For Quick Alerts
ALLOW NOTIFICATIONS  
For Daily Alerts

ಬುದ್ಧ ಪೂರ್ಣಿಮಾ 2020: ಸಿದ್ಧಾರ್ಥ ಬುದ್ಧನಾದ ಕತೆ ಇದು

|

ಬುದ್ಧನ ಬಗ್ಗೆ ನಮಗೆಲ್ಲರಿಗೂ ಸಾಕಷ್ಟು ಜನಪ್ರಿಯ ಕಥೆಗಳು ಗೊತ್ತಿದೆ. ಸಿದ್ದಾರ್ಥನು ಬುದ್ಧನಾಗಿದ್ದು, ಭೋದಿ ವೃಕ್ಷದ ಕೆಳಗೆ ಜ್ಞಾನೋದಯವಾಗಿದ್ದು ಹೀಗೆ ಸಾಕಷ್ಟು ಸ್ಪೂರ್ತಿದಾಯಕ ಸಂಗತಿಗಳು ನಾವು ಬುದ್ಧನ ತತ್ವಗಳನ್ನು ಅನುಸರಿಸುವಂತೆ ಮಾಡುತ್ತವೆ. ಅತ್ಯಂತ ಜನಪ್ರಿಯವಾಗಿರುವ ಬುದ್ಧ ಪೂರ್ಣಿಮಾ ಬುದ್ಧನ ಸಂಪೂರ್ಣ ಜೀವನಗಾಥೆಯನ್ನು ನೆನಪಿಸುವ ದಿನ. ಕೇವಲ ಬೌದ್ಧ ಧರ್ಮದವರು ಮಾತ್ರವಲ್ಲದೇ ಹಿಂದುಗಳೂ ಕೂಡ ದೇಶ ವಿದೇಶಗಳಲ್ಲಿ ಬುದ್ಧ ಪೂರ್ಣಿಮೆಯನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ.

ಬುದ್ಧ ಜಯಂತಿ ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮಾ, ಗೌತಮ ಬುದ್ಧನು ವೈಶಾಖದ (ಏಪ್ರಿಲ್ - ಮೇ) ಹುಣ್ಣಿಮೆಯ ದಿನದಂದು ಜನಿಸಿದ ದಿನವಾಗಿದೆ. ಈ ವರ್ಷ 2020ರಲ್ಲಿ ಮೇ7ರಂದು ಬೌದ್ಧ ಪೂರ್ಣಿಮಾವನ್ನು ಆಚರಿಸಲಾಗುತ್ತಿದೆ. ಭೂಮಿಯಲ್ಲಿ ಎಂಭತ್ತು ವರ್ಷಗಳ ಕಾಲ ಬದುಕಿದ್ದ ಬುದ್ಧನ ಜನನ ಮತ್ತು ಪರಿನಿರ್ವಾಣ (ಜೀವನ್ಮರಣಗಳ ಚಕ್ರದಿಂದ ಹೊರಬಂದುದು) ಬೌದ್ಧ ಪೂರ್ಣಿಮೆಯ ಒಂದೇ ದಿನದಂದು ಆಗಿದೆ ಎಂದು ಹೇಳಲಾಗುತ್ತದೆ.

ಬುದ್ಧ ಪೂರ್ಣಿಮಾ

ಬುದ್ಧ ಪೂರ್ಣಿಮಾ

ಇದರ ಜೊತೆಗೆ, ಬುದ್ಧನಿಗೆ ಈ ದಿನದಂದು ಜ್ಞಾನೋದಯವಾಯಿತು ಎಂದೂ ಹೇಳಲಾಗುತ್ತದೆ. ಆದ್ದರಿಂದ ಬುದ್ಧ ಪೂರ್ಣಿಮಾವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ತ್ರಿವಳಿ ಶುಭವೆಂದು ಪರಿಗಣಿಸಿದ್ದಾರೆ. ಈ ದಿನದ ಇತರ ಹೆಸರುಗಳು ವೈಶಾಖ ಪೂರ್ಣಿಮಾ ಮತ್ತು ವೆಸಾಕ್ ದಿನ.

