Latest Updates
-
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ಕೇನ್ಸ್ 2014ನಲ್ಲಿ ಐಶ್ವರ್ಯಾ ರೈ ಬೆಸ್ಟ್ ಲುಕ್‌ಗಳು
ಐಶ್ವರ್ಯಾ ರೈ ಯ ಹೊಸ ನೋಟ ಮತ್ತು ಲುಕ್ ಅನ್ನು ನೋಡಿ ನಿಮಗೆ ಮೈ ಮರೆಯುವ ಅವಕಾಶ ಕೇನ್ಸ್ 2014 ರಲ್ಲಿ ದೊರೆತಿದೆ. ಈ ವಿಶ್ವ ಸುಂದರಿ ಕೇನ್ಸ್ ರೆಡ್ ಕಾರ್ಪೆಟ್ ಅನ್ನು ಪ್ರವೇಶಿಸುತ್ತಿದ್ದಂತೆ ಎಲ್ಲೆಡೆ ಕರತಾಡನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ಆಕೆಯ ನೂರಾರು ಅಭಿಮಾನಿಗಳು ವಿಶ್ವದ ಸುಂದರ ಮಹಿಳೆಯನ್ನು ನೋಡಿ ಪುಳಕಿತರಾದರು.
ಕೇನ್ಸ್ 2014ರಂದು ಡಿಯೋರ್‌ನಲ್ಲಿ ಮಿಂಚಿದ ಮಲ್ಲಿಕಾ
ರೋಬರ್ಟ್ ಕವಾಲ್ಲಿ ಗೌನ್‌ನಲ್ಲಿ ಸುಂದರ ದೇವತೆಯಂತೆ ಕಂಡು ಬರುತ್ತಿದ್ದ ಐಶ್ವರ್ಯಾ ತಮ್ಮ ಚೆಲುವನ್ನು ಕಾಪಾಡಿಕೊಂಡ ರೀತಿ ಕೇನ್ಸ್‌ನಲ್ಲಿ ಅದ್ಭುತವಾಗಿ ಪ್ರಕಟಗೊಂಡಿತು. ಕರಾವಳಿಯ ಈ ಕುಡಿ ಇನ್ನೂ ಸೊಗಸಾಗಿರುವ ತಮ್ಮ ಒನಪು ವಯ್ಯಾರವನ್ನು ಪ್ರಕಟಪಡಿಸಿದ ರೀತಿ ಐಶ್ ಇನ್ನೂ ವಿಶ್ವ ಸುಂದರಿಯೇ ಎಂಬುದನ್ನು ಸಾಬೀತುಪಡಿಸಿತು.
ಆಕೆಯ ಸ್ಟೈಲ್ ಅನ್ನು ಕುಡಿ ನೋಟವನ್ನು ಯಾರಿಗೂ ನಕಲು ಮಾಡಲಾಗುವುದಿಲ್ಲ. ಐಶ್‌ಗೆ ಸಾಟಿ ಐಶ್ ಎಂಬ ಸತ್ಯಕ್ಕೆ ಕೇನ್ಸ್ ನೋಟ ಸಾಕ್ಷಿಯಾಯಿತು. ಕೇನ್ಸ್ ಚಿತ್ರೋತ್ಸವದಲ್ಲಿ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾರ 10 ವಿಭಿನ್ನ ನೋಟಗಳನ್ನು ಬೋಲ್ಡ್ ಸ್ಕೈ ಇಂದು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದೆ. ಹಾಗಿದ್ದರೆ ಇನ್ನೇಕೆ ತಡ ನಿಮ್ಮ ಕಣ್ಣುಗಳಲ್ಲಿ ಇವುಗಳನ್ನು ತುಂಬಿಕೊಳ್ಳಿ.
ಕೇನ್ಸ್ 2014 ರಂದು ಎಲ್ಲಿ ಸಾಬ್ ಗೌನ್‌ನಲ್ಲಿ ಮಿಂಚಿದ ಸೋನಂ

ರೋಬರ್ಟ್ ಕವ್ವಾಲಿ ಗೌನ್‌ನಲ್ಲಿ ಐಶ್:
ತಮ್ಮ ಸೆನ್ಸೇಶನಲ್ ಲುಕ್ ಮತ್ತು ಕಡೆದಿಟ್ಟ ಶಿಲ್ಪ ಪ್ರತಿಮೆಯಂತಿರುವ ದೇಹದ ಒನಪಿನಿಂದ ಐಶ್ ನೆರೆದವರ ಹೃದಯ ಕದ್ದರು. ಗೋಲ್ಡನ್ ಬಣ್ಣದ ಗೌನ್‌ನಲ್ಲಿ ಐಶ್ ಇನ್ನೂ ಹದಿಹರೆಯದವರಂತೆ ಕಂಡು ಬಂದಿದ್ದಾರೆ.

ಆಕೆಯ ಹೇರ್‌ಸ್ಟೈಲ್:
ಈ ನೋಟಕ್ಕೆ ಸೂಕ್ತವಾಗಿರುವ ಹೇರ್‌ಸ್ಟೈಲ್ ಅನ್ನು ಐಶ್ ಆಯ್ದುಕೊಂಡಿದ್ದಾರೆ. ಆಕೆಯ ಬ್ರೌನ್ ಮತ್ತು ಕರ್ಲಿ ಹೇರ್ ಆಕೆಯ ಭುಜದ ಮೇಲೆ ನೀಟಾಗಿ ಪವಡಿಸಿದ ರೀತಿ ಮಾತ್ರ ಕಣ್ಣುಕುಕ್ಕುವಂತಿತ್ತು.

