Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್‌ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ಹಾಟ್ ಮತ್ತು ಫಿಟ್ ಆಗಿರುವ 15 ಸೆಲೆಬ್ರಿಟಿಗಳು
ಕೆಲವು ಸೆಲೆಬ್ರಿಟಿಗಳು ನೋಡಿದರೆ ಅಸೂಯೆ ಮೂಡುವುದು ಖಂಡಿತ. ಅವರ ಮೈಮಾಟಕ್ಕೆ ಮನ ಸೋಲದವರೇ ಇಲ್ಲ. ಅವರು ಆ ರೀತಿಯ ಮೈಮಾಟ ಪಡೆಯಲು ಅದರ ಹಿಂದಿರುವ ಪರಿಶ್ರಮ ಕೂಡ ಕಾರಣ. ಹೀಗೆ ಸುಂದರವಾದ ಫಿಟ್ ಆದ ದೇಹವನ್ನು ಹೊಂದಿದ ಮಹಿಳೆಯರ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಗ್ಲಾಮರ್,ಸ್ಟೈಲ್, ಹ್ಯಾಂಡ್‌ಸಮ್ ಇವೆಲ್ಲವುಗಳಿಗಿಂತ ಒಬ್ಬ ನಟಿ ತನ್ನ ಸೆಕ್ಸಿ ದೇಹಕ್ಕೆ ಹೆಸರುವಾಸಿಯಾಗಿರುತ್ತಾಳೆ. ಇವುಗಳನ್ನು ಸುಲಭವಾಗಿ ಪಡೆಯಬಹುದು ಎಂದು ತಿಳಿಯಬೇಡಿ, ಈ ದೇಹಕ್ಕಾಗಿ ಆಕೆ ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಈ ರೀತಿಯ ಸೆಕ್ಸಿ ದೇಹ ತಮ್ಮದಾಗಿಸಿಕೊಳ್ಳಲು ಸಾಕಷ್ಟು ವ್ಯಾಯಾಮ ಮಾಡಬೇಕಾಗುತ್ತದೆ ಹಾಗೆಯೇ ಆಹಾರ ಪದ್ಧತಿ ಕಾಪಾಡಿಕೊಂಡು ಬರಬೇಕಾಗುತ್ತದೆ.
ಬ್ಯುಸಿ ಇರುವಾಗಲೂ ಕೂಡ ಈ ರೀತಿ ವ್ಯಾಯಾಮಕ್ಕೆ ಸಮಯ ಮೀಸಲಾಗಿಡುವುದು ಸುಲಭದ ಕೆಲಸವಲ್ಲ. ಈ ರೀತಿ ಒತ್ತಡದ ಕೆಲಸದ ನಡುವೆ ತನ್ನ ದೇಹವನ್ನು ಕಾಪಾಡಿಕೊಂಡು ಬರುತ್ತಿರುವ ಮಹಿಳೆಯರಿಗೆ ಒಂದು ಗೌರವಾರ್ಪಣೆ ನೀಡೋಣ. ಬನ್ನಿ ಅಂತಹ ಸೆಲೆಬ್ರಿಟಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಕತ್ರಿನಾ ಕೈಫ್
ಚಿಕಣಿ ಚಮೇಲಿ ಹಾಡಿಗೆ ಆಕೆಯ ದೇಹ ಹೇಗೆ ಬಳುಕಿತು ಎಂಬುದನ್ನು ಎಲ್ಲರೂ ನೋಡಿರುತ್ತಾರೆ. ಆ ರೀತಿಯ ದೇಹವನ್ನು ಪಡೆಯಲು ಆಕೆ ಸಾಕಷ್ಟು ಕಷ್ಟ ಪಟ್ಟಿರುತ್ತಾರೆ. ಆಕೆ ತನ್ನ ಕಾಂತಿಯನ್ನು ಮತ್ತು ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸ್ವಿಮ್ಮಿಂಗ್, ಸೈಕ್ಲಿಂಗ್, ಯೋಗ ಮುಂತಾದವುಗಳನ್ನು ಸತತವಾಗಿ ಮಾಡುತ್ತಾ ಬಂದಿದ್ದಾರೆ.