ಸಿದ್ಧಾರ್ಥ ಬುದ್ಧನಾದ

ಸಿದ್ಧಾರ್ಥ ಬುದ್ಧನಾದ

ಕಪಿಲವಸ್ತುವಿನ ರಾಜಕುಮಾರನಾಗಿ ಜನಿಸಿದ ಬುದ್ಧನನ್ನು ಅವನ ಪೋಷಕರು ಸಿದ್ಧಾರ್ಥ ನಾಮಕರಣ ಮಾಡಿದರು. ಅವನ ಜನನದ ಮೊದಲು, ಅವನು ಒಬ್ಬ ಮಹಾನ್ ಆಡಳಿತಗಾರನಾಗಲಿ ಅಥವಾ ಮಹಾ ತಪಸ್ವಿಯಾಗಲಿ ಆಗುತ್ತಾನೆ ಎಂದು ಭವಿಷ್ಯವಾಣಿ ನುಡಿದಿತ್ತು. ಯುವರಾಜನನ್ನು ಕಳೆದುಕೊಳ್ಳುವ ಭಯದಲ್ಲಿ ರಾಜಮನೆತನವು ಅವನನ್ನು ಅರಮನೆಯ ಆವರಣಕ್ಕಷ್ಟೇ ಸೀಮಿತಗೊಳಿಸಿತ್ತು. ಅಂದರೆ ಆತ ಹೊರಗೆಲ್ಲೂ ಹೋಗುವ ಹಾಗಿರಲಿಲ್ಲ. ಒಮ್ಮೆ ಸಿದ್ದಾರ್ಥನು ತನ್ನ 29 ನೇ ವರ್ಷದಲ್ಲಿ ಅರಮನೆಯಿಂದ ಮೊದಲ ಬಾರಿಗೆ ಹೊರಬಂದು, ರೋಗಪೀಡಿತ ಮನುಷ್ಯ, ವೃದ್ಧ ಮತ್ತು ಮೃತ ದೇಹವನ್ನು ದಾರಿಯಲ್ಲಿ ಕಂಡನು. ಈ ಮೂರು ದೃಶ್ಯಗಳಿಂದಾಗಿ ಅವನಿಗೆ ಜೀವನವು ದುಃಖದಿಂದ ತುಂಬಿದೆ ಮತ್ತು ಕೇವಲ ತಾತ್ಕಾಲಿಕವಾಗಿದೆ ಎಂದು ಅರಿವಾಯಿತು. ಆನಂತರ ದಟ್ಟ ಅರಣ್ಯವೊಂದರಲ್ಲಿ ಆಳವಾದ ಧ್ಯಾನದಲ್ಲಿ ಸತ್ಯವನ್ನು ಹುಡುಕುತ್ತಾ ಸಿದ್ಧಾರ್ಥನು ರಾಜಪ್ರಭುತ್ವದ ಜೀವನವನ್ನೇ ಸಂಪೂರ್ಣವಾಗಿ ತ್ಯಜಿಸಿದನು.

ಹೀಗೆ ಧ್ಯಾನಾಸಕ್ತನಾದ ಸಿದ್ಧಾರ್ಥನು ಜ್ಞಾನೋದಯ ಅಥವಾ ನಿರ್ವಾಣವನ್ನು ಪಡೆದ ನಂತರ ಅತ್ಯಂತ ಗೌರವಾನ್ವಿತ ‘ಗೌತಮ ಬುದ್ಧ' ಎಂಬ ಬಿರುದನ್ನು ಪಡೆದನು. ಬುದ್ಧನಿಗೆ ಜ್ಞಾನೋದಯವಾದ ಬುದ್ಧ ಗಯಾ ಗರಿಷ್ಠ ಸಂಖ್ಯೆಯ ಯಾತ್ರಾರ್ಥಿಗಳನ್ನು ಆಕರ್ಷಿಸುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.

