Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
40 ರ ಆಸುಪಾಸಿನ ಹಾಟ್ ಸೆಲೆಬ್ರಿಟಿಗಳ ಹಾಟ್ ಲುಕ್!
40 ರ ಗಡಿ ದಾಟಿತೆಂದರೆ ಪ್ರತಿಯೊಬ್ಬ ಮಹಿಳೆಯೂ ಗಾಬರಿಗೊಳ್ಳುತ್ತಾಳೆ. ತಮಗೆ ವಯಸ್ಸಾದಂತೆ ಮುಪ್ಪು ಆವರಿಸಿಕೊಳ್ಳುತ್ತದೆ ಸೌಂದರ್ಯ ಕಳೆಗುಂದುತ್ತದೆ ಎಂಬುದೇ ಅವರ ಚಿಂತೆಯಾಗುತ್ತದೆ. ಆದರೆ ಇಲ್ಲಿ ನಾವು ನೀಡಿರುವ ಕೆಲವು ಚೆಲುವೆಯರು 40 ರ ಆಸುಪಾಸಿನವರು. ಸಾಂದ್ರಾ ಬಲ್ಲೋಕ್‌ನಿಂದ ಹಿಡಿದು ಸೆಕ್ಸಿ ಕ್ಯಾಮರೋನ್ ಡಯಾಜ್‌ವರೆಗೆ, ತಮ್ಮ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಳ್ಳಲು ಇವರೆಲ್ಲಾ ತುಂಬಾ ವರ್ಕ್‌ಔಟ್ ಮಾಡುತ್ತಾರೆ. ದೇಹ ಸೌಂದರ್ಯವನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನವನ್ನು ನೀಡುತ್ತಾರೆ.
40 ದಾಟಿತೆಂದರೆ ಮುಪ್ಪು ಆವರಿಸಿತು ಎಂಬ ಚಿಂತೆ ನಿಮ್ಮಿಂದ ದೂರವಾಗಲೇಬೇಕು. ಸರಿಯಾದ ಆಹಾರ ಕ್ರಮ, ಸೂಕ್ತ ವ್ಯಾಯಾಮ, ಕ್ರಮಬದ್ಧ ಜೀವನಕ್ರಮಗಳಿಂದ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮುಪ್ಪಿನ ಲಕ್ಷಣಗಳನ್ನೂ ದೂರೀಕರಿಸಬಹುದು. ಕೇವಲ ಮೇಕಪ್‌ನಿಂದ ಮಾತ್ರವೇ ಸೌಂದರ್ಯವನ್ನು ಉಳಿಸಿಕೊಳ್ಳಬಹುದು ಎಂಬುದು ಸುಳ್ಳು. ಈ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಸೆಲೆಬ್ರಿಟಿಗಳು 40 ರ ಆಸುಪಾಸಿನವರು. ಆದರೆ ಮೇಕಪ್ ರಹಿತರಾಗಿ ಕೂಡ ನೈಸರ್ಗಿಕ ಸೌಂದರ್ಯದಿಂದ ಅವರು ಮಿಂಚಿರುವುದನ್ನು ನೋಡಿ.
40 ರಲ್ಲಿ ಸೆಲೆಬ್ರಿಟಿಗಳು ಹಾಟ್ ಹಾಗೂ ಸೆಕ್ಸಿಯಾಗಿ ಕಂಡುಬರಲು ಸಾಧ್ಯವಿಲ್ಲ ಎಂಬ ನಿಮ್ಮ ವಿಚಾರ ಈ ಸೆಲೆಬ್ರಿಟಿ ಪೋಟೋಗಳನ್ನು ನೋಡಿದಾಗ ಸುಳ್ಳಾಗುವುದು ಖಂಡಿತ. ಹೌದು. 40 ರ ಆಸುಪಾಸಿನ ಈ ಸೆಲೆಬ್ರಿಟಿಗಳು ಮೊದಲಿದ್ದಂತೆ ಬೋಲ್ಡ್ ಹಾಗೂ ಬ್ಯೂಟಿಫುಲ್ ಆಗಿ ಕಂಡುಬಂದಿದ್ದಾರೆ. ಬನ್ನಿ. ಸೆಲೆಬ್ರಿಟಿಗಳ ಈ ಭಂಗಿಗಳನ್ನು ಆಸ್ವಾದಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಿಂಚಿನ ಸಂಚಾರವನ್ನುಂಟು ಮಾಡಿದ ಹಾಟ್ ಬಾಲಿವುಡ್ ಸೆಲೆಬ್ರಿಟಿಗಳು

