Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀವನದಲ್ಲಿ ಸಂತೋಷ, ಅದೃಷ್ಟ ನೆಲೆಯೂರಲು ಈ ಹರಳುಗಳನ್ನು ಧರಿಸಿ
ಇಂದಿನ ಜೀವನ ಹೇಗಾಗಿದೆ ಎಂದರೆ, ಎಲ್ಲಿಯಾದರೂ ಹಣ ಕೊಟ್ಟು, ಸಂತೋಷ, ಶಾಂತಿ, ಆರೋಗ್ಯ ಸಿಗುವುದೋ ಎಂದು ಹುಡುವಂತಾಗಿದೆ, ಏಕೆಂದರೆ ಒತ್ತಡದ ಬದುಕು, ಸ್ಪರ್ಧಾತ್ಮಕ ಜೀವನದ ಮಧ್ಯೆ ಮನುಷ್ಯನಿಗೆ ಮೂಲಭೂತವಾಗಿ ಅಗತ್ಯವಿರುವಂತಹುಗಳೇ ಕಾಣೆಯಾಗಿ ಹೋಗಿವೆ. ಸಣ್ಣ ಸೋಲನ್ನು ಎದುರಿಸುವ ಧೈರ್ಯವಿಲ್ಲಂತಾಗಿ, ಸದಾ ಅದೃಷ್ಟಕ್ಕಾಗಿಯೇ ಹಂಬಲಿಸುವಂತಹ ಪರಿಸ್ಥಿತಿ ಎದುರಾಗಿದೆ.
ಜೀವನದ ಈ ಪರಿಸ್ಥಿತಿಯನ್ನು ನಿವಾರಿಸಿ, ಶಾಂತಿ ನೀಡುವ ಪರಿಹಾರಗಳಲ್ಲಿ ಸ್ಪಟಿಕಧಾರಣೆಯೂ ಒಂದು. ಪ್ರಾಚೀನ ಕಾಲದಿಂದಲೂ, ರತ್ನದ ಕಲ್ಲು, ಸ್ಪಟಿಕ, ಹವಳ-ಮುತ್ತುಗಳು, ಮನಸ್ಸನ್ನು ಶಾಂತಗೊಳಿಸಿ, ನಮ್ಮಲ್ಲಿ ಧನಾತ್ಮಕತೆಯನ್ನು ಹುಟ್ಟುಹಾಕಲು ಬಳಕೆಯಾಗುತ್ತಿದೆ ಎಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ.
ಹಾಗಾದರೆ ನಿಮ್ಮ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಸಂತೋಷ ತುಂಬಿರಲು ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವ ಹರಳುಗಳನ್ನು ಧರಿಸಬೇಕು ಎಂಬುದನ್ನು ಇಲ್ಲಿ ನೋಡೋಣ.
ಮನಸ್ಸಿಗೆ ಶಾಂತಿ, ಬದುಕಿಗೆ ಅದೃಷ್ಟ ತರುವ ಹರಳುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮಾಣಿಕ್ಯ:
ಮಾಣಿಕ್ಯವು ಹೊಳೆಯುವ ಗುಲಾಬಿ ರತ್ನದ ಕಲ್ಲು. ಇದು ಸಾಂಪ್ರದಾಯಿಕ ರತ್ನವಾಗಿದ್ದು, ನವರತ್ನ ಕಲ್ಲುಗಳಲ್ಲಿ ಒಂದಾಗಿದೆ. ಈ ಕಲ್ಲನ್ನು ಇಂಗ್ಲೀಷಿನಲ್ಲಿ 'ರೂಬಿ ಸ್ಟೋನ್' ಎಂದು ಕರೆಯುತ್ತಾರೆ. ಉದ್ಯೋಗ, ಹಣಕಾಸಿನ ಸುಧಾರಣೆಗಾಗಿ ಜ್ಯೋತಿಷಿಗಳು ಇದನ್ನು ಧರಿಸಲು ಸೂಚಿಸುತ್ತಾರೆ. ಏಕೆಂದರೆ, ಮಾಣಿಕ್ಯವು ಸೂರ್ಯನೊಂದಿಗೆ ಸಂಬಂಧ ಹೊಂದಿದೆ. ನಾವು ಇದನ್ನು ಧರಿಸಿದಾಗ ಸೂರ್ಯನ ಆಶೀರ್ವಾದ ನಮ್ಮ ಮೇಲಿದ್ದು ಎಲ್ಲವೂ ಧನಾತ್ಮಕವಾಗಿ ನಡೆಯುತ್ತದೆ.
ಇದಲ್ಲದೆ, ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ವಿಶೇಷವಾಗಿ ರಕ್ತ ಪರಿಚಲನೆ, ಮೂಳೆ ಸಾಂದ್ರತೆ, ದೃಷ್ಟಿ ಹೆಚ್ಚಿಸುವಿಕೆ, ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವುದು. ಇದರ ಪ್ರಭಾವ ಆಂತರಿಕ ದೇಹವನ್ನು ಹೊಕ್ಕಿ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಇದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಮಾಡುವ ಕಲ್ಲಾಗಿದೆ.

