Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಐಸಿಡಬ್ಲ್ಯೂ 2014: ಮೋನಿಶಾ ಜೈಸಿಂಗ್ಸ್ ಫ್ಯಾಶನ್ ಝಲಕ್
ಪ್ಯಾರೀಸ್ ಅನ್ನು ಜಗತ್ತಿನ ಫ್ಯಾಶನ್ ರಾಜಧಾನಿ ಎಂದು ಕರೆಯಲಾಗುತ್ತದೆ ಮತ್ತು ಫ್ರೆಂಚ್ ಸ್ಟೈಲ್ ಪ್ರತೀ ಸಲ ಫ್ಯಾಶನ್‌ನ ಮೂಲಮಂತ್ರವಾಗಿದೆ. ಐಸಿಡಬ್ಲ್ಯೂ 2014 ಸಂಗ್ರಹವಾಗಿರುವ 'ವರ್ಲ್ಡ್ ಬ್ರೈಡ್' ರೋಕ್ಕೋ ಸ್ಟೈಲ್ ಅನ್ನು ಹೊರತಂದಿದ್ದು ಇದನ್ನು ಫ್ಯಾಶನ್‌ನ ಕಲೆ ಎಂದೇ ಹೇಳಬಹುದು. 18ನೇ ಶತಮಾನದ ರೋಕ್ಕೋ ಸಂಗ್ರಹವನ್ನು ಪುನಃ ಐಸಿಡಬ್ಲ್ಯೂನ 2014 ರಾಂಪ್ ಹೊತ್ತು ತಂದಿದೆ.
ಈ ರೋಕ್ಕೋ ಸ್ಟೈಲ್ 18 ನೇ ಶತಮಾನದಲ್ಲಿ ಬಂದಿದ್ದು ಇದನ್ನು ಬರೋಕ್ಕೆ ಸ್ಟೈಲ್ ಸ್ಥಾನಾಂತರಗೊಳಿಸಿತು. ಈ ಸ್ಟೈಲ್‌ನ ಮುಖ್ಯ ಅಂಶವೆಂದರೆ ಬೇರೆ ಬೇರೆ ಬಣ್ಣಗಳಾಗಿದೆ ಇದರಲ್ಲಿ ಪೇಸ್ಟಲ್ ಶೇಡ್ಸ್ ಅನ್ನು ಫ್ಯಾಶನ್‌ನ ಹೊಸ ಟ್ರೆಂಡ್ ಆಗಿ ಬಳಸಲಾಗಿದೆ. ಲೇಸ್, ಫ್ಲೋರಲ್ ಪ್ರಿಂಟ್ಸ್ ಮತ್ತು ವಿನ್ಯಾಸ ಈ ಸ್ಟೈಲ್‌ನ ಒಂದು ಭಾಗವಾಗಿದೆ.

ಭಾರತೀಯ ವಸ್ತ್ರಾಭರಣ ವಾರ 2014 ರ ಪ್ಯಾರೀಸ್ ರಸ್ತೆ ಮೋನಿಶ್ ಜೈಸಿಂಗ್‌ರ ಫ್ಯಾಶನ್ ವೇದಿಕೆಯಾಗಿ ಮಾರ್ಪಟ್ಟಿದೆ. ಫ್ರೆಂಚ್ ಕೆಫೆಯೇ ಅಲ್ಲಿ ಏರ್ಪಟ್ಟಂತೆ ಕಾಣುತ್ತಿತ್ತು. ಮಾಡೆಲ್‌ಗಳನ್ನು ನೇರವಾಗಿ ಪೈಂಟ್ ಮಾಡುವ ಕಲಾವಿದರೂ ಅಲ್ಲಿದ್ದರು. ಚಿತ್ರಗಾರರಿಗೆ ತಮ್ಮ ನಿಲುವಂಗಿಯನ್ನು ಪ್ರದರ್ಶಿಸುವ ಮೂಲಕ ಮಾಡೆಲ್‌ಗಳು ಪ್ರದರ್ಶನವನ್ನು ಪ್ರಾರಂಭಿಸಿದರು.
ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ
ಫ್ರೆಂಚ್ ಬಾಲ್‌ರೂಮ್ ಗೌನ್‌ಗಳು ಈ ಪ್ರದರ್ಶನದ ಕೇಂದ್ರಬಿಂದುವಾಗಿದ್ದು ಇದರೊಂದಿಗೆ ಲೀಮ್ ಸೀರೆಗಳು, ಸೀಕ್ವಿನ್ ಶಿಫಾನ್ ಗೌನ್ ಮತ್ತು ಸೀರೆಗಳನ್ನು ಕೂಡ ಪ್ರದರ್ಶಿಸಲಾಗಿತ್ತು. ಈ ಧಿರಿಸಿನಲ್ಲಿದ್ದ ಚಿನ್ನದ ವಿನ್ಯಾಸ ಫ್ರೆಂಚ್ ನೋಟದ ದರ್ಶನವನ್ನು ಮಾಡಿತ್ತು.
ಭಾರತೀಯ ನಿಲುವಂಗಿಯಲ್ಲಿ ಫ್ರೆಂಚ್ ಟ್ರೆಂಡ್ ಯಾವ ರೀತಿ ಬಂದಿದೆ ಎಂಬುದನ್ನು ಇಲ್ಲಿ ನಮಗೆ ನೋಡಬಹುದಾಗಿದೆ. ಮೋನಿಶ್ ಜೈಸಿಂಗ್‌ರ ಪ್ರಧಾನ ಮಾಡೆಲ್ ಆಗಿ ಲಿಸಾ ಹೈಡನ್ ಕಾಣಿಸಿಕೊಂಡಿದ್ದಾರೆ.
ಫೆದರ್ ಉಳ್ಳ ಕಪ್ಪು ವರ್ಣದ ಸ್ಕರ್ಟ್ ಮತ್ತು ಬಿಳಿ ಕಾಲರ್ ಶರ್ಟ್ ಅನ್ನು ಲಿಸಾ ಹೈಡನ್ ಪ್ರದರ್ಶನದಲ್ಲಿ ತೋರಿಸಿದ್ದು ಆಕರ್ಷಕವಾಗಿತ್ತು. ಇದರೊಂದಿಗೆ ಅವರು ಪಂಜಾಬಿ ಚೂರಾವನ್ನು ಧರಿಸಿದ್ದು ಇವರು ವರ್ಲ್ಡ್ ಬ್ರೈಡ್ ಎಂಬುದನ್ನು ಸೂಚಿಸಿತ್ತು.



Click it and Unblock the Notifications