ಕ್ಯಾಮರೋನ್ ಡಯಾಜ್:
ಸುಂದರವಾದ ನಗುವಿನೊಂದಿಗೆ ಈ ಮೋಹಕ ತಾರೆಯನ್ನು ಎದುರುಗೊಳ್ಳಲು ನಾವು ಬಯಸುತ್ತೇವೆ. ಆಕೆಗೆ ವಯಸ್ಸಾಗುತ್ತಿದ್ದರೂ ಇನ್ನೂ ಸುಂದರಿಯಾಗಿಯೇ ಕ್ಯಾಮರೋನ್ ಕಂಡುಬರುತ್ತಿದ್ದಾರೆ.

ಸಾಂದ್ರಾ ಬಲ್ಲೋಕ್:
ಆಸ್ಕರ್ 2014 ರ ಉತ್ತಮ ಧಿರಿಸು ತೊಟ್ಟವರು ಹೆಗ್ಗಳಿಕೆಗೆ ಪಾತ್ರರಾದವರಲ್ಲಿ ಸಾಂದ್ರಾ ಕೂಡ ಒಬ್ಬರು. ಆಕೆ ಏನು ಧರಿಸಿದರೂ ಅದು ಅವರಿಗೆ ಸೌಂದರ್ಯವನ್ನು ತಂದುಕೊಡುತ್ತದೆ!

ಜೆನ್ನಿಫರ್ ಏನ್‌ಸ್ಟನ್:
ಜೆನ್ನಿ ಬೋಲ್ಡ್ , ಸೆಕ್ಸಿ ನಟಿ. ಆಕೆಗೆ 45 ರ ಆಸುಪಾಸಾದರೂ ಯುವತಿಯರನ್ನು ನಾಚಿಸುವಂತಹ ಬೆಡಗು ಬಿನ್ನಾಣ ಜೆನ್ನಿಫರ್‌ನಲ್ಲಿದೆ.

ಹೈಡಿ ಕ್ಲಮ್:
ಜರ್ಮನ್ ಮಾಡೆಲ್ ಹಾಗೂ ವಿಕ್ಟೋರಿಯಾಸ್‌ನ ರಹಸ್ಯ ಅಪ್ಸರೆ, ಹೈಡಿ 40 ಕ್ಕೆ ಹತ್ತಿರವಿದ್ದರೂ ಸೌಂದರ್ಯ ಕಳೆಗುಂದಿಲ್ಲ.

ಸೋಫಿಯಾ ವರ್ಗರಾ:
ಹಾಟ್ ಮತ್ತು ಕರ್ವಿಯಾಗಿರುವ ಸೋಫಿಯಾರನ್ನು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ? 41 ರ ಹರೆಯದ ಈಕೆ, ಪ್ಲಂಗಿಂಗ್ ನೆಕ್‌ಲೈನ್ ಗೌನ್ ಅಥವಾ ದೇಹಕ್ಕಂಟಿದ ಔಟ್‌ಫಿಟ್‌ಗಳಲ್ಲಿ ನಮ್ಮನ್ನು ಬೆಸ್ತು ಬೀಳಿಸಿರುವುದಂತೂ ನಿಜ.

ನೋಮಿ ವಾಟ್ಸ್:
45 ರ ಹರೆಯದ ಬ್ರಿಟಿಷ್ - ಆಸ್ಟ್ರೇಲಿಯನ್ ತಾರೆ ಈಗಲೂ ಯವ್ವೌನವನ್ನು ಕಾಪಾಡಿಕೊಂಡು ಬಂದಿದ್ದಾರೆ!

ಸಲ್ಮಾ ಹಯೇಕ್:
ಈಕೆ 47 ವರ್ಷ ಪ್ರಾಯದವರು! ಸಲ್ಮಾ ಹೊಂದಿರುವ ಫಿಗರ್ ದೇಹ ವಿನ್ಯಾಸ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಮೆಕ್ಸಿಕನ್ ಹಾಗೂ ಅಮೇರಿಕನ್ ಚಿತ್ರ ತಾರೆಯಾದ ಸಲ್ಮಾ ತಮ್ಮನ್ನು ಸೂಕ್ತವಾಗಿ ಮೆಂಟೇನ್ ಮಾಡಿಕೊಂಡಿದ್ದಾರೆ.



Click it and Unblock the Notifications