಕೊಳ್ಳುವ ವ್ಯಕ್ತಿಯನ್ನು, ಸ್ವಾರ್ಥಿಯನ್ನು ಎಂದಿಗೂ ನಂಬಲೇಬೇಡಿ. ಕೆಲ ವ್ಯಕ್ತಿಗಳ ಮಾತು ನೇರಾ ನೇರವಾಗಿರುತ್ತದೆ, ಬೇರೆಯವರು ಏನು ಅಂದುಕೊಳ್ಳುತ್ತಾರೆ ಅನ್ನುವುದನ್ನೂ ಯೋಚಿಸದೇ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿ ಬಿಡುತ್ತಾರೆ. ಆದ್ರೆ ಅಂಥವರ ಮಾತು ಕಟುವಾಗಿರಬಹುದು ಆದರೆ ಮನಸ್ಸು ಮೃದುವಾಗಿರುತ್ತದೆ. ಅಂತವರನ್ನು ನೀವು ಸುಲಭವಾಗಿ ನಂಬಬಹುದು, ಯಾಕಂದ್ರೆ ಅಂಥವರ ಮನಸ್ಸಿನಲ್ಲಿ ಮೋಸದ ಭಾವನೆ ಇರೋದಿಲ್ಲ. ಸಂಕಷ್ಟ ಪರಿಸ್ಥಿತಿಯಲ್ಲಿ ನೀವು ಹೇಳುತ್ತಿರುವ ಮಾತುಗಳು ಆತನಿಗೆ ಸರಿ ಎನಿಸಿದರೆ ಖಂಡಿತ ನಿಮ್ಮ ಜೊತೆಯಾಗಿ ನಿಂತು ಎಲ್ಲರ ಮುಂದೆ ನಿಮ್ಮ ಪರವಾಗಿ ಮಾತನಾಡೋದಕ್ಕೂ ಆತ ಹಿಂಜರಿಯುವ ವ್ಯಕ್ತಿಯಲ್ಲ.
3. ಜಾಗರೂಕತೆಯಿಂದ ಇರಲು ಎಚ್ಚರಿಸುವ ವ್ಯಕ್ತಿ
ನೀವು ಎಲ್ಲರನ್ನೂ ಸುಲಭವಾಗಿ ನಂಬುತ್ತಿದ್ದರೆ ಅದು ಮುಂದೊಂದು ದಿನ ನಿಮಗೆ ಕಂಟಕವನ್ನು ತಂದೊಡ್ಡುತ್ತದೆ. ಯಾವತ್ತಿಗೂ ಯಾರಿಂದಲೂ ಮೋಸ ಹೋಗದಂತೆ ಹುಷಾರಾಗಿ ಹೆಜ್ಜೆ ಇಡಿ. ಯಾರು ಒಬ್ಬ ವ್ಯಕ್ತಿಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುತ್ತಾನೋ ಆತ ತನ್ನ ಸಾರ್ಥದಿಂದಲೇ ಒಬ್ಬರನ್ನು ಸುಲಭವಾಗಿ ಮೋಸ ಮಾಡಬಲ್ಲನು. ಹೀಗಾಗಿ ಜಾಗರೂಕರಾಗಿರುವುದು ತುಂಬಾನೇ ಒಳ್ಳೆಯದು. ಜಾಗರೂಕ ವ್ಯಕ್ತಿ ಮೋಸದ ಬಲೆಗೆ ಬೀಳುವ ಸಾಧ್ಯತೆ ಕಡಿಮೆ. ಆದರೆ ಕೆಲ ಒಳ್ಳೆಯ ವ್ಯಕ್ತಿಗಳು ನಮಗೆ ಇನ್ನೊಬ್ಬರಿಂದ ತೊಂದರೆಯಾಗುತ್ತಿದೆ ಅನ್ನುವಾಗ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ. ಜಾಗರೂಕತೆಯಿಂದ ಹೆಜ್ಜೆ ಇಡಿ ಎಂದು ತಿಳಿ ಹೇಳುತ್ತಾರೆ.
ಒಟ್ಟಿನಲ್ಲಿ ಈ ಮೇಲೆ ಹೇಳಿದ ಮೂರು ವ್ಯಕ್ತಿಗಳು ನಿಮ್ಮ ನಂಬಿಕೆಗೆ ಅರ್ಹ ವ್ಯಕ್ತಿಗಳು. ಇವರಿಂದ ನೀವೂ ಎಂತಹ ಸಹಾಯ ಬೇಕಾದರೂ ಪಡೆದುಕೊಳ್ಳಬಹುದು. ಇವರು ನಿಮ್ಮನ್ನು ನಡುದಾರಿಯಲ್ಲಿ ಕೈ ಬಿಡುವವರೇ ಅಲ್ಲ.



Click it and Unblock the Notifications