ಬುದ್ಧ ಪೂರ್ಣಿಮಾ ಆಚರಣೆಗಳು

ಬುದ್ಧ ಪೂರ್ಣಿಮಾ ಆಚರಣೆಗಳು

ವರ್ಷಗಳು ಕಳೆದಂತೆ, ಬುದ್ಧ ಪೂರ್ಣಿಮಾ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿದೆ. ಈ ದಿನ ಆಯೋಜಿಸಲಾಗುವ ಕೆಲವು ಕಾರ್ಯಕ್ರಮಗಳಲ್ಲಿ ಬೋಧಿದ್ರೂಮ ಮೇಳ, ಸೂತ್ರಸ್ರಾಬನ, ಸೂತ್ರಪಾತ, ಅಷ್ಟಶೀಲ, ಪಂಚಶೀಲ, ಧಾರ್ಮಿಕ ಭಾಷಣಗಳು ಮತ್ತು ಬೌದ್ಧ ಧರ್ಮಗ್ರಂಥಗಳ ಚರ್ಚೆಗಳು, ಧ್ಯಾನ, ಬುದ್ಧನ ಪ್ರತಿಮೆಗಳಿಗೆ ಪೂಜೆ, ಮೆರವಣಿಗೆಗಳು ಮತ್ತು ಪ್ರಾರ್ಥನಾ ಪಠಣಗಳು ಸೇರಿವೆ. ವಾಸ್ತವವಾಗಿ, ಬುದ್ಧ ಪೂರ್ಣಿಮೆಯ ಆಚರಣೆಗಳು ಸಾಮಾನ್ಯವಾಗಿ ಮೂರು ದಿನಗಳಿಂದ ಒಂದು ವಾರದವರೆಗೆ ನಡೆಯುತ್ತವೆ.

ಬುದ್ಧ ಪೂರ್ಣಿಮೆಯ ಬುದ್ಧ ಗಯಾ/ ಬೋಧ ಗಯಾ

ಬುದ್ಧ ಪೂರ್ಣಿಮೆಯ ಬುದ್ಧ ಗಯಾ/ ಬೋಧ ಗಯಾ

ಬುದ್ಧ ಪೂರ್ಣಿಮಾ ದಿನದಂದು ಭೋದ ಗಯಾ ಹಬ್ಬದ ಸಂಭ್ರಮವನ್ನು ಧರಿಸುತ್ತದೆ. ಈ ಅತ್ಯಂತ ಜನಪ್ರಿಯ ತಾಣದಲ್ಲಿ ಲಕ್ಷಾಂತರ ಭಕ್ತರು ಈ ದಿನದಂದು ಬಂದು ಸೇರುತ್ತಾರೆ. ಬುದ್ಧನ ಪ್ರತಿಮೆಯನ್ನು ಪವಿತ್ರ ನೀರಿನಿಂದ ಸ್ನಾನ ಮಾಡಿ ಪೂಜಿಸಲಾಗುತ್ತದೆ, ಪ್ರತಿಮೆಯನ್ನು ಗೌರವಿಸಿ ಪ್ರಾರ್ಥಿಸಲಾಗುತ್ತದೆ ಜೊತೆಗೆ ಇನ್ನೂ ಹಲವಾರು ವಿಧಗಳಲ್ಲಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ಬುದ್ಧ ಪೂರ್ಣಿಮೆಯ ಬೋಧ ಗಯಾ

ಬುದ್ಧ ಪೂರ್ಣಿಮೆಯ ಬೋಧ ಗಯಾ

ಭಕ್ತಾಧಿಗಳ ಗುಂಪು ಬುದ್ಧ ಪೂರ್ಣಿಮಾ ದಿನದಂದು ಧ್ಯಾನಗಳಲ್ಲಿ ಭಾಗವಹಿಸುತ್ತಾರೆ ಮತ್ತು ತಮ್ಮ ಪೂಜ್ಯ ದೇವನ ಬೋಧನೆಗಳನ್ನು ಉತ್ಸಾಹದಲ್ಲಿ ಅನುಸರಿಸಲು ನಿರ್ಧರಿಸುತ್ತಾರೆ. ಬುದ್ಧ ಪೂರ್ಣಿಮಾ, ಭೂಮಿಯ ಮೇಲಿನ ಮನುಷ್ಯರ ಜೀವನಕ್ಕೆ ಬುದ್ಧನ ಮಹತ್ತರ ಕೊಡುಗೆಯನ್ನು ನೆನಪಿಸುತ್ತದೆ ಮತ್ತು ಬುದ್ಧನ ಸಂದೇಶವನ್ನು ವಿಶ್ವದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ತುಂಬಲು ಸಹಾಯ ಮಾಡುತ್ತದೆ.

