Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಒಂದು ಕೈ ಗಡಿಯಾರದ ಕಥೆ " ನಿಜಕ್ಕೂ ನನ್ನ ಕಣ್ಣಾಲಿಗಳು ಒದ್ದೆಯಾಗಿತ್ತು
ನಮ್ಮ ಸಾರ್ ಬಳಿ ಒಂದು ವಾಚ್ ಇತ್ತು. ಅದೇ ಓಬಿರಾಯನ ಕಾಲದ ಹಳೆಯದಾದ ಅನಲಾಗ್ ವಾಚ್. ಆ ವಾಚ್‌ನ ಬಣ್ಣ ಮಾಸಿ ಹೋಗಿತ್ತು. ಈಗಿನ ವಾಚ್‌ಗಳ ತರ ಶೈನಿಂಗ್ ಕೂಡ ಇಲ್ಲ, ಅಲ್ಲಲ್ಲಿ ಗೆರೆಗಳು ಬಿದ್ದಿದ್ವು. ಒಟ್ಟಿನಲ್ಲಿ ನೋಡೋಕ್ ಅಷ್ಟೊಂದು ಚೆನ್ನಾಗೂ ಇರ್ಲಿಲ್ಲ.

ನಾನು ಯಾವಾಗ್ಲೂ ಆಲೋಚನೆ ಮಾಡ್ತಿದ್ದೆ. ಅಷ್ಟಕ್ಕು ಸಾರ್ ಯಾಕೆ ಇಷ್ಟೊಂದ್ ಜಿಪುಣ? ಒಂದು ಹೊಸ ವಾಚ್ ತಗೊಂಡ್ರೆ ಏನ್ ಆಗುತ್ತೆ ಅಂತ. ಹೀಗಿರರ್ಬೇಕಾದ್ರೆ ಒಂದ್ಸಾರ್ ಸಡನ್ ಆಗಿ ನಮ್ಮ ಸಾರ್ ಅವರ ವಾಚ್ ಬಗ್ಗೆ ಹೇಳೋದಕ್ಕೆ ಶುರು ಮಾಡಿದ್ರು. ಅಯ್ಯೋ ಶುರು ಮಾಡ್ಬಿಟ್ರಪ್ಪ ಇವ್ರ ಹಳೇ ರಗಲೆ ಅಂತ ಮನಸ್ಸಿನಲ್ಲಿ ಗೊಣಗೋದಕ್ಕೆ ಶುರು ಮಾಡ್ದೆ.
ಆದ್ರೆ ನಮ್ಮ್ ಸಾರ್ ವಾಚ್ ಸ್ಟೋರಿ ಕೇಳಿದ್ಮೇಲೆ ಹೀಗೂ ಇರ್ಬದುದಾ? ಒಬ್ಬ ಮನುಷ್ಯ ಸಾಮಾನ್ಯ ಒಂದು ವಾಚ್ ಮೇಲೆ ಇಷ್ಟೊಂದು ಅಟ್ಯಾಚ್‌ಮೆಂಟ್ ಇಟ್ಕೊಳ್ಳೋದಕ್ಕೆ ಸಾಧ್ಯಾನಾ ಅಂತ ನನ್ನನ್ನೇ ನಾನು ಪ್ರಶ್ನೆ ಮಾಡ್ಕೊಂಡೆ.
ಹೌದು, ಆ ದಿನ ನಮ್ಮ್ ಸಾರ್ ನನ್ನ ಮನಸ್ಸಿನಲ್ಲಿ ಅದೆಷ್ಟೊ ದಿನಗಳಿಂದ ಕೇಳ್ಬೆಕು ಕೇಳ್ಬೇಕು ಅಂದುಕೊಂಡಿದ್ದ ಪ್ರಶ್ನೆಗೆ ಉತ್ತರ ಕೊಟ್ಬಿಟ್ರು. ಹಾಗೇ ಸುಮ್ಮನೆ ಮಾತ್ನಾಡ್ಬೇಕಾದ್ರೆ ನಿನಗೊತ್ತಾ ನಾನ್ಯಾಕೆ ಈ ಹಳೇ ವಾಚ್ ಅನ್ನ ಧರಿಸ್ತಿದ್ದೀನಿ ಅಂತ? ಅದಕ್ಕೆ ನಾನ್ ಹೇಳ್ದೆ May be ನೀವು ಅಪ್ಡೇಡ್ ಆಗಿಲ್ಲ ಅಂತ ತಮಾಷೆ ಚಟಾಕಿ ಹಾರಿಸಿದೆ.
