Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ವಂಗಾ ಬಾಬಾ 2022ರ ಬಗ್ಗೆ ಹೇಳಿರುವ 6ರಲ್ಲಿ 2 ಭವಿಷ್ಯ ಈಗಾಗಲೇ ನಿಜವಾಗಿದೆ! ಉಳಿದ ಭವಿಷ್ಯ ವಾಣಿಗಳೇನು?
ವೆಂಗಾ ಬಾಬಾ ಭವಿಷ್ಯ ವಾಣಿಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ವೆಂಗಾ ಬಾಬಾ ಭವಿಷ್ಯವಾಣಿ ತುಂಬಾ ನಿಜವಾಗಿದೆ, ನಿಜವಾಗುತ್ತಿದೆ ಎಂಬ ಕಾರಣಕ್ಕೆ ವೆಂಗಾ ಬಾಬಾ ಭವಿಷ್ಯ ವಾಣಿಯ ಬಗ್ಗೆ ತಿಳಿಯಲು ಜನರ ಉತ್ಸಾಹ ತೋರುತ್ತಿದ್ದಾರೆ. ಈ ಜಗತ್ತಿನ ಭವಿಷ್ಯದ ಬಗ್ಗೆ ಹಲವಾರು ಭವಿಷ್ಯ ನುಡಿದಿರುವ ವೆಂಗಾ ಬಾಬಾ 5079ಕ್ಕೆ ಈ ಜಗತ್ತು ಅಂತ್ಯವಾಗಲಿದೆ ಎಂದು ಕೂಡ ಹೇಳಿದ್ದಾರೆ.

ಇದೀಗ ಅವರು 2022ರ ಕುರಿತು ಹೇಳಿರುವ ಎರಡು ಭವಿಷ್ಯ ವಾಣಿಗಳು ನಿಜವಾಗಿದ್ದು ವೆಂಗಾ ಬಾಬಾ ಹೆಸರು ಮತ್ತೆ ಟ್ರೆಂಡ್‌ನಲ್ಲಿದೆ. ಯಾರು ಈ ವೆಂಗಾ ಬಾಬಾ? ಇವರು ನುಡಿದಿರುವ ಭವಿಷ್ಯಗಳೇನು?
2022ರ ಬಗ್ಗೆ ಇವರು ಹೇಳಿರುವ ಯಾವ ಭವಿಷ್ಯ ನಿಜವಾಗಿದೆ ಎಂದು ನೋಡೋಣ ಬನ್ನಿ:

ಯಾರು ಈ ವೆಂಗಾ ಬಾಬಾ?
ವೆಂಗಾ ಬಾಬಾ ಬಲ್ಗೇರಿಯಾದ ನಿವಾಸಿ, 1911ರಲ್ಲಿ ಜನಿಸಿದ ಇವರು 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಕುರುಡರಾದರು. ಇವರಿಗೆ ಭವಿಷ್ಯ ನುಡಿಯುವ ಶಕ್ತಿ ಇದೆ ಎಂದ ಜನ ಬಲವಾಗಿ ನಂಬಿದ್ದಾರೆ, ಅದಕ್ಕೆ ಕಾರಣ ಅವರು ನುಡಿದ ಭವಿಷ್ಯಗಳಲ್ಲಿ ಶೇ. 85ರಷ್ಟು ನಿಜವಾಗಿದೆ. ವೆಂಗಾ ಬಾಬಾ ಹೇಳಿರುವ ಭವಿಷ್ಯದ ಬಗ್ಗೆ ಎಲ್ಲಿಯೂ ಲಖಿತ ಆಧಾರಗಳಿಲ್ಲ, ಆದರೆ ವೆಂಗಾ ಬಾಬಾರ ಅನುಯಾಯಿಗಳು ವೆಂಗಾ ಬಾಬಾ ಈ ರೀತಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ, ಅದರಂತೆ ಅವರು ನುಡಿದಿರುವ ಭವಷ್ಯಗಳು ತುಂಬಾ ನಿಜವಾಗಿದೆ. ಉಗ್ರು ಅಮೆರಿಕದ ಮೇಲೆ ನಡೆಸಿದ 9/11 ದಾಳಿ (ಅಮೆರಿಕದ ಎರಡು ಸ್ಟೀಲ್ ಬರ್ಡ್‌ಗಳು ನಾಶವಾಗಲಿದೆ ಎಂದು ಹೇಳಿದ್ದರು), ಪ್ರಿನ್ಸೆಸ್ ಡಯಾನಾ ಸಾವು, ಬರಾಕ್ ಒಬಾಮಾ ಅಧ್ಯಕ್ಷರಾಗುವ ಬಗ್ಎ, ಥೈಲ್ಯಾಂಡ್ ಸುನಾಮಿ ಇವೆಲ್ಲದರ ಬಗ್ಗೆ ಅವರು ನುಡಿದಿರುವ ಭವಿಷ್ಯ ನಿಜವಾಗಿದೆ.
ಇವರು 1996ರಲ್ಲಿ ಸ್ತನ ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದರು.