ಬುದ್ಧ ಪೂರ್ಣಿಮಾ ದಿನದ ಚಟುವಟಿಕೆಗಳು

ಬುದ್ಧ ಪೂರ್ಣಿಮಾ ದಿನದ ಚಟುವಟಿಕೆಗಳು

ಬೌದ್ಧರು, ಬುದ್ಧನನ್ನು ಹೂವುಗಳು, ಧೂಪದ್ರವ್ಯ, ಹಣ್ಣುಗಳು ಮತ್ತು ಮೇಣದ ಬತ್ತಿಗಳಿಂದ ಪೂಜಿಸುತ್ತಾರೆ. ಪ್ರತಿಮೆಗಳಿಗೆ ಪವಿತ್ರ ನೀರಿನಿಂದ ಮಜ್ಜನ ಮಾಡಿಸಲಾಗುತ್ತದೆ. ಅಗತ್ಯವಿರುವವರಿಗೆ ಹಣ, ಆಹಾರ ಮತ್ತು ಇತರ ಉಪಯುಕ್ತತೆಗಳನ್ನು ವಿತರಿಸುವುದು ಸೇರಿದಂತೆ ಬೌದ್ಧರು ಈ ದಿನದಂದು ಸಾಕಷ್ಟು ದಾನ ಕಾರ್ಯಗಳನ್ನು ಕೈಗೊಳ್ಳುತ್ತಾರೆ.

ವಿವಿಧ ದೇಶಗಳಲ್ಲಿ ಬುದ್ಧ ಪೂರ್ಣಿಮಾ ದಿನದ ಚಟುವಟಿಕೆಗಳು

ವಿವಿಧ ದೇಶಗಳಲ್ಲಿ ಬುದ್ಧ ಪೂರ್ಣಿಮಾ ದಿನದ ಚಟುವಟಿಕೆಗಳು

ಬರ್ಮಾದಲ್ಲಿ, ಬೌದ್ಧರು ಬೋಧಿ ಮರಗಳಿಗೆ ನೀರುಣಿಸುತ್ತಾರೆ ಮತ್ತು ಈ ಮರದ ಕೆಳಗೆ ಬುದ್ಧನು ಪಡೆದ ಜ್ಞಾನೋದಯವನ್ನು ನೆನಪಿಸಿಕೊಳ್ಳುತ್ತಾ ಬುದ್ಧನಿಗೆ ನಮಸ್ಕರಿಸುತ್ತಾರೆ.

ಶ್ರೀಲಂಕಾದಲ್ಲಿ ಜನರು ತಮ್ಮ ಮನೆಗಳನ್ನು ತೈಲ ದೀಪಗಳಿಂದ ಅಲಂಕರಿಸುತ್ತಾರೆ. ಅವರು ಬಿದಿರಿನ ಕೋಲುಗಳಲ್ಲಿ ನಕ್ಷತ್ರಗಳನ್ನು ಮಾಡಿ ಪ್ರದರ್ಶಿಸುತ್ತಾರೆ.

ಭಾರತದ ಸಿಕ್ಕಿಂನ ಗ್ಯಾಂಗ್ಟಾಕ್ ಎಂಬ ಸ್ಥಳದಲ್ಲಿ, ಲಕ್ಷಾಂತರ ಸಂಖ್ಯೆಯ ಸನ್ಯಾಸಿಗಳ ವಿಶೇಷ ಮೆರವಣಿಗೆ ಈ ದಿನದಂದು ಬಹಳ ಜನಪ್ರಿಯ ಆಚರಣೆಯಾಗಿದೆ.

ಜಪಾನ್ನಲ್ಲಿ ಬೌದ್ಧರು ಧಾರ್ಮಿಕ ಸ್ನಾನ ಮಾಡಿದ ನಂತರ ಬುದ್ಧನ ಪ್ರತಿಮೆಯನ್ನು ವಸಂತ ಹೂವುಗಳಿಂದ ಅಲಂಕರಿಸುತ್ತಾರೆ.

English summary

Buddha Purnima 2020 : Date, History and Significance

Here we are discussing about Buddha Purnima: Here's Everything You Need To Know. Buddha was born and attained Maha Parinirvana (leaving the mortal coils) on the same day of Buddha Purnima having lived on this earth for eighty years. Read more.
X