ಅದಿಕ್ಕೆ ಅವ್ರು ಇದನ್ನ ಬಿಟ್ಟು ಮನೆಯಲ್ಲಿ ಇನ್ನೂ 3 ವಾಚ್‌ಗಳು ಇದೆ. ಆದ್ರೂ ಕೂಡ ಈ ಹಳೇ ವಾಚ್ ಮೇಲೆ ಎಲ್ಲಿಲ್ಲದ ಅಟ್ಯಾಚ್‌ಮೆಂಟ್. ಕೆಲವೊಂದು ಸಾರಿ ಈ ವಾಚ್ ಬಿಟ್ಟು ಬೇರೆ ವಾಚ್ ಹಾಕ್ಕೊಂಡು ಆಫೀಸ್‌ಗೆ ಹೋಗ್ಬೇಕು ಅಂತ ಅಂದು ಕೊಳ್ತಿರ್ತೀನಿ ಆದ್ರೆ ಮನಸ್ಸು ಕೇಳೋದೆ ಇಲ್ಲ. ಕೈ ಬೇರೆ ವಾಚ್ ಕಡೆ ಹೋದ್ರು ಕೂಡ ನನ್ನ ಒಳ ಮನಸ್ಸು ಮಾತ್ರ ಈ ಹಳೇ ವಾಚ್ ಕಡೆಗೆ ವಾಲಿಬಿಡುತ್ತೆ ಅಂದ್ರು.
ಹೌದು, ಈ ಅನಲಾಗ್ ವಾಚ್ 10 ವರ್ಷಗಳಿಂದ ನಮ್ಮ್ ಸಾರ್ ಜೊತೆಯಲ್ಲೇ ಇದ್ಯಂತೆ. ಇದ್ರ ಮೇಲೆ ಅದೇನೋ ಒಂದು ಥರ ಅಟ್ಯಾಚ್‌ಮೆಂಟ್ ಅಂತ ಹೇಳಿದ್ರು. ಅಷ್ಟಕ್ಕು ಈ ವಾಚ್ ನಮ್ಮ್ ಸಾರ್‌ಗೆ ಗಿಫ್ಟ್ ಆಗಿ ಸಿಕ್ಕಿರೋದು. ಅದ್ರ ಹಿಂದೆ ಒಂದು ದೊಡ್ಡ ಸ್ಟೋರಿನೇ ಇದೆ. ಒಂದ್ಸಾರ್ ಆಫೀಸ್‌ನಲ್ಲಿ ಅವ್ರ ಬಾಸ್ ಬಂದ್ಬಿಟ್ಟು ನಾನೊಂದು ಪ್ರಾಜೆಕ್ಟ್ ಶುರು ಮಾಡ್ತಿದ್ದೀನಿ ಅದಿಕ್ಕೆ ನಿಮ್ಮ್ ಬಳಿ ಯಾವುದಾದ್ರು ಯುನಿಕ್ ಐಡಿಯಾಗಳಿದ್ರೆ ಕೊಡ್ಬಹುದು ಅಂತ ಹೇಳಿದ್ರಂತೆ.
ಎಲ್ಲಾರೂ ಒಬ್ಬೊರಾಗೇ ಮುಂದೆ ಬಂದು ಅವರ ಐಡಿಯಾಗಳನ್ನು ಬೋರ್ಡ್ ಮೇಲೆ ಬರೆಯೋದಕ್ಕೆ ಶುರು ಮಾಡ್ತಾರಂತೆ ಆದ್ರೆ ಕೊನೆಗೆ ನಮ್ಮ್ ಸಾರ್ ಐಡಿಯಾ ಅವರ ಬಾಸ್‌ಗೆ ತುಂಬಾನೇ ಇಷ್ಟ ಆಗಿ ಈ ವಾಚ್‌ನ ಗಿಫ್ಟ್ ಆಗಿ ಪಡ್ಕೊತಾರಂತೆ. ಅದನ್ನ ಅವರು ತುಂಬಾನೇ ಗರ್ವ ಪಡ್ಕೊಂಡು ನನ್ ಜೊತೆ ಹೇಳ್ಕೊಂಡು. ಕೇಳಿ ತುಂಬಾನೇ ಖುಷಿ ಆಯ್ತು.
