ಐಸಿಡಬ್ಲ್ಯೂ 2014: ಸಬ್ಯಸಾಚಿಯವರ ಆಕರ್ಷಕ ವಿನ್ಯಾಸಗಳ ಝಲಕ್

ಐಸಿಡಬ್ಲ್ಯೂ 2014 ಇಂದು ಸಬ್ಯಸಾಚಿಯವರ ಆಕರ್ಷಕ ವಿನ್ಯಾಸಗಳ ಉಡುಗೆಗಳಿಂದ ಪ್ರಾರಂಭಗೊಂಡಿತು. ಭಾರತೀಯ ವಸ್ತ್ರ ವಿನ್ಯಾಸ ಪ್ರದರ್ಶನದ ಪ್ರಥಮ ದಿನವನ್ನು ಬಹಳ ಚೆನ್ನಾಗಿಯೇ ಪ್ರಾರಂಭಿಸಿದ ಸಬ್ಯಸಾಚಿ ಮನಮೋಹಕಗೊಳಿಸುವ ಭಾರತೀಯ ವಸ್ತ್ರ ವಿನ್ಯಾಸಗಳಿಂದ ನೆರೆದವರನ್ನು ಸೆಳೆದರು.

ಭಾರೀ ಎಂಬ್ರಾಯಿಡರಿ ಕೆಲಸಗಳು, ಮಿರುಗುವ ವಿನ್ಯಾಸಗಳು, ಜರಿ ಕೆಲಸ ಹೀಗೆ ವಸ್ತ್ರಗಳ ವಸಂತ ಕಾಲವೇ ಅಲ್ಲಿ ನೆರೆದಿತ್ತು ಎಂದೇ ಹೇಳಬಹುದು. ಕೆಲವೊಂದು ಉಡುಗೆಗಳನ್ನು ಬೆಳ್ಳಿ ಮತ್ತೆ ಕೆಲವನ್ನು ಚಿನ್ನ ಹಾಗೂ ಉಳಿದವುಗಳನ್ನು ಕೆಂಪು ಬಣ್ಣಗಳಲ್ಲಿ ವಿನ್ಯಾಸಗೊಳಿಸಲಾಗಿತ್ತು.

ಇಳಿಜಾರುತ್ತಿರುವ ಕುತ್ತಿಗೆ ವಿನ್ಯಾಸದ ಉಡುಗೆಗಳೂ ಇಲ್ಲಿದ್ದವು. ಸಬ್ಯಸಾಚಿ ಸಂಗ್ರಹಣೆಯಲ್ಲಿ ಮೂಡಿ ಬಂದ ಸೀರೆಗಳನ್ನು ಬನಾರಸ್ ಮತ್ತು ಕತಾದಲ್ಲಿ ತಯಾರಿಸಲಾಗಿದೆ.

ಪುರುಷರಿಗಾಗಿ ಕೆಲವೊಂದು ಪಾರ್ಸಿ ಕೋಟ್‌‌ಗಳು ಬಂದಾಗಲಾಸ್ ಕೂಡ ಸಬ್ಯಸಾಚಿ ಸಂಗ್ರಹಣೆಯಲ್ಲಿದ್ದವು. ರೂಪದರ್ಶಿಯರು ಸಬ್ಯಸಾಚಿಯವರ ವಿನ್ಯಾಸದ ಉಡುಗೆಗಳಿಗೆ ಹೆಜ್ಜೆ ಹಾಕಿರುವುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ವೀಕ್ಷಿಸೋಣ.

ಬನಾರಸ್ ಸೀರೆಗಳು

ಬನಾರಸ್ ಸೀರೆಗಳು

ಬನಾರಸ್ ಸಿಲ್ಕ್ ಸೀರೆಗಳಲ್ಲಿ ಕತಾ ವಿನ್ಯಾಸಗಳನ್ನು ಈ ಬಾರಿ ಸಬ್ಯಸಾಚಿ ರೂಪಿಸಿದ್ದಾರೆ. ಇದರ ರವಿಕೆಗಳನ್ನು ಕೂಡ ಕತಾದಲ್ಲಿ ತಯಾರಿಸಲಾಗಿದೆ ಎಂಬುದು ಇಲ್ಲಿ ನಿಚ್ಚಳವಾಗಿ ಕಂಡುಬಂದಿದೆ.

ಭಾರತೀಯ ಉಡುಗೆಗಳು

ಭಾರತೀಯ ಉಡುಗೆಗಳು

ಭಾರತೀಯ ವಿನ್ಯಾಸದಲ್ಲಿ ಮೂಡಿಬಂದಿರುವ ತೋಳ ರವಿಕೆಗಳನ್ನು ರೂಪದರ್ಶಿಯರು ಸೀರೆಗೆ ಧರಿಸಿಕೊಂಡಿರುವದನ್ನು ನಮಗಿಲ್ಲಿ ಕಾಣಬಹುದಾಗಿದೆ. ಪೇಸ್ಟಲ್ ಬಣ್ಣದ ಉಡುಗೆಗಳಿಗೆ ಪ್ಲಂಗಿಂಗ್ ನೆಕ್‌ಲೈನ್ ಅನ್ನು ಹೊಂದಿದ್ದಾವೆ.

