Latest Updates
-
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ನಿಮ್ಮ ಆರೋಗ್ಯಕರವಾದ ಜೀವನ ಶೈಲಿಗಾಗಿ ಸರಳ ಸಲಹೆಗಳು
ಆರೋಗ್ಯಕರವಾದ ಲೈಫ್‍ಸ್ಟೈಲ್ ಹೊಂದಿರಬೇಕೆಂಬ ಇಚ್ಛೆ ಈಗ ಎಲ್ಲರಲ್ಲೂ ಬೆಳೆಯುತ್ತಿದೆ. ಪ್ರತಿದಿನ ನಾವು ಒಂದಲ್ಲ ಒಂದು ಬಾರಿ ಜನರು ತಮ್ಮ ಅನಾರೋಗ್ಯಕರವಾದ ಲೈಫ್ ಸ್ಟೈಲ್ ಕಾರಣದಿಂದ ರೋಗರುಜಿನಗಳಿಗೆ ತುತ್ತಾಗುವುದನ್ನು ಕಾಣುತ್ತಲೆ ಇರುತ್ತವೆ. ಹೃದಯಾಘಾತ ಮತ್ತು ಮಧುಮೇಹಗಳು ಒಂದು ಕಾಲದಲ್ಲಿ ವಯಸ್ಸಾದವರಿಗೆ ಮಾತ್ರ ಕಂಡು ಬರುತ್ತಿತ್ತು. ಆದರೆ ಈಗ ಯುವಕರಲ್ಲಿ ಸಹ ಈ ಕಾಯಿಲೆಗಳನ್ನು ನಾವು ಕಾಣುತ್ತಿದ್ದೇವೆ.
ಚಿಕ್ಕ ಮಕ್ಕಳು ಸಹ ಸ್ಥೂಲಕಾಯದ ಸಮಸ್ಯೆಗೆ ಗುರಿಯಾಗಿದ್ದಾರೆ. ಸಾಮಾನ್ಯ ಆರೋಗ್ಯದ ಸ್ಥಿತಿಯು ಇಂದು ಶೋಚನೀಯ ಸ್ಥಿತಿಗೆ ತಲುಪಿದೆ. ಪ್ರಪಂಚ ಇಂದು ಎಂದಿಗಿಂತ ಮುಂದುವರಿಯುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದರಿಂದ ಆರೋಗ್ಯವು ಸಹ ಅಷ್ಟೇ ಹದಗೆಡುತ್ತಿದೆಯಲ್ಲವೆ? ಹಾಗಾಗಿ ಎಂದಿಗಿಂತ ಇಂದು ಆರೋಗ್ಯದ ಕುರಿತಾದ ಕಾಳಜಿಯ ಅಗತ್ಯ ಹೆಚ್ಚಾಗಿಯೇ ಇದೆ. ನಿಮಗೆ ಎಷ್ಟು ಬೇಕೋ, ಅಷ್ಟು ಕೆಲಸ ಮಾಡಿ. ಆದರೆ ನಿಮ್ಮ ಜೀವನ ಆನಂದಮಯವಾಗಿರಲು ಕೆಲವೊಂದು ಆರೋಗ್ಯಕಾರಿ ಸಲಹೆಗಳನ್ನು ತಪ್ಪದೆ ಪಾಲಿಸಿ. ಬನ್ನಿ ಅವುಗಳತ್ತ ಒಮ್ಮೆ ಗಮನ ಹರಿಸಿ.

ಮಂಚ ಬಿಟ್ಟು ಏಳಿ
ನಮ್ಮಲ್ಲಿ ಬಹುತೇಕ ಜನರಿಗೆ ಮನೋರಂಜನೆಯೇ ಜೀವನ. ಅದು ಟಿ.ವಿ ಆಗಿರಬಹುದು, ವಿಡಿಯೋ ಗೇಮ್ ಆಗಿರಬಹುದು, ಲ್ಯಾಪ್‍ಟಾಪ್ ಅಥವಾ ಟ್ಯಾಬ್ಲೆಟ್ ಆಗಿರಬಹುದು. ಅವು ಸಹ ಜೀವನಕ್ಕೆ ಅವಶ್ಯಕ, ಆದರೆ ಎಲ್ಲದಕ್ಕು ಇತಿ ಮಿತಿ ಇರಬೇಕು. ಹಾಗಾಗಿ ಮನೋರಂಜನೆಗೆ ಒಂದು ಮಿತಿಯನ್ನು ಹಾಕಿಕೊಳ್ಳಿ. ಇನ್ನುಳಿದ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳುವುದನ್ನು ನಿಯಂತ್ರಿಸಿ. ಅದರ ಬದಲಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸರಣಿ ಧೂಮಪಾನಿಗಳ ಕೆಲವೊಂದು ಪ್ರಮುಖ ಲಕ್ಷಣಗಳು
ಚೆನ್ನಾಗಿ ನಿದ್ದೆ ಮಾಡಿ
ಆರೋಗ್ಯಕರವಾದ ಜೀವನ ಶೈಲಿಯ ಬಗ್ಗೆ ಮಾತನಾಡುವಾಗೆಲ್ಲ, ನಾವು ನಿದ್ದೆಯ ಬಗ್ಗೆಯು ಸಹ ಮಾತನಾಡುತ್ತೇವೆ. ವರ್ಕ್ ಔಟ್ ಮಾಡುವುದು ಎಷ್ಟು ಮುಖ್ಯವೋ, ನಿದ್ದೆ ಮಾಡುವುದು ಸಹ ಅಷ್ಟೇ ಮುಖ್ಯ. ಏಕೆಂದರೆ ನಿದ್ದೆಯಲ್ಲಿ ನಮ್ಮ ದಣಿದ ದೇಹಕ್ಕೆ ವಿಶ್ರಾಂತಿಯು ದೊರೆಯುತ್ತದೆ. ದೇಹವು ಸಹ ಪುನಃಶ್ಚೇತನ ಗಳಿಸಲು ನಿದ್ದೆ ಅತ್ಯಾವಶ್ಯಕ.