ಮನುಷ್ಯನ ಭಾವನೆಗಳೇ ಹಾಗೇ ಅಲ್ವಾ? ಕೆಲವೊಂದು ಸಲ ಚಿಕ್ಕ ಚಿಕ್ಕ ವಿಷಯದಲ್ಲೇ ನಾವು ಎಷ್ಟೊಂದು ಖುಷಿ ಪಡ್ಕೊತ್ತೀವಿ. ಈಗೆಲ್ಲಾ ಸ್ಮಾರ್ಟ್ ವಾಚ್‌ಗಳು ಮಾರ್ಕೆಟ್‌ನಲ್ಲಿ ರಾರಾಜಿಸುತ್ತಿದ್ರೂ ಕೂಡ ಅನಾಲಾಗ್ ವಾಚ್‌ಗಳ ಜೊತೆಗೆ ಇರುವ ಆ ಬಂಧ ಖಂಡಿತ ಬಿಟ್ಟು ಹೋಗೋದಿಲ್ಲ. ಅದು ನಮ್ಮ ಪ್ರೀತಿಪಾತ್ರರಿಂದ ಬಂದ ಉಡುಗೊರೆ ಇರ್ಬಹುದು, ಅಪ್ಪನ ಪ್ರೀತಿ, ಅಮ್ಮನ ಮಮತೆ ಅಥವಾ ಅಣ್ಣನ ಅಕ್ಕರೆಯ ಉಡುಗೊರೆಯಾಗಿರಬಹುದು.
ಹಿರಿಯ ನಾಗರೀಕರ ಅಚ್ಚುಮೆಚ್ಚಿನ ಅನಲಾಗ್ ವಾಚ್
ಸಾಮಾನ್ಯವಾಗಿ ಪಾರ್ಕ್‌ನಲ್ಲಿ ನಾವು ಹಿರಿಯ ನಾಗರಿಕರು ವಾಕ್ ಮಾಡೋದನ್ನ ಗಮನಿಸಿಯೇ ಇರ್ತಿವಿ. ಅನೇಕ ಜನರ ಕೈಯಲ್ಲಿ ಸ್ಮಾರ್ಟ್ ವಾಚ್ ಇರೋದನ್ನ ಗಮನಿಸಿ ಅವರನ್ನ ನಾನು ಪ್ರಶ್ನಿಸಿದ್ದೆ, ಅನಲಾಗ್ ವಾಚ್ ಬಿಟ್ಟು ಸ್ಮಾರ್ಟ್ ವಾಚ್‌ಗೆ ಅಪ್ಡೇಟ್ ಆಗಿದ್ದೀರ ಅಲ್ಲಾ ಹೇಗ್ ಅನ್ನಿಸ್ತಿದೆ ಅಂತನೂ ಕೇಳಿದ್ದೆ. ಆದ್ರೆ ಅದ್ರಲ್ಲಿ 95 ರಷ್ಟು ಜನ ಸ್ಮಾರ್ಟ್ ವಾಚ್‌ನ ಇಷ್ಟಪಟ್ಟು ಹಾಕಿರ್ಲಿಲ್ಲ ಬದಲಾಗಿ ಮಗನೋ, ಮಗಳೋ ಗಿಫ್ಟ್ ಕೊಟ್ಟು ಇದನ್ನ ಹಾಕ್ಕೊಳ್ಳೆಬೇಕು ಅಂತ ಒತ್ತಾಯ ಮಾಡಿದ್ದಕಷ್ಟೇ ಧರಿಸಿದ್ರಂತೆ. ನಿಜಅಲ್ವಾ? ಕಾಲ ಎಷ್ಟೇ ಮುಂದುವರೆದ್ರೂ, ಜನ ಎಷ್ಟೇ ಅಪ್ಡೇಟ್ ಆದ್ರೂ ಕೂಡ ನಮ್ಮ ಹಳೆಯ ನೆನೆಪನ್ನ ಬಿಟ್ಟುಕೊಡೋದಿಕ್ಕೆ ಸಾಧ್ಯಾನೇ ಇಲ್ಲ ಅಲ್ವಾ?