ಪಾರ್ಸಿ ಕೋಟ್‌ಗಳು

ಪಾರ್ಸಿ ಕೋಟ್‌ಗಳು

ಪ್ರಿಂಟ್ ಉಳ್ಳ ಪಾರ್ಸಿ ಕೋಟ್‌ಗಳು ಬಂದಾಗಲ್ಸ್ ಮತ್ತು ಚೂಡಿದಾರ್‌ಗಳು ಮನಸೂರೆಗೊಂಡವು.

ನ್ಯೂಡ್ ಶಿಫಾನ್

ನ್ಯೂಡ್ ಶಿಫಾನ್

ಇಂದಿನ ಪ್ರದರ್ಶನದಲ್ಲಿ ಶಿಫಾನ್ ಸೀರೆಗಳನ್ನು ಕೂಡ ಪ್ರದರ್ಶಿಸಲಾಗಿತ್ತು. ಇದು ಹೊಳೆಯುವ ಟಿಕ್ಲಿಗಳಿಂದ ಕೂಡಿದ್ದು ಪಾರ್ಟಿಗಳಿಗೆ ಸೂಕ್ತವಾಗಿದೆ.

ಬಂದಾಗಲಾ ಸಿಲ್‌ಹೌಟ್

ಬಂದಾಗಲಾ ಸಿಲ್‌ಹೌಟ್

ಎಂಬ್ರಾಯಿಡರಿ ಮಿಶ್ರಣ ಮತ್ತು ಫ್ಯಾಬ್ರಿಕ್‌ಗಳ ಸುಂದರ ವಿನ್ಯಾಸವನ್ನು ಈ ಬಂದಾಗಲಾ ಸಿಲ್‌ಹೌಟ್‌ನಲ್ಲಿ ನಮಗೆ ಕಾಣಬಹುದಾಗಿದೆ.

ಬಂದಾಗಲಾ ರವಿಕೆ ಮತ್ತು ಬಿಳಿ ಸೀರೆ

ಬಂದಾಗಲಾ ರವಿಕೆ ಮತ್ತು ಬಿಳಿ ಸೀರೆ

ಬಿಳಿ ಪ್ಲೇನ್ ಶಿಫಾನ್ ಸೀರೆಯು ದಪ್ಪನೆಯ ಕೆಂಪು ಬಣ್ಣದ ಬಾರ್ಡರ್ ಅನ್ನು ಹೊಂದಿದ್ದು ಪಲ್ಲುವಿನಲ್ಲಿ ತೆಳುವಾದ ಮಿನುಗುವ ಕೆಲಸವನ್ನು ಒಳಗೊಂಡಿದೆ. ಇದರ ರವಿಕೆ ತ್ರಿಫೋರ್ತ್ ಮಾದರಿಯಲ್ಲಿದೆ.

ಮುಂಭಾಗ ತೆರೆದ ಸಿಲ್‌ಹೌಟ್

ಮುಂಭಾಗ ತೆರೆದ ಸಿಲ್‌ಹೌಟ್

ನ್ಯೂಡ್ ಮತ್ತು ಕೆಂಪು ಎಂಬ್ರಾಯಿಡರಿಯನ್ನು ಹೊಂದಿರುವ ಫ್ರಂಟ್ ಓಪನ್ ಸಿಲ್‌ಹೌಟ್ ಇದಾಗಿದೆ.

ಭಾರತೀಯ ಸಿಲ್‌ಹೌಟ್

ಭಾರತೀಯ ಸಿಲ್‌ಹೌಟ್

ಸಬ್ಯಸಾಚಿಯ ಹೊಸದೊಂದು ಉತ್ಪಾದನೆ ಎಂದು ಇದನ್ನು ಹೇಳಬಹುದು. ಪೇಸ್ಟಲ್ ನೀಲಿ ಸಿಲ್‌ಹೌಟ್‌ನೊಂದಿಗೆ ಡ್ರೇಪ್ ಓವರ್ ಶೋಲ್ಡರ್ ಅನ್ನು ಈ ಉಡುಗೆ ಒಳಗೊಂಡಿದೆ.

ಪೇಲ್ ನೀಲಿ ತುಲ್ಲೆ ಸೀರೆ

ಪೇಲ್ ನೀಲಿ ತುಲ್ಲೆ ಸೀರೆ

ಸಬ್ಯಸಾಚಿ ಇತ್ತೀಚಿನ ಸಂಗ್ರಹಣೆಯಲ್ಲಿ ಕಂಡುಬಂದ ಹೊಸ ಬಗೆಯ ವಿನ್ಯಾಸವಾಗಿದೆ ಈ ಪೇಲ್ ನೀಲಿ ತುಲ್ಲೆ ಸೀರೆ.