2022ರ ಕುರಿತು ಈ ರೀತಿ ಭವಿಷ್ಯ ನುಡಿದಿದ್ದರು
ವೈರಸ್ ದಾಳಿ, ಭೂಕಂಪ, ಸುನಾಮ ಬರಲಿದೆ, ಸೈಬೇರಿಯಾದಲ್ಲಿ ಹೊಸ ಮಾರಾಣಾಂತಿಕ ವೈರಸ್ ಹುಟ್ಟಲಿದೆ, ಇದರಿಂದ ಮನುಕುಲಕ್ಕೆ ತುಂಬಾ ಅಪಾಯ ಎದುರಾಗಲಿದೆ. ಜಗತ್ತಿನ ಹಲವಡೆ ಭೂಕಂಪಗಳು ಸಂಭವಿಸಲಿದೆ, ಜಗತ್ತು ಜಲಕ್ಷಾಮ ಎದುರಿಸಲಿದೆ ಎಂದು ನುಡಿದಿದ್ದರು.

ನಿಜವಾಗಿದೆ ವೆಂಗಾ ಬಾಬಾ ಭವಿಷ್ಯ
ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಜಲಕ್ಷಾಮ ಉಂಟಾದರೆ ಇನ್ನು ಕೆಲ ರಾಷ್ಟ್ರಗಳಲ್ಲಿ ಪ್ರವಾಹ ಉಂಟಾಗಲಿದೆ ಎಂಬ ಭವಿಷ್ಯ ನಿಜವಾಗಿದೆ.
ಪೋರ್ಚುಗಲ್, ಇಟಲಿ ದೇಶಗಳಲ್ಲಿ ಅತ್ಯಂತ ಭೀಕರ ಬರಗಾಲ ಎದುರಾಗಿದೆ. ಅದರಂತೆ ಏಷ್ಯಾನ್ ರಾಷ್ಟ್ರಗಳು ಹಾಗೂ ಆಸ್ಟ್ರೇಲಿಯಾದಲ್ಲಿ ಪ್ರವಾಹ ಉಂಟಾಗಿದೆ. ಭಾರತ, ಬಾಂಗ್ಲಾದೇಶ, ಈಶಾನ್ಯ, ಥಾಯ್ಲೆಂಡ್‌ನಲ್ಲಿ ಪ್ರವಾಹ ಉಂಟಾಗಿದೆ.

ಭಾರತದ ಬಗ್ಗೆ ನುಡಿದ ಭವಿಷ್ಯ ನಿಜವಾಗಿದೆ
ಭಾರತದಲ್ಲಿ 2022ರಲ್ಲಿ ತೀವ್ರ ತಾಪಮಾನ ಉಂಟಾಗಲಿದೆ, ಬೆಳೆಗಳ ಮೇಲೆ ಮೊಡತೆಗಳು ದಾಳಿ ಮಾಡಲಿವೆ ಎಂದು ನುಡಿದ ಭವಿಷ್ಯ ನಿಜವಾಗಿದೆ. ಈ ವರ್ಷ ಬೇಸಿಗೆಯಲ್ಲಿ ಹೀಟ್ ವೇವ್ ಉಂಟಾಗಿತ್ತು.

ಉಳಿದ ಭವಿಷ್ಯವಾಣಿಗಳೇನು?
* ಜನರು ಗ್ಯಾಜೆಟ್ ವ್ಯಸನಿಗಳಾಗುತ್ತಾರೆ
* ಸೈಬೇರಿಯಾದಲ್ಲಿ ಅಪಾಯಕಾರಿ ವೈರಸ್ ಪತ್ತೆಯಾಗಲಿದೆ
* ಏಲಿಯನ್‌ಗಳ ದಾಳಿಯಾಗಲಿವೆ
* ಭಾರೀ ಸುನಾಮಿ ಅಪ್ಪಳಿಸಲಿದೆ



Click it and Unblock the Notifications