ಅನಲಾಗ್ ವಾಚ್‌ನಿಂದಾಗೋ ಉಪಯೋಗಗಳೇನು?
* ಹೊಸದಾಗಿ ಏನೇ ಬಂದ್ರೂ ಕೂಡ ಹಳೆಯದರ ಜೊತೆಗಿದ್ದ ಒಡನಾಟ ಎಂದಿಗೂ ಬಿಟ್ಟು ಹೋಗಲ್ವ. ಸ್ಮಾರ್ಟ್‌ವಾಚ್ ಪ್ರತಿಸಲ ಚಾರ್ಜ್ ಮಾಡ್ತಾನೆ ಇರ್ಬೇಕು. ಆದ್ರೆ ಅನಲಾಗ್‌ವಾಚ್ ಒಂದ್ಸಾರಿ ಖರೀದಿ ಮಾಡಿದ್ಮೇಲೆ ಅದೆಷ್ಟೋ ವರ್ಷಗಳ ಕಾಲ ಬ್ಯಾಟರಿ ಚೇಂಜ್ ಮಾಡ್ಬೇಕಾದ ಅವಶ್ಯಕತೆನೇ ಇಲ್ಲ.
* ಜಿಪಿಎಸ್ ವಿಚಾರಕ್ಕೆ ಬರೋದಾದ್ರೆ ಒಂದು ವೇಳೆ ನೀವೇನಾದ್ರು ಜಿಪಿಎಸ್ ಸಹಾಯದಿಂದ ಎಲ್ಲಾದ್ರು ಟ್ರಾವೆಲ್ ಮಾಡ್ತಿದ್ರೆ ಸಡನ್ ಆಗಿ ಸ್ಮಾರ್ಟ್ ವಾಚ್ ಬ್ಯಾಟರಿ ಮುಗಿತು ಅನ್ಕೊಳಿ ಅಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಹುಡುಕಲೇಬೇಕು ಇಲ್ಲ ಅಂದ್ರೆ ತುಂಬಾನೇ ಕಷ್ಟ. ಆದ್ರೆ ಅನಲಾಗ್ ವಾಚ್‌ನಲ್ಲಿ ಹಾಗಲ್ಲ ನೀವು ಸೂರ್ಯನಿಂದ ಯಾವ ಗೋಳಾರ್ಧದಲ್ಲಿದ್ದೀರಾ ಅನ್ನೋದು ಗೊತ್ತಿದ್ರೆ ಸಾಕು ಅನಲಾಗ್ ವಾಚ್ ಸಹಾಯದಿಂದ ಆರಾಮಾಗಿ ನೀವು ಅಂದುಕೊಂಡ ಜಾಗ ತಲುಪಬಹುದು.
* ಅನಲಾಗ್‌ವಾಚ್ ಮಹಿಳೆಯರಿಗಾಗಲಿ ಅಥವಾ ಪುರುಷರಿಗಾಗಲಿ ಕ್ಲಾಸಿ ಲುಕ್ ನೀಡುತ್ತೆ. ನಿಮ್ಮ ಕೈಗೆ ಹೊಂದುವಂತಹ ವಾಚ್‌ನ ಸೆಲೆಕ್ಟ್ ಮಾಡಿದ್ರೆ ಸಾಕು. ಅದ್ರಲ್ಲೂ ಸ್ಟೈನ್‌ಲೆಸ್ ಸ್ಟೀಲ್ ಬ್ರಾಂಡ್ ವಾಚ್‌ಗಳ ಬಗ್ಗೆ ಅಂತೂ ಹೇಳೋದೆ ಬೇಡ. ಯಾವ ವಿಧವಾದ ಔಟ್‌ಫಿಟ್ ಆದ್ರೂ ಅದಕ್ಕೆ ಚೆನ್ನಾಗಿ ಹೋಲುತ್ತದೆ.