ಕೇಟ್ ಮಿಡಲಟನ್
ಡಚಸ್ ಆಫ್ ಕೇಂಬ್ರಿಡ್ಜ್ ಆಗಿರುವ ಈಕೆ ಈಗ ತಾನೇ ಹುಟ್ಟಿರುವ ಮಗುವಿನ ತಾಯಿ. ಈಕೆ ನೋಡಲು ಸುಂದರವಾಗಿ ಮಾತ್ರವಲ್ಲ ತನ್ನ ದೇಹವನ್ನು ಅಷ್ಟೇ ಫಿಟ್ ಆಗಿ ಇಟ್ಟುಕೊಂಡು ಬರುತ್ತಿದ್ದಾರೆ. ಡೈಲಿ ಮೇಲ್ ಪತ್ರಿಕೆ ತಿಳಿಸುವ ಪ್ರಕಾರ ಆಕೆ ತನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಸಾಕಷ್ಟು ವರ್ಕ್ ಔಟ್ ಮಾಡುತ್ತಾರೆ.

ಕರೀನಾ ಕಪೂರ್
ಕರೀನಾ ಕಪೂರ್ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅವರ ಸರಿಯಾದ ಆಹಾರ ಪದ್ಧತಿ,ಯೋಗ ಮತ್ತು ವ್ಯಾಯಾಮ ಅನುಸರಿಸುವುದರ ಮೂಲಕ ಮತ್ತೆ ತಮ್ಮ ಬಳುಕುವ ತಿರುವುಗಳನ್ನು ಹೊಂದಿದ ಮೈಮಾಟ ಹೊಂದಿದರು.

ಜೆನಿಫ಼ರ್ ಲೋಪ್ಸ್
44 ವರ್ಷದ ತಾಯಿಯಾದ ಜನಿಫ಼ರ್ ತಮ್ಮ ಮೈಮಾಟದ ತಿರುವುಗಳನ್ನು ಸರಿಯಾಗಿ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಅದ್ಬುತ ಮೈಮಾಟ ಹೊಂದಲು ಆಕೆ ಸ್ನಾಯು ಮತ್ತು ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುತ್ತಾರೆ.

ಚಿತ್ರಾಂಗದ ಸಿಂಗ್
ಚಿತಾಂಗದ ಸಿಂಗ್ ದೇಸಿ ಬಾಯ್ಸ್ ಚಿತ್ರದಲ್ಲಿ ತನ್ನ 36 ನೇ ವಯಸ್ಸಿನಲ್ಲಿ ತನ್ನ ಫಿಟ್ ಆದ ದೇಹದ ಮೂಲಕ ಗಮನ ಸೆಳೆದರು.ಆಕೆ ಸರಿಯಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೂಲಕ ತನ್ನ ದೇಹವನ್ನು ಸುಂದರವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ.

ಹ್ಯಾಲೆ ಬೆರ್ರಿ
ವ್ಯಾಯಾಮವನ್ನು ಮಾಡುವುದರ ಜೊತೆಗೆ ಹ್ಯಾಲೇ ಆಹಾರದಲ್ಲಿ ಇತರ ಅಂಶದ ಕಡೆಗೆ ಗಮನ ಹರಿಸುತ್ತಾರೆ .ಅವುಗಳೆಂದರೆ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಮತ್ತು ಗಾತ್ರ .ಇದು ಸರಿಯಾದ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳುವಲ್ಲಿ ಆಕೆಗೆ ಸಹಾಯಕವಾಗುತ್ತದೆ.

ಬಿಪಾಶ ಬಸು
ಬಿಪಾಶ ಬಸು ಪ್ರತಿದಿನ ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುತ್ತಾರೆ. ಇದರ ಜೊತೆಗೆ ಜಾಗಿಂಗ್, ಸ್ಪ್ರಿಂಗಿಂಗ್ ಮತ್ತು ಏರೋಬಿಕ್ಸ್ ಕೂಡ ಮಾಡುತ್ತಾರೆ.

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಬ್ಯಾಟ್ಮಿಂಟನ್ ಆಟಗಾರ್ತಿ, ಮಾಡೆಲ್ ಮತ್ತು ನಟಿ ಜೊತೆಗೆ ಈಕೆ ಸುಂದರಉದ್ದ ಕಾಲನ್ನು ಹೊಂದಿದ್ದಾರೆ. ಅವರ ಅಥ್ಲೆಟಿಕ್ ದೇಹವನ್ನು ಯೋಗ ಮತ್ತು ಬಲಯುತ ತರಭೇತಿ ಮೂಲಕ ಕಾಪಾಡಿಕೊಂಡು ಬರುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರ
ಪ್ರಿಯಾಂಕ ಚೋಪ್ರ ಸುಂದರಿ ಎಂಬ ಕಿರೀಟ ಪಡೆದಿದ್ದಾರೆ. ಈಗ ಆಕೆ ತನ್ನ ದೇಹವನ್ನು ಸುಂದರವಾಗಿ ಸೆಕ್ಸಿಯಾಗಿ ಇರಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ. ಈಕೆ ತನ್ನ ದೇಹದ ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಾರೆ.

