Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಜ್ಞಾನದ ಬ್ರಹ್ಮಾಂಡ ಭಗವದ್ಗೀತೆಯನ್ನ ಪ್ರತಿದಿನ ಓದೋದ್ರಿಂದ ಸಿಗೋ ಲಾಭಗಳೇನು?
ಹಿಂದೂ ಧಾರ್ಮಿಕ ಗ್ರಂಥವಾಗಿರುವ ಭಗವದ್ಗೀತೆಯಲ್ಲಿ ಜ್ಞಾನದ ಬ್ರಹ್ಮಾಂಡವೇ ಅಡಗಿದೆ. ಇಂತಹ ಭಗವದ್ಗೀತೆ ಓದಬೇಕು ಅಂತ ಬಹುತೇಕರಿಗೆ ಆಸೆ ಇರುತ್ತದೆ. ಅದರಲ್ಲಿ ಏನೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಅರ್ಥಮಾಡ್ಕೊಳೋಕೆ ಕಷ್ಟ ಅಂತ ಸುಮ್ಮನಾಗ್ತಾರೆ. ಆದ್ರೆ ಈ ಭಗವದ್ಗೀತೆಯನ್ನು ಪ್ರತಿದಿನ ಓದುವುದರಿಂದ ಎಂತಹ ಲಾಭವಿದೆ ಗೊತ್ತಾ? ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಭಗವದ್ಗೀತೆಯ ಓದುವಿಕೆಯಿಂದ ಇನ್ನೇನೆಲ್ಲಾ ಪ್ರಯೋಜನಗಳು ಇವೆ ಎಂಬದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಭಗವದ್ಗೀತೆಯನ್ನು ಪ್ರತಿದಿನ ಓದುವುದರಿಂದ ಎಂತಹ ಲಾಭವಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮನಸ್ಸನ್ನು ಸಮರ್ಥವಾಗಿ ನಿಯಂತ್ರಿಸಲು ಸಹಾಯ ಮಾಡುವುದು:
ಭಗವದ್ಗೀತೆಯು ಮನಸ್ಸಿನ ನಿಯಂತ್ರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ. ನಮ್ಮ ಮನಸ್ಸು ನಿರಂತರವಾಗಿ ಆಸೆಗಳನ್ನು ಹುಟ್ಟಿಸುತ್ತದೆ, ಆದರೆ ಅವುಗಳೆಲ್ಲವೂ ನೆರವೇರುವುದಿಲ್ಲ. ಅವುಗಳಲ್ಲಿ ಕೆಲವನ್ನು ಸಾಧಿಸುವಲ್ಲಿ ಯಶಸ್ವಿಯಾದರೆ,ನಮ್ಮಲ್ಲಿ ಹೆಮ್ಮೆ, ಅಹಂಕಾರ, ದುರಾಸೆ ಮೊದಲಾದ ಕೆಟ್ಟ ಗುಣಗಳನ್ನು ಮೈಗುಡಿಸುಕೊಳ್ಳುತ್ತೇವೆ. ಅದೇ ಆಸೆಗಳನ್ನು ಪೂರೈಸುವಲ್ಲಿ ವಿಫಲವಾದರೆ ಖಿನ್ನತೆ, ಆತಂಕ, ಕೊರಗಿನಲ್ಲಿ ಕೂತು ಬಿಡುತ್ತೇವೆ. ಆದ್ದರಿಂದ ಜೀವನದಲ್ಲಿಎಲ್ಲವನ್ನು ಎದುರಿಸುವ ವಿಧಾನ ಭಗವದ್ಗೀತೆಯು ಹೇಳಿಕೊಡುತ್ತದೆ. ನಮ್ಮ ಸಾಮರ್ಥ್ಯಗಳು, ಕೌಶಲ್ಯಗಳು, ಗುಣಗಳು, ಶಕ್ತಿ, ಬುದ್ಧಿವಂತಿಕೆ, ತೀಕ್ಷ್ಣತೆ ಇತ್ಯಾದಿಗಳನ್ನು ಭಗವದ್ಗೀತೆ ಕಲಿಸುತ್ತದೆ. ಆದ್ದರಿಂದ ನಾವು ಏನೇ ಆಗಿರಲಿ ಎಲ್ಲವೂ ದೇವರ ಕೊಡುಗೆ, ನಾವೇನೇ ಸಾಧಿಸಿದರೂ ಪ್ರತಿಯಾಗಿ ಭಗವಂತನಿಗೆ ಏನಾದರೂ ಅರ್ಪಿಸಬೇಕು. ಜೀವನದಲ್ಲಿ ದುರಾಸೆಗೆ ಜಾಗವಿಲ್ಲ. ಬದಲಾಗಿ ವಿನಯದಿಂದ ಎಲ್ಲವನ್ನೂ ಗಳಿಸಿಕೊಳ್ಳಬಹುದು. ಇದನ್ನು ಭಗವದ್ಗೀತೆ ಹೇಳಿಕೊಡುತ್ತದೆ.