* ಅನಲಾಚ್ ವಾಚ್‌ಗಿರುವ ಘನತೆಯೇ ಬೇರೆಯದ್ದು ಸಾವಿರ ರೂಪಾಯಿಂದ ಹಿಡಿದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಅನಲಾಗ್‌ವಾಚ್‌ಗಳು ಮಾರ್ಕೆಟ್‌ನಲ್ಲಿ ಲಭ್ಯವಿದೆ. ನಮ್ಮ ಪ್ರೀತಿಪಾತ್ರರಿಗೆ ಎಕ್ಸ್‌ಪೆನ್ಸಿವ್ ಗಿಫ್ಟ್ ಏನಾದ್ರು ಕೊಡ್ಬೇಕಂದ್ರೆ ಖಂಡಿತ ಅನಲಾಗ್ ವಾಚ್‌ಗಳೇ ನಮ್ಮ ಮೊದಲ ಆಧ್ಯತೆ. ಸ್ಮಾರ್ಟ್‌ವಾಚ್‌ಗಳ ಹಾಗೇ ಅನಲಾಗ್ ವಾಚ್‌ಗಳಿಗೆ ಸಿಕ್ಕಾಪಟ್ಟೆ ಕೇರ್ ಮಾಡಬೇಕಾದ ಅವಶ್ಯಕತೆ ಖಂಡಿತ ಇಲ್ಲ.
* ಸ್ಮಾರ್ಟ್‌ವಾಚ್ ಸರಿಯಾದ ಸಮಯ, ನಿಮಿಷ, ಸೆಕೆಂಡ್ ಅಷ್ಟೇ ಯಾಕೆ ಮಿಲಿ ಸೆಕೆಂಡ್‌ಗಳ ಬಗ್ಗೆನೂ ನಮಗೆ ಮಾಹಿತಿ ಒದಗಿಸುತ್ತದೆ. ಇನ್ನೂ ಹಾರ್ಟ್‌ಬೀಟ್, ಸ್ಟೆಪ್‌ಕೌಂಟ್ ಹೀಗೆ ಸಿಕ್ಕಾಪಟ್ಟೆ ಫೀಚರ್‌ಗಳು ಇದೆ. ಆದ್ರೆ ಇದ್ರಿಂದ ನಮಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಏಕೆಂದರೆ ಅನಲಾಗ್ ವಾಚ್‌ನೊಂದಿಗೆ ನಾವು ಹೆಚ್ಚು ಜಾಗೃತರಾಗುತ್ತೇವೆ ಮತ್ತು ಸಮಯವನ್ನು ಸರಿಯಾಗಿ ಗ್ರಹಿಸುತ್ತೇವೆ. ಅನಲಾಗ್ ಕೈಗಡಿಯಾರಗಳಲ್ಲಿ ಪ್ರತಿ ನಿಮಿಷ ಮತ್ತು ಸೆಕೆಂಡ್ ಅನ್ನು ಅರ್ಥೈಸಿಕೊಳ್ಳಲು ನಮ್ಮ ಜ್ಞಾನದ ಅವಶ್ಯಕತೆ ಇರುತ್ತದೆ. ಇದು ನಿಮ್ಮ ಗ್ರಹಿಕೆಯ ಮೇಲೆ ಪರಿಣಾಮವನ್ನು ಬೀರುತ್ತದೆ.
ನಮ್ಮಲೂ ಅನೇಕ ಜನ ಇನ್ನೂ ಅನಲಾಗ್ ವಾಚ್‌ಗಳ ಅಭಿಮಾನಿಗಳು ಇದ್ದಾರೆ. ಅವರೆಲ್ಲಾ ತುಂಬಾನೇ ಇಷ್ಟಪಟ್ಟು ಅನಲಾಗ್ ವಾಚ್‌ಗಳನ್ನು ಖರೀದಿಸುತ್ತಾರೆ. ನಿಮ್ಮಲ್ಲೂ ಅನಲಾಗ್ ವಾಚ್‌ಗಳಿದ್ಯಾ? ಹಾಗಾದ್ರೆ ಈ ಆರ್ಟಿಕಲ್ ಓದ್ಬೇಕಾದ್ರೆ ಖಂಡಿತ ನಿಮ್ಮ ಮನಸ್ಸಿಗೆ ಹತ್ತಿರವಾದ ಅನಲಾಗ್ ಕೈಗಡಿಯಾರವನ್ನು ನೆನಪಿಸಿಕೊಂಡಿರ್ತೀರ ಅಲ್ವಾ?



Click it and Unblock the Notifications