ಆಕೆಯ ತುಟಿಗಳು:
ತಮ್ಮ ಗೋಲ್ಡನ್ ಗೌನ್‌ಗೆ ಸರಿಹೊಂದುವಂತೆ ಐಶ್ ತಮ್ಮ ತುಟಿಗೆ ಕೆಂಪು ರಂಗನ್ನು ಹಚ್ಚಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಆಕೆಯ ಸ್ಟೈಲ್ ಸೆನ್ಸ್ ಎಲ್ಲರಿಗೂ ಇಷ್ಟವಾಯಿತು.

ಅದೇ ಗೌನ್:
ಹಾಲಿವುಡ್ ನಟಿ ಕ್ರಿಸ್ಟನ್ ಕೂಡ 2014 ಆಸ್ಕರ್‌ನಲ್ಲಿ ಐಶ್ ತೊಟ್ಟಂತಹ ಅದೇ ಗೌನ್ ಅನ್ನು ತೊಟ್ಟಿದ್ದರು.

ಐಶ್ ಡ್ರೆಸ್ ಹಿಂಭಾಗ:
ಈ ಡ್ರೆಸ್ ಹಿಂಭಾಗ ತುಂಬಾ ಅದಭುತವಾಗಿ ವಿನ್ಯಾಸಗೊಂಡಿದೆ. ಐಶ್‌ನ ಕರ್ವಿ ಫಿಗರ್‌ಗೆ ಚೆನ್ನಾಗಿ ಒಪ್ಪುವಂತೆ ಈ ಡ್ರೆಸ್ ಆಕೆಯನ್ನು ಅಪ್ಪಿಕೊಂಡಿದೆ.

ಮೇಕಪ್:
ಆಕೆಯ ಮೇಕಪ್ ಕೂಡ ಕೇನ್ಸ್ ಉತ್ಸವದಲ್ಲಿ ಬೆಸ್ಟ್ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಕೆಯ ಕೆನ್ನೆ ಬ್ಲಶ್‌ನಿಂದ ತುಂಬಿಕೊಂಡು ಮುದ್ದಾಗಿದೆ ಮತ್ತು ತುಟಿಯ ರಂಗೂ ಕೂಡ ಗಮನ ಸೆಳೆಯುವಂತಿದೆ.

ಮರ್ಮೈಡ್ ಲುಕ್:
ಎಲ್ಲಾ ಲುಕ್‌ಗಳಲ್ಲಿ ಇದೂ ಕೂಡ ಒಂದು ಬೆಸ್ಟ್ ಲುಕ್ ಆಗಿದೆ. ತಮ್ಮ ಸುಂದರ ದೇಹ ವಿನ್ಯಾಸವನ್ನು ರೋಬರ್ಟ್ ಕವ್ವಾಲಿ ಗೌನ್‌ನಲ್ಲಿ ಐಶ್ ತೋರಿಸಿದ್ದಾರೆ.

ಆಫ್ ಶೋಲ್ಡರ್ ಗೌನ್:
ಈ ಭಾರತೀಯ ಸೆಲೆಬ್ರಿಟಿ ಐಶ್ ಕೇನ್ಸ್ 2014 ರಲ್ಲಿ ನಿಜಕ್ಕೂ ನೆರೆದವರ ಕಣ್ಣನ್ನು ಪಾವನಗೊಳಿಸಿದರು. ಆಕೆಯ ಗೌನ್‌ನ ಆಫ್ ಶೋಲ್ಡರ್ ತುಂಬಾ ಸುಂದರವಾಗಿದ್ದು ಪ್ಲಂಗಿಂಗ್ ನೆಕ್‌ಲೈನ್ ಅನ್ನು ಹೊಂದಿ ಆಕರ್ಷಕವಾಗಿದೆ.

ಆಕೆಯ ಆಭರಣಗಳು:
ತಮ್ಮ ಈ ಸುಂದರ ಗೌನ್ ಅನ್ನು ಸರಳವಾಗಿರಿಸಬೇಕೆಂಬ ಫ್ಯಾಶನ್ ತತ್ವಕ್ಕೆ ಒಳಗಾದವರಂತೆ ಐಶ್ ಹೂವಿನ ಮೆಟಲ್‌ನ ಚಿನ್ನದ ರಿಂಗ್ ಅನ್ನು ಹಾಗೂ ದಪ್ಪನೆಯ ಚಿನ್ನದ ಬ್ರೇಸ್‌ಲೆಟ್ ಅನ್ನು ತೊಟ್ಟಿದ್ದಾರೆ.

ಥೆರಿ ಫ್ರೇಮಕ್ಸ್‌ನೊಂದಿಗೆ:
ಈ ಬಾರಿಯ ಕೇನ್ಸ್ 2014 ರ ಚಿತ್ರೋತ್ಸವದಲ್ಲಿ ಪತಿ ಅಭಿಷೇಕ್ ಬಚ್ಚನ್ ಐಶ್ ಜೊತೆ ಹಾಜರಿಲ್ಲ. ಆದರೆ ಕೇನ್ಸ್‌ನ ಅತಿಥಿ ಥೆರಿ ಫ್ರೇಮಕ್ಸ್ ಈ ಅದ್ಭುತ ಸುಂದರಿಯೊಂದಿಗೆ ಫೋಸ್ ನೀಡಿದ್ದಾರೆ.



Click it and Unblock the Notifications