Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಹಿಳೆಯರಿಗೆ ಈ ಗುಣಗಳು ಶೋಭೆ ತರುವುದಿಲ್ಲ ಅಂತಾರೆ ಚಾಣಕ್ಯ
ಮಹಿಳೆಯನ್ನು ಶಕ್ತಿಗೆ ಹೋಲಿಸಲಾಗುತ್ತದೆ. ಮಹಿಳೆಯರಲ್ಲಿ ಒಂದು ಸಂಸಾರವನ್ನು ಕಟ್ಟು ತಾಕತ್ತು ಇದೆ. ಅದೇ ರೀತಿ ಮಹಿಳೆ ಮನಸ್ಸು ಮಾಡಿದರೆ ಸಂಸಾರವನ್ನು ಒಡೆಯುವ ತಾಕತ್ತು ಕೂಡ ಆಕೆಯಲ್ಲಿರುತ್ತದೆ.

ಮಹಿಳೆಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿ ಕೆಲವೊಂದು ಗುಣಗಳು ಇದ್ದರೆ ಬದುಕು ಬಂಗಾರವಾಗಲಿದೆ. ಅದೇ ರೀತಿ ಆಕೆಯಲ್ಲಿ ಈ ಗುಣಗಳು ಆಕೆಯ ಬದುಕು ನಾಶವಾಗಲಿದೆ ಅಂತಾರೆ ಚಾಣಕ್ಯ. ಹಾಗಾದ್ರೆ ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿ ಇರಲೇಬಾರದ ಗುಣಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ದುರಾಸೆ
ಚಾಣಕ್ಯರ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ದುರಾಸೆ ಹೆಚ್ಚಾಗಿರುತ್ತಂತೆ. ಅದು ಹಣದ ವಿಚಾರದಲ್ಲೇ ಇರಲಿ, ಆಭರಣ, ಬಟ್ಟೆ ಇತ್ಯಾದಿ. ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇರಬಾರದು ಅಂತಾರೆ. ಅತೀ ಹೆಚ್ಚು ದುರಾಸೆ ಪಟ್ಟರೆ ಉದ್ಧಾರವಾಗೋದಿಕ್ಕೆ ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯ.
2. ಯೋಚಿಸದೇ ಕೆಲಸ ಮಾಡುವುದು
ಚಾಣಕ್ಯನ ಪ್ರಕಾರ ಮಹಿಳೆಯರು ಯಾವುದೇ ಕೆಲಸ ಮಾಡುವಾಗ ಹೆಚ್ಚು ಯೋಚಿಸೋದಿಲ್ಲ ಯೋಚಿಸದೇ ಕೆಲಸ ಮಾಡದೇ ಇರೋದೇ ಮಹಿಳೆಯರಿಗೆ ಆಪತ್ತು ತರಲಿದೆ ಅಂತಾರೆ. ಹೀಗಾಗಿ ಪ್ರತಿಯೊಂದು ಕೆಲಸ ಮಾಡುವಾಗಲೂ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಕೊಂಚ ಎಡವಿದ್ರು ಅಪಾಯ ಅಂತಾರೆ ಚಾಣಕ್ಯ.
3. ಸ್ವಾರ್ಥ
ಚಾಣಕ್ಯನ ಪ್ರಕಾರ ಮಹಿಳೆಯರು ತುಂಬಾನೇ ಸ್ವಾರ್ಥಿಗಳು. ಮಹಿಳೆಯರು ಅವರ ಕೆಲಸ ಆಗಬೇಕಾದರೆ ಏನು ಮಾಡೋದಕ್ಕೆ ಸಿದ್ಧವಾಗಿರುತ್ತಾರೆ. ಈ ಗುಣ ಕೂಡ ಮಹಿಳೆಯರಿಗೆ ಹುಟ್ಟಿನಿಂದ ಬಂದಿರುತ್ತದೆ. ಮಹಿಳೆಯರು ಈ ಗುಣಗಳನ್ನು ಬಿಟ್ಟುಬಿಡಬೇಕು ಅಂತಾರೆ ಚಾಣಕ್ಯ.
4. ಅತಿಯಾದ ದೈರ್ಯ
ಚಾಣಕ್ಯನ ಪ್ರಕಾರ ಮಹಿಳೆಯರಿಗೆ ದೈರ್ಯ ಒಳ್ಳೆಯದು ಆದರೆ ಅತಿಯಾದ ದೈರ್ಯ ಒಳ್ಳೆಯದಲ್ಲ. ಈ ನಿಮ್ಮ ಅತಿಯಾದ ದೈರ್ಯ ಒಂದಲ್ಲ ಒಂದು ದಿನ ನಿಮಗೆ ಕಂಟಕವನ್ನು ತಂದೊಡ್ಡಬಹುದು ಅಂತಾರೆ ಚಾಣಕ್ಯ.
5. ಸುಳ್ಳು
ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಸುಳ್ಳು ಹೇಳುವ ಗುಣ ಹುಟ್ಟಿನಿಂದ ಬಂದಿರುತ್ತಂತೆ. ಅವರು ಹೇಳುವ ಸುಳ್ಳುಗಳೇ ಅವರನ್ನು ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಹೀಗಾಗಿ ಇಂತಹ ಗುಣಗಳನ್ನು ಮಹಿಳೆಯರು ಬಿಡಬೇಕು ಅಂತಾರೆ ಚಾಣಕ್ಯ. ಈ ಗುಣಗಳು ಮಹಿಳೆಯರಿಗೆ ಶೋಭೆ ತರುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ.
ಜಗತ್ತಿನಲ್ಲಿ ಯಾವ ವ್ಯಕ್ತಿಯು ಪರಿಪೂರ್ಣ ಅನ್ನಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ರೀತಿಯ ಕೊರತೆಗಳು ಇದ್ದೇ ಇರುತ್ತದೆ. ಆದ್ದರಿಂದ ಚಾಣಕ್ಯನ ಪ್ರಕಾರ ಮಹಿಳೆಯರು ಕೂಡ ಈ ಕೆಲ ಗುಣಗಳನ್ನು ಬದಲಿಸಬೇಕು ಅಂತಾರೆ ಚಾಣಕ್ಯ.



Click it and Unblock the Notifications



