Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
2010 ಮತ್ತು 2011 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪಶಸ್ತಿ ಪ್ರಧಾನ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾನುವಾರದಂದು ಧಾರವಾಡದಲ್ಲಿ ನೆರವೇರಿಸಿಕೊಟ್ಟರು.
ಪುನೀತ್ ರಾಜ್ಕುಮಾರ್, ರಮ್ಯಾ, ಶಿವರಾಮ್, ನಿರ್ದೇಶಕ ಭಾರ್ಗವ್, ಹಾಡು ರಚನೆಗಾರರಾದ ಹಂಸಲೇಖ, ಅನಂತನಾಗ್, ಸುಮಿತ್ರಾ, ಭಾವನಾ, ಅರ್ಜುನ್ ಸರ್ಜಾ ಹೀಗೆ ತಾರೆಗಳ ದಂಡೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿಯನ್ನು ಸ್ವೀಕರಿಸಿದ ಪುನೀತ್, ರಮ್ಯಾ, ಅನಂತನಾಗ್ ತಮ್ಮ ಅತ್ಯುತ್ತಮ ನಟನೆಯನ್ನು ಕಲಾರಸಿಕರಲ್ಲಿ ಅಚ್ಚಳಿಯುವಂತೆ ಮಾಡಿದರು.

1.ಉತ್ತಮ ನಟಿ ಪ್ರಶಸ್ತಿ ರಮ್ಯಾ ಮುಡಿಗೇರಿದಾಗ
2010 - 11 ನೇ ಸಾಲಿನ ಉತ್ತಮ ನಟಿ ಪ್ರಶಸ್ತಿಯನ್ನು ರಮ್ಯಾ ಪಡೆದುಕೊಂಡಿದ್ದಾರೆ.

2.2010 ರ ಉತ್ತಮ ನಟ ಪ್ರಶಸ್ತಿ ಪುರಸ್ಕ್ರತ ಪುನೀತ್
ಪುನೀತ್ ರಾಜ್ಕುಮಾರ್ 2010 ನೇ ಸಾಲಿನ ಉತ್ತಮ ನಟ ಪ್ರಶಸ್ತಿಯಿಂದ ಪುರಸ್ಕ್ರತಗೊಂಡರು.

3.ಉತ್ತಮ ನಟಿ ಪ್ರಶಸ್ತಿಯೊಂದಿಗೆ ರಮ್ಯಾ
ಉತ್ತಮ ನಟಿ ಪ್ರಶಸ್ತಿ ಪತ್ರವನ್ನು ಸಭಿಕರಿಗೆ ತೋರಿಸುತ್ತಿರುವ ನಟಿ ರಮ್ಯಾ.

2010 -11 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾವನಾ ಹರ್ಷಿಕಾ
ಹರ್ಷಿಕಾ ಪುಣಚ್ಚಾ, ಭಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

5.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಗಾಭರಣ, ಹರ್ಷಿಕಾ
ಟಿ.ಎಸ್. ನಾಗಾಭರಣ ಕೂಡ 2010 -11 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

6.ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ
ನಟಿ ರಮ್ಯಾ ಕೂಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದರು.

7.ಕಾರ್ಯಕ್ರಮದಲ್ಲಿ ಪುನೀತ್ ರಮ್ಯಾ ಮಾತುಕತೆ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ ಪುನೀತ್ ಜೊತೆಯಾಗಿ ಫೋಟೋಗೆ ಸೆರೆಸಿಕ್ಕರು.

8.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾರಾ ಜೋಡಿ ಭಾವನಾ, ಅರ್ಜುನ್ ಸರ್ಜಾ
ಭಾವನಾ ಅರ್ಜುನ್ ಸರ್ಜಾ ಕೂಡ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ನೆನಪಿಸಿದರು.

9.ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟ ಶಿವರಾಮ್ ಉಭಯ ಕುಶಲೋಪರಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟ ಶಿವರಾಮ್ ಮಾತುಕತೆ.

10.ಅನಂತನಾಗ್, ಮುಖ್ಯಮಂತ್ರಿ ಸಿದ್ಧರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಅನಂತನಾಗ್ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶುಭಾಶಯ ವಿನಿಮಯಿಸಿಕೊಂಡರು.

11.ಪ್ರಶಸ್ತಿ ಪ್ರಧಾನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ
ಧಾರವಾಡದಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಲನಚಿತ್ರರಂಗದ ಪ್ರತಿಭೆಗಳನ್ನು ಸನ್ಮಾನಿಸಿದರು.

12.ಅನಂತನಾಗ್ ಪುರಸ್ಕೃತರಾದಾಗ
2010-11 ನೇ ಸಾಲಿನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿಭಾವಂತ ನಟ ಅನಂತನಾಗ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸನ್ಮಾನಿಸಿದರು.



Click it and Unblock the Notifications