ಆರೆಂಜ್ ಲೆಹಂಗಾ ಸೀರೆ

ಆರೆಂಜ್ ಲೆಹಂಗಾ ಸೀರೆ

ಈ ಆಕರ್ಷಕ ಆರೆಂಜ್ ಲೆಹಂಗಾ ಸೀರೆ ಕಣ್ಣುಕುಕ್ಕುವಂತಿದೆ. ಇದರಲ್ಲಿ ಚುಕ್ಕಿಯುಳ್ಳ ಮಿರುಗನ್ನು ನಮಗೆ ಕಾಣಬಹುದಾಗಿದೆ.

ಹೊಳೆಯುವ ಒರ್ಗಾಂಜಾ ಸೀರೆ

ಹೊಳೆಯುವ ಒರ್ಗಾಂಜಾ ಸೀರೆ

ಈ ಹೊಳೆಯುವ ಒರ್ಗಾಂಜಾ ಸೀರೆ ಆಕರ್ಷಕವಾಗಿದ್ದು ಮಿರಿ ಮಿರಿ ಮಿಂಚುತ್ತಿದೆ ಎಂದೇ ಹೇಳಬಹುದು.

ರವಿಕೆಯಲ್ಲಿನ ಜರಿ ಕೆಲಸ

ರವಿಕೆಯಲ್ಲಿನ ಜರಿ ಕೆಲಸ

ಹೆಚ್ಚಿನ ಡಿಸೈನರ್ ಸೀರೆಗಳು ರವಿಕೆಯೊಂದಿಗೆ ಬಂದಿದ್ದು ಇದನ್ನು ಪೂರ್ಣ ಔಟ್‌ಫಿಟ್‌ನ್ನಾಗಿಸಿವೆ.

ತುಲ್ಲೆ ಶರಾರಾ

ತುಲ್ಲೆ ಶರಾರಾ

ಇದನ್ನು ಸಿಲ್ವರ್ ಕೆಲಸದಲ್ಲಿ ರಚಿಸಲಾಗಿದ್ದು ತುಲ್ಲೆ ಫ್ಯಾಬ್ರಿಕ್‌ನಿಂದ ಈ ಧಿರಿಸನ್ನು ತಯಾರಿಸಲಾಗಿದೆ.

ನ್ಯೂಡ್ ಸೀರೆ ಮತ್ತು ಫ್ಲೋರಲ್ ಡೀಟೈಲ್ಸ್

ನ್ಯೂಡ್ ಸೀರೆ ಮತ್ತು ಫ್ಲೋರಲ್ ಡೀಟೈಲ್ಸ್

ಈ ನ್ಯೂಡ್ ಬಣ್ಣದ ಸೀರೆ ಪ್ಲೇನ್ ಅಂಚನ್ನು ಹೊಂದಿದ್ದು ಫ್ಲೋರಲ್ ಚುಕ್ಕಿಗಳನ್ನು ಒಡಲಲ್ಲಿ ಹೊಂದಿದೆ.

ಪ್ರಿಂಟೆಡ್ ಸ್ಕರ್ಟ್ ಮತ್ತು ಪಾರ್ಸಿ ಕೋಟ್

ಪ್ರಿಂಟೆಡ್ ಸ್ಕರ್ಟ್ ಮತ್ತು ಪಾರ್ಸಿ ಕೋಟ್

ಇದು ಫ್ಲೋರಲ್ ಪ್ರಿಂಟ್ ಸ್ಕರ್ಟ್, ಪಾರ್ಸಿ ಕೋಟ್ ಮತ್ತು ಹೊಳೆಯುವ ಡ್ರೇಪ್ ಅನ್ನು ಹೊಂದಿದೆ.

ರಾಣಿ ಮುಖರ್ಜಿ

ರಾಣಿ ಮುಖರ್ಜಿ

ರಾಣಿ ಮುಖರ್ಜಿ ಕೂಡ ಬೀಜ್ ಬಣ್ಣದ ಸೀರೆ ಮತ್ತು ಸಿಲ್ವರ್ ಕೆಲಸ ಇರುವ ಕಪ್ಪು ಬಣ್ಣದ ಬ್ಲೌಸ್ ಅನ್ನು ತೊಟ್ಟಿದ್ದಾರೆ. ಇದು ಕೂಡ ಸಬ್ಯಸಾಚಿ ವಿನ್ಯಾಸದಲ್ಲಿ ಮೂಡಿ ಬಂದಿದೆ.

Story first published: Wednesday, July 16, 2014, 10:19 [IST]
X
Desktop Bottom Promotion