Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಚಾಣಕ್ಯ ಪ್ರಕಾರ ಈ 4 ತಪ್ಪು ಮಾಡುವವರಿಗೆ ಲಕ್ಷ್ಮಿ ಒಲಿಯುವುದೇ ಇಲ್ಲ
ಎಲ್ಲರದ್ದು ಒಂದೊಂದು ತರಹದ ಆಸೆಗಳು. ಅದ್ರಲ್ಲೂ ಅನೇಕರಿಗೆ ದುಡ್ಡು ಮಾಡೋದೆ ದೊಡ್ಡ ಕನಸು. ಇನ್ನು ದುಡ್ಡು ಇದ್ದವನಿಗಂತೂ ಅದನ್ನು ಕಾಪಾಡಿಕೊಳ್ಳೋದೆ ಬಹುದೊಡ್ಡ ಜವಾಬ್ದಾರಿ. ಅದ್ರಲ್ಲಿ ಇನ್ನೂ ಕೆಲವರಂತೂ ಶ್ರೀಮಂತಿಕೆಯಿಂದ ಮೆರೆದಾಡಿ ಕೊನೆಗೆ ಎಲ್ಲವನ್ನೂ ಕಳೆದುಕೊಂಡವರನ್ನು ನೋಡಿರ್ತಿವಿ.

ಆಗರ್ಭ ಶ್ರೀಮಂತನೊಬ್ಬ ಏಕಾಏಕಿ ಎಲ್ಲವನ್ನು ಕಳೆದುಕೊಳ್ಳೋದಕ್ಕೆ ಕಾರಣವೇನು? ಈ ತಪ್ಪುಗಳನ್ನ ಮಾಡಲೇಬೇಡಿ ಅಂಥ ಚಾಣಕ್ಯ ಹೇಳಿದುದರ ಹಿಂದಿನ ಉದ್ದೇಶವೇನು? ಚಾಣಕ್ಯನ ಪ್ರಕಾರ ಈ ತಪ್ಪುಗಳನ್ನ ಮಾಡಿದ್ರೆ ದಾರಿದ್ರ್ಯ ಬರುತ್ತಾ? ಹೇಳ್ತೀವಿ.
1. ದೇವರಿಗೆ ಶ್ರೀಗಂಧವನ್ನು ಈ ರೀತಿ ಹಚ್ಚಬೇಡಿ
ಆಚಾರ್ಯ ಚಾಣಕ್ಯ ಜನರಿಗೆ ಒಂದು ಕಿವಿ ಮಾತನ್ನು ಹೇಳಿದ್ದಾರೆ. ಅದೇನೆಂದರೆ ದೇವರ ಕೆಲಸ ಮಾಡುವಾಗ ಉದಾಸೀನ ತೋರಬೇಡಿ. ಕೆಲವರು ದೇವರಿಗೆ ಹಚ್ಚುವ ಶ್ರೀಗಂಧವನ್ನು ಜನ ಸಾಮಾನ್ಯರು ಬಳಸುವ ಕಲ್ಲಿನಲ್ಲೇ ಅರೆಯುತ್ತಾರೆ. ಹೀಗೆ ಮಾಡುವುದು ತಪ್ಪು ಅಂತ ಚಾಣಕ್ಯ ಹೇಳುತ್ತಾರೆ. ದೇವರಿಗಾಗಿ ಶ್ರೀಗಂಧ ಅರೆಯುವ ಕಲ್ಲನ್ನು ನಾವು ಪ್ರತ್ಯೇಕವಾಗಿ ಇಡಬೇಕು. ಬೇರೆ ಯಾವುದಕ್ಕೂ ಅದನ್ನು ಬಳಸಬಾರದು. ಜೊತೆಗೆ ದೇವರಿಗಾಗಿ ಮೀಸಲಿಟ್ಟ ಶ್ರೀಗಂಧವನ್ನು ಮಾನವರು ಮೈಗೆ ಹಚ್ಚೋದಕ್ಕೆ ಬಳಸಬಾರದು. ಭಗವಾನ್ ಇಂದ್ರನ ಪ್ರಕಾರ ಕಲ್ಲಿಗೆ ಶ್ರೀಗಂಧ ಹಚ್ಚುವುದರಿಂದ ನಮ್ಮಲ್ಲಿರುವ ಸಂಪತ್ತು ನಾಶವಾಗುತ್ತಂತೆ. ಹಾಗಾಗಿ ದೇವರಿಗೆ ಶ್ರೀಗಂಧದ ಅಭಿಷೇಕ ಮಾತ್ರ ಮಾಡಬೇಕಂತೆ.
