Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಐಸಿಡಬ್ಲ್ಯೂ 2014:ಮನೀಶ್ ಅರೋರಾ ವಸ್ತ್ರ ವಿನ್ಯಾಸದ ಮೋಡಿ
ಭಾರತೀಯ ಉತ್ಪನ್ನಗಳ ರಚನೆಕಾರ ಮತ್ತು ಯಜಮಾನ ಎಂದೇ ಮನೀಶ್ ಅರೋರಾರನ್ನು ಗುರುತಿಸಬಹುದು. ಅರೋರಾ ತಮ್ಮ ವಿನ್ಯಾಸದ ಉಡುಗೆಗಳನ್ನು ಪ್ರತೀ ವರ್ಷ ಪ್ಯಾರೀಸ್‌ನಲ್ಲಿ ಪ್ರದರ್ಶಿಸುತ್ತಾರೆ. ತಮ್ಮ ವಸ್ತ್ರಗಳ ಸಂಗ್ರಹದಲ್ಲಿ ಒಂದು ರೀತಿಯ ಮಿಂಚನ್ನೇ ಹರಿಸುವ ತಾಕತ್ತಿನವರಾಗಿದ್ದಾರೆ ಮನೀಶ್ ಅರೋರಾ. ಇದೇ ಮೊದಲ ಬಾರಿಗೆ ಐಸಿಡಬ್ಲ್ಯೂ 2014 ರಲ್ಲಿ ಮನೀಶ್ ಅರೋರಾ ಕಾಣಿಸಿಕೊಂಡಿದ್ದಾರೆ. ಹಾಗಿದ್ದಾಗ ಈ ಸಂಗ್ರಹಣೆಯ ಸುತ್ತಲಿರುವ ಆತುರ ಸಹಜವಾಗಿ ಇದ್ದೇ ಇರುತ್ತದೆ.
ಭಾರತೀಯ ಕೌಚರ್ 2014 ರಲ್ಲಿ ಮನೀಶ್ ಪ್ರದರ್ಶಿಸಿದ ವಸ್ತ್ರಗಳ ಮೇಳ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು ಎಂದೇ ಹೇಳಬಹುದು. 'ಲೈಟ್ ಫೆಂಟಾಸ್ಟಿಕ್' ಎಂಬ ಶೀರ್ಷಿಕೆಯನ್ನಿರಿಸಿಕೊಂಡಿದ್ದ ಇವರ ಸಂಗ್ರಹಣೆಗಳು ಕಣ್ಣು ಕೋರೈಸುವಂತಿದ್ದವು. ಬೇರೆ ಬೇರೆ ಬಣ್ಣಗಳನ್ನು ಬಳಸಿದ್ದ ಮನಿಶ್ ಅರೋರಾ ವರ್ಣಗಳ ಸಾಮ್ರಾಜ್ಯವನ್ನೇ ಅಲ್ಲಿ ಕಟ್ಟಿದ್ದರು ಎಂದರೂ ಅತಿಶಯೋಕ್ತಿಯಲ್ಲ. ಹಾಗಿದ್ದರೆ ಅವರ ಪ್ರದರ್ಶನದ ಕೆಲವೊಂದು ಝಲಕ್ ಅನ್ನು ಇಲ್ಲಿ ನೋಡೋಣ ಬನ್ನಿ.
ಐಸಿಡಬ್ಲ್ಯೂ 2014: ಕಣ್ಮನ ಸೆಳೆದ ವರುಣ್ ಬಾಲ್ ಅವರ ಫ್ಯಾಶನ್ ಝಲಕ್

ಮುತ್ತು ಮತ್ತು ಚಿನ್ನದ ಬೀಡ್ಸ್
ಚಿನ್ನದ ಬೀಡ್ಸ್ ಮತ್ತು ಮುತ್ತುಗಳಿಂದ ಈ ಉಡುಗೆ ಆಕರ್ಷಕವಾಗಿದೆ. ಪೇಸ್ಟಲ್ ಬಣ್ಣದ ಉಡುಗೆಯಲ್ಲಿ ಈ ರೂಪದರ್ಶಿ ಅತ್ಯಂತ ಸುಂದರಿಯಾಗಿ ಕಾಣುತ್ತಿದ್ದಾರೆ.

ನವಿಲಿನ ಗರಿಗಳು
ಕೆಂಪು ಲೆಹೆಂಗಾ ಮತ್ತು ಅದರಲ್ಲಿರುವ ವಿನ್ಯಾಸ ನವಿಲಿನ ಗರಿಗಳ ನೆನಪನ್ನು ಹೊತ್ತು ತರುವಂತಿದೆ.

ಚಿನ್ನದ ಬಣ್ಣದ ಉಡುಗೆ
ಮೆಟಾಲಿಕ್ ಸಮ್ಮಿಶ್ರಣವಾಗಿರುವ ಈ ಔಟ್‌ಫಿಟ್ ಗೋಲ್ಡನ್ ಮುತ್ತುಗಳು ಮಣಿಗಳಿಂದ ಕೂಡಿದೆ.

ಪೇಸ್ಟಲ್ ಬಣ್ಣಗಳು
ಈ ಸಂಗ್ರಹದಲ್ಲಿ ಪೇಸ್ಟಲ್ ಬಣ್ಣಗಳ ವೈವಿಧ್ಯಮಯ ನೋಟವನ್ನೇ ನಮಗೆ ಗಮನಿಸಬಹುದಾಗಿದೆ. ಇವೆಲ್ಲವೂ ಗಾಢವಾದ ಬಣ್ಣಗಳನ್ನು ಹೊಂದಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಸ್ಕರ್ಟ್ ಗ್ಯಾಲೋರ್
ಈ ಸ್ಕರ್ಟ್‌ಗಳೆಲ್ಲವೂ ಆಕರ್ಷಕವಾಗಿದ್ದು ಮನಸ್ಸನ್ನು ಕದಿಯುವಂತಿದ್ದವು.

ಫ್ಲೋರಲ್ ಹಬ್ಬ
ಈ ಲೆಹೆಂಗಾ ಮುತ್ತಿನ ವಿನ್ಯಾಸವನ್ನು ಹೊಂದಿದ್ದು ಆಕರ್ಷಕ ರೀತಿಯಲ್ಲಿ ಕಂಡುಬರುತ್ತಿದೆ.

ಹೊಳೆಯುವ ಉಡುಗೆ
ಲೆಹೆಂಗಾ ಸ್ಕರ್ಟ್‌ಗಳಲ್ಲಿರುವ ಹೊಳೆಯುವ ನೋಟವನ್ನು ನೋಡಲು ಕಣ್ಣುಗಳು ಸಾಲದಾಗಿದೆ.

ಫ್ಲೋರಲ್ ಕೇಶ ಆಭರಣಗಳು
ಈ ನಿಲುವಂಗಿಯಲ್ಲಿರುವ ಕೆಲಸ ಕಣ್ಣಿಗೆ ರಾಚುವಂತಿದೆ. ಈ ಚೈನುಗಳ ಮಾದರಿಯಂತೂ ಅತಿ ಸುಂದರವಾಗಿದೆ.

ನವಿಲಿನ ಬಣ್ಣ
ನವಿಲಿನ ಮಾದರಿಯಲ್ಲಿರುವ ಈ ಉಡುಗೆಗಳು ಅತ್ಯಂತ ಸುಂದರವಾಗಿದೆ. ಈ ಹಸಿರು ಬಣ್ಣದ ಉಡುಗೆಗಳು ಅತ್ಯಂತ ವಿಶೇಷವಾಗಿವೆ.



Click it and Unblock the Notifications