ಮುತ್ತು:
ಹೆಚ್ಚಿನ ಹರಳುಗಳು ನಮ್ಮ ಸುತ್ತಮುತ್ತಲಿರುವ ನಕಾರಾತ್ಮಕತೆಯನ್ನು ದೂರಮಾಡಲು ಹೆಸರುವಾಸಿಯಾಗಿದ್ದರೂ, ಈ ಮುತ್ತು ಆಂತರಿಕ ಶಕ್ತಿಯನ್ನು ನಿರ್ಮಿಸುವಲ್ಲಿ ಗಮನಾರ್ಹವಾಗಿ ಪರಿಣಾಮಕಾರಿಯಾಗಿದೆ. ಮುತ್ತನ್ನು ಧರಿಸುವುದರಿಂದ, ಆತ್ಮವಿಶ್ವಾಸ ಹೆಚ್ಚಾಗುವ ಜೊತೆಗೆ ಸಂತೋಷ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಆಳವಾದ ಧನಾತ್ಮಕ ಚಿಂತನೆ, ಕೋಪದ ಮೇಲೆ ನಿಯಂತ್ರಣ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುತ್ತದೆ. ಇದನ್ನು ಉಂಗುರ ಅಥವಾ ಹಾರದ ರೂಪದಲ್ಲಾದರೂ ಧರಿಸಬಹುದು.

ಹಳದಿ ನೀಲಮಣಿ ಅಥವಾ ಗುರು ರತ್ನ:
ಗುರು ನೀಲಮಣಿಯು ವೈವಾಹಿಕ ಸಾಮರಸ್ಯವನ್ನು ಹೆಚ್ಚಿಸಲು ಮತ್ತು ಸಂಬಂಧ ಬಲಪಡಿಸುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಕುಟುಂಬದ ವಿಸ್ತಾರಕ್ಕೆ ಸಹಾಯಕವಾಗುವ ದೈವಿಕ ಕಲ್ಲುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಇದು, ಸಂತಾನೋತ್ಪತ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ಪುನರುಜ್ಜೀವನಗೊಳಿಸುತ್ತದೆ. ಜೊತೆಗೆ ಹಣಕಾಸಿನ ಸಮಸ್ಯೆಗಳು ಮತ್ತು ಅಸ್ತವ್ಯಸ್ತವಾಗಿರುವ ವೈವಾಹಿಕ ಜೀವನಶೈಲಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಅಗತ್ಯವಿರುವ ಪ್ರಶಾಂತತೆಯನ್ನು ನೀಡುವುದು.

ಪಚ್ಚೆ:
ಪಚ್ಚೆ ಕಲ್ಲು ಎಲ್ಲರಿಗೂ ತಿಳಿದಿರುವಂತೆ, ಉತ್ತಮವಾದ ಗುಣಪಡಿಸುವ ಶಕ್ತಿಯಿಂದ ತುಂಬಿರುತ್ತದೆ. ಇದನ್ನು ಧರಿಸುವವರಿಗೆ ಅದೃಷ್ಟ ಹೊತ್ತು ತರುತ್ತದೆ. ಕಣ್ಣುಗಳು, ಚರ್ಮ, ಮೂತ್ರಪಿಂಡ, ಸ್ನಾಯುಗಳು, ಕೀಲುಗಳು ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಜೊತೆಯಲ್ಲಿ, ಮಾತಿನ ಅಸ್ವಸ್ಥತೆಗಳು ಮತ್ತು ಉಸಿರಾಟದ ಅಲರ್ಜಿಗಳಿಗೂ ಪರಿಹಾರ ಒದಗಿಸುವುದು. ಪಚ್ಚೆಯ ಸಾಟಿಯಿಲ್ಲದ ಹಸಿರು ಬಣ್ಣವು ಮಾನಸಿಕ ಶಾಂತಿ, ದೈಹಿಕ ಸ್ಥಿರತೆ ಮತ್ತು ಭಾವನಾತ್ಮಕ ಸಮತೋಲನವನ್ನು ಒಳಗೊಂಡಂತೆ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಯುಗಯುಗಗಳಿಂದ, ರತ್ನದ ಕಲ್ಲುಗಳು ಸಂತೋಷದ ಒಂದು ಸಣ್ಣ ಬಂಡಲ್ ಆಗಿ ಕಾರ್ಯನಿರ್ವಹಿಸುತ್ತಿವೆ. ಜೀವನದಲ್ಲಿ ಎಲ್ಲವೂ ತಪ್ಪಾಗಿ ನಡೆಯುತ್ತಿರುವಾಗ ಅದನ್ನು ಸರಿಪಡಿಸಲು ನೀವು ಹರಳುಗಳ ಮೊರೆ ಹೋಗಬಹುದು. ಆದಾಗ್ಯೂ, ರತ್ನದ ಕಲ್ಲು ಖರೀದಿಸುವ ಅಥವಾ ಬಳಸುವ ಮೊದಲು ನೀವು ತಜ್ಞರೊಂದಿಗೆ ಸಮಾಲೋಚಿಸಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಮಾಹಿತಿಯಿಲ್ಲದ ತಪ್ಪು ನಿರ್ಧಾರಗಳು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು.



Click it and Unblock the Notifications