2. ಬಲಶಾಲಿಗಳ ಜೊತೆ ಯುದ್ಧಕ್ಕೆ ನಿಂತವನು
ಚಾಣಕ್ಯನ ಪ್ರಕಾರ ನಮಗಿಂತ ಬಲಶಾಲಿಗಳ ಜೊತೆಗೆ ಹಗೆ ಸಾಧಿಸಬಾರದು. ಒಂದಾ ನಿಮಗಿಂತ ಬಲಶಾಲಿಗಳ ಜೊತೆಗೆ ನೀವು ಯುದ್ಧಕ್ಕೆ ನಿಂತಿದ್ದೇ ಆದರೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತದೆ. ಮತ್ತು ನಿಮ್ಮ ಆಯುಷ್ಯವು ಕಡಿಮೆಯಾಗುತ್ತಂತೆ. ಲಕ್ಷ್ಮೀಯು ಅಂತವರ ಜೊತೆಗೆ ನಿಲ್ಲುವುದು ಇಲ್ಲವಂತೆ. ದುರ್ಬಲನು ಪ್ರಬಲ ಜೊತೆಗೆ ಹಗೆ ಸಾಧಿಸಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಆತನ ಜೊತೆಗೆ ಸ್ನೇಹ ಬೆಳೆಸಿಕೊಂಡು ಖೆಡ್ಡಾ ತೋಡಬಹುದು. ಹೀಗೆ ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟರೆ ಗೆಲ್ಲುತ್ತಾನೆ ಮತ್ತು ಅವನ ಸಂಪತ್ತು ಕೂಡ ಹೆಚ್ಚಾಗುತ್ತದೆ.
3. ಅಧರ್ಮದಲ್ಲಿ ನಡೆದವರಿಗೆ ಸಂಕಷ್ಟ
ಧರ್ಮ ಮಾರ್ಗವನ್ನು ಬಿಟ್ಟು ಅಧರ್ಮದಲ್ಲಿ ನಡೆಯುವವರನ್ನು ಲಕ್ಷ್ಮೀ ಖಂಡಿತ ಬಿಟ್ಟು ಹೋಗುತ್ತಾಳೆ. ಯಾವ ವ್ಯಕ್ತಿ ಧರ್ಮ ಮಾರ್ಗದಲ್ಲಿ ನಡೆಯಲು ಶುರು ಮಾಡುತ್ತಾನೋ ಅವನ ಹಿಂದೆ ಲಕ್ಷ್ಮೀ ಬರುತ್ತಾಳೆ. ಒಂದು ವೇಳೆ ಲಕ್ಷ್ಮೀ ಅಲ್ಲಿಂದ ಹೊರಟಳು ಅಂದರೆ ಆತ ಅಧರ್ಮದಲ್ಲಿ ನಡೆಯುತ್ತಿದ್ದಾನೆ ಎಂದರ್ಥ. ಮನುಷ್ಯ ತನ್ನ ಜೀವನದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇಲ್ಲವಾದರೆ ಆತನ ಸಾಮ್ರಾಜ್ಯ ನಾಶವಾಗೋದು ಖಂಡಿತ.
4. ಗಳಿಸಿದ ದುಡ್ಡನ್ನು ಧರ್ಮಕಾರ್ಯಕ್ಕೆ ಬಳಸದವರು
ಚಾಣಕ್ಯನ ಪ್ರಕಾರ ಶ್ರೀಮಂತ ವ್ಯಕ್ತಿ ಯಾವಾಗಲು ಗಾಂಭಿರ್ಯತೆಯಿಂದ ಇರಬೇಕು. ಮತ್ತು ಗಳಿಸಿದ ಹಣವನ್ನು ಜಾಗರೂಕತೆಯಿಂದ ಇಡಲು ಮರೆಯಬಾರದು. ಗಳಿಸಿದ ಹಣದಲ್ಲಿ ಕೊಂಚ ಭಾಗವನ್ನು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗೆ ಬಳಸಬೇಕು. ಇದರಿಂದ ಆತನ ಗೌರವ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಯಾರು ಗಳಿಸಿ ದುಡ್ಡನ್ನು ಹಾಗೆಯೇ ಗಂಟುಕಟ್ಟುತ್ತಾನೋ ಆತನ ಬಳಿ ದುಡ್ಡ ಉಳಿಯೋದಿಲ್ಲ, ನಿಧಾನವಾಗಿ ಸಾಮ್ರಾಜ್ಯ ನಾಶವಾಗುತ್ತದೆ. ಗಳಿಸಿದ ದುಡ್ಡನ್ನು ಉತ್ತಮ ಕೆಲಸಕ್ಕೆ ಬಳಸಿದಾಗ ಮಾತ್ರ ಸಂಪತ್ತು ವೃದ್ಧಿಯಾಗುತ್ತದೆ.
ಈ ಮೇಲಿನ ನಾಲ್ಕು ಗುಣಗಳು ನಿಮ್ಮಲ್ಲಿದ್ದರೆ ಖಂಡಿತ ನಿಮ್ಮ ಸಾಮ್ರಾಜ್ಯ ನಾಶವಾಗುತ್ತದೆ. ಹೀಗಾಗಿ ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಿ. ಒಳ್ಳೆಯವರಿಗೆ ಎಂದಿಗೂ ಸೋಲಿಲ್ಲ.



Click it and Unblock the Notifications