ಚೆನ್ನಾಗಿ ಊಟ ಮಾಡಿ
ಒಳ್ಳೆಯ ಆರೋಗ್ಯವನ್ನು ಹೊಂದಬೇಕೆಂದರೆ ಒಳ್ಳೆಯ ಊಟ ಮಾಡಬೇಕು. "ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆ ಕೇಳಿಲ್ಲವೇನು. ಸಾಧ್ಯವಾದಷ್ಟು ಮಟ್ಟಿಗೆ ಕೊಬ್ಬಿನಾಂಶ ಇರುವ ಆಹಾರದಿಂದ ದೂರವಿರಿ. ಸಾಧ್ಯವಾದ ಮಟ್ಟಿಗೆ ತರಹೇವಾರಿ ಆಹಾರವನ್ನು ಸೇವಿಸಿ. ನಾರಿನಂಶ, ವಿಟಮಿನ್‍ಗಳು ಮತ್ತು ಖನಿಜಾಂಶಗಳು ಇರುವ ಆಹಾರವನ್ನು ಸೇವಿಸಿ. ನಮ್ಮ ದೇಹಕ್ಕೆ ಸಕ್ಕರೆ, ಉಪ್ಪು ಮತ್ತು ಕೊಬ್ಬು ಎಲ್ಲವೂ ಹಿತ ಮಿತವಾಗಿ ಬೇಕು ಎಂಬುದನ್ನು ಮರೆಯಬೇಡಿ. ಶರೀರದ ತೂಕ ಇಳಿಸಲು ಭಾರತೀಯ ಶೈಲಿಯ ವಿದ್ಯೆಗಳು!
ನಿಮ್ಮ ದಿನಗಳನ್ನು ಯೋಜಿಸಿ
ನಿಮ್ಮ ಒಂದು ದಿನದಲ್ಲಿ ನೀವು ಎಷ್ಟರ ಮಟ್ಟಿಗೆ ಪ್ರಯೋಜನಗಳನ್ನು ಗಳಿಸುವಿರಿ? ಅದಕ್ಕಾಗಿ ಹಲವಾರು ಉಪಾಯಗಳು ಇವೆ. ಅದಕ್ಕಾಗಿ ಮೊದಲೇ ನಿಮ್ಮ ದಿನವನ್ನು ಯೋಜನೆ ಮಾಡಿ. ನಿಮ್ಮ ಯೋಜನೆಯನ್ನು ಬರಹ ರೂಪದಲ್ಲಿ ಇಳಿಸಲು ಹಿಂದು-ಮುಂದು ನೋಡಬೇಡಿ. ಒಮ್ಮೆ ನಿಮ್ಮ ಮನಸ್ಸಿಗೆ ಬಂದ ಆಲೋಚನೆಯನ್ನು ಹಾಗೆಯೇ ಬಿಡಬೇಡಿ. ಅದನ್ನು ಬರಹ ರೂಪದಲ್ಲಿ ಇಳಿಸಿ. ಇದರಿಂದ ನಿಮ್ಮ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಹಾಗು ನಿಮಗೆ ಒಂದು ಸ್ಪಷ್ಟತೆಯು ಸಹ ದೊರಕುತ್ತದೆ.
ಸಾಮಾಜೀಕರಣ
ನಿಮ್ಮ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ನಿಮ್ಮ ಮಾನಸಿಕ ಆರೋಗ್ಯ. ಒಂದು ವೇಳೆ ನೀವು ಸಂತೋಷವಾಗಿಲ್ಲವದಲ್ಲಿ, ನಿಮ್ಮಲ್ಲಿ ತಾಜಾತನ ಮತ್ತು ಸದೃಢತನವಿರುವುದಿಲ್ಲ. ಇದಕ್ಕೆ ಒಂದು ಉಪಾಯವಿದೆ ಅದೇ ಸಾಮಾಜೀಕರಣ. ಹೌದು ಸಾಧ್ಯವಾದ ಮಟ್ಟಿಗೆ ನಿಮ್ಮ ಕುಟುಂಬ, ನೆರೆ-ಹೊರೆ ಮತ್ತು ಸಂಬಂಧಿಕರ ಜೊತೆಗೆ ಒಡನಾಡಿ. ಸ್ನೇಹಿತರನ್ನು ಸಂಪದಿಸಿ. ನಿಮ್ಮ ಕಷ್ಟ-ಸುಖಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಾನಸಿಕ ಒತ್ತಡವನ್ನು ಇಳಿಸಿಕೊಳ್ಳಿ.



Click it and Unblock the Notifications