ಆತ್ಮ ಜ್ಞಾನವನ್ನು ಒದಗಿಸುವುದು:
ಭಗವದ್ಗೀತೆಯಲ್ಲಿ, ಕೃಷ್ಣನು ಆತ್ಮದ ಬಗ್ಗೆ ಹೇಳಿದ್ದಾನೆ. ಆತ್ಮಕ್ಕೆ ಕೊನೆಯಿಲ್ಲ, ನಮ್ಮ ದೇಹಬಿಟ್ಟು, ಬೇರೆ ದೇಹ ಸೇರಿ ಪ್ರಯಾಣ ಮುಂದುವರಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಸಾವಿನ ಬಗ್ಗೆ ಭಯ ಇರುವವರು ತಮ್ಮ ಆತ್ಮ ಶಾಶ್ವತ ಎಂಬುದನ್ನ ಅರಿತುಕೊಳ್ಳಲು ಭಗವದ್ಗೀತೆ ಸಹಾಯ ಮಾಡುವುದು.

ಸರಿಯಾದ ಕರ್ಮವನ್ನು ಕಲಿಸುವುದು:
ಭಗವದ್ಗೀತೆಯನ್ನು ರಚಿಸುವಾಗ ಅದರಲ್ಲಿ ಸಾಕಷ್ಟು ಧರ್ಮೋಪದೇಶಗಳನ್ನು ದಾಖಲಿಸಲಾಗಿದೆ. ಆದ್ದರಿಂದ ಅದನ್ನು ಓದಿದಾಗ ನಮಗೆ ಸದಾಚಾರ ಮತ್ತು ಉತ್ತಮ ನಡವಳಿಕೆ ಕಲಿಯಲು ಸಾಧ್ಯವಾಗುತ್ತದೆ. ಭಗವದ್ಗೀತೆಯು ನಮ್ಮ ಚಟುವಟಿಕೆಗಳನ್ನು ಕರ್ಮ (ಕಾನೂನುಬದ್ಧ ಅಥವಾ ನೈತಿಕ ಕ್ರಿಯೆಗಳು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ), ವಿಕರ್ಮ (ಋಣಾತ್ಮಕ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಪಾಪದ ಕ್ರಿಯೆಗಳು) ಮತ್ತು ಅಕರ್ಮ (ಯಾವುದೇ ಪ್ರತಿಕ್ರಿಯೆಯನ್ನು ಉಂಟುಮಾಡದ ಕ್ರಿಯೆಗಳು) ಎಂದು ವರ್ಗೀಕರಿಸುತ್ತದೆ. ಭಗವದ್ಗೀತೆ ಓದುವಾಗ ಯಾವ ಕಾರ್ಯಗಳನ್ನು ಮಾಡಬೇಕು, ಯಾವುದು ಮಾಡಬಾರದು ಎಂಬುದು ತಿಳಿಯುತ್ತದೆ.

ಆಧ್ಯಾತ್ಮಿಕತೆಗೆ ದಾರಿ ಮಾಡಿಕೊಡುವುದು:
ಭಗವದ್ಗೀತೆಯಲ್ಲಿ ಕೃಷ್ಣನು ಆಧ್ಯಾತ್ಮಿಕತೆಯ ಬಗ್ಗೆ ವಿವರಿಸಿದ್ದಾನೆ. ಜನರ ಕರ್ಮವನ್ನು ಅವಲಂಬಿಸಿ, ಅವರ ಪ್ರತಿಫಲ ಹಾಗೂ ಶಿಕ್ಷೆಗಳನ್ನು ಆಧರಿಸಿ ಭಗವಂತ ನೀಡುತ್ತಾನೆ ಎಂದ ಹೇಳಲಾಗಿದೆ. ಆದ್ದರಿಂದ, ಭಗವಂತನನ್ನು ಒಲಿಸಿಕೊಳ್ಳಲು, ಆತನ ಭಾಗವಾಗಲು ಪ್ರಯತ್ನ ಈ ಭಾವನೆಯು ನಿಮ್ಮನ್ನು ಬಲಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಅಂತಿಮವಾಗಿ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ.

ಶಾಂತಿಯನ್ನು ಸ್ಥಾಪಿಸುವುದು:
ಭಗವದ್ಗೀತೆಯ 7 ನೇ ಅಧ್ಯಾಯದಲ್ಲಿ, ಮಾನವನ ಜೀವನದ ಗುರಿಯು ಭಕ್ತಿ ಮೂಲಕ "ಶರಣಾಗುವುದು" ಎಂಬುದನ್ನು ವಿವರಿಸುತ್ತದೆ. ಆತ್ಮವು ಪ್ರಾಮಾಣಿಕವಾಗಿ ಭಕ್ತಿಯನ್ನು ಅನುಸರಿಸಲು ಪ್ರಾರಂಭಿಸಿದಾಗ, ಜೀವನವು ಹೊಸತನದ ಕಡೆಗೆ ತಿರುಗುವುದು. ಇದು ಮನಸ್ಸಿನ ಶಾಂತಿ ಮತ್ತು ಆಲೋಚನೆಗಳ ಶುದ್ಧತೆ ಸೇರಿದಂತೆ ಹಲವು ವಿಧಗಳಲ್ಲಿ ವ್ಯಕ್ತವಾಗುತ್ತದೆ. ಈ ಅಭ್ಯಾಸವನ್ನು ಮುಂದುವರೆಸುತ್ತಾ ಹೋದರೆ, ಭಗವಂತನ ಸೇವೆಯಲ್ಲಿ ತನ್ಮಯತೆ ಹೆಚ್ಚಾಗಿ, ಶಾಂತಿ ಮತ್ತು ಆನಂದವನ್ನು ಪಡೆಯಬಹುದು.



Click it and Unblock the Notifications