ಮೈಕೆಲ್ ಒಬಾಮ
ಈಕೆ ಫಿಟ್ ಆಗಿರಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.ಈಕೆ ಹೃದಯ ಸಂಬಂಧಿ ಮತ್ತು ಇತರ ಫಿಟ್‌ನೆಸ್ ವ್ಯಾಯಾಮಗಳನ್ನು ಮಾಡುವುದರ ಮೂಲಕ ತನ್ನ ದೇಹ ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಮಲೈಕಾ ಅರೋರ ಖಾನ್
ಈಕೆ ತಾಯಿಯಾದರೂ ಕೂಡ ತನ್ನ ಫಿಟ್‌ನೆಸ್ ಅನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.ಇವರು ವಾರದಲ್ಲಿ ಕನಿಷ್ಠ 3 ಭಾರಿ ಕಿಕ್ ಬಾಕ್ಸಿಂಗ್ ಮತ್ತು ಏರೋಬಿಕ್ಸ್ ಮಾಡುತ್ತಾರೆ.

ಮಡೋನ್ನಾ
ಈಕೆ ಪ್ರಖ್ಯಾತ ಗಾಯಕಿ ಮತ್ತು ತನ್ನ 55 ನೇ ವಯಸ್ಸಿನಲ್ಲೂ ಸುಂದರ ದೇಹವನ್ನು ಹೊಂದಿದವರು. ಈಕೆಯ ಈ ಸೌಂದರ್ಯದ ಗುಟ್ಟು ಸಮತೋಲಿತ ಆಹಾರ ಮತ್ತು ವ್ಯಾಯಾಮ.

ಜಾಕ್ಯುಲೆನ್ ಫಾರ್ನಾನ್ಡಿಸ್
ಈ ಉದ್ದಕಾಲನ್ನು ಹೊಂದಿದ ಸುಂದರಿ ಬಾಲಿವುಡ್ ನಲ್ಲಿ ಸುಂದರ ದೇಹವನ್ನು ಹೊಂದಿದವರಲ್ಲಿ ಒಬ್ಬರು. ಈಕೆಯ ಸೌಂದರ್ಯ ಹಿಂದಿನ ರಹಸ್ಯ ಎಂದರೆ ಯೋಗ ಮತ್ತು ಆರೋಗ್ಯಯುತ ಆಹಾರ ಪದ್ಧತಿ ಇದರಲ್ಲಿ ತಾಜಾ ಹಣ್ಣು, ಸಲಾಡ್ಸ್ ಬಳಸುತ್ತಾರೆ.

ಶಿಲ್ಪಾ ಶೆಟ್ಟಿ
ವಿಹಾನ್ ಹುಟ್ಟಿದ ನಂತರ ಶಿಲ್ಪಾ ಶೆಟ್ಟಿ ಯಮ್ಮಿ ಮಮ್ಮಿ ಆಗಿದ್ದಾರೆ. ಈಗ ಆಕೆ ಸುಂದರ ಮೈಮಾಟ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಯೋಗ ಮಾಡುವುದರ ಜೊತೆಗೆ ಒಳ್ಳೆಯ ಆಹಾರ ಪದ್ಧತಿ ರೂಡಿಸಿ ಕೊಂಡಿರುವುದೇ ಇದಕ್ಕೆ ಕಾರಣ.

ಲಾರಾ ದತ್ತ
ಲಾರಾದತ್ತ ಕೂಡ ಹೊಸದಾಗಿ ತಾಯಿಯಾದಾಕೆ. ಈಕೆ ಕೂಡ ವ್ಯಾಯಾಮ ಜೊತೆಗೆ ಯೋಗ ಮಾಡುತ್ತಾರೆ.ಆಕೆ ಫಿಟ್ ಆಗಿ ಇರಲು ಯೋಗ, ಹೃದಯ ಸಂಬಂಧಿ ವ್ಯಾಯಾಮ ಮತ್ತು ಶಕ್ತಿ ತರಭೇತಿಗಳು ಕಾರಣ.



Click it and Unblock the Notifications