Latest Updates
-
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು?
ಈ ನಾಲ್ಕು ಸಂಗತಿಗಳು ಗರ್ಭದಲ್ಲಿರುವಾಗಲೇ ನಿರ್ಧಾರವಾಗುತ್ತೆ ಅಂತಾರೆ ಚಾಣಕ್ಯ..!
ಹುಟ್ಟಿದ ವ್ಯಕ್ತಿ ಈ ಭೂಮಿಯ ಮೇಲೆ ಎಷ್ಟು ದಿನ ಜೀವಂತವಾಗಿರ್ತಾನೆ ಅನ್ನೋದು ಗೊತ್ತಿಲ್ಲ. ಹುಟ್ಟು-ಸಾವು ಎಲ್ಲವೂ ನಮ್ಮ ಹಣೆಬರಹದಲ್ಲಿ ಬರೆದಿರುತ್ತದೆ. ಇವತ್ತು ಜೀವಂತವಾಗಿದ್ದ ವ್ಯಕ್ತಿ ನಾಳೆ ಇರ್ತಾನೆ ಅನೋ ಗ್ಯಾರಂಟಿ ಕೂಡ ಇರೋದಿಲ್ಲ. ಆದರೆ ನಿಮಗೊತ್ತಾ ಕೆಲವು ಸಂಗತಿಗಳು ನಾವು ತಾಯಿ ಗರ್ಭದಲ್ಲಿರುವಾಗಲೇ ನಿರ್ಧಾರವಾಗಿರುತ್ತಂತೆ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲವಂತೆ.

ಅಷ್ಟಕ್ಕು ಚಾಣಕ್ಯನ ಪ್ರಕಾರ ನಾವು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಧಾರವಾಗಿರುವ ಆ ನಾಲ್ಕು ಸಂಗತಿಗಳು ಯಾವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
1. ಕರ್ಮ
ಮಗುವೊಂದು ತಾಯಿಯ ಹೊಟ್ಟೆಯಲ್ಲಿರಬೇಕಾದರೆ ಆ ಮಗು ಹೊಟ್ಟೆಯಿಂದ ಹೊರಬಂದ ಮೇಲೆ ಸಂತೋಷವಾಗಿರುತ್ತಾ ಅಥವಾ ದುಃಖದಿಂದಿರುತ್ತಾ ಎಂದು ನಿರ್ಧಾರವಾಗಿರುತ್ತದೆ. ಚಾಣಕ್ಯನ ಪ್ರಕಾರ ಭೂಮಿಗೆ ಬಂದಮೇಲೆ ಇದನ್ನೇ ಅನುಭವಿಸಬೇಕು ಎಂದು ಆತನ ಹಣೆಯಲ್ಲಿ ಬರೆದಿರುತ್ತದೆ. ಪೂರ್ವ ಜನ್ಮದ ಕರ್ಮಗಳನ್ನು ಖಂಡಿತ ಈ ಜನ್ಮದಲ್ಲಿ ಆತ ಅನುಭವಿಸಲೇಬೇಕು.
2. ಸಾವು
ಚಾಣಕ್ಯನ ಪ್ರಕಾರ ಸಾವನ್ನು ಆ ಬ್ರಹ್ಮನಿಂದಲೂ ಬದಲಾಯಿಸಲು ಆಗುವುದಿಲ್ಲ. ನಾವು ಇದೇ ಸಮಯದಲ್ಲಿ ಸಾಯವೇಕು ಎಂದು ತಾಯಿಯ ಗರ್ಭದಲ್ಲಿರಬೇಕಾದರೆ ನಿರ್ಧಾರವಾಗಿರುತ್ತದೆ. ನೀವು ಎಷ್ಟೇ ಕೋಟ್ಯಾಧಿಪತಿಗಳು ಆಗಿರಬಹುದು ಅಥವಾ ನೀವು ಪ್ರಭಾವಿ ವ್ಯಕ್ತಿಯೇ ಆಗಿರಬಹುದು. ಆದರೂ ಕೂಡ ನಿಮ್ಮ ಸಾವನ್ನು ಯಾರಿಂದಲೂ ತಪ್ಪಿಸೋದಕ್ಕೆ ಸಾಧ್ಯವಿಲ್ಲ.
3. ಸಂಪತ್ತು ಮತ್ತು ವಿದ್ಯೆ
ಅನೇಕ ಜನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಇನ್ನೂ ಕೆಲವರಿಗೆ ಕೈ ತುಂಬಾ ದುಡ್ಡು ಮಾಡಬೇಕು, ಕೋಟ್ಯಾಧಿಪತಿಗಳಾಗಬೇಕು ಎಂಬ ಆಸೆ ಇರುತ್ತದೆ. ಕೆಲವರಿಗೆ ಇದು ಕೈಗೂಡಿದರೆ ಇನ್ನೂ ಕೆಲವರಿಂದ ಇದು ಸಾಧ್ಯವಾಗೋದಿಲ್ಲ. ಯಾಕಂದರೆ ನೀವು ಮುಂದೆ ಏನಾಗುತ್ತೀರಾ? ನಿಮ್ಮ ಭವಿಷ್ಯದಲ್ಲಿ ಏನಾಗಲಿದೆ ಅನ್ನೋದು ತಾಯಿಯ ಗರ್ಭದಲ್ಲಿರಬೇಕಾದರೆ ನಿರ್ಧಾರವಾಗಿರುತ್ತದೆ.
4. ವಯಸ್ಸು
ಮನುಷ್ಯ ಭವಿಷ್ಯದ ಕನಸನ್ನು ಕಾಣೋದು ಹೆಚ್ಚು. ನಾಳೆ ನನ್ನ ಜೀವನದಲ್ಲಿ ಹೀಗಾಗುತ್ತೆ, ಮುಂದಿನ ಹತ್ತು ವರ್ಷಗಳಲ್ಲಿ ನಾನು ಕೋಟ್ಯಾಧಿಪತಿಯಾಗುತ್ತೇನೆ. ಹೀಗೆ ಮನುಷ್ಯರು ಬಣ್ಣ ಬಣ್ಣದ ಕನಸುಗಳನ್ನು ಕಂಡಿರ್ತಾರೆ. ಚಾಣಕ್ಯನ ಪ್ರಕಾರ ಭವಿಷ್ಯದ ಬಗ್ಗೆ ಅತೀ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಅಂತಾರೆ. ಯಾಕಂದ್ರೆ ನೀವು ಇಷ್ಟೇ ವರ್ಷ ಬದುಕಿರಬೇಕು ಅಂತ ತಾಯಿಯ ಗರ್ಭದಲ್ಲೇ ನಿರ್ಧಾರವಾಗಿರುವಾಗ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಬದುಕಿನ ಬಂಡಿ ಇಷ್ಟೇ ದಿನ ನಡೆಯುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಆದ್ರೆ ಬದುಕಿರುವಷ್ಟು ದಿನ ಖುಷಿ-ಖುಷಿಯಿಂದ ಬಾಳಬೇಕು ಅಷ್ಟೇ.



Click it and Unblock the Notifications



